Skip to main content

Blog number 1957. ನಾಥ ಪಂಥದ ಬಾರಾಪಂತ್ ಸಂತರೊಡನೆ ಸತ್ಸಂಗದ ಬಾಗ್ಯ 2016 ರಲ್ಲಿ ಅವರು ನೀಡಿದ ಚಿಲುಮೆ ನಿರಾಕರಿಸಲು ಸಾಧ್ಯವೇ ಇರಲಿಲ್ಲ ಇದು ನನ್ನ ಜೀವನದ ಅಮೃತ ಘಳಿಗೆ.

#ನನ್ನ_ಡಿಪಿಯಲ್ಲಿ_ನಾಥ_ಪಂಥದ_ಸನ್ಯಾಸಿಗಳ_ಜೊತೆ_ನಡೆದ_ಸತ್ಸಂಗ_ಒಂದರಲ್ಲಿ 

#ನನಗೆ_ಅವರ_ತಂಬಾಕಿನ_ಚಿಲುಮೆ_ಚುಟ್ಟ_ಬಳಸಲು_ಅವಕಾಶ_ನೀಡಿದ್ದ_ಚಿತ್ರ_ಹಾಕಿದ್ದೆ 

#ಅನೇಕ_ಗೆಳೆಯರು_ಈ_ಬಗ್ಗೆ_ವಿವರಣೆ_ಕೇಳಿದ್ದಾರೆ.
  ಇದೊಂದು ಅಮೃತಗಳಿಗೆ ನನ್ನ ಜೀವನದಲ್ಲಿ, ನಾಥ ಪಂಥದ ಸಾಧು ಸಂತರ ಜೊತೆಯ ಸತ್ಸಂಗ, ಅವರ ಆರನೇ ಇಂದ್ರಿಯ ಜಾಗೃತವಾಗಿರುತ್ತದೆ, ಅವರು ಅಷ್ಟು ಸುಲಭವಾಗಿ ಯಾರನ್ನು ನಂಬುವುದಿಲ್ಲ ಮತ್ತು ಹತ್ತಿರ ಕೂಡ ಬಿಟ್ಟಿಕೊಳ್ಳುವುದಿಲ್ಲ ಆದರೆ ನನ್ನ ಬಗ್ಗೆ ಅವರಿಗೆ ಸದ್ಭಾವನೆ ಬರಲು ಅನೇಕ ಕಾರಣಗಳು ಇತ್ತು.
 ನಾಸಿಕ್ ತ್ರಯಂಬಕೇಶ್ವರದ ಕುಂಭಮೇಳದ ಮರುದಿನ ಹೊರಡುತ್ತಾರೆ, ನೂರಾರು ಸಂತರು ಪಶ್ಚಿಮ ಘಟ್ಟದ ಮಧ್ಯದ ಮಾರ್ಗದಲ್ಲೇ ನಡೆದು ಬರುವ ಜೊಂಡಿ ಯಾತ್ರೆಯಲ್ಲಿ ಇವರು 2015 ಜುಲೈಯಲ್ಲಿ ಪ್ರಾರಂಭಿಸಿದ ನಡಿಗೆ ಮಂಗಳೂರಿನ ಕದ್ರಿ ಮಠಕ್ಕೆ 2016 ಫೆಬ್ರುವರಿಯಲ್ಲಿ ತಲುಪಿತ್ತು ಈ ಯಾತ್ರೆಯ ಹೆಸರು ಭಾರ ಪಂತ್ ಯಾತ್ರೆ.
 ಕುಂದಾಪುರ ತಾಲೂಕಿನ ಕಮಲ ಶಿಲೆ ಸಮೀಪದ ಎಡಮೊಗೆಯ ಹಲವಾರಿ ಮಠ ಇವರಿಗೆ ಸಂಬಂಧಿಸಿದ ಮಠ, ಇಡೀ ಭಾರತದಲ್ಲಿ ನಾಥಪಂಥದ ಕೇಂದ್ರ ಇರುವುದು ಉತ್ತರ ಪ್ರದೇಶದ ಗೋರಕಪುರದಲ್ಲಿದೆ, ಇವರ ಮುಖ್ಯಸ್ಥರಿಗೆ ಮಹಾಂತರನ್ನುತ್ತಾರೆ ಈಗಿನ ಮಹಾಂತರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು.
  1978 ರಲ್ಲಿ ನಾನು ಸಾಗರದ ಮುನ್ಸಿಪಲ್ ಹೈಸ್ಕೂಲಿನ ಎಂಟನೇ ತರಗತಿಯ ವಿದ್ಯಾರ್ಥಿ ಆಗಿದ್ದಾಗ ನಾವೆಲ್ಲ ಆನಂದಪುರಂನಿಂದ ಪ್ರತಿ ನಿತ್ಯ ರೈಲಿನಲ್ಲಿ ಸಾಗರಕ್ಕೆ ಪ್ರಯಾಣಿಸುತ್ತಿದ್ದೆವು ಅಂತಹ ಒಂದು ದಿನ ಸಂಜೆ ಸಾಗರಕ್ಕೆ ನೂರಾರು ಮಾಸಿದ ಕಾವಿಧಾರಿಗಳು, ಜಟಾಧಾರಿಗಳು ಸಾಗರದ ಪೊಲೀಸ್ ಸ್ಟೇಷನ್ ಸರ್ಕಲ್ ನಿಂದ ಗಣಪತಿ ದೇವಸ್ಥಾನ ಕಡೆಗೆ ಸಾಗುತ್ತಿದ್ದರು...
ಅಲ್ಲಿ ನೆರೆದಿದ್ದ ಜನ ಇದು ನಾಥ ಪಂಥದ ಬಾರಾ ಪಂಥ್ ಯಾತ್ರೆ  ಪ್ರತಿ 12 ವರ್ಷಕ್ಕೊಮ್ಮೆ ಇವರು ಬರುತ್ತಾರೆ... ಇವತ್ತು ಮತ್ತು ನಾಳೆ ಸಾಗರದ ಗಣಪತಿ ದೇವಸ್ಥಾನದಲ್ಲಿ ತಂಗುತ್ತಾರೆ ಎಂಬ ಸುದ್ದಿ ಕೇಳಿ ನಾವು ಕೆಲ ವಿದ್ಯಾರ್ಥಿಗಳು ಈ ಯಾತ್ರೆ ಹಿಂದೆ ಸಾಗಿ ಗಣಪತಿ ದೇವಸ್ಥಾನ ತಲುಪಿದೆವು ಅಲ್ಲಿನ ಅರ್ಚಕರು ಅತ್ಯಂತ ಭಕ್ತಿ ಪೂರ್ವಕವಾಗಿ ಈ ಸಾದು ಸಂತರನ್ನು  ಸ್ವಾಗತಿಸಿದರು.
  ಈ ನಾಥಪಂಥದ ಯಾತ್ರೆಯ ಮುಖ್ಯಸ್ಥರಾದ  ಪ್ರಮುಖ ಸಂತರನ್ನು ದೇವಸ್ಥಾನದ ಎದುರಿನ ಎತ್ತರದ ಪೀಠದಲ್ಲಿ ಕುಳ್ಳರಿಸಲಾಯಿತು ಅಲ್ಲಿ ಅವರೆಲ್ಲ ತಮ್ಮ ತಮ್ಮ ಚಿಲುಮೆ ಚುಟ್ಟಗಳಿಗೆ ಬೆಂಕಿಯ ಕಿಡಿತಾಗಿಸಿ ದೂಮಾ ಲೋಕದಲ್ಲಿ ವಿಶ್ರಾಂತಿ ಪಡೆಯಲು ಪ್ರಾರಂಭಿಸಿದರು, ಆಗ ನಾವು ನಮ್ಮ ಊರಿಗೆ ತೆರಳುವ ರೈಲಿನ ಸಮಯವಾದ್ದರಿಂದ ವಾಪಸು ಬಂದೆವು.
. ಈ 1978ರಲ್ಲಿ ಬಂದ ಬಾರಾ ಬಾರಾ ಪಂತ್ ಯಾತ್ರೆಯಲ್ಲಿ ಭಾಗವಹಿಸಿದ್ದ ಫೀರ್ ಸೋಮನಾಥ ಸ್ವಾಮೀಜಿ ಗ್ವಾಲಿಯರ್ ನವರು, ಈ ಪಂಥದ ಒಂದು ನಂಬಿಕೆ ಏನೆಂದರೆ 78 ಜನ್ಮ ಸನ್ಯಾಸಿ ಆದವರಿಗೆ ಮಾತ್ರ ಬಾರ ಪಂಥ ಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ ಎಂಬುದು,ಈ ಬಾರ ಪಂಥ್ ಯಾತ್ರೆಯ ಯಾವುದೇ ಆಹ್ವಾನ ಯಾರಿಗೂ ಇರುವುದಿಲ್ಲ.
. ಪ್ರತಿ 12 ವರ್ಷಕ್ಕೊಮ್ಮೆ ನಾಸಿಕ್ ನ ಕುಂಭಮೇಳದ ಕೊನೆಯ ದಿನ ಪ್ರಾರಂಭವಾಗುವ ಯಾತ್ರೆಯ ದಿನಕ್ಕಾಗಿ ಕಾಯುವ  ನೂರಾರು ಸಾಧು ಸಂತರು ದೇಶದ ವಿವಿದ ಭಾಗದಿಂದ ಬಂದು ಸೇರುತ್ತಾರೆ.    
    ಅವರೆಲ್ಲರೂ ಪಾತ್ರ ದೇವತೆಯೊಂದಿಗೆ, ಕಾಲಬೈರವನ ಸಂಗಾತಿ ಆಗಿರುವ ಶ್ವಾನಗಳನ್ನು ಕರೆದುಕೊಂಡು ನಡೆಯುತ್ತಾ ಮಂಗಳೂರಿನ ಕದ್ರಿ ಬೆಟ್ಟದ ಅವರ ಮಠ ತಲುಪುತ್ತಾರೆ.
   ಈ ಭಾರಾ ಪಂಥ ಯಾತ್ರೆ ಪರುಶು ರಾಮನ ಕಾಲದಿಂದ ನಿರಂತರವಾಗಿ 12 ವರ್ಷಕ್ಕೊಮ್ಮೆ ನಡೆಯುತ್ತಿದೆ ಎಂದು ಈ ಪಂಥದವರು ಹೇಳುತ್ತಾರೆ.
  ರಾಜರ ಕಾಲದಲ್ಲೂ ಇವರ ಭಾರಾ ಪಂಥ್ ಯಾತ್ರೆಗೆ ವಿಶೇಷ ಸವಲತ್ತುಗಳಿತ್ತು ಈಗಲೂ ಈ ಮಾರ್ಗದಲ್ಲಿ ಇವರ ಭಕ್ತರು ಈ ಯಾತ್ರೆಗೆ ಸಹಾಯ ಸಹಕಾರ ನೀಡುತ್ತಾರೆ. 
   ಈ ಯಾತ್ರೆ ಸಾಗುವ ಮಾರ್ಗದಲ್ಲಿ ಸಿಗುವ ನಾಥ ಪಂಥದ ಮಠಗಳಲ್ಲಿ ಈ ಯಾತ್ರೆ ತಂಗುತ್ತದೆ, ಅಲ್ಲಿನ ಮಠದ ಕಳೆದ 12 ವರ್ಷದ ಆಡಳಿತವನ್ನು ಬಾರಾಪಂಥ್ ಯಾತ್ರೆಯ ಪ್ರಮುಖ ಸಂತರು  ಅವಲೋಕಿಸುತ್ತಾರೆ ಇದಕ್ಕಾಗಿ ಇವರು ಯಾವುದೇ ದಾಖಲೆ ಇತ್ಯಾದಿ ಪರಿಶೀಲನೆ ಮಾಡುವುದಿಲ್ಲ ಆದರೆ ಅವರ ಮನೋಬಲದಿಂದಲೇ ಅವಲೋಕನ ನಡೆಯುತ್ತದೆ.
 12 ವರ್ಷದ ಆಡಳಿತ ಪೂಜೆ ಪುರಸ್ಕಾರ ಬಾರಾಪಂಥ್ ಯಾತ್ರೆಯ ಮುಖ್ಯಸ್ಥರಾದ ಸಂತರಿಗೆ ಸಮಾಧಾನ ತಂದರೆ ಮಠದ ಹಳೆಯ ಸ್ವಾಮಿ ಅವರನ್ನೇ ಮುಂದುವರಿಸುತ್ತಾರೆ, ಅವರಿಗೆ ಅಸಮದಾನ ಉಂಟಾದರೆ ಆ ಮಠದಲ್ಲಿ 12 ವರ್ಷದಿಂದ ಅಲ್ಲಿದ್ದ ಸ್ವಾಮಿಗೆ ತಮ್ಮ ಜೊತೆ ಹೊರಡಲು ಹೇಳಿ ಹೊರಡಿಸುತ್ತಾರೆ ಅವರ ಸ್ಥಾನ ವಹಿಸಿಕೊಳ್ಳಲು ತಮ್ಮ ಯಾತ್ರೆಯ ಜೊತೆಯಲ್ಲಿ ಸಾಗುವ ಸೂಕ್ತವಾದ ಸಂತರಿಗೆ ಸೂಚಿಸುತ್ತಾರೆ ಅವರು ಮುಂದಿನ 12 ವರ್ಷದ ನಂತರ ಬರುವ ಬಾರಾಪಂತ್ ಯಾತ್ರೆ ತನಕ ಅವರು ಅಲ್ಲಿರಬೇಕು.
   1978 ರಲ್ಲಿ ಬಂದ ಬಾರಾ ಪಂಥ್  ಯಾತ್ರೆಯಲ್ಲಿ ಬಂದ ಗ್ವಾಲಿಯರ್ ನ ಪೀರ್ ಸೋಮನಾಥ್ ಜಿ ಹಲವಾರಿ ಮಠದ ಮುಖ್ಯಸ್ಥರಾಗಿ ಸುಮಾರು 35 ವರ್ಷ ಉಳಿಯುತ್ತಾರೆ ಮತ್ತು ಮುಂದಿನ ಎರೆಡು ಬಾರಾಪಂಥ್ ಯಾತ್ರೆ ಹಲವಾರಿ ಮಠಕ್ಕೆ ಬಂದಾಗಲೂ ಇವರನ್ನೆ ಮುಂದುವರಿಸುತ್ತದೆ.
 ಫೀರ್ ಸೋಮನಾಥಜಿ ಅವರನ್ನು ನಾನು ಗುರುವಾಗಿ ಮನಸ್ಸಲ್ಲೇ ಸ್ವೀಕರಿಸಿದ್ದೆ ಅವರು ನನ್ನನ್ನು ಶಿಷ್ಯನಾಗಿ ಆಶ್ರೀವಧಿಸಿದ್ದರು ಅವರ ಮತ್ತು ನನ್ನ ಸಂಬಂಧ ವಿಶೇಷ ರೀತಿಯಲ್ಲಿ ಮುಂದುವರಿದಿತ್ತು.
  ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಯಂತ್ರದ್ದೋರಾ ಸಹಸ್ರ ನಾರಿಕೇಳಾ ಮಹಾ ಗಣಯಾಗ 2008ರಲ್ಲಿ ನಡೆದಾಗ ಫೀರ್ ಸೋಮನಾಥಜೀ ಆಗಮಿಸಿದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ps://youtu.be/5hIcjmbepDE?feature=shared
  2012ರಿಂದ ಅವರು ನನಗೆ ಸದಾ ಜ್ಞಾಪಿಸುತ್ತಿದ್ದದ್ದು ಏನೆಂದರೆ 2015 ರಿಂದ ಬಾರಾ ಪಂಥ್ ಯಾತ್ರೆ ನಾಸಿಕ್  ಪ್ರಾರಂಭ ಆಗುತ್ತದೆ ಅರುಣ್ ಜೀ... ನೀವು ಇದನ್ನು ಕರ್ನಾಟಕ ರಾಜ್ಯದ್ಯಂತ ಪೇಪರ್ ಟೀವಿಯಲ್ಲಿ ಹೆಚ್ಚು ಪ್ರಚಾರ ನೀಡಬೇಕು, ಈ ಯಾತ್ರೆಯ ಮಹತ್ವ ಜನರಿಗೆ ತಿಳಿಯಬೇಕು ಅನ್ನುತ್ತಿದ್ದರು ಆಗ ನಾನು ಅವರಿಗೆ ಮಾತು ಕೊಟ್ಟಿದ್ದೆ "ಖಂಡಿತ ನಿಮ್ಮ ಆಸೆ ನೆರವೇರಿಸುತ್ತೇನೆ" ಅಂತ.
    ಆದರೆ 2015ರ ಬಾರಾಪಂತ್ ಯಾತ್ರೆಗೆ ಎರೆಡು ವರ್ಷ ಮೊದಲೇ 2013ರಲ್ಲಿ ಪೀರ್ ಸೋಮನಾಥ ಜಿ ಸ್ವರ್ಗಸ್ಥರಾದರು ಅವರ ಸಮಾಧಿ ಹಲವರಿ ಮಠದ ಆವರಣದ ಎದುರು ಸಕ್ಕರೆಯಿಂದ ಮಾಡಲಾಗಿದೆ.
  2015 ರ ಜುಲೈ ತಿಂಗಳಲ್ಲಿ ನಾಸಿಕ್ ನಿಂದ ಪ್ರಾರಂಭವಾದ ಬಾರಾಪಂತ್ ಜೊಂಡಿ ಯಾತ್ರೆ 2016 ಫೆಬ್ರವರಿ 12ಕ್ಕೆ ಈ ಸಾಗರದ ಗಣಪತಿ ದೇವಾಲಯ ಸೇರುವ ಮಾಹಿತಿಯನ್ನು ನಾನು ಶಿವಮೊಗ್ಗದ ಜಿಲ್ಲಾ ಪತ್ರಿಕೆ ಜನ ಹೋರಾಟಕ್ಕೆ ವರದಿ ಮಾಡಿದ್ದೆ ಅವರು ಅದನ್ನು ಪತ್ರಿಕೆಯ ಮುಖಪುಟ ಲೇಖನವಾಗಿ ಪ್ರಕಟಿಸಿದ್ದರು
   ಈ ಯಾತ್ರೆ ಜನವರಿಯಲ್ಲಿ ಬೆಳಗಾಂ ತಲುಪುವಾಗ ಅಲ್ಲಿನ ಪತ್ರಕರ್ತ ಮಿತ್ರರಿಗೆ ತಿಳಿಸಿದ್ದೆ ಆದರೆ ಅವರೆಲ್ಲರೂ ಬಾರ ಪಂಥ್ ಯಾತ್ರೆಯ ಪ್ರಮುಖರು ಪತ್ರಿಕಾ ಸಂದರ್ಶನಕ್ಕೆ ಅವಕಾಶ ಕೊಡುತ್ತಿಲ್ಲ ಆದ್ದರಿಂದ ಸುದ್ದಿ ಮಾಡಲು ಆಗಲಿಲ್ಲ ಎಂದು ಉತ್ತರಿಸಿದರು.
  ಪತ್ರಕರ್ತ ಗೆಳೆಯ ಶೃಂಗೇಶರು ಕೂಡ ಅನೇಕ ಅವರ ಪತ್ರಕರ್ತ ಮಿತ್ರರಿಗೆ ವಿನಂತಿಸಿದರು ಅವರೆಲ್ಲರ ಉತ್ತರ ಇದೆ ಆಗಿತ್ತು.
 2016 ಫೆಬ್ರುವರಿ 16ಕ್ಕೆ ಸಾಗರದಿಂದ ಹೊರಟಿದ್ದ ಈ ಜೂಂಡಿ ಯಾತ್ರೆ ಹೊಸನಗರ ತಾಲೂಕಿನ ಬಟ್ಟೆ ಮಲ್ಲಪ್ಪದ ಸಮೀಪದ ಆಲಗೇರಿಮಂಡ್ಲಿಯಲ್ಲಿ ಒಂದು ರಾತ್ರಿ ತಂಗಿ ಮರುದಿನ ಹೊಸನಗರ ಮಾರ್ಗದ  ಬಿದನೂರುನಗರ ತಲುಪುತ್ತದೆ ಆದ್ದರಿಂದ ನಾನು ಹೆಗ್ಗೋಡು ಆಲಗೇರಿ ಮಂಡ್ರಿ ಮಧ್ಯದಲ್ಲಿ ಈ ಯಾತ್ರೆಯ ನಿರ್ಮಲಾನಂದ ಜಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು.
. ಅವರನ್ನು ನಮಿಸಿ ನನ್ನ ಒಂದು ಸಂದರ್ಶನ ವಿನಂತಿಗೆ ಅವರು ಒಪ್ಪಿಗೆ ನೀಡಿದರು, ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಅವರ ಜೊತೆ ಚಿತ್ರ ತೆಗೆದುಕೊಳ್ಳಲು ಅವಕಾಶ ನೀಡಿದರು ಈ ವಿಚಾರ ಶೃಂಗೇಶರಿಗೆ ತಿಳಿಸಿ ಸಂಜೆ ಆಲಗೇರಿ ಮಂಡ್ರಿಯಲ್ಲಿ ಪೂಜೆ ಕಾರ್ಯಕ್ರಮವಿದೆ ಅದನ್ನು ನೋಡಲು ಮತ್ತು ಭಾಗವಹಿಸಲು ಬರಲೇಬೇಕೆಂದು ಆಗ್ರಹಿಸಿದೆ.
   ನನ್ನ ಪ್ರೀತಿಯ ಒತ್ತಾಯಕ್ಕೆ ಅವರು ಒಪ್ಪಿ ಬಂದರು, ಅವರು ಈ ನಾಥಪಂಥದ ಬಗ್ಗೆ ರಹಮತ್ ತರೀಕೆರೆಯವರು ಬರೆದ ಪುಸ್ತಕವನ್ನು ಸಂಪೂರ್ಣ ಓದಿದ್ದರಿಂದ ಅವರಿಗೂ ಈ ಬಗ್ಗೆ ಕುತೂಹಲ ಇತ್ತು.
   ನನ್ನ ಒಳ ಮನಸ್ಸು ಈ ಸುದ್ದಿ #ಹಾಯ್_ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟವಾದರೆ ಇಡೀ ರಾಜ್ಯದ ಜನತೆಗೆ ತಲುಪಲಿದೆ ಇದರಿಂದ ನಾನು ಫೀರ್ ಸೋಮನಾಥ ಜಿ ಅವರಿಗೆ ನೀಡಿದ ವಾಗ್ದಾನ ಪೂರ್ಣವಾಗುತ್ತದೆ ಎಂಬ ದೂರದ ಆಸೆ.
   ನನ್ನ ಆಸೆಯಂತೆ ಶೃಂಗೇಶರು ನನ್ನ ಜೊತೆ ಬಂದರು ಮತ್ತು ಅದನ್ನು ಹಾಯ್ ಬೆಂಗಳೂರಿನಲ್ಲಿ ಸುದ್ದಿ ಮಾಡಿದರು, ಅದನ್ನು ಅವತ್ತಿನ ಹಾಯ್ ಬೆಂಗಳೂರು ಮುಖಪುಟದ ಸುದ್ದಿಯಾಗಿ ಪ್ರಕಟಿಸಿತು ಈ ಸುದ್ದಿಯಿಂದ  ಈ ಯಾತ್ರೆ ಶಿವಮೊಗ್ಗ ಜಿಲ್ಲೆಯ ಗಡಿ ದಾಟುವಾಗಲೇ ಎಲ್ಲಾ ಪತ್ರಿಕೆ ಮತ್ತು ಟಿವಿ ಚಾನೆಲ್ ಗಳು ಯಾತ್ರೆಯ ವಿಶೇಷಗಳನ್ನ ಸುದ್ದಿಗಳನ್ನು ಬಿತ್ತರಿಸಲು ಪ್ರಾರಂಭಿಸಿತು.
  ಇದರಿಂದ ಈ ಯಾತ್ರೆ ನಡೆದು ಹೋಗುವ ದಾರಿಯ ಇಕ್ಕೆಲದಲ್ಲಿ ಸಾವಿರಾರು ಜನ ನೆರೆದು ವೀಕ್ಷಿಸುವಂತ ಪರಿಣಾಮ ಬೀರಿತು, ಈ ರೀತಿ ನನಗೆ ಫೀರ್ ಸೋಮನಾಥ ಜಿ ಅವರಿಗೆ ನೀಡಿದ ವಾಗ್ದಾನ ಈಡೇರಿಸಿದೆ ಎಂಬುದು ನನ್ನ ನಂಬಿಕೆ.
   ಬಾರಾಪಂಥ್ ಯಾತ್ರೆ ಮುಗಿದ ನಂತರ ಮಂಗಳೂರಿನ ಭಕ್ತರು ಸುಮಾರು 11 ಬಸ್ಸುಗಳಲ್ಲಿ ಯಾತ್ರೆ ಮುಗಿಸಿದ ಈ ಸಾಧುಸಂತರನ್ನು ಹಾನಗಲ್ ಸಮೀಪದ ಲೋಕಿ ಮಠಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದ್ದರು, ಅಲ್ಲಿಂದ ಅವರೆಲ್ಲ ಅವರವರ ಊರು ಪ್ರದೇಶಗಳಿಗೆ ಸಾಗಿ ಹೋಗುತ್ತಾರೆ, ಆದ್ದರಿಂದ 11 ಬಸ್ಸುಗಳಲ್ಲಿ ಅಲ್ಲಿಗೆ ಬರುವ ಸಾಧುಸಂತರಿಗೆ ಲೋಕಿಮಠದಲ್ಲಿ ತಂಗುವ ವ್ಯವಸ್ಥೆಗೆ ಮೊದಲೇ ತಲುಪಿ ಅಲ್ಲಿನ ತಯಾರಿ ಮಾಡಲು ನಾಥಪಂಥದ ಕೆಲವು ಮುಖ್ಯಸ್ಥರನ್ನು ಮೂರು ಇನೋವಾ ಕಾರುಗಳಲ್ಲಿ ಕಳಿಸಿದ್ದರು.
  ಮಂಗಳೂರಿನಿಂದ ಹೊಸನಗರ ಬಟ್ಟೆ ಮಲ್ಲಪ್ಪ ಮಾರ್ಗವಾಗಿ ಸಾಗರದ ಮೂಲಕ ಹಾನಗಲ್ಲಿನ ಲೋಕಿ ಮಠ ಸೇರುವುದು ಆಗಿತ್ತು,ಆದರೆ ಕಾರ್ ಚಾಲಕರ ತಪ್ಪಿನಿಂದಾಗಿ ಬಟ್ಟೆ ಮಲ್ಲಪ್ಪದಿಂದ ನಮ್ಮ ಆನಂದಪುರಂನ ಯಡೇಹಳ್ಳಿ ಸರ್ಕಲ್ ನಲ್ಲಿ ಇರುವ ನಮ್ಮ ಮಲ್ಲಿಕಾ ಹೋಟೆಲ್ ಎದುರುಗಡೆ ಬಂದು ಹಾನಗಲ್ಲಿನ ಲೋಕಿ ಮುಠದ ದಾರಿ ವಿಚಾರಿಸಲು ನಿಂತಾಗ ನನ್ನ ಮತ್ತು ಅವರ ಬೇಟಿ ಆಯಿತು
  ಆಗ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಅವರಿಗೆ ನಾನು ಹಲವಾರಿ ಮಠದ ಹಿಂದಿನ ಪೀರ್ ಸೋಮನಾಥ್ ಜಿಗೆ  ಬಾರಾಪಂತ ಜೊಂಡಿ ಯಾತ್ರೆಯ ಬಗ್ಗೆ ಹೆಚ್ಚು ಪತ್ರಿಕಾ ಪ್ರಚಾರ ಕೊಡಿಸುವ ವಿಚಾರದಲ್ಲಿ ನಾನು ಅವರಿಗೆ ಮಾತು ಕೊಟ್ಟಿದ್ದು ವಿವರಿಸಿದೆ.
https://arunprasadhombuja.blogspot.com/2021/03/2015-12.html
. .  ಆಗ ಅವರು ಹಾಯ್ ಬೆಂಗಳೂರ್ ಪತ್ರಿಕೆ ಬೇಕೆಂದು ಕೇಳಿದರು, ನಾನು ಪತ್ರಿಕೆ ತಂದು ಅವರಿಗೆ ಕೊಟ್ಟೆ ಅವರು ಅದನ್ನು ತಮ್ಮೊಂದಿಗೆ ಒಯ್ಯುವುದಾಗಿ ಹೇಳಿದರು.
  ನನ್ನ ಕಲ್ಯಾಣ ಮಂಟಪದ ಹೆಸರೇನು ಅಂತ ಕೇಳಿದರು, ಅದು ನನ್ನ ತಂದೆ ತಾಯಿಗಳ ಹೆಸರಾದ ಸರಸಮ್ಮ ಕೃಷ್ಣಪ್ಪ ಹೆಸರು ಸೇರಿಸಿ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಎಂದಾಗ ಅವರು ಭೂಮಿ ಮೇಲೆ ತಂದೆ ತಾಯಿಗಿಂತ ದೊಡ್ಡ ದೇವರಿಲ್ಲ ಎಂದರು.
  ಅವರಿಗೆ ಚಹಾ ವ್ಯವಸ್ಥೆ ಮಾಡಿದೆ ಆದರೆ ಅವರು ಹೋಟೆಲ್ ಒಳಗೆ ಬರುವುದಿಲ್ಲ ಎಂದಾಗ ಅವರನ್ನು ನಮ್ಮ ಮಲ್ಲಿಕಾ ಹೋಟೆಲ್ ಹೊರಗಿನ ಪಾರ್ಕಿಂಗ್ ಜಾಗದಲ್ಲಿ ಕುರ್ಚಿಗಳನ್ನು ಹಾಕಿಸಿದ್ದೆ.
   ಚಹಾ ಸೇವಿಸಿದ ನಂತರ ಅವರು ತಮ್ಮ ಚಿಲುಮೆಯನ್ನು ಹೊರ ತೆಗೆದರು ಅದಕ್ಕೆ ತಂಬಾಕು ಇತ್ಯಾದಿ ತುಂಬಿ ಕಾವಿ ಬಟ್ಟೆಯನ್ನು ಕೆಳ ಭಾಗದಲ್ಲಿ ಸುತ್ತಿ ಅಗ್ನಿಯ ಕಿಡಿ ತಾಗಿಸಿ ಒಬ್ಬರ ನಂತರ ಒಬ್ಬರು ಸಾಧುಗಳು ಆ ಚಿಲುಮೆ ಪಡೆದು ಅವರವರ ಕಾವಿ ಬಟ್ಟೆಯ ತುಂಡನ್ನು (ಎಂಜಲು ಆಗಬಾರದೆಂದು) ಕೆಳಭಾಗಕ್ಕೆ ಸುತ್ತಿ ಧೂಮಪಾನ ಮಾಡಿದರು ಅಲ್ಲಿ ದೂಮಾಲೋಕ ಸೃಷ್ಟಿ ಆಯಿತು.
 ಆ ತಂಡದ ಮುಖ್ಯ ಸಂತರು ನನ್ನನ್ನು ಕರೆದು ಅವರ ಬದಿಯಲ್ಲಿನ ಕುರ್ಚಿಯಲ್ಲಿ ಕೂರಿಸಿಕೊಂಡು ಇನ್ನೊಂದು ಶುದ್ಧವಾದ ಕಾವಿ ಬಟ್ಟೆಯನ್ನು ಅವರ ಜೋಳಿಗೆಯಿಂದ ತೆಗೆದು ಚಿಲುಮೆಗೆ ಸುತ್ತಿ ನನಗೆ ನೀಡಿ  *ಆನಂದ್_ಹೋ_ ಜಾವ್* ಎಂದರು.
  ನಾನು ಅವರ ಸತ್ಸಂಗದಲ್ಲಿ ಅವರ ಆಹ್ವಾನ ನಿರಾಕರಿಸದೆ ಸಂತರ ಚಿಲುಮೆಯ ಕೂಟ ಸೇರಿದೆ ಒಂದೆರೆಡು ದಂ ಎಳೆದೆ.
    ನನಗೆ ಹೊಗೆ ಮತ್ತು ಧೂಳಿನ ಅಲರ್ಜಿ ಇರೋದ್ರಿಂದ ನನಗೆ ಹೆಚ್ಚು ಸಂತೋಷ ಸಾಧ್ಯವಾಗಿರಲಿಲ್ಲ ಆದರೂ ಇದೊಂದು ವಿಶಿಷ್ಟ ಅನುಭವ.
   ನಂತರ ಅವರು ಹೋಗುವಾಗ ಪಾತ್ರ ದೇವತೆಯ ಪ್ರಸಾದವನ್ನು ಕೊಟ್ಟು ಮುಂದಿನ 12 ವರ್ಷ ಇಟ್ಟುಕೊಂಡು ಪೂಜಿಸಬೇಕೆಂದು ತಿಳಿಸಿದರು,ಅದನ್ನು ನನ್ನ ಪೂಜಾ ಮಂದಿರದಲ್ಲಿ ಕಾಪಾಡಿಕೊಂಡಿದ್ದೇನೆ.
  ಮುಂದಿನ ಬಾರಾಪಂತ್ ಜೋಂಡಿ ಯಾತ್ರೆ 2027ರ ಜುಲೈನಲ್ಲಿ ನಾಸಿಕ್ ನ ಕುಂಭಮೇಳದ ಮರುದಿನ ಹೊರಡಲಿದೆ.
   ಅಷ್ಟರ ಒಳಗೆ ನಾನು ನಾಸಿಕ್ ನಿಂದ ಮಂಗಳೂರಿನ ಕದ್ರಿಮಠದ ತನಕ ಈ ಬಾರಾಪಂತ್ ಯಾತ್ರೆ ಸಾಗಿ ಬರುವ ಮಾರ್ಗದಲ್ಲಿ ಸಂಚರಿಸಿ ಅವರು ಈ ಯಾತ್ರೆಯಲ್ಲಿ ತಂಗುವ  ಮಠ ಮಂದಿರಗಳನ್ನು ಸಂದರ್ಶಿಸಿ ಒಂದು ಪುಸ್ತಕವನ್ನು ದಾಖಲಿಸುವ ಉದ್ದೇಶ ಹೊಂದಿದ್ದೇನೆ.
   ನನ್ನ ಡಿಪಿಯಲ್ಲಿ ಹಾಕಿರುವ  ಫೋಟೋ ಆ ದಿನದ ಬಾರಾಪಂತ್ ಜೊಂಡಿ ಯಾತ್ರೆ ಮುಗಿಸಿ ಹಾನಗಲ್ಲಿನ ಲೋಕಿ ಮಠಕ್ಕೆ ವಾಪಾಸಾಗುತ್ತಿರುವಾಗ ಅಕಸ್ಮಾತ್ ಈ ಸಾದು ನಂತರ ಸತ್ಸಂಗದಲ್ಲಿ ಚಿಲುಮೆ ಸೇವಿಸಿದ ಚಿತ್ರ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...