Skip to main content

Posts

Showing posts with the label Sweet potato taste never forgotten

Blog number 1925. ಹದವಾಗಿ ಉಪ್ಪು ಬೆರೆಸಿ ಬೇಯಿಸಿದ ಸಿಹಿ ಗೆಣಸಿನ ಸ್ಟಾದ ಅರಿಯದವರಾರು?

#ಬೆಳಗಿನ_ಚಳಿಯಲ್ಲಿ_ವಾಕಿಂಗ್_ಮುಗಿಸಿ_ಬಂದಾಗ #ಬಿಸಿ_ಬಿಸಿ_ಬೇಯಿಸಿದ_ಗೆಣಸು #ಗೆಣಸಿನ_ಸ್ಟಾದ_ಅರೋಮ_ಆರೋಗ್ಯ_ಅರಿಯದವರಿಲ್ಲ. #ಕೆಂಪು_ಬಿಳಿ_ನಸುಹಳದಿ_ಬಣ್ಣದ_ಸಿಹಿ_ಗೆಣಸುಗಳು #ಕೇರಳದಿಂದ_ಮಹಾರಾಷ್ಟ್ರದ_ಕರಾವಳಿ_ಪ್ರದೇಶದಲ್ಲಿ_ಹೆಚ್ಚು_ಬೆಳೆಯುತ್ತಾರೆ. #ಕರಾವಳಿಯ_ಜಾತ್ರೆ_ಯಕ್ಷಗಾನದ_ಸ್ಥಳದಲ್ಲಿ_ಬೇಯಿಸಿದ_ಗೆಣಸು_ಮಾರಾಟದ_ಚಹಾ_ಅಂಗಡಿಗಳು #ಈಗಿಲ್ಲ_ಬೇಯಿಸಿದ_ಗೆಣಸು_ತಿನ್ನುವುದು_ಅವಮಾನವಾ? https://youtu.be/jM9fCCQrWfA?feature=shared    ಇವತ್ತು ಬೆಳಿಗಿನ ಚಳಿಯಲ್ಲಿ ವಾಕಿಂಗ್ ಮುಗಿಸಿ ಮನೆ ತಲುಪಿದ ನನಗೂ ಮತ್ತು ನನ್ನ ಶಂಭೂರಾಮನಿಗೂ ನಮಗಿಷ್ಟವಾದ ಹಬೆಯಾಡುತ್ತಿರುವ ಕೆಂಪು ಸಿಹಿ ಗೆಣಸು ನಮ್ಮನ್ನು ಕಾಯುತ್ತಿತ್ತು.    ನನಗೆ ಗೆಣಸು ಎಂದರೆ ಪಂಚ ಪ್ರಾಣ, ಹದವಾಗಿ ಉಪ್ಪು ಸೇರಿಸಿ ಬೇಯಿಸಿದ ಸಿಹಿ ಗೆಣಸು ತಿನ್ನುತ್ತಾ ಜೊತೆಗೆ ಎರೆಡೆರುಡು ದೊಡ್ಡ ಲೋಟದ ಚಹ ಅಥವ ಕಾಫಿ ಹೀರುವುದು ಒಂದು ರೀತಿ ಸ್ವರ್ಗ ಲೋಕ ಅನುಭವಿಸಿದಂತೆ.   ಸಿಪ್ಪೆ ತೆಗೆದು ತೊಳೆದು ಹಾಗೆ ಹಸಿಯಾಗಿ ಗೆಣಸು ತಿನ್ನುವುದೂ ನನಗೆ ತುಂಬಾ ಇಷ್ಟ.    ಸಿಹಿ ಗೆಣಸಿನಲ್ಲಿ ನೂರಾರು ತಳಿಗಳಿದೆ, ಬಣ್ಣ ಮತ್ತು ಆಕೃತಿ ಅದರ ಗಾತ್ರಗಳೂ ಬಿನ್ನ ವಿಭಿನ್ನವಾಗಿರುತ್ತದೆ.   ಪಶ್ಚಿಮದ ಕರಾವಳಿಯ ಕೇರಳದಿಂದ ಮಹಾರಾಷ್ಟ್ರದ ರತ್ನಗಿರಿವರೆಗೆ ವಿವಿಧ ರುಚಿಯ ಸುವಾಸನೆಯ ಬಣ್ಣದ ಗೆಣಸುಗಳನ್ನು ಅಲ್ಲಿನ ಮರಳು...