#ನಮ್ಮ_ಊರಿನ_ಸಂತ_ಜೂದರ_ದೇವಾಲಯ_ನಾಳೆ_ಲೋಕಾರ್ಪಣೆ.
#ನನ್ನ_ಬಾಲ್ಯದಿಂದ_ನೋಡಿದ್ದ_ಈಗ_ಅಗಲಿರುವ_ನಮ್ಮ_ಊರಿನ_ಕ್ರೈಸ್ತರ_ನೆನಪುಗಳು.
#ಯುಗಾದಿ_ರಂಜಾನ್_ಚರ್ಚ್_ಲೋಕಾರ್ಪಣೆ_ಒಂದೇ_ದಿನ_ಆಚರಣೆಯಲ್ಲಿದೆ
#ಇದೇ_ಮೊದಲು_ಮುಂದೆ_ಇನ್ಯಾವಗಲೊ_ಗೊತ್ತಿಲ್ಲ
1970ರಲ್ಲಿ ನಮ್ಮ ಯಡೇಹಳ್ಳಿ (ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಒಂದು ಗ್ರಾಮ) ಯಲ್ಲಿ ಯಾವುದೇ ಮಸೀದಿ ಅಥವ ದೇವಸ್ಥಾನ ಇರಲಿಲ್ಲ ಆಗ ಇದ್ದ ಪ್ರಾರ್ಥನಾಲಯ ಕ್ರೈಸ್ತರ ಚರ್ಚ್ ಮಾತ್ರ.
ಈಗ ಎರೆಡು ಚರ್ಚ್, ಒಂದು ಮಸೀದಿ ಮತ್ತು ಒಂದು ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ನಮ್ಮ ಊರಲ್ಲಿದೆ.
ಆಗ ನಮ್ಮ ಊರಲ್ಲಿನ ಜನ ಸಂಖ್ಯೆ ಮತ್ತು ಮನೆಗಳು ಕ್ರೈಸ್ತ ಧರ್ಮದವರದ್ದೇ ಜಾಸ್ತಿ ಅವರ ನಂತರ ಮುಸ್ಲಿಂ ಸಮುದಾಯ ಕೊನೆಯದಾಗಿ ಹಿಂದೂ ಧರ್ಮಿಯರು ಇದ್ದರು.
ಈಗ ಅತಿ ಹೆಚ್ಚು ಜನ ಸಂಖ್ಯೆ ಹಿಂದುಗಳದ್ದು ನಂತರದ್ದು ಮುಸ್ಲಿಂ ಸಮುದಾಯ ಮತ್ತು ಕೊನೆಯವರು ಕ್ರೈಸ್ತರಾಗಿದ್ದಾರೆ.
ಅತ್ಯಂತ ಕಡಿಮೆ ಜನ ಸಂಖ್ಯೆಯ ಕ್ರೈಸ್ತ ಸಮುದಾಯ ನಿರ್ಮಿಸಿರುವ ಸುಂದರವಾದ ಬೃಹತ್ ಚರ್ಚ್ ಸಂತ ಜೂದರ ದೇವಾಲಯ ಇಡೀ ಆನಂದಪುರಂಗೆ ಭೂಷಣವಾಗಿದೆ.
ಈ ಸಂದರ್ಭದಲ್ಲಿ ನಮ್ಮನ್ನು ಅಗಲಿ ಕ್ರಿಸ್ತ ಪಾದ ಸೇರಿರುವ ನಮ್ಮ ಊರಿನವರನ್ನ ಸ್ಮರಿಸೋಣ.
ಕ್ರೈಸ್ತ ಸಮುದಾಯದ ಆ ಕಾಲದ ಶ್ರೀಮಂತರಾಗಿದ್ದ ಗಾರ್ಡರಜ್ಜಿ, ಇವರ ಸಾಕು ಮಗ ಜಾನ್ ಡಿಸೋಜ, ಇವರ ಮನೆ ಎದುರಿನ ಕ್ರಿಸ್ತಿನಾ ಬಾಯಮ್ಮ ಅವರ ತಾಯಿ ಆನಮೇರಿ ಬಾಯಮ್ಮ, ಕ್ರಿಸ್ತಿನಾ ಬಾಯಮ್ಮ ಅವರ ಪತಿ ಕೆ.ಪಿ.ಸಿ.ಡ್ರೈವರ್ ಲೋಬಣ್ಣ, ಅವರ ಮಗಳು ರೀತಕ್ಕ, ಕಮ್ಮು, ಇವರ ಮನೆ ಪಕ್ಕದ ಸೋಮಿನ ಬಾಯಮ್ಮ ಅವರ ಪತಿ, ಸಿರಿಲಣ್ಣರ ತಂದೆ ಡುಮಿಂಗಣ್ಣ ಮತ್ತು ಅವರ ಪತ್ನಿ ಅವರ ದೊಡ್ಡ ಮಗ ಜಾನಣ್ಣ ಮತ್ತು ಅವರ ಪತ್ನಿ ಅವರ ಮಕ್ಕಳಾದ ಪೀಯೂಸ, ಸೈಮನ್, ಎರಡನೆ ಪುತ್ರ ಪಿಲಿಪ್ ಡಿಕಾಸ್ಟ್ ಮತ್ತು ಅವರ ಪತ್ನಿ ಮಕ್ಕಳಾದ ಪುಪ್ಪಾ (ಸಿಲ್ವೆಸ್ಟರ್ ಡಿಕಾಸ್ಟ್) ಮತ್ತು ಅವನ ಕಿರಿಯ ಸಹೋದರ, ಥಾಮಸ್ ಮಾಸ್ತರ್ ಅವರ ಪುತ್ರ ವಿಲ್ಲು, ಪೇದ್ರಣ್ಣ ಅವರ ಪತ್ನಿ ಎಲೆ ಬಾಯಮ್ಮ, ಆಸ್ಪತ್ರೆ ಪಿಲಿಪಣ್ಣ ದಂಪತಿಗಳು ಅವರ ಏಕೈಕ ಪುತ್ರ ಅಂದ ಕಲಾವಿದ ಒಲ್ಲಿ (ವಲೇರಿಯನ್ ಡಿಸೋಜ ) ಅವರ ಪಕ್ಕದ ಮನೆಯ ಸುಶೀಲ ಬಾಯಮ್ಮ ಅವರ ಮಗಳಾದ ಪಿಲ್ಲಕ್ಕ, ಹೆವಲಿನ್ ಅಕ್ಕ, ಉಲ್ಲಿ ಮೇಸ್ತ್ರಿಗಳು, ಡುಮಿಂಗ್ ಮೇಸ್ರಿ ಮತ್ತು ಅವರ ಅಕ್ಕ ಮೂಕಕ್ಕ, ಕಾಶ್ಮೀರ್ ಡಿಸೋಜ , ಅವರ ತಮ್ಮ ಸಿಮಾವ್ ಅವರ ತಾಯಿ, ಆಲ್ಬರ್ಟ್ ಮೇಸ್ತ್ರಿ ದಂಪತಿಗಳು ನನಗೆ ನೆನಪಾಗುತ್ತಾರೆ ಇವರೆಲ್ಲರ ಮನೆಯಲ್ಲಿ ಕ್ರೈಸ್ತರ ಹಬ್ಬಗಳಲ್ಲಿ ಊಟ ಮಾಡಿದ ನೆನಪುಗಳ ಮರೆಯಲಾರೆ
ಹಿಂದಿನ ಚರ್ಚ್ ಉದ್ಘಾಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿಕ್ಷಕ ದಂಪತಿಗಳಾದ ರಿಚರ್ಡ್ ಲೋಬೋ ಮತ್ತು ಅವರ ಪತ್ನಿ ಲಿಲ್ಲಿಬಾಯಿ ಟೀಚರ್, ಡಾಕ್ಟರ್ ಸುಸೇನಾಥನ್ ಇವರೆಲ್ಲ ಹೊಸ ಚರ್ಚ್ ಲೋಕಾರ್ಪಣೆ ಸಂದರ್ಭದಲ್ಲಿ ಇವರನ್ನೆಲ್ಲ ನೆನಪಿಸಿಕೊಂಡೆ.
ನಮ್ಮ ಊರಿನ ಸುಶೀಲ ಬಾಯಮ್ಮರ ಮಗಳು,ಸಿರಿಲಣ್ಣರ ಸಹೋದರಿ ಒಟ್ಟು ಇಬ್ಬರು ಕನ್ಯಾಸ್ತ್ರಿ ಆಗಿದ್ದಾರೆ, ಆಲ್ಬರ್ಟ್ ಮೇಸ್ತ್ರಿ ಕಿರಿಯ ಪುತ್ರ ಚರ್ಚ್ ಪಾದರ್ ಆಗಿದ್ದಾರೆ.
ಈ ರೀತಿ ಮೂರೂ ದರ್ಮಿಯರ ಸಂಭ್ರಮಾಚಾರಣೆ ಇದೇ ಮೊದಲು ಮುಂದೆ ಯಾವಾಗ ಗೊತ್ತಿಲ್ಲ.
Comments
Post a Comment