#ಶಿವಮೊಗ್ಗ_ಜಿಲ್ಲೆ_ಮತ್ತು_ಭಟ್ಕಳ_ಅಂಚಿನ_ದಟ್ಟ_ಅರಣ್ಯದ_ಕಲ್ಲು_ಬೆಟ್ಟದ_ಮೇಲಿನ
#ಬೀಮೇಶ್ವರ_ದೇವಸ್ಥಾನದ_ಇತಿಹಾಸ_ನಮಗೆ_ಗೊತ್ತಿಲ್ಲ
#ನಾಗವಳ್ಳಿಯ_ದೇವಗಾರು_ಎಂಬ_ಹಳ್ಳಿಗೆ_1998ರಲ್ಲಿ_ಹೋಗುವಾಗ
#ಕೋಗಾರಿನಲ್ಲಿ_ಬಂಡುಮನೆ_ಚಿದಂಬರ_ರಾಯರು_ಬೀಮೇಶ್ವರ_ಜಾತ್ರೆ_ಆಹ್ವಾನ_ಪತ್ರಿಕೆ_ನೀಡಿದ್ದರು
#ಶಿವರಾತ್ರಿ_ಜಾತ್ರೆಗೆ_ಕೆಲವು_ದಿನದ_ಮೊದಲೇ_ಈ_ಮಾಗ೯ರಲ್ಲಿದ್ದರಿಂದ_ಮರುದಿನ
#ಬೀಮೇಶ್ವರ_ದರ್ಶನ_ಮಾಡಿ_ತುಮರಿಗೆ_ಹೋಗುವುದೆಂದು_ತೀರ್ಮಾನಿಸಿದ್ದೆ.
https://youtu.be/UG0WD0492Tw?feature=shared
ಈ ಮಾರ್ಗದಲ್ಲಿ 1985 ರಿಂದ ಸಂಚರಿಸುತ್ತಿದ್ದರೂ ಬೀಮೇಶ್ವರ ದೇವಾಲಯದ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದ್ದರೂ 1998ರವರೆಗೆ ಅಲ್ಲಿಗೆ ನಾನು ಹೋಗಿರಲಿಲ್ಲ ಕಾರಣ ದಟ್ಟ ಅರಣ್ಯ ವಿಪರೀತ ಮಳೆ ಮತ್ತು ರಸ್ತೆ ಸರಿ ಇಲ್ಲ ಎಂಬ ಕಾರಣ ಹಾಗೂ ಸಮಯ.
1998ರಲ್ಲಿ ಸಾಗರ ತಾಲೂಕಿನ ಕೊನೆಯ ಊರಾದ ನಾಗವಳ್ಳಿಗೆ ಹೋಗಿ ಅಲ್ಲಿಂದ ಬಲಕ್ಕೆ ತಿರುಗಿ ದೇವಗಾರು ಎಂಬ ಹಳ್ಳಿಗೆ ಹೋಗುವ ಮಾರ್ಗದಲ್ಲಿ ಕೋಗಾರು ವೃತ್ತದಲ್ಲಿ ಬೀಮೇಶ್ವರ ದೇವಾಲಯದ ದರ್ಮದರ್ಶಿಗಳಾದ ಬಂಡು ಮನೆ ಚಿದಂಬರ ರಾಯರು ಮತ್ತು ಸಮಿತಿಯವರ ಭೇಟಿ ಆಗಿತ್ತು.
ಅವರು ಆ ವರ್ಷದ ಶಿವರಾತ್ರಿಯಂದು ಭೀಮೇಶ್ವರ ಜಾತ್ರೆಯ ಆಹ್ವಾನ ಪತ್ರಿಕೆ ನೀಡಿದ್ದರು ಬಹುಶಃ ಅದು ಜಾತ್ರೆ ಪ್ರಾರಂಬಿಸಿದ ಮೊದಲ ವರ್ಷವೊ ಏನೊ ಮರೆತಿದ್ದೇನೆ ಅವರು ಅಲ್ಲಿಗೆ ರಸ್ತೆ ಸರಿ ಮಾಡಿಸಿದ ವಿಚಾರ ತಿಳಿಸಿ ಸಾಧ್ಯವಾದರೆ ಭೀಮೇಶ್ವರ ದೇವಾಲಯಕ್ಕೆ ಹೋಗಿ ಬನ್ನಿ ಅಂದಿದ್ದರು.
ಅವರ ಆಹ್ವಾನದಂತೆ ಮರುದಿನ ಬೆಳಿಗ್ಗೆ ಉಪಹಾರವನ್ನು ತುಮರಿಯಲ್ಲಿ ಮಾಡುವ ತೀಮಾ೯ನದಿಂದ ಭೀಮೇಶ್ವರಕ್ಕೆ ನಮ್ಮ ವಾಹನ ತಿರುಗಿಸಿ ಅರ್ದ ಕಿಲೋ ಮೀಟರ್ ಸಾಗಿದಾಗ ಹೊಸದಾಗಿ ಹಾಕಿದ ಮಣ್ಣಿನ ರಸ್ತೆಯಲ್ಲಿ ನಮ್ಮ ವಾಹನ ಜಾರಿ ಚರಂಡಿಯಲ್ಲಿ ಚಕ್ರಗಳು ಹುಗಿದು ನಿಂತಿತು.
ನಂತರ ಸತತ ಎರಡು ಗಂಟೆ ದೂಡಿ ಎಳೆದು ವಾಹನ ಕೋಗಾರ್ ನಾಗುವಳ್ಳಿ ರಸ್ತೆಗೆ ತಂದು ನಿಲ್ಲಿಸುವಾಗ ನಾವೆಲ್ಲ ಬೆವರು ದೂಳಿನಿಂದ ಕಾಡು ಮನುಷ್ಯರಾಗಿದ್ದೆವು.
ಹಿಡಿದ ಕೆಲಸ ಬಿಡದ ತ್ರಿವಿಕ್ರಮರಂತೆ ಬಾಯಾರಿಕೆ ಹಸಿವಿನಿಂದ ಬಳಲುತ್ತಿದ್ದರೂ ಭೀಮೇಶ್ವರ ತಲುಪಿ ಅಲ್ಲಿನ ಜಲಪಾತದಲ್ಲಿ ಮತ್ತೊಮ್ಮೆ ಮನಸಾ ಇಚ್ಚೆಯಿಂದ ಜಲಕ್ರೀಡೆ ಆಡಿ ಹೊಟ್ಟೆ ತುಂಬಾ ನೀರು ಕುಡಿದು ದೇವರ ದರ್ಶನ ಮಾಡಿದ್ದೆವು ಅಲ್ಲಿ ಇದ್ದ ಏಕೈಕ ಅರ್ಚಕರು ನಮ್ಮ ಕಷ್ಟ ನೋಡಿ ಅವರಿಗಾಗಿ ತಂದಿಟ್ಟುಕೊಂಡ ಅವಲಕ್ಕಿ ಬೆಲ್ಲ ನಮಗೆ ಅವತ್ತು ಪರಮಾನ್ನ ಆಗಿತ್ತು.
ಇವತ್ತಿನವರೆಗೆ ಮಹಾಭಾರತದಲ್ಲಿ ವನವಾಸದಲ್ಲಿ ಭೀಮ ಕಟ್ಟಿದ ದೇವಸ್ಥಾನ #ಭೀಮೇಶ್ವರ ಅಂತನೇ ಭಾವಿಸಿದ್ದೆ....
ಇವತ್ತು #ಡಿಜಿಟಲ್_ಮಾಧ್ಯಮ_ಕನ್ನಡ_ಯೂಟ್ಯೂಬ್ ನಲ್ಲಿ ನಮ್ಮ ತಾಲ್ಲೂಕಿನ ಇತಿಹಾಸ ಸಂಶೋದಕ #ಲೋಕರಾಜ್_ಜೈನರು ಈ ದೇವಾಲಯದ ಬಗ್ಗೆ ಅದರ ನಿರ್ಮಾಣದ ಬಗ್ಗೆ ಮತ್ತು ಅಲ್ಲಿನ ನಂದಿಯ ಕಾಲಬುಡದಲ್ಲಿರುವ ಮೈಸೂರು ಅರಸರ ಶಾಸನದ ಬಗ್ಗೆ ಮಾಹಿತಿ ನೀಡಿದ್ದಾರೆ ನೋಡಿ.
Comments
Post a Comment