Skip to main content

Posts

Showing posts with the label Is this KUNCHIKAL FALLS of Varahi river of SHIVAMOGGA district Karnataka state heighes height falls of India?

Blog number 2117. ಅನೇಕ ವದಂತಿಗಳ ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ವರಾಹಿ ನದಿಯ ನಿಗೂಡ ಎನ್ನಿಸಿದ್ದ ಕುಂಚಿಕಲ್ ಪಾಲ್ಸ್ ಮೊದಲ ವಿಡಿಯೋ ಚಿತ್ರೀಕರಿಸಿದವರು ಸಮಾಜ ಸೇವಕ ನಗರದ ನಾರಾಯಣ ಕಾಮತ್

#ನಿಗೂಡ_ಎನ್ನಿಸಿದ್ದ_ಕುಂಚಿಕಲ್_ಪಾಲ್ಸ್_ಮೊದಲ_ವಿಡಿಯೊ_ಮಾಡಿದ_ದಾಖಲೆ #ಬಿದನೂರು_ನಗರದ_ಸಮಾಜ_ಸೇವಕ_ನಾರಾಯಣ_ಕಾಮತರದ್ದು #2018ರ_ಆಗಸ್ಟ್_1ರಂದು_ಸುಬ್ರಮಣ್ಯಭಾಗವತರು_ಅನಂತಮೂರ್ತಿಶೆಣೈ_ಕಿರಣದಾಸ್  #ಮತ್ತು_ಮಾಸ್ತಿಕಟ್ಟೆಯ_ಆಟೋ_ರಿಕ್ಷಾ_ಡ್ರೈವರ್_ಜೊತೆ #ಕುಂಚಿಕಲ್_ಪಾಲ್ಸ್_ತಲುಪಿದ್ದರು. https://youtube.com/shorts/XQfS8Ep-Fdo?feature=shared.  ದೇಶದಲ್ಲೇ ಅತಿ ಎತ್ತರದ ಜಲಪಾತ ಎಂಬ ವದಂತಿಗಳಿರುವ ಕುಂಚಿಕಲ್ ಪಾಲ್ಸ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ದಟ್ಟ ಅರಣ್ಯದ ಮಧ್ಯ ವರಾಹಿ ನದಿಯ ನೀರು ಬೀಳುವ ಜಲಪಾತ ಆಗಿದೆ.    ಇದು ಸ್ಥಳೀಯರಿಗೆ ಮಾತ್ರ ಗೊತ್ತಿದ್ದ ಪಾಲ್ಸ್ ಆಗಿದ್ದರೂ ಇಲ್ಲಿಗೆ ತಲುಪಲು ರಸ್ತೆ ಇಲ್ಲ, ಕಡಿದಾದ ದುರ್ಗಮವಾದ ದಟ್ಟ ಅರಣ್ಯದಲ್ಲಿ ಈ ಸ್ಥಳ ತಲುಪ ಬಹುದಾದರೂ ವನ್ಯಪ್ರಾಣಿಗಳು, ಜಿಗಣೆಗಳಿಂದ ತಪ್ಪಿಸಿಕೊಂಡು ಹೋಗಬೇಕು, ಹೋದರೂ ಅಲ್ಲಿ ಸುರಕ್ಷಿತವಾಗಿ ನಿಂತು ವೀಕ್ಷಣೆಗೆ ಸರಿಯಾದ ಜಾಗವೂ ಇಲ್ಲ.   ಒಮ್ಮೆ ಕಷ್ಟಪಟ್ಟು ಹೋದವರು ಇನ್ನೊಮ್ಮೆ ಇಲ್ಲಿಗೆ ಹೋಗಲು ಮನಸ್ಸು ಮಾಡುವುದಿಲ್ಲ ಈಗ ಕರ್ನಾಟಕ ಪವರ್ ಕಾರ್ಪೊರೇಷನ್ ಮತ್ತು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಅಲ್ಲಿಗೆ ಹೋಗಲು ಸಾಧ್ಯವೇ ಇಲ್ಲ.   ಇದು ನಕ್ಸಲ್ ಪೀಡಿತ ಪ್ರದೇಶವೂ ಆಗಿರುವುದರಿಂದ ಇದು ಪ್ರವಾಸ ಯೋಗ್ಯ ಸ್ಥಳವಲ್ಲ.   . ವರಾಹಿ ವಿದ್ಯುತ್ ಯೋಜನೆಗಾಗಿ ಈ ಪ್ರದೇಶ ಮುಳುಗಡೆ ಆದ್ದರಿಂ...