Blog number 2080. ಬಿ. ಸ್ವಾಮಿ ರಾವ್ ಅವರ 94 ಹುಟ್ಟು ಹಬ್ಬದ ಆಚರಣೆಗೆ ಸಂಭ್ರಮದ ಮೆರಗು ತಂದ ಹೊಸನಗರದ ಪತ್ರಕರ್ತ H.R. ಶ್ರೀಕಂಠ ಪ್ರಕಟಿಸುತ್ತಿರುವ ಬಿ. ಸ್ವಾಮಿ ರಾಯರ ಜೀವನ ವೃತ್ತಾ೦ತ "ನಾನು ಹೇಳುವುದೆಲ್ಲ ಸತ್ಯ"
#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ಕ್ಷೇತ್ರದ_ಮಾಜಿ_ಶಾಸಕರಾದ
#ಬಿ_ಸ್ವಾಮಿರಾಯರಿಗೆ_94ನೇಹುಟ್ಟು_ಹಬ್ಬದ_ಶುಭಾಷಯಗಳು
#ಹೊಸನಗರದ_ಪತ್ರಕರ್ತ_ಶ್ರೀಕಂಠ_H_R_ಬರೆದ
#ಬಿ_ಸ್ವಾಮಿರಾವ್_ಜೀವನ_ವೃತ್ತಾಂತ
#ನಾನು_ಹೇಳುವುದೆಲ್ಲ_ಸತ್ಯ_ಇವತ್ತು_ಬಿಡುಗಡೆ
#ಸಾತ್ವವಿಕ_ಸಂಪನ್ನರಾದ_ಇವರನ್ನ_ಎಲ್ಲಾ_ಪಕ್ಷಗಳು_ಬಳಸಿಕೊಂಡವು
#ಆದರೆ_ಇವರಿಗೆ_ಗೌರವ_ಸ್ಥಾನಮಾನ_ಮಾತ್ರ_ಕಲ್ಪಿಸಲಿಲ್ಲ
ಇವತ್ತು ದಿನಾಂಕ 23- ಏಪ್ರಿಲ್- 2024 ನಮ್ಮ ಜಿಲ್ಲೆಯ ಹೊಸನಗರ ವಿದಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿರಾಯರ 94 ನೇ ಹುಟ್ಟು ಹಬ್ಬ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರುತ್ತೇನೆ.
ಸ್ವಾಮಿರಾಯರ 94 ನೇ ಹುಟ್ಟು ಹಬ್ಬಕ್ಕೆ ಸಂಭ್ರಮದ ಮೆರಗು ತಂದ ಪತ್ರಕತ೯ ಗೆಳೆಯ ಶ್ರೀಕಂಠರಿಗೆ ಅಭಿನಂದನೆ ಅರ್ಪಿಸುತ್ತೇನೆ.
ಈ ಸಂದರ್ಭದಲ್ಲಿ ಹೊಸನಗರದ ಪತ್ರಕರ್ತ #ಶ್ರೀಕಂಠ_H_R. ಇವರ ಜೀವನ ವೃತ್ತಾಂತ ಸಂಗ್ರಹಿಸಿದ ಪುಸ್ತಕವನ್ನು ಇವತ್ತು ಬಿಡುಗಡೆ ಮಾಡುವ ಅವರ ಪೇಸ್ ಬುಕ್ ಪೋಸ್ಟ್ ಈ ಕೆಳಗಿನಂತೆ ಇದೆ ನೋಡಿ....
"ಹೊಸನಗರ ತಾಲೂಕಿನ ಹಿರಿಯ ರಾಜಕೀಯ ಮುತ್ಸದಿ, ಸಾಮಾಜಿಕ ಹೋರಾಟಗಾರ, ಮಾಜಿ ಶಾಸಕ, 93ರ ಚಿರಯುವಕ ಬಿ.ಸ್ವಾಮಿರಾವ್ ಅವರ ಜೀವನ ವೃತ್ತಾಂತ ಕುರಿತಂತೆ ಪತ್ರಕರ್ತ ಶ್ರೀಕಂಠ ಹೆಚ್.ಆರ್. ಬರೆದಿರುವ '#ನಾನು_ಹೇಳುವುದೆಲ್ಲಾಸತ್ಯ' ಎಂಬ ಪುಸ್ತಕವನ್ನು ಅವರ 94 ನೇ ಜನ್ಮದಿನವಾದ ಎಪ್ರಿಲ್ 23ರ ಮಂಗಳವಾರ ಸಂಜೆ 4 ಗಂಟೆಗೆ ಮೂಲೆಗದ್ದೆ ಮಠದಲ್ಲಿ ಆಯೋಜಿಸಿರುವ ಸರಳ ಸಮಾರಂಭದಲ್ಲಿ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಲಿದ್ದಾರೆ. ಪುಸ್ತಕ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿ "
ನಮ್ಮ ಜಿಲ್ಲೆಯ #ಯಡ್ಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ನಾನು ಬರೆದ ಹಿಂದಿನ ಲೇಖನ ಇಲ್ಲಿದೆ ಓದಿ....
ಜಿಲ್ಲೆಯ ದೀವರು/ ಈಡಿಗ/ಪೂಜಾರರ ಕಾಂಗ್ರೇಸ್ ಮತಬ್ಯಾಂಕ್ ಒಡೆದು ಸೊರಬ, ಸಾಗರ ಮತ್ತು ತೀಥ೯ಹಳ್ಳಿ ವಿದಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡೂರಪ್ಪರ ಪುತ್ರ ಬಿ.ವೈ.ರಾಘವೇಂದ್ರ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಪುತ್ರ ಮದು ಬಂಗಾರಪ್ಪರ ವಿರುದ್ದ ಗೆಲ್ಲುವಲ್ಲಿ ಸ್ವಾಮಿ ರಾಯರ ಕೊಡುಗೆ ದೊಡ್ಡದು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಇವರ ಈ ವಯೋಮಾನದಲ್ಲಿ ಇವರಿಂದ ಪಕ್ಷಕ್ಕೆ ಆಗಿರುವ ಅನುಕೂಲ ನೆನಪಿಸಿಕೊಳ್ಳುವಂತೆ ಇವರಿಗೆ ರಾಜ್ಯ ಮಟ್ಟದ ಬೋಡ್೯ ಚೇಮ೯ನ್ ಆಗಿ ಅಥವ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುತ್ತಾರೆಂದು ಬಾವಿಸಿದ್ದು ಹುಸಿ ಆಯಿತು.
Comments
Post a Comment