https://youtu.be/2zNhtn45ibY?feature=shared
#ಈ_ವರ್ಷದ_ರಥೋತ್ಸವ_ಮುಗಿಸಿ_ಮನೆಗೆ_ಬಂದಾಗ
#ನನ್ನ_ಪ್ರೀತಿಯ_ಶಂಭೂರಾಮನ_ಸ್ವಾಗತ
#ಸಾಕು_ಪ್ರಾಣಿಗಳ_ನಿಷ್ಕಲ್ಮಷ_ಪ್ರೀತಿಗೆ_ಬೆಲೆ_ಕಟ್ಟಲು_ಸಾಧ್ಯವೇ...
2024ರ ನಮ್ಮ ಊರಿನ ಶ್ರೀವರಸಿದ್ದಿ ವಿನಾಯಕ ದೇವರ 18ನೆ ವರ್ಷದ ರಥೋತ್ಸವ ಮೊನ್ನೆ 13 ಫೆಬ್ರವರಿ ಮಂಗಳವಾರ ನೆರವೇರಿತು.
ಅವತ್ತು ಬೆಳಗಿನಿಂದ ಗಣಹೋಮ, ರಥೋತ್ಸವ, ನಂತರ ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ ರಥ ರಾಜ ಬೀದಿ ಉತ್ಸವ ಮುಗಿಸಿ ದೇವರು ಗರ್ಭಗುಡಿ ಸೇರುವ ತನಕ ಏನೋ ಒಂದು ರೀತಿಯ ಭಕ್ತಿ ಶಕ್ತಿಯಾಗಿ ದೇಹ ಮತ್ತು ಮನಸ್ಸನ್ನು ಆವರಿಸಿರುತ್ತದೆ.
ಈ ವರ್ಷದ ರಥೋತ್ಸವದ ಯಶಸ್ಸಿಗೆ ಸಹಕರಿಸಿದವರಿಗೆ ಕೈಜೋಡಿಸಿದವರಿಗೆ ಮತ್ತು ಅವರ ಕುಟುಂಬದವರಿಗೆ ಸಕಲ ರೀತಿಯಲ್ಲಿ ಆರೋಗ್ಯ- ಆಯಸ್ಸು-ಐಶ್ವರ್ಯ ನೀಡೆಂದು ಮತ್ತು ಅವರಿಗೆ ಮುಂದಿನ ವರ್ಷದ ಜಾತ್ರೆ ರಥೋತ್ಸವ ನಡೆಸುವ ಹೆಚ್ಚಿನ ಶಕ್ತಿ ನೀಡೆಂದು ದೇವರಲ್ಲಿ ಪ್ರಾರ್ಥಿಸಿ ಮನೆಗೆ ಬರುವಾಗಲೇ ಅವತ್ತಿನ ಆಯಾಸ ಗೊತ್ತಾಗುತ್ತದೆ.
ಮನೆಯ ಒಳಗೆ ಬಂದಾಗ ನನ್ನ ಪ್ರೀತಿಯ ಶಂಭೂರಾಮನು ನೀಡುವ ವಾರ್ಮವೆಲ್ಕಂ ಈ ಎಲ್ಲಾ ಆಯಾಸವನ್ನು ಮರೆಸುವಂತೆ ಮಾಡುತ್ತದೆ.
ರಥೋತ್ಸವದ ನನ್ನ ದಿರಿಸು, ಶಾಲೂ ಮತ್ತು ಜಾತ್ರಾ ಸಮಿತಿಯ ಸತೀಶ ತೊಡಿಸಿದ ಬ್ಯಾಡ್ಜ್ ಶಂಭೂರಾಮನಿಗೆ ನಾನು ವಿಶೇಷವಾಗಿ ಕಂಡಿರಬೇಕು ಮತ್ತು ದೇವರ ರಥ ರಾಜಬೀದಿ ಉತ್ಸವದಲ್ಲಿ ನಾನು ಪ್ರತಿ ವರ್ಷ ರಥದ ಹಿಂದೆ ಸಾಗುವುದು ಶಂಭೂರಾಮ ನೋಡಿರುತ್ತಾನೆ.
ಹಾಗಾಗಿ ಮನೆಗೆ ಬಂದಾಗ ಅವನ ಸಡಗರ ಸಂಭ್ರಮ ಬೇರೆ ದಿನಕ್ಕಿಂತ ಇಮ್ಮುಡಿ ಆಗಿರುತ್ತದೆ.
Comments
Post a Comment