Blog number 1964.ದುಡಿಮೆಯ ಶ್ರಮದ ನಡುವಿನ ಪ್ರವಾಸಗಳು ದುಡಿಮೆಗೆ ಹೆಚ್ಚಿನ ಶಕ್ತಿ ನೀಡುವುದು, ನಮ್ಮ ಊರಿನ ಗೆಳೆಯರ ತಂಡ ಪ್ರತಿ ವರ್ಷ ಕುಟುಂಬ ಸಮೇತ ಪ್ರವಾಸ ಮಾಡುತ್ತಾರೆ
#ನಮ್ಮ_ಊರಿನ_ದಾಸಕೊಪ್ಪದ_ಗೆಳೆಯರ_ವಾರ್ಷಿಕ_ಪ್ರವಾಸ
#ಈ_ವಷ೯_ಉತ್ತರ_ಭಾರತ_ಪ್ರವಾಸ_ಮಾಡುತ್ತಿದ್ದಾರೆ
#ಮುಂದಿನ_ವರ್ಷ_ಅಂಡಮಾನ್_ನಿಕೋಬಾರ್_ಪ್ರವಾಸ_ಮಾಡಲಿ
#ನಮ್ಮೂರ_ಗೆಳಿಯರ_ಪ್ರವಾಸ_ಸುಖಕರ_ಆಗಿರಲಿ_ಎಂದು_ಶುಭ_ಹಾರೈಸುತ್ತೇನೆ.
ವಿಶ್ವ ಪ್ರವಾಸೋದ್ಯಮದ ದಿನ 27 ಸೆಪ್ಟಂಬರ್ ಪ್ರತಿ ವರ್ಷ ಆಚರಿಸಲಾಗುತ್ತದೆ.
ಪ್ರವಾಸ ಮನುಷ್ಯ ಯಾವಾಗಿಂದ ಪ್ರಾರಂಭಿಸಿದ ಗೊತ್ತಿಲ್ಲ ಆದರೆ ಪ್ರವಾಸಗಳಲ್ಲಿ ಹಲವು ವಿಧಗಳಿವೆ ಅದರಲ್ಲಿ ಧಾರ್ಮಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ವಾರಂತ್ಯದ ಪ್ರವಾಸ, ವಿದೇಶ ಪ್ರವಾಸ ಹೀಗೆ...
ಯುರೋಪಿಯನ್ನರು ಹೆಚ್ಚು ಪ್ರವಾಸವನ್ನು ಮಾಡುವ ಗುರಿಯನ್ನು ಅವರ ಜೀವನದಲ್ಲಿ ಹೊಂದಿರುತ್ತಾರೆ ಅದಕ್ಕಾಗಿ ಹಣವನ್ನು ಉಳಿತಾಯ ಮಾಡುತ್ತಾರೆ.
ಇತ್ತೀಚೆಗೆ ಭಾರತೀಯರಲ್ಲೂ ಯುವ ಜನಾಂಗ ಪ್ರವಾಸದ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿಯನ್ನು ಪಡೆಯುತ್ತಿದೆ ಪ್ರತಿ ಪ್ರವಾಸವು ನಮ್ಮ ಮನಸ್ಸನ್ನು ರಿಚಾರ್ಜ್ ಮಾಡುತ್ತದೆ ಆದ್ದರಿಂದ ಪ್ರವಾಸ ಅತಿ ಮುಖ್ಯವಾದ ಒಂದು ರೀತಿಯ ಚಿಕಿತ್ಸೆ ಕೂಡ .
ಕನ್ನಡಿಗರು ತಮ್ಮ ಊರು ಜಿಲ್ಲೆ ರಾಜ್ಯ ಬಿಟ್ಟು ಹೊರಹೋಗಲು ಅಳುಕುತ್ತಾರೆ ಅದೇ ಕೇರಳಿಗಳು, ತಮಿಳು ಜನಗಳು ಹಾಗೂ ತೆಲುಗು ಜನರು ದೇಶದ ವಿದೇಶದ ಯಾವುದೇ ಮೂಲೆಗೆ ಹೋಗಲು ಅಳುಕುವುದಿಲ್ಲ.
ಇದಕ್ಕೊಂದು ಪ್ರಸಿದ್ದ ಗಾದೆ ಇದೆ ಚಂದ್ರಲೋಕದಲ್ಲಿ ಮೊದಲಿಗೆ ಇಳಿದವರು ಅಲ್ಲಿ ಮಲೆಯಾಳಿ ಕಾಕನ ಟೀ ಕ್ಯಾಂಟೀನ್ ನೋಡಿದರು ಎಂಬಂತ ಒಂದು ಗಾದೆ ಇದು ಇದರಲ್ಲಿನ ಸಂದೇಶ ಅವರು ಉದ್ಯೋಗಕ್ಕಾಗಿ ವಿಶ್ವದ ಎಲ್ಲೆಲ್ಲೂ ಹೋಗಲು ತಯಾರಿರುವ ಅವರ ಧೈರ್ಯವನ್ನು ಮೆಚ್ಚುವಂತ ಗಾದೆ.
ಪಶ್ಚಿಮ ಘಟ್ಟದ ಮಲೆನಾಡಿಗರು ಪ್ರವಾಸ ಮಾಡುವುದು ತುಂಬಾ ಕಡಿಮೆ , ಇದಕ್ಕೆ ಕಾರಣ ಅವರು ತಮ್ಮ ಹೊಲ -ಮನೆ, ಸಾಕು , ಪರಿಸರ ಬಿಟ್ಟು ಕೆಲವು ದಿನ ದೂರ ಇರುವುದು ಕನಸಿನಲ್ಲೂ ಆಲೋಚಿಸುತ್ತಿರಲಿಲ್ಲ.
ಈಗ ಕಾಲ ಬದಲಾಗಿದೆ ಯುವ ಜನಾಂಗ ವೀಕೆಂಡ್- ಮಂತ್ , ದೇಶ - ವಿದೇಶ ಪ್ರವಾಸಗಳನ್ನು ಹಂಚಿಕೊಳ್ಳುತ್ತಿದೆ ಇದು ಬದಲಾವಣೆ.
ನಮ್ಮೂರಿನ ದಾಸಕೊಪ್ಪದ ಗೆಳೆಯರು ಪ್ರತಿವರ್ಷ ದಂಪತಿಗಳ ಸಮೇತರಾಗಿ ಪ್ರವಾಸವನ್ನು ಹಮ್ಮಿಕೊಳ್ಳುತ್ತಾರೆ, ಇದರಲ್ಲಿ ನಮ್ಮೂರಿನ ಆರ್ಟಿಸ್ಟ್ ವಿಜಯ, ನನ್ನ ಕ್ಲಾಸ್ ಮೇಟ್ ಕೆ ಎಸ್ ಎಫ್ ಸಿ ಯ ಉದ್ಯೋಗಿ ನಾಗರಾಜ್ ಮತ್ತು ಅನಂದಪುರಂನ ವಕೀಲರಾದ ವಾಸು ಮತ್ತು ಅವರ ಅನೇಕ ಗೆಳೆಯರು.
ಈ ವರ್ಷ ಆನಂದಪುರದಿಂದ ರೈಲಿನಲ್ಲಿ ಬೆಂಗಳೂರು ತಲುಪಿ ಅಲ್ಲಿಂದ ವಿಮಾನದಲ್ಲಿ ದೆಹಲಿ ಜಯಪುರ ಮುಂತಾದ ಸ್ಥಳಗಳಿಗೆ ಪ್ರವಾಸ ಹೋಗಿದ್ದಾರೆ.
ಈ ರೀತಿಯ ಪ್ರವಾಸಗಳು ಹಮ್ಮಿಕೊಳ್ಳಲು ಅವರುಗಳು ಪ್ರತಿ ತಿಂಗಳು ಇಂತಿಷ್ಟು ಹಣ ಅಂತ ಒಟ್ಟಾಗಿ ಸಂಗ್ರಹಿಸುತ್ತಾರೆ ಮತ್ತು ಪ್ರವಾಸದ ಸ್ಥಳ, ಅಲ್ಲಿ ತಂಗುವ ವ್ಯವಸ್ಥೆ, ವಾಹನ ವ್ಯವಸ್ಥೆ, ಆಹಾರದ ವ್ಯವಸ್ಥೆ,
ಖರೀದಿ ಇತ್ಯಾದಿಗಳ ಬಗ್ಗೆ ಮೊದಲೇ ಸರಿಯಾದ ಪ್ಲಾನ್
ಮಾಡಿಕೊಂಡು ಪ್ರವಾಸ ಮಾಡುತ್ತಾರೆ.
ಸಮಾನಮನಸ್ಕ ಗೆಳೆಯರು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡು ಮಾಡುವ ಈ ರೀತಿ ಪ್ರವಾಸಗಳು ಒಂದು ರೀತಿಯಲ್ಲಿ ಚೇತೋಹಾರಿ ಮತ್ತು ಸೇಫ್ಟಿ ಕೂಡ.
ನಾನು ನನ್ನ ವ್ಯವಹಾರಕ್ಕಾಗಿ ಅನೇಕ ರಾಜ್ಯಗಳನ್ನು ಸುತ್ತಿದ್ದೆ ಆದರೆ ಆಗ ವ್ಯವಹಾರ ಬಿಟ್ಟು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಭೇಟಿ ಮಾಡುತಿರಲಿಲ್ಲ ನಂತರ ಇದು ಕೊರತೆ ಎನಿಸಿತು, ಆನಂತರ ಯಾವುದೇ ಊರಿಗೆ ಹೋದರು ಅಲ್ಲಿನ ದೇವಾಲಯಗಳನ್ನು ಸಂದರ್ಶಿಸಿ ಆ ಊರಿನ ಸಮೀಪದ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು ವ್ಯವಹಾರದ ಜೊತೆಗೆ ವ್ಯವಸ್ಥೆ ಮಾಡಿಕೊಂಡಿದ್ದೆ.
ಕಳೆದ 15 ವರ್ಷದಿಂದ ಅಂತಹ ಯಾವುದೇ ಪ್ರವಾಸ ಮಾಡಿಲ್ಲ ಮನೆ -ಊರು ಬಿಟ್ಟು ಹೊರಹೋಗಲೇ ಇಲ್ಲ , ನಮ್ಮೂರ ಈ ಗೆಳೆಯರ ಅಚ್ಚುಕಟ್ಟಿನ ಪ್ರವಾಸ ವ್ಯವಸ್ಥೆ ನೋಡಿ ನನಗೂ ಒಂದು ರೀತಿಯ ಪ್ರವಾಸ ಮಾಡಬೇಕೆಂಬ ಪ್ರೇರಣೆ ಬಂದಿದೆ
ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನ ಕೆಲ ಪ್ರದೇಶಗಳನ್ನು ನೋಡಬೇಕು ನಂತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡಬೇಕು ಅದರ ನಂತರ ಇಡೀ ರಾಜ್ಯದ ಪ್ರವಾಸ ಮಾಡಬೇಕು ಆನಂತರ ದೇಶ ಸುತ್ತಬೇಕು ಅದರ ನಂತರ ದಕ್ಷಿಣ ಅಮೆರಿಕದ ಪ್ರವಾಸ ಮಾಡಬೇಕೆಂಬ ಆಸೆ ಇದೆ ಇದೆಷ್ಟು ಸಾಧ್ಯವೋ ಗೊತ್ತಿಲ್ಲ ಬಿಹಾರದ ಬುದ್ದ ಗಯಾದಲ್ಲಿ ಪಿತೃ ತರ್ಪಣ ಮಾಡಲೇ ಬೇಕೆಂಬ ಅಚಲ ನಿರ್ಧಾರ ಮಾಡಿದ್ದೇನೆ.
ದೆಹಲಿ ಕೇಂದ್ರವಾಗಿ ಪಕ್ಕ ಪಕ್ಕದ ಕೆಲ ರಾಜ್ಯ ಪ್ರವಾಸ ಮಾಡುತ್ತಿರುವ ನಮ್ಮೂರ ವಿಜಯ ಆರ್ಟ್ಸ್ ಕೆ ಎಸ್ ಎಫ್ ಸಿ ನಾಗರಾಜ್ ವಕೀಲ ವಾಸು ಮತ್ತವರ ತಂಡದವರಿಗೆ ಶುಭ ಹಾರೈಸುತ್ತಾ ಇವರ ತಂಡ ಮುಂದಿನ ವರ್ಷ ಅಂಡಮಾನ್ ನಿಕೋಬಾರ್ ಗೂ ಹೋಗಿ ಬರಲಿ ಎಂದು ಕೂಡ ಹಾರೈಸುತ್ತೇನೆ.
ಜೀವನದ ಪ್ರತಿ ಕ್ಷಣವೂ ದುಡಿಮೆ ದುಡಿಮೆ ಎಂದು ಶ್ರಮ ಪಡುವ ನಾವೆಲ್ಲ ಬಿಡುವು ಮಾಡಿಕೊಂಡು ಈ ರೀತಿ ಪ್ರವಾಸ ಮಾಡಿದರೆ ದುಡಿಮೆಗೆ ಹೆಚ್ಚು ಶಕ್ತಿ ಬರುವುದು ಸುಳ್ಳಲ್ಲ.
Comments
Post a Comment