Skip to main content

Posts

Showing posts with the label one night guest of me.

ವಿಮಾನ ನಿಲ್ದಾಣಗಳ ರನ್ ವೇ ಬಣ್ಣ ತಯಾರಿಸುವ ಪೂನಾದ ಅಂತರಾಷ್ಟ್ರೀಯ ಶ್ರೀಮಂತ ಉದ್ಯಮಿಯ ನಡೆದು ಹೋಗುವ ಹವ್ಯಾಸ, ಒಂದು ರಾತ್ರಿ ನನ್ನ ಅತಿಥಿ ಮುಂದಿನದ್ದು ಓದಿ

#ಹೀಗೂ_ಉ೦ಟೆ!? #ಇದು_2018ರ_ಘಟನೆ_ಸದಾ_ನೆನಪಾಗುವುದರಿಂದ_ಇನ್ನೂ_ಒಮ್ಮೆ_ಪೋಸ್ಟ್_ಮಾಡಿದೆ #ರವೀ೦ದ್ರದತ್ತಾತ್ರೇಯಬುಚಾಕೆ_ದೇಶ_ವಿದೇಶಗಳಲ್ಲಿ #ಪಾದಯಾತ್ರೆ_ಮಾಡುವ_ಶ್ರೀಮಂತ_ಕೈಗಾರಿಕೋದ್ಯಮಿ  #ಪ್ರತ್ಯಕ್ಷ_ಕಂಡರು_ಪರಾಂಬರಿಸಿ_ನೋಡು_ಗಾದೆ_ಸುಳ್ಳಲ್ಲ   ನಿನ್ನೆ ಇವರು ಪತ್ನಿ ಮತ್ತು ಮಗನೊಂದಿಗೆ ಬಂದು ನನಗೆ ಕಾಯುತ್ತಿದ್ದರು, ಸಪ್೯ರೈಸ್ ವಿಸಿಟ್ ಮಾಡಿದ ಇವರ ಹೆಸರು ರವೀಂದ್ರ ದತ್ತಾತ್ರೆಯ ಬುಚಾಕೆ.    ನನಗೆ ಸಿಹಿ ತಿಂಡಿ, ಬೆಳ್ಳಿಯ ದೀಪದೊoದಿಗೆ ನೆನಪಿನ ಕಾಣಿಕೆ ನೀಡಿದರು, ನಾನು ಹೇಳಿದೆ " ನಾನು ನೀಡಿದ ಆತಿಥ್ಯಕ್ಕಿಂತ ಇದು ಕೆಲವು ಪಟ್ಟು ದುಬಾರಿ ಆಯಿತು ಅಂದೆ, ಅದಕ್ಕೆ ಅವರು ನಿಮ್ಮ ಪ್ರೀತಿಯ ಆತಿಥ್ಯಕ್ಕೆ ಬೆಲೆ ಕಟ್ಟಲು ಬಾರದು ಅಂದರು.   ವಾಸ್ತವ ಏನೆಂದರೆ ಕಳೆದ ವಷ೯ ಇವರು ಪೂನಾದಿಂದ ಶೃಂಗೇರಿಗೆ ಏಕಾ೦ಗಿ ಆಗಿ ನಡೆದು ಹೋಗುವಾಗ ನಮ್ಮ ಲಾಡ್ಜ್ ನಲ್ಲಿ ರೂಮು ಖಾಲಿ ಇರಲಿಲ್ಲ ಹಾಲ್ ನಲ್ಲಿ ಹಾಸಿಗೆ ಹಾಕಿ ಕೊಟ್ಟಿದ್ದೆ,ಒಂದು ರಾತ್ರಿ ತಂಗಿದ್ದರು, ಅವರ ಹಿನ್ನೆಲೆ ನಾನು ಕೇಳಲಿಲ್ಲ ಅವರು ಹೇಳಲಿಲ್ಲ ಆದರೆ ಅವರ 69ನೇ ಇಳಿವಯಸ್ಸಿನಲ್ಲಿ ಪೂನಾದಿಂದ ಶೃ೦ಗೇರಿಗೆ ಏಕಾ೦ಗಿಯಾಗಿ 780 ಕಿ.ಮಿ ನಡೆದು ಹೋಗುವ ಅವರ ಸಾಹಸಕ್ಕೆ ಅಭಿನಂದಿಸಿ ವಸತಿ, ಊಟ ಮತ್ತು ಉಪಹಾರ ಹಣ ಪಡೆಯದೆ ನೀಡಿದ್ದೆ ಮತ್ತು ಮುಂದಿನ ಪ್ರಯಾಣಕ್ಕೆ ಅಲ್ಪ ಕಾಣಿಕೆ ನೀಡಲು ಮುಂದಾದಾಗ ನಯವಾಗಿ ನಿರಾಕರಿಸಿದ್ದರು.   ನಿನ್ನೆ ಅವರ ಹ...