Skip to main content

Posts

Showing posts with the label 1960 Leelavathi sister of Anandapuram kanakammal hospital part-65

ಆನಂದಪುರಂ ಇತಿಹಾಸ ಭಾಗ-65. ಆನಂದಪುರಂ ಕನಕಮ್ಮಳ್ ಆಸ್ಪತ್ರೆಯಲ್ಲಿ ಸುಮಾರು 1960ರಿಂದ ಆರೋಗ್ಯ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದ ಲೀಲಾವತಿ ಸಿಸ್ಟರ್ ಈಗ ಪುರಪ್ಪೆ ಮನೆಯಲ್ಲಿ ನಿವೃತ್ತ ಜೀವನ ನಡೆಸಿದ್ದಾರೆ.

#ಲೀಲಾವತಿ_ಸಿಸ್ಟರ್_ಗ್ರಾಮೀಣ_ಭಾಗದ_ಆರೋಗ್ಯ_ಸೇವೆ. #ಆನಂದಪುರಂ_ಪುರಪ್ಪೆಮನೆ_ಭಾಗದಲ್ಲಿ_ಚಿರಪರಿಚಿತರು #ಎಂಬತ್ತೆರೆಡರ_ವೃದ್ದಾಪ್ಯದಲ್ಲಿ_ಪುರಪ್ಪೆಮನೆ_ಎಂಬ_ಹಳ್ಳಿಯಲ್ಲೇ_ನೆಲೆಸಿದ್ದಾರೆ. #ಮಗ_ಏಸುಪ್ರಕಾಶ್_ನೀನಾಸಂ_ನಾಟಕ_ಚಲನಚಿತ್ರ_ಸಾರಾ_ಸಂಸ್ಥೆ_ಮೂಲಕ_ಸಮಾಜ_ಸೇವೆಯಲ್ಲಿದ್ದಾರೆ     1960 ರ ದಶಕದಲ್ಲಿ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆಗೆ ಉತ್ತುಂಗದ ಕಾಲ ಆಗ ದೂರದ ಶಿಕಾರಿಪುರ, ಕುಂಸಿ, ರಿಪ್ಪನ್ ಪೇಟೆ, ಕೋಣಂದೂರು, ಹೊಸನಗರ ಭಾಗದಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದ ಕಾಲ.   ಜಮೀನ್ದಾರರು, ಕೊಡುಗೈ ದಾನಿಗಳು ಆಗಿದ್ದ ರಾಮಕೃಷ್ಣ ಅಯ್ಯಂಗಾರರು ತಮ್ಮ ದಮ೯ ಪತ್ನಿ ಕನಕಮ್ಮಾಳ್ ಸ್ಮಾರಕವಾಗಿ ನಿರ್ಮಿಸಿ ಸಾರ್ವಜನಿಕರಿಗೆ ಬಿಟ್ಟು ಕೊಟ್ಟ ಈ ಆಸ್ಪತ್ರೆಯಲ್ಲಿ ಆ ಕಾಲದಲ್ಲಿ ಸೇವೆ ಸಲ್ಲಿಸಿದವರೂ ಸೇವಾ ಮನೋಭಾವನೆಯ ವೈದ್ಯಕೀಯ ಸಿಬ್ಬಂದಿಗಳೆ.   ಅವರಲ್ಲಿ ಒಬ್ಬರಾಗಿ ಆನಂದಪುರಂ ಭಾಗದ ಜನರಿಗೆ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದ ಲೀಲಾವತಿ ಸಿಸ್ಟರ್ ಜನರ ಬಾಯಲ್ಲಿ ಪ್ರೀತಿಯಿಂದ ಸ೦ಕ್ಷಿಪ್ತವಾಗಿ ಕರೆಯುವ ಹೆಸರು ಲೀಲಾ ಸಿಸ್ಟರ್.   ನಂತರ ಪುರಪ್ಪೆ ಮನೆ ಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಈಗ ತಮ್ಮ 82ನೇ ವಯಸ್ಸಲ್ಲಿ ಪುರಪ್ಪೆ ಮನೆಯಲ್ಲೇ ಸ್ವಂತ ಮನೆ ನಿರ್ಮಿಸಿಕೊಂಡು ಮಗನೊಂದಿಗೆ ಆರೋಗ್ಯವಾಗಿ ಜೀವನ ಕಳೆಯುತ್ತಿದ್ದಾರೆ. ...