Skip to main content

Posts

Showing posts with the label this was discovered by S.R.Rao who was born in ANANDAPURAM

Blog number 1970. ನಮ್ಮ ಊರಲ್ಲಿ ಜನಿಸಿದ ಎಸ್.ಆರ್.ರಾವ್ ಸಮುದ್ರದಲ್ಲಿ ಮುಳುಗಿದ ದ್ವಾರಕಾ ನಗರ ಸಂಶೋದಿಸಿದರು, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮುಳುಗಿದ ದ್ವಾರಕೆ ಸಂದರ್ಶಿಸಿದರು.

#ಸಮುದ್ರದಲ್ಲಿ_ಮುಳುಗಿದ_ಶ್ರೀಕೃಷ್ಣನ_ದ್ವಾರಕಾ_ನಗರ #ದೇಶದ_ಪ್ರದಾನಮಂತ್ರಿ_ನರೇಂದ್ರ_ಮೋದಿಯವರಿಂದ_ದರ್ಶನ #ನವಿಲು_ಗರಿಯ_ಗುಚ್ಟ_ಸಮರ್ಪಣೆ #ದ್ವಾರಕಾ_ನಗರ_ಸಮುದ್ರದಲ್ಲಿ_ಸಂಶೋಧಿಸಿದವರು_ಎಸ್_ಆರ್_ರಾವ್ #ಅವರು_ಜನಿಸಿದ್ದು_ಆನಂದಪುರಂನಲ್ಲಿ #ಆನಂದಪುರಂ_ರಂಗನಾಥ_ದೇವರ_ಹರಕೆಯ_ಫಲ.    ಭಾರತೀಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಮಹಾಭಾರತ ನಿಜಕ್ಕೂ ಸತ್ಯ ಕಥೆಯ ಅಥವ ಕಾಲ್ಪನಿಕ ನೀತಿ ಕಥೆಯಾ ಎಂಬ ತರ್ಕಗಳು ಭಾರತೀಯರಲ್ಲಿ ಅದರಲ್ಲೂ ಹಿಂದೂ ದರ್ಮಿಯರಲ್ಲೂ ತರ್ಕಗಳಿತ್ತು ಇದರ ಮಧ್ಯ ಕೆಲ ನಾಸ್ತಿಕವಾದಿಗಳು ಶ್ರೀಕೃಷ್ಣನ ಡೇಟ್ ಆಫ್ ಬರ್ತ್ ಕೇಳುವ ಉಡಾಪೆ ಮಾತುಗಳಿಂದ ಅದನ್ನು ಸಮರ್ಥಿಸಲಾಗದ ಕೇವಲ ಸೃತಿಯಿಂದಲೇ ಸಾವಿರಾರು ವರ್ಷಗಳಿಂದ ತಲೆಮಾರಿಂದ ತಲೆಮಾರಿಗೆ ಹರಿದು ಬಂದಿರುವ ಭಗವದ್ಗೀತೆ ಮಹಾಭಾರತಗಳು ಕಾಲ್ಪನಿಕ ನೀತಿ ಕಥೆಯೇ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಆಗಿತ್ತು.     ಯಾವಾಗ ಸಮುದ್ರದಲ್ಲಿ ಮುಳುಗಿದ ದ್ವಾರಕಾ ನಗರ ಸಂಶೋದನೆ ಆಯಿತು, ಮುಳುಗಿದ ಅರಮನೆ, ದೇವಾಲಯಗಳು ಮತ್ತು ಕೋಟೆಗಳು ಶ್ರೀಕೃಷ್ಣನ ದ್ವಾರಕೆ ಕಾಲ್ಪನಿಕವಲ್ಲ ಎಂಬುದು ಸಾಬೀತುಪಡಿಸಿತು. ಅರ್ಜುನ ದ್ವಾರಕಾ ನಗರ ಸಮುದ್ರದಲ್ಲಿ ಮುಳುಗುವಾಗ ದ್ವಾರಕೆಯಲಿರುವವರನ್ನು ಸ್ಥಳಾಂತರಿಸಲು ಹೋಗಿದ್ದ ಬಗ್ಗೆ ಅವತ್ತು ಸಮುದ್ರ ಮಟ್ಟ ಏರಿ ಇಡೀ ದ್ವಾರಕೆ ಮುಳುಗುವ ವರ್ಣನೆ ಮಹಾಭಾರತದಲ್ಲಿದೆ.   ...