ಶೃಂಗೇರಿ ದೇವಾಲಯದ ನಿತ್ಯ ಪೂಜೆಗೆ ಶ್ರೀಗಂದ ಆನಂದಪುರದ ಗೌತಮಪುರ ಮತ್ತು ಸಂಪಳ್ಳಿಯ ಕಾಡಿನಿಂದ ಪ್ರತಿ ವರ್ಷ 2 ಟನ್ ಪೂರೈಸಲು ರಾಜರು ಆನಂದಪುರಂನ ಆಯ್ಯಂಗಾರ್ ಕುಟುಂಬಕ್ಕೆ 2000 ಎಕರೆ ಕಾಡು ದಾನ ನೀಡಿದ್ದರು
ಭಾಗ_8 ಆನಂದಪುರ೦ಗೂ ಶೃಂಗೇರಿಮಠಕ್ಕೂ ಇದ್ದ ದೀಘ೯ ಸಂಬಂದ, ವಾಷಿ೯ಕ ಎರೆಡು ಟನ್ ಶ್ರೀಗಂದ ಇಲ್ಲಿಂದ ತಪ್ಪದೇ ಹೋಗುತ್ತಿತ್ತು ಆನಂದಪುರಂದಿಂದ ಪ್ರತಿ ವರ್ಷ ಎರೆಡು ಟನ್ ಶ್ರೀಗಂದ ಶೃಂಗೇರಿಗೆ ಇದಕ್ಕಾಗಿ ಆನಂದಪುರಂನಲ್ಲಿ 2000 ಎಕರೆ ಕಾಡು ಅಯ್ಯಂಗಾರ್ ಕುಟುಂಬಕ್ಕೆ ಮೈಸೂರು ರಾಜರು ನೀಡಿದ್ದರು. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಅಯ್ಯಂಗಾರರ ಕುಟುಂಬದಿಂದ ಜಿಪಿಎ ಹೊಂದಿದ ಟಿಂಬರ್ ವ್ಯಾಪಾರಿ ನನ್ನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗೌತಮಪುರ ಮತ್ತು ಸಂಪಳ್ಳಿ ಭಾಗದಲ್ಲಿನ 2000 ಎಕರೆ ಕಾಡು ತನ್ನ ಮಾಲಿಕತ್ವದಲ್ಲಿದೆ ಅಲ್ಲಿನ ಮರ ಕಡಿತಲೆ ಮಾಡುತ್ತಾರಂತ 1998 ರಲ್ಲಿ ಸುದ್ದಿ ಹರಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ತಿಳಿದದ್ದು ಈ ಮಹತ್ವದ ವಿಚಾರ ಮತ್ತು ಏನೇ ಆದರೂ ಅರಣ್ಯ ಇಲಾಖೆ 2000 ಎಕರೆ ಟಿಂಬರ್ ಮಾಫಿಯಾ ಕೈಗೆ ಹೋಗುವುದಿಲ್ಲ ಎಂಬ ಅಭಯ ಆಗ ಶಿವಮೊಗ್ಗದ ಸಂಯುಕ್ತ ಕರ್ನಾಟಕದ ಜಿಲ್ಲಾ ವರದಿಗಾರ ತಿಮ್ಮಪ್ಪ ಮತ್ತು ನಾನು ಅರಣ್ಯ ಇಲಾಖೆ ACF ಲಕ್ಷ್ಮೀನಾರಾಯಣ್ ಅವರ ಜೀಪಲ್ಲಿ ಸಂಪಳ್ಳಿ ಕಾಡಿಗೆ ಬೇಟಿ ನೀಡಿದ್ದೆವು, ತಿಮ್ಮಪ್ಪ ಈ ಬಗ್ಗೆ ಸಂಯುಕ್ತ ಕನಾ೯ಟಕದಲ್ಲಿ ವಿಸ್ತಾ...