Skip to main content

Posts

Showing posts with the label Which power made me this type assumption

Blog number 1956. ಜಾತ್ರೆ ಲಕ್ಕಿಡಿಪ್ ಊಟರಿಯಲ್ಲಿ ವಾಷಿಂಗ್ ಮೆಷಿನ್ ಬಹುಮಾನ ನಿನಗೇ ಬರುತ್ತೆ ಅಂದಿದ್ದೆ ಡ್ರಾ ನಡೆದಾಗ ಹಾಗೆಯೇ ಆಯಿತು ಇದೊಂದು ಕಾಕತಾಳಿಯ ಆಕಸ್ಮಿಕ ಘಟನೆ ಆದರೆ ನನ್ನ ಜೀವನದಲ್ಲಿ ಇಂತಹ ಅನೇಕ ಘಟನೆಗಳು ನಡೆದಿದೆ.

#ಮಳೆ_ನಿಂತರೂ_ಹನಿ.... #ಎಂಬಂತೆ_ನಮ್ಮ_ಊರಿನ_ಜಾತ್ರೆ_ಪ್ರಸಂಗಳು_ಮುಗಿಯುವುದಿಲ್ಲ #ಜಾತ್ರಾ_ಸಮಿತಿ_ಯುವಕರು_ಜಾತ್ರೆಗಾಗಿ_ಲಕ್ಕಿಡಿಪ್_ಲಾಟರಿ_ಇಟ್ಟಿದ್ದರು #ಎಂಬತ್ತರ_ದಶಕದಲ್ಲಿ_ನಮ್ಮ_ರೈಸ್_ವಿಲ್_ಡ್ರೈವರ್_ಆಗಿದ್ದ #ಬಸವನಹೊಂಡದ_ರಾಜನಾಯ್ಕರ_ಮಗ_ಬಸವಣ್ಣರ_ಮಗ #ನಾಗರಾಜನಿಗೆ_ಜಾತ್ರೆಯ_ಲಾಟರಿ_ಎರಡನೆ_ಬಹುಮಾನ_ವಾಷಿಂಗ್_ಮೆಷಿನ್ #ಲಾಟರಿಯಲ್ಲಿ_ಎರಡನೆ_ಬಹುಮಾನ_ವಾಷಿಂಗ್_ಮಿಷನ್_ಸಿಗುತ್ತದೆ_ಎಂದಿದ್ದೆ #ಇದೊಂದು_ಕಾಕತಾಳೀಯ_ಘಟನೆ    ನಮ್ಮೂರ ಜಾತ್ರೆ ಮೊನ್ನೆ 14 ಫೆಬ್ರವರಿ 2024ಕ್ಕೆ ಮುಗಿಯಿತು ಆದರೂ ಪ್ರತಿ ಜಾತ್ರೆಯಲ್ಲಿನ ನೆನಪುಗಳು ನೂರಾರು... ಇದೊಂದು ರೀತಿ ಮಳೆ ನಿಂತರು ಮಳೆ ಹನಿ ನಿಲ್ಲಲಿಲ್ಲ ಎಂಬಂತೆ.    ರಥೋತ್ಸವದ ಹಿಂದಿನ ದಿನ ದೇವಾಲಯದಲ್ಲಿ ಹೋಮ ದ್ವಜಾರೋಹಣ ಇತ್ಯಾದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಆಗ ಈ ನಾಗರಾಜ ಬಂದು ಮಾತಾಡಿಸಿದ.   ಪ್ರತಿ ವರ್ಷ ಜಾತ್ರೆಯಲ್ಲಿ ಈ ರೀತಿ ಸಿಗುತ್ತಾನೆ, ಇವನ ತಂದೆ ಬಸವಣ್ಣ, ಇವನ ಅಜ್ಜನ ಹೆಸರು ರಾಜ ನಾಯಕರು,ಒಂದು ಕಾಲದಲ್ಲಿ ದೊಡ್ಡ ಜಮೀನ್ದಾರರು, ಇವತ್ತಿನ ಭಂಗಿ ಬೂತಪ್ಪ ದೇವಸ್ಥಾನದ ಸಮೀಪ ಇರುವ ಕಲ್ಯಾಣಿ ಬಸವನಹೊ೦ಡದ ಮೇಲಿನ ಫಲವತ್ತಾದ ಸುಮಾರು 12 ಎಕರೆ ಭತ್ತದ ಕೃಷಿ ಮಾಡುವ ಜಮೀನು ಹೊಂದಿದ್ದರು,ಆದರೆ ದುರಾದೃಷ್ಟದಿಂದ ಕಂದಾಯ ಬಾಕಿ ಎಂದು ಆ ಜಮೀನು ಹರಾಜಿನಲ್ಲಿ ಯಾರದ್ದೋ ಪಾಲಾಯಿತು.       ಕುಟುಂಬದ ಜಮೀನು...