Blog number 2089. ಆ ದಿನಗಳಲ್ಲಿ ಗೇರುಬೀಸಿನ ಕೃಷ್ಣಣ್ಣನ ಪತ್ನಿ ಹೊನ್ನಮ್ಮನಿಗೆ ರಕ್ತ ದಾನ ಮಾಡಲು ಆ ಊರಿನ ಯಾರಿಗೂ ಸಾಧ್ಯವೇ ಆಗಲಿಲ್ಲ ಕಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಆ ಊರಿನಲ್ಲಿ ಯಾರೂ 40 ಕೇಜಿಗಿಂತ ಜಾಸ್ತಿ ತೂಗುತ್ತಿರಲಿಲ್ಲ.
#ಆ_ಊರಿನಲ್ಲಿ_ಯಾರು_ರಕ್ತದಾನಕ್ಕೆ_ಅರ್ಹತೆ_ಪಡೆದಿರಲಿಲ್ಲ
.
#ನಮ್ಮ_ಊರಿನ_ಸಮೀಪದ_ಗೇರುಬೀಸಿನಲ್ಲಿ_40_ಕಿಲೋಗಿಂತ_ಜಾಸ್ತಿ_ಯಾರು_ತೂಗುತ್ತಿರಲಿಲ್ಲ.
#ಆದ್ದರಿಂದ_ನಾನೇ_ರಕ್ತದಾನ_ಮಾಡಬೇಕಾಯಿತು
#ಗೇರುಬೀಸು_ಕೃಷ್ಟಣ್ಣರ_ಪತ್ನಿ_ಹೊನ್ನಮ್ಮರಿಗೆ
#ಅನೇಕ_ವರ್ಷ_ಹೊನ್ನಮ್ಮ_ಅರುಣ್ಣನ_ರಕ್ತ_ನನ್ನ_ಮೈಯಲ್ಲಿ_ಹರೀತಾ_ಇದೆ_ಎಂಬ_ಮುಗ್ಧತೆಯ_ಮಾತು_ಹೇಳುತ್ತಿದ್ದರು
#ನನ್ನ_ಜೀವಮಾನದ_ಮೊದಲ_ರಕ್ತದಾನ_ಬೆಂಗಳೂರಿನ_ವಿಕ್ಟೋರಿಯ_ಆಸ್ಪತ್ರೆಯಲ್ಲಿ.
ಶಿವಮೊಗ್ಗದ ರಕ್ತದಾನದಲ್ಲಿ ಶತಕ ದಾಖಲಿಸಿ ಈಗ 116 ಬಾರಿ ರಕ್ತದಾನ ಮಾಡಿ ಜಿಲ್ಲೆಯ ಅಗ್ರಶ್ರೇಯಾಂಕದಲ್ಲಿರುವ ಧರಣೇಂದ್ರ ದಿನಕರ್ ಸಂದರ್ಶನ ಮಾಡಿದಾಗ ಈ ಘಟನೆ ನನಗೆ ನೆನಪಾಯಿತು.
ಆಗ ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ, 1996ರಲ್ಲಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಗೇರುಬೀಸು ಊರಿನ ನನ್ನ ಆಪ್ತಮಿತ್ರ ಗೇರುಬೀಸು ಕೃಷ್ಣಣ್ಣ ತಮ್ಮ ಪತ್ನಿ ಶ್ರೀಮತಿ ಹೊನ್ನಮ್ಮನವರಿಗೆ ತಕ್ಷಣ ರಕ್ತ ಬೇಕಾಗಿದೆ ಅಂದಾಗ ಅವರಿಗೆ ರಕ್ತ ಪಡೆಯುವ ಮಾಹಿತಿ ನೀಡಿದ್ದೆ.
ಆಗ ಶಿವಮೊಗ್ಗದಲ್ಲಿ ವೆಲ್ ಡನ್ ಲ್ಯಾಬೊರೇಟರಿಗೆ ಹೋಗಿ ರೋಗಿಗೆ ಬೇಕಾದ ರಕ್ತದ ಗುಂಪಿನವರೇ ರಕ್ತ ನೀಡಿ ಅದನ್ನು ಆಸ್ಪತ್ರೆಗೆ ಕೊಂಡೊಯ್ದು ಕೊಡಬೇಕಾದ ಕಾಲ.
ಅವತ್ತು ಆ ಗೇರುಬೀಸೆಂಬ ಹಳ್ಳಿಯ ಎಲ್ಲ ಮನೆಯ ಯಜಮಾನರು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಹೊನ್ನಮ್ಮನನ್ನ ನೋಡಲು ಹೋಗಿದ್ದರು.
ಅವರೆಲ್ಲ ಸೇರಿ ವೆಲ್ ಡನ್ ಲ್ಯಾಬೊರೇಟರಿಗೆ ಹೋಗಿದ್ದಾರೆ ಮತ್ತು ಅವರಲ್ಲಿ ಯಾರದ್ದಾದರೂ A+ ರಕ್ತ ಆಗಿದ್ದರೆ ಹೊನ್ನಮ್ಮನಿಗೆ ರಕ್ತದಾನ ಮಾಡುವ ನಿರ್ಧಾರ ಕೂಡ ಮಾಡಿದ್ದರು.
ಶಿವಮೊಗ್ಗದ ವೆಲ್ ಡನ್ ಲ್ಯಾಬೋರೇಟರಿಯ ಸಿಬ್ಬಂದಿಗಳು ರಕ್ತದಾನ ಮಾಡಲು ಬಂದವರಿಗೆ ರಕ್ತದ ಗುಂಪು ಪರೀಕ್ಷೆ ಮಾಡುವ ಮೊದಲು ಅವರ ತೂಕ ನೋಡಿದ್ದಾರೆ, ಅವತ್ತು ಇಡೀ ಗೇರುಬೀಸೆಂಬ ಹಳ್ಳಿಯಲ್ಲಿ ಯಾರು ನಲವತ್ತು ಕೆಜಿ ಮೇಲೆ ತೂಗುತ್ತಿರಲಿಲ್ಲ ಆದ್ದರಿಂದ ಅವರಾರು ರಕ್ತದಾನ ಮಾಡಲು ಅರ್ಹರಲ್ಲ ಎಂದು ಅವರಿಗೆ ತಿಳಿಸಿದ್ದಾರೆ.
ಇದರಿಂದ ಗೇರುಬೀಸು ಕೃಷ್ಣಣ್ಣ ಆಸ್ಪತ್ರೆಯಲ್ಲಿದ್ದ ತನ್ನ ಪತ್ನಿಗೆ ರಕ್ತ ನೀಡಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಇದನ್ನು ನನಗೆ ತಿಳಿಸಲು ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿಗೆ ಬಂದಿದ್ದರು, ನಾನು ಶಿವಮೊಗ್ಗದ ವೆಲ್ ಡನ್ ಲ್ಯಾಬೋರೇಟರಿಗೆ ಹೋಗಿ ವಿಚಾರಿಸಿದಾಗ ಅಲ್ಲಿ ಇವರೆಲ್ಲ ಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವುದರಿಂದ ಯಾರೊಬ್ಬರೂ 40 ಕೆ.ಜಿ. ದಾಟಿ ತೂಗುತ್ತಿರಲಿಲ್ಲ ಎಂದು ಮಾಹಿತಿ ನೀಡಿದರು.
ಆ ತಕ್ಷಣ ನಾನು ನನ್ನ ರಕ್ತ ದಾನ ಮಾಡಿದೆ ನಂತರ ಎಷ್ಟೋ ವರ್ಷಗಳ ಕಾಲ ಹೊನ್ನಮ್ಮ "ನನ್ನ ದೇಹದಲ್ಲಿ ಅರುಣಣ್ಣನ ರಕ್ತ ಹರಿಯುತ್ತಿದೆ" ಎಂದು ಮುಗ್ದತೆಯಿಂದ ಉಪಕಾರ ಸ್ಮರಣೆ ಮಾಡುತ್ತಿದ್ದರು.
ನಂತರ ಇಡೀ ಗೇರುಬೀಸು ಹೊನ್ನಮ್ಮನ ಪತಿ ಕೃಷ್ಣಣ್ಣರ ದುಡಿಮೆಯ ಬುದ್ಧಿವಂತಿಕೆ ಮತ್ತು ವಾಣಿಜ್ಯ ಬೆಳೆಗಳಿಂದ ಶ್ರೀಮಂತವಾಯಿತು ಇವತ್ತು ಆ ಊರಲ್ಲಿ ಪೌಷ್ಟಿಕತೆಯ ಕೊರತೆಯ ಒಬ್ಬರೂ ಸಿಗುವುದಿಲ್ಲ.
ಇಡೀ ಊರಿನ ಅಭಿವೃದ್ದಿಯ ಹರಿಕಾರ ಮುಖಂಡ ನನ್ನ ಆತ್ಮೀಯ ಗೆಳೆಯ ಗೇರುಬೀಸು ಕೃಷ್ಣಣ್ಣ ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.
ಇದೆಲ್ಲ ರಕ್ತದಾನದ ನೆನಪುಗಳು,ನಾನು ನನ್ನ ಮೊದಲ ರಕ್ತದಾನ ಮಾಡಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅದು ಶಿವಮೊಗ್ಗದ ಬಡ ಮಹಿಳಾ ರೋಗಿಗೆ ಇದಕ್ಕಾಗಿ ವಿಕ್ಟೋರಿಯ ಆಸ್ಪತ್ರೆ ಒಂದು ಸರ್ಟಿಫಿಕೇಟ್ ಕೊಟ್ಟಿದೆ,ಈಗ ಆ ಪದ್ದತಿ ಇದೆಯೋ ಇಲ್ಲವೋ ಗೊತ್ತಿಲ್ಲ.
Comments
Post a Comment