Blog number 2092. ರಾಜ್ಯದ ಡೊಂಗೀ ಬಾಬಗಳಿಗೆ ಸಿಂಹ ಸ್ವಪ್ನವಾಗಿರುವ ಕನ್ನಡದ ಕೋವೂರ್ ಎಂದೇ ಖ್ಯಾತರಾಗಿರುವ ಪವಾಡ ಬಯಲು ಅಭಿಯಾನದ ಹುಲಿಕಲ್ ನಟರಾಜ್ ನನ್ನ ಅತಿಥಿ
#ಇವತ್ತಿನ_ನನ್ನ_ಅತಿಥಿ_ಪವಾಡ_ಬಯಲು_ಅಭಿಯಾನದ
#ಹುಲಿಕಲ್_ನಟರಾಜ್
#ಇಡೀ_ರಾಜ್ಯದಲ್ಲಿ_ವಿಜ್ಞಾನ_ಪರಿಷತ್_ಮಾನಸಿಕ_ಚಿಕಿತ್ಸಾ_ಕೇಂದ್ರ_ಸ್ಥಾಪಿಸಿರುವ
#ದೇವರ_ಹೆಸರಲ್ಲಿ_ಮುಗ್ದಜನರ_ಶೋಷಣೆ_ಮಾಡುವ
#ಡೊಂಗೀ_ಬಾಬಾಗಳ_ವಿರುದ್ದ
#ಸಮಾಜದಲ್ಲಿ_ಆಚರಣೆಯಲ್ಲಿರುವ_ಮೂಡನಂಬಿಕೆಗಳ_ವಿರುದ್ದ
#ದೊಡ್ಡ_ಮಟ್ಟದಲ್ಲಿ_ಅಭಿಯಾನ_ನಿರಂತರವಾಗಿ_ನಡೆಸುತ್ತಿದ್ದಾರೆ.
#ಅವರ_ಜೊತೆಯ_ಸರಣಿ_ಸಂದರ್ಶನಗಳು_ನಾಳೆಯಿಂದ
ಇವತ್ತಿನ ನನ್ನ ಅತಿಥಿ ವಿಚಾರವಾದಿ ಹುಲಿಕಲ್ ನಟರಾಜ್ ಇವರ ಪವಾಡ ಬಯಲು ದೂರದರ್ಶನದಲ್ಲಿ ನಿರಂತರವಾಗಿ ನೋಡುತ್ತಿದ್ದೆ ಇವತ್ತು ಗೆಳೆಯರು ಮತ್ತು ಇವರ ವಿಜ್ಞಾನ ಪರಿಷತ್ ನ ಪದಾಧಿಕಾರಿಗಳಾದ ವಿ.ಟಿ.ಸ್ವಾಮಿ, ಬಿ. ಡಿ.ರವಿ ಜೊತೆ ನನ್ನ ಕಛೇರಿಗೆ ಬಂದಿದ್ದರು.
#ಹುಲಿಕಲ್_ನಟರಾಜ್ ಹೆಸರಿನ ಮುಂದಿರುವ ಹುಲಿಕಲ್ ಯಾವುದು? ಹುಲಿಕಲ್ ನಟರಾಜ್ ಆಸ್ತಿಕರೋ ನಾಸ್ತಿಕರೋ? ಹಿಂದೂ ಧರ್ಮದ ವಿರುದ್ದ ಮಾತ್ರ ಇವರು ಪವಾಡ ಬಯಲು ಕಾರ್ಯಾಚಾರಣೆಯ? ಇವರ ಬಾಲ್ಯ- ವಿದ್ಯಾಬ್ಯಾಸ - ಉದ್ಯೋಗ ಮಾಹಿತಿ ಮತ್ತು ಇವರಿಗೆ ಮೂಡನಂಬಿಕೆಗಳ ವಿರೋದದ ಇವರ ಜೀವನ ಪಯಾ೯ಂತ ಅಭಿಯಾನಕ್ಕೆ ಪ್ರೇರಣೆ ಏನು? ಎಂಬ ನನ್ನ ಪ್ರಶ್ನೆಗಳಿಗೆ ಅವರ ಉತ್ತರ ಹುಲಿಕಲ್ ನಟರಾಜ್ ಸಂದರ್ಶನಗಳ ಸರಣಿಯಲ್ಲಿದೆ.
ಡಾಕ್ಟರ್ ಕೋವೂರ್ - ಹೆಚ್.ಎನ್ ನರಸಿಂಹಯ್ಯರಂತೆ ಮೂಡನಂಬಿಕೆ, ಪವಾಡ ಬೈಲು, ಆಪ್ತ ಸಮಾಲೋಚನೆ, ಮಾನಸಿಕ ಚಿಕಿತ್ಸೆ, ಶಾಲಾ ವಿದ್ಯಾರ್ಥಿಗಳಿಗಾಗಿ ಮೂಡನಂಬಿಕೆ ವಿರುದ್ದ ಜನ ಜಾಗೃತಿ ಅಭಿಯಾನ ಮಾಡುತ್ತಾ ಈಗ ರಾಜ್ಯದಲ್ಲಿ ವಿಜ್ಞಾನ ಪರಿಷತ್ ಸ್ಥಾಪಿಸಿ ಪ್ರತಿ ಜಿಲ್ಲೆಯಲ್ಲಿ ತಾಲ್ಲೂಕಿನಲ್ಲಿ ಅದರ ಶಾಖೆ ಪ್ರಾರಂಬಿಸಿದ್ದಾರೆ, ಜೊತೆಗೆ ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆ ಕೂಡ ಪ್ರಾರಂಬಿಸಿದ್ದಾರೆ.
ಹುಲಿಕಲ್ ನಟರಾಜ್ ದಂಪತಿಗಳು ಅವರ 60ನೇ ವಯಸ್ಸಿನಲ್ಲಿ ಅವರ ಅಭಿಮಾನಿಗಳು ಅವರಿಗೆ ಸಮರ್ಪಿಸಿದ ಅಭಿನಂದನಾ ಗ್ರಂಥ #ಹುಲಿ_ಹೆಜ್ಜೆ ನನಗೆ ಪ್ರೀತಿಯಿಂದ ನೀಡಿದರು.
ನಾನು ನಮ್ಮ ಸಂಸ್ಥೆವತಿಯಿಂದ ಅವರಿಗೆ ಗೌರವಿಸಿ ನನ್ನ ಪುಸ್ತಕ ನೀಡಿ ಬಿಳ್ಕೊಟ್ಟೆ ಅವರ ಸಂದರ್ಶನಗಳ ಸರಣಿ ನಾಳೆಯಿಂದ ಪ್ರಕಟವಾಗಲಿದೆ.
Comments
Post a Comment