Blog number 1970. ನಮ್ಮ ಊರಲ್ಲಿ ಜನಿಸಿದ ಎಸ್.ಆರ್.ರಾವ್ ಸಮುದ್ರದಲ್ಲಿ ಮುಳುಗಿದ ದ್ವಾರಕಾ ನಗರ ಸಂಶೋದಿಸಿದರು, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮುಳುಗಿದ ದ್ವಾರಕೆ ಸಂದರ್ಶಿಸಿದರು.
#ಸಮುದ್ರದಲ್ಲಿ_ಮುಳುಗಿದ_ಶ್ರೀಕೃಷ್ಣನ_ದ್ವಾರಕಾ_ನಗರ
#ದೇಶದ_ಪ್ರದಾನಮಂತ್ರಿ_ನರೇಂದ್ರ_ಮೋದಿಯವರಿಂದ_ದರ್ಶನ
#ನವಿಲು_ಗರಿಯ_ಗುಚ್ಟ_ಸಮರ್ಪಣೆ
#ದ್ವಾರಕಾ_ನಗರ_ಸಮುದ್ರದಲ್ಲಿ_ಸಂಶೋಧಿಸಿದವರು_ಎಸ್_ಆರ್_ರಾವ್
#ಅವರು_ಜನಿಸಿದ್ದು_ಆನಂದಪುರಂನಲ್ಲಿ
#ಆನಂದಪುರಂ_ರಂಗನಾಥ_ದೇವರ_ಹರಕೆಯ_ಫಲ.
ಭಾರತೀಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಮಹಾಭಾರತ ನಿಜಕ್ಕೂ ಸತ್ಯ ಕಥೆಯ ಅಥವ ಕಾಲ್ಪನಿಕ ನೀತಿ ಕಥೆಯಾ ಎಂಬ ತರ್ಕಗಳು ಭಾರತೀಯರಲ್ಲಿ ಅದರಲ್ಲೂ ಹಿಂದೂ ದರ್ಮಿಯರಲ್ಲೂ ತರ್ಕಗಳಿತ್ತು ಇದರ ಮಧ್ಯ ಕೆಲ ನಾಸ್ತಿಕವಾದಿಗಳು ಶ್ರೀಕೃಷ್ಣನ ಡೇಟ್ ಆಫ್ ಬರ್ತ್ ಕೇಳುವ ಉಡಾಪೆ ಮಾತುಗಳಿಂದ ಅದನ್ನು ಸಮರ್ಥಿಸಲಾಗದ ಕೇವಲ ಸೃತಿಯಿಂದಲೇ ಸಾವಿರಾರು ವರ್ಷಗಳಿಂದ ತಲೆಮಾರಿಂದ ತಲೆಮಾರಿಗೆ ಹರಿದು ಬಂದಿರುವ ಭಗವದ್ಗೀತೆ ಮಹಾಭಾರತಗಳು ಕಾಲ್ಪನಿಕ ನೀತಿ ಕಥೆಯೇ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಆಗಿತ್ತು.
ಯಾವಾಗ ಸಮುದ್ರದಲ್ಲಿ ಮುಳುಗಿದ ದ್ವಾರಕಾ ನಗರ ಸಂಶೋದನೆ ಆಯಿತು, ಮುಳುಗಿದ ಅರಮನೆ, ದೇವಾಲಯಗಳು ಮತ್ತು ಕೋಟೆಗಳು ಶ್ರೀಕೃಷ್ಣನ ದ್ವಾರಕೆ ಕಾಲ್ಪನಿಕವಲ್ಲ ಎಂಬುದು ಸಾಬೀತುಪಡಿಸಿತು.
ಅರ್ಜುನ ದ್ವಾರಕಾ ನಗರ ಸಮುದ್ರದಲ್ಲಿ ಮುಳುಗುವಾಗ ದ್ವಾರಕೆಯಲಿರುವವರನ್ನು ಸ್ಥಳಾಂತರಿಸಲು ಹೋಗಿದ್ದ ಬಗ್ಗೆ ಅವತ್ತು ಸಮುದ್ರ ಮಟ್ಟ ಏರಿ ಇಡೀ ದ್ವಾರಕೆ ಮುಳುಗುವ ವರ್ಣನೆ ಮಹಾಭಾರತದಲ್ಲಿದೆ.
ಈ ಸಂಶೋಧನೆ ನಡೆಸಿದವರು ಕನ್ನಡಿಗ ಎಸ್.ಆರ್ ರಾವ್ ಅವರು ಜನಿಸಿದ್ದು ನಮ್ಮ ಊರು ಆನಂದಪುರಂನಲ್ಲಿ (1 ಜುಲೈ-1922) ಅದು ನಮ್ಮ ಊರಿನ ಆರಾಧ್ಯ ದೈವ ಶ್ರೀರಂಗನಾಥನ ಹರಕೆಯಿಂದ ಆ ವಿವರಕ್ಕಾಗಿ ಈ ಬ್ಲಾಗ್ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2022/07/blog-number-905-1500-1-1922-sr.html
ನಿನ್ನೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಗಳು ತಮ್ಮ 73ನೇ ವಯಸ್ಸಿನಲ್ಲಿ ಮುಳುಗು ತಜ್ಞರ ಜೊತೆ ಸಮುದ್ರದಲ್ಲಿ ಮುಳುಗಿ ಸಮುದ್ರದಲ್ಲಿ ಮುಳುಗಿರುವ ದ್ವಾರಕಾ ನಗರವನ್ನು ಸಂದರ್ಶಿಸಿದ್ದಾರೆ ಜೊತೆಗೆ ಅವರು ಒಯ್ದಿದ್ದು ಶ್ರೀಕೃಷ್ಣನಿಗೆ ಇಷ್ಟವಾದ ನವಿಲು ಗಿರಿಗಳ ಪಿಂಡಿ ಅದನ್ನ ದ್ವಾರಕಾನಾಥನಿಗೆ ಸಮುದ್ರದ ಒಳಗೆ ಸಮರ್ಪಿಸಿದ್ದಾರೆ.
ಇದು ಇತಿಹಾಸದ ಆಸಕ್ತರಿಗೆ ಮತ್ತು ಮಹಾಭಾರತ - ಭಗವದ್ಗೀತೆ ಪವಿತ್ರ ಗ್ರಂಥ ಎಂದು ಆಚರಿಸುವ ಹಿಂದೂ ಧರ್ಮಿಯರಿಗೆ ವಿಶೇಷವಾದ ಸುದ್ದಿ ಆಗಿದೆ.
ದ್ವಾರಕಾ ನಗರ ಸಂಶೋಧನೆ ಪುರಾತತ್ವ ಇಲಾಖೆಗೆ ಸವಾಲಿನ ಸಂಗತಿ ಆಗಿದ್ದರೆ ಭಾರತೀಯರ ಮನೆ ಮನೆಗಳಲ್ಲಿ ಸಾವಿರಾರು ವರ್ಷಗಳಿಂದ ಕಥೆ - ಹಾಡು-ನೃತ್ಯಗಳಲ್ಲಿ -ಆಚರಣೆಗಳಲ್ಲಿ ಜೀವಂತವಾಗಿರುವ ಶ್ರೀಕೃಷ್ಣ ಇಲ್ಲಿ ಜನಿಸಿದ್ದ, ಬದುಕಿದ್ದ, ಆಳಿದ್ದ ಎಂಬುದರ ಸಾಕ್ಷಿ ಕೂಡ ಆಗಿದೆ.
ಇಂತಹ ಸ್ಥಳಕ್ಕೆ ಸಮುದ್ರದ ಆಳಕ್ಕೆ ದೇಶದ ಪ್ರಧಾನ ಮಂತ್ರಿ ತಮ್ಮ 73ರ ಇಳಿ ವಯಸ್ಸಿನಲ್ಲೂ ಹೋಗಿ ನಮಿಸಿ ನವಿಲುಗರಿಯ ಪಿಂಡಿ ಸಮರ್ಪಿಸಿದ್ದು ಇನ್ನೊಮ್ಮೆ ಶ್ರೀಕೃಷ್ಣನ ದ್ವಾರಕೆ ಜನರ ಸಾಕ್ಷಿ ಪ್ರಜ್ಞೆಗೆ ತೆರೆದು ಕೊಂಡಿದೆ.
ಮುಂದಿನ ಚುನಾವಣೆಗೆ ಇದೆಲ್ಲ ಗಿಮಿಕ್ ಎನ್ನುವ ವಿರೋದ ಪಕ್ಷಗಳ ಟೀಕೆಗೆ ಗುರಿಯಾಗಿರುವ ಈ ಘಟನೆ ಚುನಾವಣೆ ವಿಷಯ ಹೊರತು ಪಡಿಸಿಯೂ ಭಾರತೀಯ ಇತಿಹಾಸಕ್ಕೆ ಮಹತ್ವದ ವಿಷಯವಾಗಿದೆ.
ಋಷಿ ವ್ಯಾಸರು ದಾಖಲಿಸಿದ ಆ ದಿನದ ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಖಗೋಳ ಶಾಸ್ತ್ರಜ್ಞರು ಶ್ರೀಕೃಷ್ಣನ ಜನ್ಮ ದಿನಾಂಕ ಸಂಶೋಧಿಸಿದ್ದಾರೆ ಅದು ಕ್ರಿಸ್ತ ಪೂರ್ವ 27- ಜುಲೈ-3112 ಅಂದರೆ ಐದು ಸಾವಿರದ ನೂರಾ ಮುವತೈದು ವರ್ಷದ ಹಿಂದೆ.
Comments
Post a Comment