#ನನಗೆ_ಏನೇ_ಪ್ರಯತ್ನ_ಮಾಡಿದರೂ_ಪಿಕಳಾರ_ನನ್ನ_ಬಾಯಿಯಲ್ಲಿ_ಪಿಕರಾಳ_ಎಂದೇ_ಉಚ್ಚಾರಣೆ
#ಇದು_ನನ್ನ_ಮೊದಲ_ಎಡಿಟ್_ಮಾಡಿದ_ವಿಡಿಯೋ
#ಜೀವನ_ಪರ್ಯಂತ_ಕಲಿಯುತ್ತಲೇ_ಹೋಗಬೇಕು_ಅದಕ್ಕೆ_ಕೊನೆ_ಇಲ್ಲ
#ಮನುಷ್ಯ_ವಿಶಾಲ_ಸಮುದ್ರ_ಸಾಗರದ_ಒಂದು_ಬಿಂದುವಿನ_ಒಂದು_ಅಣುವೂ_ಅಲ್ಲ
#ಬ್ರಹ್ಮಾಂಡ_ಅನಂತ_ಯೋಚಿಸಿದರೆ_ನಾವೇನೂ_ಅಲ್ಲ
https://youtube.com/shorts/cHpWVQK3h6Q?feature=shared
ಬರೆಯುವ ಹವ್ಯಾಸ ಪತ್ರಿಕೆಗೆ ಕಾಲಂ ಬರೆಯಲು ಪ್ರಾರಂಭವಾಗಿ ನಂತರ ಪುಸ್ತಕ ಬರೆಯಲು ತದನಂತರ ಸಾಮಾಜಿಕ ಜಾಲತಾಣಕ್ಕೆ ಹೀಗೆ ಕಾಲ ಕಾಲಕ್ಕೆ ವೇಗದ ಜಗತ್ತಿನ ತಂತ್ರಜ್ಞಾನದ ಜೊತೆ ಹೆಜ್ಜೆ ಹಾಕುತ್ತಾ ಓಡುತ್ತಾ ಎಡವುತ್ತಾ ವೃದ್ಧಾಪ್ಯದ ಅಂಚಿಗೆ ಬಂದಾಯಿತು.
ಆದರೂ ಅಪ್ಡೇಟ್ ಆಗುತ್ತಲೇ ಇರಬೇಕು ಅದೇನೊ ಗೊತ್ತಿಲ್ಲ ನನಗೆ ವಿಡಿಯೋ ಎಡಿಟಿಂಗ್ ಕಲಿಯಲು ಆಗಲೇ ಇಲ್ಲ ಆದರೂ ಕಲಿಯಲೇ ಬೇಕೆಂಬ ಅದಮ್ಯ ಆಸೆ ಎಡಿಟಿಂಗ್ ಪ್ರಾರಂಭಕ್ಕೆ ಕಾರಣ ಆಯಿತು.
ಇನ್ನೂ ನನ್ನ ವಿಡಿಯೋ ಎಡಿಟಿಂಗ್ ABCD ಹಂತ ದಾಟಿಲ್ಲ ಇವತ್ತು ಬೆಳಿಗ್ಗೆ 6 ಕ್ಕೆ ವಾಕಿಂಗ್ ಪಾರಂಬಿಸುವ ಮೊದಲು ನನ್ನ ವಾಕಿಂಗ್ ಟ್ರಾಕ್ ಹೊಸ ಪ್ರೆಂಡ್ ಪಿಕರಾಳ ... ಸ್ಸಾರಿ ಪಿಕಳಾರ ತನ್ನ ಗೂಡಿನ ಮೂರು ಮೊಟ್ಟೆಗೆ ಕಾವು ನೀಡುತ್ತಿರುವುದು ನನ್ನ ಆಗಮನ ದೂರದಿಂದಲೇ ಗ್ರಹಿಸಿ ಗೂಡಿಂದ ಹಾರಿ ಮನೆಯ ಮೇಲೆ ಕುಳಿತು ನನ್ನ ಮತ್ತು ಶಂಭೂರಾಮನ ಗಮಿನಿಸುತ್ತದೆ.
ತನ್ನ ಗೂಡಿಂದ ಹಾರಿ ಹೋಗುವ ವಿಡಿಯೋ ಸ್ಲೋ ಮೋಷನ್ ನಲ್ಲಿ ಚಿತ್ರಿಕರಣ ಮಾಡಿ ಅದರ ಅನುಪಯುಕ್ತ ಭಾಗಗಳನ್ನು ಡಿಲೀಟ್ ಮಾಡಿ ತೆಗೆದು ಹಾಕಿ ಬೇಕಾದ ವಿಡಿಯೋ ತುಣುಕುಗಳಿಗೆ ನನ್ನ ಧ್ವನಿ ನೀಡಿ ಯುಟ್ಯೂಬ್ ಗೆ ಅಪ್ ಲೋಡ್ ಮಾಡಿ ನನ್ನ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಇದೆಲ್ಲ ಬರೆದುಕೊಂಡು ನನ್ನ ಬೆನ್ನು ನಾನೇ ತಟ್ಟುಕೊಂಡಿದ್ದೇನೆ ಇದು ನನ್ನ ಮೊದಲ ಎಡಿಟಿಂಗ್ ವಿಡಿಯೋ.
Comments
Post a Comment