Skip to main content

Posts

Showing posts with the label Real story of Big tree of Hosagunda

Blog number 1165. ಹೊಸಗುಂದದ ಪುರಾತನ ಕಲ್ಲೇಶ್ವರ ದೇವಾಲಯ (ಈಗಿನ ಹೆಸರು ಉಮಾ ಮಹೇಶ್ವರ) ಆವರಿಸಿದ ಬೃಹತ್ ಮರದ ಕಥೆ

ಹೊಸಗು೦ದದ ಕಲ್ಲೇಶ್ವರ ದೇವಸ್ಥಾನದ ಮರದ ಕಥೆ '            ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯ ಹೊಸಗುಂದ ಎಂದರೆ ತುಂಬಾ ಪ್ರಸಿದ್ದಿಯ ಹಳ್ಳಿ ಈ ಗ್ರಾಮಕ್ಕೆ ಪ್ರಸಿದ್ದಿಬರಲು ಕಾರಣ ಶರಾವತಿ ನದಿಗೆ ಜೋಗ ಜಲಪಾತದ ಲಿಂಗನಮಕ್ಕಿ ಎಂಬಲ್ಲಿ ಆಣೆಕಟ್ಟು ಕಟ್ಟಿ ಜಲ ವಿದ್ಯುತ್ ಯೋಜನೆ ಪ್ರಾರಂಬಿಸಿದ್ದರಿಂದ ಹೆಡತ್ರಿ ಎಂಬ ಊರು ಕೂಡ ಮುಳುಗಡೆ ಆಯಿತು, ಆ ಊರಿನ ಶ್ರೀಮಂತ ದೊಡ್ಡ ರೈತ ಕುಟು೦ಬವಾದ ಹೆಡ ತ್ರಿ ಮಲ್ಲಪಗೌಡರ ಕುಟುಂಬ ಇಲ್ಲಿಗೆ ವಲಸೆ ಬಂತು. ಆ ಕಾಲದಲ್ಲೇ ಜೀಪು, ಟ್ರಾಕ್ಟರ್ ಮತ್ತು ಬುಲೆಟ್ ಬೈಕ್ ಇದ್ದ ಈ ಕುಟು೦ಬಕ್ಕೆ ಸಕಾ೯ರ ನೀಡಿದ ಪರಿಹಾರ ಇಡೀ ಜೀಪಲ್ಲಿ ತುಂಬಿಸಿದರೂ ಮತ್ತೂ ಉಳಿದಿತ್ತು ಅಂತ ಅವರ ಶ್ರೀಮಂತಿಗೆ ವಣ೯ನೆ ಮಾಡುತ್ತಿದ್ದರು ಜನ.        ಮಲ್ಲಪ್ಪ ಗೌಡರು ದೂರದೃಷ್ಟಿ ಇದ್ದ೦ತಹ ವ್ಯಕ್ತಿ ಆದ್ದರಿಂದ ಹೊಸಗುಂದಕ್ಕೆ ಬಂದವರೆ ಸಾವ೯ಜನಿಕರಿಗಾಗಿ ಕುಡಿಯುವ ನೀರಿನ ಬಾವಿ ಮತ್ತು ಶಾಲೆ ಒಂದನ್ನ ನಿಮಿ೯ಸಿ ಅದರ ಉದ್ಘಾಟನೆಯನ್ನ ಆ ಕಾಲದ ಜನಪ್ರಿಯ ಮುಖ್ಯ ಮಂತ್ರಿ ನಿಜಲಿಂಗಪ್ಪರನ್ನ ಕರೆಸಿ ಮಾಡಿಸಿದ್ದರೆಂದರೆ ಅವರ ಘನತೆ ಅಥ೯ವಾದೀತು.         ಅವರ ನಂತರ ಅವರ ಮಗ ಹೆಡ ತ್ರಿ ನಾಗರಾಜ ಗೌಡರು ಅವರ೦ತೆ ಜನ ಬಳಕೆ, ಸಂಸ್ಕಾರ ಮತ್ತು ಗೌರವಯುತ ಜೀವನ ನಡೆಸಿದರು, ಅವರು ಹೇಳುವಂತೆ ಮುಳುಗಡೆಯಿ೦ದ ಬ೦ದ ಕೆಲ ವಷ೯ ಹೊಸಗುಂದದ ಕಾಡಲ್ಲಿದ್ದ ದ...