#ಆನಂದಪುರಂನಲ್ಲಿ_ವಿದ್ಯಾಬ್ಯಾಸ_ಮಾಡಿವರು. #ಸಾಗರದ_ಮುನ್ಸಿಪ್_ಹೈಸ್ಕೂಲಿನಲ್ಲಿ_ನನ್ನ_ಗುರುಗಳು. #ಪ್ರತಿದಿನ_ಇಷ್ಟತ್ತು_ಕಿಲೋಮೀಟರ್_ನಡೆದು_ಪ್ರೌಢಶಿಕ್ಷಣ_ಪಡೆದವರು. #ಪ್ರಾಮಾಣಿಕ_ಪ್ರಯತ್ನಕ್ಕೆ_ಫಲಸಿದ್ದಿ_ಎ೦ದು_ಸಾದಿಸಿ_ತೋರಿಸಿದವರು. #ಯಾರ_ಬೆಂಬಲ_ಇಲ್ಲದೆ_ಗಾಡ್_ಪಾದರ್_ಇಲ್ಲದೆಯೂ_ಸಾದಿಸಿದವರು #ಜಿಲ್ಲಾ_ಸಹಕಾರಿ_ಸಂಸ್ಥೆ_ರಿಜಿಸ್ಟ್ರಾರ್_ಆಗಿದ್ದರು #ವಿದಾನ_ಸೌದದಲ್ಲಿ_ಮಂತ್ರಾಲಯದಲ್ಲಿ_ವಿಶೇಷ_ಕರ್ತವ್ಯ_ಅಧಿಕಾರಿ_ಆಗಿದ್ದರು. #ಅವರ_ಜೀವನ_ಶಿಸ್ತು_ಬದ್ದ . 1978ರಲ್ಲಿ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿ ಇಂಗ್ಲೀಷ್ ಮೀಡಿಯಂ ಗೆ ನನ್ನ ತಂದೆ ಸೇರಿಸಿದ್ದರು, ಅಲ್ಲಿದ್ದ ಮ್ಯಾನೇಜರ್ ನಮ್ಮೂರ ಸಮೀಪದ ನಂದಿಗದ ಗುಂಡಪ್ಪನವರು (ಸಾಗರದ ಗೋಪಾಲರ ದೊಡ್ಡಪ್ಪ) ಬಿಟ್ಟರೆ ಬೇರಾರು ಗೊತ್ತಿರಲಿಲ್ಲ. 7 ನೇ ತರಗತಿ ತನಕ ಇಂಗ್ಲೀಷ್ ಮೀಡಿಯಂ ಓದಿದವರು 8ನೇ ತರಗತಿಗೆ ಇಲ್ಲಿಗೆ ಮತ್ತು ಅನುಕೂಲಸ್ಥರು ಪ್ರಭಾವಿಗಳು ಖಾಸಾಗಿ ಶಾಲೆ ಆದ ಶಿವಲಿಂಗಪ್ಪ ಹೈಸ್ಕೂಲ್ ಗೆ ಸೇರಿಸುತ್ತಿದ್ದರು. ನಮ್ಮ ಊರಿನ ಹೈಸ್ಕೂಲ್ ಶಿಕ್ಷಕರು ನಮ್ಮ ತಂದೆಗೆ ಸಾಗರದ ಮುನ್ಸಿಪಲ್ ಹೈಸ್ಕೂಲ್ ಸೇರಿಸಲು ಸಲಹೆ ನೀಡಿ ಅವರ ಮಗನನ್ನ ಈ ಖಾಸಾಗಿ ಶಾಲೆಗೆ ಸೇರಿಸಿದ್ದರ ಉದ್ದೇಶ ಅನೇಕ ವರ್ಷದ ನಂತರ ಗೊತ್ತಾಯಿತು. ಹಳ್ಳಿಯಲ್ಲಿ ಮಾತೃ ಬಾಷೆ ಕನ್ನಡ ಮಾದ್ಯಮದಲ್ಲಿ ಓದಿ ಶಾಲೆಗೆ ಪ...