#ಉಚಿತ ಎಂದರೆ ಮುಗಿ ಬೀಳುವ ಸ೦ಸ್ಕಾರ ಹೀನ ಶ್ರೀಮ೦ತ, ವಿದ್ಯಾವಂತ ಸಮೂದಾಯ ಸಮಾಜಕ್ಕೆ ಕೊಡುವ ನೀತಿ ಪಾಠ ಏನು?ಇದು ನಮಗೆ ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ.
#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನಂ_13. #ದಿನಾ೦ಕ_13_ಏಪ್ರಿಲ್_2020. #ಅಶಿಕ್ಷಿತ_ಜ್ಞಾನಿ V/S ಎಜುಕೇಟೆಡ್ ಈಡಿಯೇಟ್ಸ್ ಕಳೆದ ಮಾಚ್೯ 24ರಿಂದ ಇಡೀ ದೇಶದಲ್ಲಿ ಕೊರಾನಾ ವೈರಸ್ ಸಾ೦ಕ್ರಮಿಕವಾಗಿ ಹರಡದಂತೆ ತಡೆಯಲು ಸಕಾ೯ರ ತೆಗೆದುಕೊಳ್ಳಬೇಕಾದ ಮು೦ಜಾಗೃತೆ ಕ್ರಮಗಳನ್ನ ಸಾವ೯ಜನಿಕರಿಗೆ ಎಲ್ಲಾ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದೆ. ಈ ಕಾಯಿಲೆಯಿ೦ದ ಮು೦ದುವರಿದ ದೇಶಗಳೇ ತತ್ತರಿಸಿದೆ ಎಂಬ ಪ್ರತಿ ಕ್ಷಣದ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಿದ್ದೇವೆ. ಇದರಲ್ಲಿ ಬಹುಮುಖ್ಯವಾದದ್ದು ಸಾಮಾಜಿಕ ಅಂತರ ಕಾಪಾಡುವುದು ಆದರೆ ಜನರನ್ನ ಎಷ್ಟು ಜಾಗೃತಿ ಮಾಡಿದರೂ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ ಬಹುಶಃ ಇದೇ ಮುಂದಿನ ದಿನದಲ್ಲಿ ದೊಡ್ಡ ದುರಂತಕ್ಕೆ ಕಾರಣವಾದೀತು. ತರಕಾರಿ ಖರೀದಿ ಸ್ಥಳ, ದಿನಸಿ ಖರೀದಿ ಸ್ಥಳದಲ್ಲಿ ಒಬ್ಬರನ್ನೊಬ್ಬರು ತಾಗಿಯೇ ಇರುತ್ತಾರೆ. ಅಮೆರಿಕಾ ಲಂಡನ್ ನಲ್ಲಿ ವಿದ್ಯಾವಂತರು ಈ ಮುಂಜಾಗೃತಿಯನ್ನ ಕಡೆಗಾಣಿಸಿ ವೀಕ್ ಎಂಡ್, ಬಾರ್ ಗಳಲ್ಲಿ ಕಳೆದದ್ದೇ ಇವತ್ತಿನ ಸಾವಿರಾರು ಸಾವಿಗೆ ಕಾರಣ. ಶಿವಮೊಗ್ಗ ಪಟ್ಟಣದಲ್ಲಿ ಈ ಕಾಯಿಲೆ ಹರಡದಂತೆ ತಡೆಯಲು ವಿದ್ಯಾವಂತ ಯುವ ಜನತೆಯನ್ನ ಸ್ವಯಂ ಹೆಸರು ನೋಂದಾಯಿಸಿ ಸಾವ೯ಜನಿಕರಿಗೆ ಸಹಾಯ ಮಾಡಲು ಸ್ವಯಂ ಸೇವಕರಾಗಿ ಸೇವೆ ಮಾಡಲು ಅವಕಾಶ ನೀಡಿ ತರಬೇತಿ ನೀಡಲಾಗಿದೆ. ಮೊನ್ನೆ ಶಿವಮೊಗ್ಗದ ಪೆಟ್ರೋಲ್ ...