Blog number 2055. ಪ್ರತಿ ಚುನಾವಣೆ ಮುಗಿಯುವವರೆಗೆ ನಿಮ್ಮ ಆತ್ಮ ರಕ್ಷಣೆಯ ಮತ್ತು ಫಸಲು ರಕ್ಷಣೆಯ ಶಸ್ತ್ರಸ್ತ್ರ ಪೋಲಿಸ್ ಠಾಣೆಯಲ್ಲಿ ಸರೆಂಡರ್ ಮಾಡುವುದರಿಂದ ವಿನಾಯ್ತಿ ಪಡೆಯಲು ಆಯಾ ಜಿಲ್ಲೆಯ ಸ್ಕ್ರೀನಿಂಗ್ ಕಮಿಟಿಗೆ ಅಜಿ೯ ಸಲ್ಲಿಸ ಬಹುದು.
#ಪ್ರತಿ_ಚುನಾವಣೆಯಲ್ಲಿ_ಲೈಸೆನ್ಸ್_ಕೋವಿ_ರಿವಾಲ್ವಾರ್_ಪೋಲಿಸ್_ಠಾಣೆಗೆ_ಸರೆಂಡರ್_ಮಾಡಬೇಕು
#ಈಗ_ಪ್ರತಿ_ಜಿಲ್ಲೆಯಲ್ಲಿನ_ಸ್ಕ್ರೀನಿಂಗ್_ಕಮಿಟಿಗೆ_ಮನವಿ_ಮಾಡಿ_ವಿನಾಯಿತಿ_ಪಡೆಯ_ಬಹುದು
#ದಕ್ಷಿಣ_ಕನ್ನಡ_ಜಿಲ್ಲೆಯ_620_ರೈತರು_ಆತ್ಮರಕ್ಷಣೆಗಾಗಿ_54_ಜನ_ವಿನಾಯಿತಿ_ಕೋರಿದ್ದರು
#ದಕ್ಷಿಣ_ಕನ್ನಡ_ಜಿಲ್ಲೆ_ಸ್ಕ್ರೀನಿಂಗ್_ಕಮಿಟಿ
#ಆತ್ಮರಕ್ಷಣೆಗೆ_16ಜನರಿಗೆ_ಕೃಷಿರೈತರಲ್ಲಿ_3_ಜನರಿಗೆ_ವಿನಾಯಿತಿ_ನೀಡಿತ್ತು
#ಈ_ಬಗ್ಗೆ_ಉಚ್ಚನ್ಯಾಯಾಲಯದಲ್ಲಿ_ಸಲ್ಲಿಸಿದ್ದ_ರಿಟ್_ರೈತರ_ಕೋವಿಗೆ_ವಿನಾಯಿತಿ_ನೀಡಿದೆ.
#ಶಿವಮೊಗ್ಗ_ಜಿಲ್ಲೆಯ_ಪತ್ರಿಕೆಗಳು_ಈ_ಬಗ್ಗೆ_ಮಾಹಿತಿ_ಪ್ರಕಟಿಸ_ಬಹುದಾಗಿದೆ.
ವರ್ಷಕ್ಕೆ ಒಂದು ಎರೆಡು ಚುನಾವಣೆ ಬರುತ್ತಲೇ ಇರುತ್ತದೆ ಆಗೆಲ್ಲಾ ಕೃಷಿಕರ ಫಸಲು ಕಾಡುಪ್ರಾಣಿಗಳಿಂದ ಸಂರಕ್ಷಿಸಲು ಲೈಸನ್ಸ್ ಪಡೆದ ಕೋವಿಗಳನ್ನ ಅವರ ವ್ಯಾಪ್ತಿಯ ಪೊಲೀಸ್ ಠಾಣೆಗೆ ಒಯ್ದು ಸರೆಂಡರ್ ಮಾಡಬೇಕು.
ಇದೇ ರೀತಿ ಆತ್ಮರಕ್ಷಣೆಗಾಗಿ ಲೈಸೆನ್ಸ್ ಪಡೆದ ರಿವಾಲ್ವಾರ್ ಗಳೂ ಕೂಡ ಸರೆಂಡರ್ ಮಾಡ ಬೇಕು ಇದು ಚುನಾವಣಾ ಆಯೋಗದ ಕಾನೂನು.
ಈ ಬಗ್ಗೆ ಅನೇಕ ರೀತಿಯ ಚರ್ಚೆಗಳಾಗಿದೆ ಚುನಾವಣೆ ಮುಗಿಯುವ ತನಕ ಕಾಡು ಪ್ರಾಣಿಗಳು ರೈತರ ಫಸಲು ತಿನ್ನದೇ ಇರುತ್ತದಾ?...
ಆತ್ಮರಕ್ಷಣೆಗೆ ಪಡೆದ ರಿವಾಲ್ವಾರ್ ಚುನಾವಣೆ ಮುಗಿಯುವ ತನಕ ಪೋಲಿಸ್ ಠಾಣೆಯಲ್ಲಿಟ್ಟರೆ ಆತ್ಮ ರಕ್ಷಣೆ ಹೇಗೆ?...
ರೈತರನ್ನ ಕ್ರಿಮಿನಲ್ ಗಳಾಗಿ ಪರಿಗಣಿಸಿದೆಯಾ ಚುನಾವಣಾ ಆಯೋಗ ? ಈ ಕಾನೂನು ವೈಜ್ಞಾನಿಕವಾಗಿದೆಯಾ? . . . . ಇತ್ಯಾದಿ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.
ಕ್ರಿಮಿನಲ್ ಹಿನ್ನೆಲೆಯವರ ಶಸ್ತ್ರಾಸ್ತ್ರಗಳಿಗೆ ಈ ನಿಯಮ ಬೇಕಾದರೆ ಅನ್ವಯ ಮಾಡಲಿ ಎಂಬ ಕೆಲ ರಾಜ್ಯಗಳ ನ್ಯಾಯಾಲಯಗಳ ಆದೇಶ ಚುನಾವಣಾ ಆಯೋಗ ಪರಿಗಣಿಸಿ ಆಯಾ ಜಿಲ್ಲೆಯ ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿ ವಿನಾಯಿತಿ ಪಡೆಯುವ ಅವಕಾಶ ನೀಡಿರುವುದು ಸ್ವಾಗತರ್ಹವೇ ಆಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಸ್ಕ್ರೀನಿಂಗ್ ಕಮಿಟಿ ವಿನಾಯಿತಿ ಕೋರಿದ 620 ಕೃಷಿಕ ಜನರಲ್ಲಿ ಕೇವಲ 3 ಜನರಿಗೆ ಮಾತ್ರ ವಿನಾಯಿತಿ ನೀಡಿತ್ತು.
ಇದೇ ರೀತಿ ಆತ್ಮರಕ್ಷಣೆಯ ರಿವಾಲ್ವಾರ್ ಗೆ ವಿನಾಯಿತಿ ಕೋರಿದ 54 ಜನರಲ್ಲಿ 16 ಜನರಿಗೆ ಮಾತ್ರ ವಿನಾಯಿತಿ ನೀಡಿತ್ತು.
ಇದರ ವಿರುದ್ದ ಅರ್ಜಿದಾರರಲ್ಲಿ ಕೆಲವರು ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು ಇವರ ಅರ್ಜಿ ಪುರಸ್ಕರಿಸಿದ ಉಚ್ಚನ್ಯಾಯಾಲಯ ಒಂದೇ ದಿನದಲ್ಲಿ ಸ್ಕ್ರೀನಿಂಗ್ ಸಮಿತಿ ಇವರ ಅರ್ಜಿಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರಿಂದ ಸ್ಕ್ರೀನಿಂಗ್ ಸಮಿತಿ ತಕ್ಷಣ ಅಜಿ೯ದಾರರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ಪೋಲಿಸ್ ಠಾಣೆಗೆ ಸರೆಂಡರ್ ಮಾಡುವುದರಿಂದ ವಿನಾಯಿತಿ
ನೀಡಿದೆ.
ದಿನಾಂಕ 4 - ಏಪ್ರಿಲ್ - 2024ರದ ಗುರುವಾರದ ವಿಜಯವಾಣಿ ಪತ್ರಿಕೆಯಲ್ಲಿ ಇದನ್ನು ವರದಿ ಮಾಡಿದೆ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಗ್ಗೆಯ ಮಾಹಿತಿ ಯಾವುದೇ ಪತ್ರಿಕೆ ಸುದ್ದಿ ಮಾಡಿದೆಯಾ?
Comments
Post a Comment