Skip to main content

Posts

Showing posts with the label Ancient days Doves using to exchange letters now for gambling

Blog number 1282. ಪಾರಿವಾಳದ ಜಗತ್ತು ... ಸಂದೇಶ ರವಾನೆಯ ಯುಗ ದಾಟಿ ಜೂಜಿನ ಪಂದ್ಯದ ದಾಳವಾಗಿ ಪಾರಿವಾಳ...

# ಪಾರಿವಾಳದ ಜಗತ್ತು ಗಮನಿಸಿ      ಶಾಲೆಗೆ ಹೋಗುವ ದಿನದಲ್ಲಿ ಪಾರಿವಾಳ ಸಾಕುವ ಹುಚ್ಚು ಈಗಿನ ಹಾಗೆ ಸಾಕು ಪಾರಿವಾಳ ಮಾರಾಟಕ್ಕೆ ನಮ್ಮ ಹಳ್ಳಿ ಕಡೆ ಸಿಗುತ್ತಿರಲಿಲ್ಲ ಹಾಗಾಗಿ ಕಾಡಿನ ಪಾರಿವಾಳ ಹಿಡಿಯಲು ನಾವೆಲ್ಲ ಗೆಳೆಯರು ಒದ್ದಾಡುತ್ತಿದ್ದು ನೆನಪಾಗಿ ನಗು ಬರುತ್ತೆ.  ಇತ್ತೀಚಿಗೆ FB ಗೆಳೆಯರಾದ ರೇವಣ ಸಿದ್ದಯ್ಯ ಎಂಬುವವರು ಪಾರಿವಾಳಗಳು ಬರದಂತೆ ತಡೆಯುವುದು ಹೇಗೆ ಎಂಬ post ಹಾಕಿದ್ದರು ಅದಕ್ಕೆ ಬಂದ ಉತ್ತರ ನೋಡುತ್ತಿದ್ದೆ ಆದರೆ ಅವು ಯಾವುದೂ ವಾಸ್ತವ ಉಪ ಶಮನ ಆಗಿರಲಿಲ್ಲ ನನ್ನ ಉತ್ತರ ನೋಡಿ ತುಂಬಾ ಸಂತೋಷ ಆಯಿತು ಅಂತ ಉತ್ತರಿಸಿದರು.    1989 ರಲ್ಲಿ ರೈಸ್ ಮಿಲ್ ಕಟ್ಟಿದಾಗ ಅದರ ಗೋಡೆ 20 ಅಡಿ ಎತ್ತರ ಇತ್ತು ಅಲ್ಲಿ ಪಾರಿವಾಳಗಳು ನೂರಾರು ಗೂಡು ಮಾಡಿಕೊಂಡವು ಆದರೆ ಆ ಗೂಡಿಗೆ ಬೆಕ್ಕು, ಕಾಗೆ, ಹಾವು ತಲುಪದಂತ ಪ್ರದೇಶ ಆಗಿತ್ತು, ಬಾಯಿಗೆ ಎಟುಕದ ದ್ರಾಕ್ಷಿ ಹುಳಿ ಎಂಬಂತೆ ಬೆಕ್ಕುಗಳ ರೋದನ ಮತ್ತು ಪಾರಿವಾಳದ ಗೂಡು ತಲುಪಿ ಮೊಟ್ಟೆ ತಿನ್ನುವ ಸಾಹಸದಿಂದ ಹಾವುಗಳು ಕಟ್ಟಡದ ಸುತ್ತು ಸುಳಿಯುತ್ತಿದ್ದವು.   2018 ರಲ್ಲಿ ರೈಸ್ ಮಿಲ್ ಕಟ್ಟಡ ತೆಗೆದು ಹೊಸ ಲಾಡ್ಜ ಕಟ್ಟಲು ಯೋಜನೆ ಮಾಡಿ ಕಟ್ಟಡ ತೆಗೆಯುವ ಕೆಲಸ ಪ್ರಾರಂಬಿಸಿದಾಗ ಪಾರಿವಾಳಗಳು 30 ವಷ೯ದಲ್ಲಿ ನಿಮಿ೯ಸಿಕೊಂಡ ಗೂಡು ಸುಮಾರು 200 ಅಡಿ ಇತ್ತು, ಆದರಲ್ಲಿ ಅವುಗಳ ಮರಿಗಳಿಗಾಗಿ ಮಾಡಿಕೊಂಡ ಬೆಚ್ಚನೆ ತಡಿಗಳು ಕೇ...