Blog number 2087. ರೈತ ನಾಯಕ ದಿನೇಶ್ ಶಿರವಾಳರು ನಿರ್ಮಿಸಿರುವ ಅವರ ಕನಸಿನ ಮನೆ "ಪರಿಶ್ರಮ" ದಿನಾಂಕ 28- ಏಪ್ರಿಲ್-2024 ಬಾನುವಾರ ಗೃಹ ಪ್ರವೇಶ.
#ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ_ಸ್ಥಾಪಿತ_ರೈತಸಂಘ
#ಮರುಸ್ಥಾಪನೆ_ಮಾಡಿದ_ಶ್ರಮಜೀವಿ_ಕೃಷಿಕ_ವಾಘ್ಮಿ_ಸಂಘಟನ_ಚತುರ_ದಿನೇಶ್_ಶಿರವಾಳರ
#ಸಾಗರದ_ಶಿರವಾಳದಲ್ಲಿ_ನಿರ್ಮಿಸಿರುವ_ಪರಿಶ್ರಮ_ಎಂದು_ನಾಮಕರಣಗೊಂಡಿರುವ
#ಮನೆ_ಗೃಹ_ಪ್ರವೇಶ_ದಿನಾಂಕ_28_ಏಪ್ರಿಲ್_2024_ಭಾನುವಾರ.
1- ಜನವರಿ-1948ರಲ್ಲಿ ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ ಸ್ಥಾಪಿಸಿದ್ದ ರೈತ ಸಂಘಕ್ಕೆ ಅಂದಿನ ಅಧ್ಯಕ್ಷರು ಮೂಕಪ್ಪನವರು 1957ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾಗುತ್ತಾರೆ, ಕಾರ್ಯದರ್ಶಿಗಳಾಗಿದ್ದ ಗಣಪತಿಯಪ್ಪನವರು ಶಾಂತವೇರಿ ಗೋಪಾಲಗೌಡರು ಸೇರಿ 1952 ರಲ್ಲಿ ಪ್ರಾರಂಬಿಸಿದ ಊಳುವವನೇ ಹೊಲದೊಡೆಯ ಘೋಷಣೆಯ ಕಾಗೋಡು ರೈತ ಹೋರಾಟ ವಿಶ್ವ ವಿಖ್ಯಾತವಾಗಿದ್ದು ಇತಿಹಾಸ.
ಈ ರೈತ ಸಂಘದ ಮರು ಹುಟ್ಟು ಹಾಕಿರುವ ದಿನೇಶ್ ಶಿರವಾಳ ನ್ಯಾಯಕ್ಕಾಗಿ ಗಾಂಧೀ ಮಾರ್ಗದಲ್ಲಿ ವಿನೂತನ ಹೋರಾಟಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ, ಅಧ್ಯಕ್ಷ ದಿನೇಶ್ ಶಿರವಾಳರ ಕಂಚಿನ ಕಂಠದ ಕರಾರುವಕ್ಕಾದ ಮಾತುಗಳು ಹಾಗೂ ಅವರ ಬಾಡಿ ಲಾಂಗ್ವೇಜ್ ನನಗೆ ಇಷ್ಟ.
40 ವಷ೯ದ ದಿನೇಶ್ ಶಿರವಾಳರು ಚಿಕ್ಕ೦ದಿನಿ೦ದ ತಾಯಿ ಜೊತೆ ತಾವು ಬೆಳೆದ ತರಕಾರಿ ತಲೆ ಮೇಲೆ ಹೊತ್ತು ನಿತ್ಯ ಸಾಗರದ ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದವರು, ಸುಖ ಸಾಗರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾ ನಂತರ ಬೆಂಗಳೂರಲ್ಲಿ ಕರ್ನಾಟಕ ಬ್ರಿವರಿಸ್ ನಲ್ಲಿ ದಿನಗೂಲಿ ವೃತ್ತಿ ಮಾಡಿದವರು ನಂತರ ಟ್ರಾಕ್ಟರ್ ಖರೀದಿಸಿ ಬಾಡಿಗೆ ಮಾಡಿದವರು.
ಒಂದು ಕಾಲದಲ್ಲಿ ಶಿರವಾಳ ಅತ್ಯಂತ ಬಡತನದ ಸಾಗರದ ಹಳ್ಳಿ ಇಲ್ಲಿನ ಕುಟುಂಬಗಳು ತರಕಾರಿ ಹಾಲು ಸಾಗರ ಪೇಟೆಗೆ ತಂದು ಮಾರಾಟ ಮಾಡಿ ಜೀವನ ಮಾಡುತ್ತಿದ್ದರು ಅದರಲ್ಲಿ ಕೆಲ ಸಾಹಸಿಗಳು ಬೆಲ್ಲದಿಂದ ದೇಶಿ ಸರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದರಿಂದ ಶಿರವಾಳ ಕುಖ್ಯಾತಿಯೂ ಪಡೆದಿತ್ತು ಈಗ ಶಿರವಾಳ ಸಾಗರ ಪಟ್ಟಣದಲ್ಲಿ ಸೇರಿ ಹೋಗಿದೆ ಅಲ್ಲಿನ ಭೂಮಿಗೆ ಚಿನ್ನದ ಬೆಲೆ ಮತ್ತು ಈಗಿನ ತಲೆಮಾರಿನ ಬುದ್ಧಿವಂತ ಯುವ ರೈತರು ವಾಣಿಜ್ಯ ಬೆಳೆಗಳಾದ ಅಡಿಕೆ - ಶುಂಠಿ ಬೆಳೆದು ಆರ್ಥಿಕವಾಗಿ ಸದೃಡವಾಗುತ್ತಿದ್ದಾರೆ 50 ವರ್ಷದಲ್ಲಿ ಶಿರವಾಳ ಬದಲಾಗಿದೆ.
ರೈತ ಸಂಘದ ಅಧ್ಯಕ್ಷರಾದ #ದಿನೇಶ್_ಶಿರವಾಳರು ಇವರ ತಂದೆ ನಾರಾಯಣಪ್ಪ ಮತ್ತು ತಾಯಿ ಚೌಡಮ್ಮರ ಪಿತ್ರಾರ್ಜಿತ ಆಸ್ತಿಯಾದ ನಾಲ್ಕು ಎಕರೆಯಲ್ಲಿ ಸ್ಟತಃ ಕೃಷಿ ಮಾಡುತ್ತಾ ಒಂಬತ್ತು ವರ್ಷದಿಂದ ತಮ್ಮ ಕನಸಿನ ಮನೆಯ ಗೋಡೆಗಳನ್ನು ಸ್ವತಃ ಇವರು ಮತ್ತು ಇವರ ಪತ್ನಿ ಇಬ್ಬರೇ ಕಟ್ಟಿದ್ದಾರೆ.
ಈ ಮನೆಗೆ #ಪರಿಶ್ರಮ ಎಂಬ ಹೆಸರು ಇಟ್ಟಿದ್ದಾರೆ ಇದು ಅನ್ವರ್ಥನಾಮ ಇವರ ಪರಿಶ್ರಮದಲ್ಲಿ ಅರಳಿದ ಇವರ ಗೃಹ ಪ್ರವೇಶ 28- ಏಪ್ರಿಲ್- 2024 ಭಾನುವಾರ ನಡೆಯಲಿದೆ ಅದರ ಆಹ್ವಾನ ಪತ್ರಿಕೆ ನನಗೆ ನೀಡಲು ಬಂದಿದ್ದರು.
ಇವರ ಕನಸಿನ ಮನೆ ಪರಿಶ್ರಮದ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ಕೂಡ ವಿಶೇಷವಾಗಿ ಇವರ ಪರಿಕಲ್ಪನೆಯಲ್ಲಿ ವಿನ್ಯಾಸ ಮಾಡಿದ್ದಾರೆ.
Comments
Post a Comment