ಆನಂದಪುರಂ ಇತಿಹಾಸ ಭಾಗ-65. ಆನಂದಪುರಂ ಕನಕಮ್ಮಳ್ ಆಸ್ಪತ್ರೆಯಲ್ಲಿ ಸುಮಾರು 1960ರಿಂದ ಆರೋಗ್ಯ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದ ಲೀಲಾವತಿ ಸಿಸ್ಟರ್ ಈಗ ಪುರಪ್ಪೆ ಮನೆಯಲ್ಲಿ ನಿವೃತ್ತ ಜೀವನ ನಡೆಸಿದ್ದಾರೆ.
#ಆನಂದಪುರಂ_ಪುರಪ್ಪೆಮನೆ_ಭಾಗದಲ್ಲಿ_ಚಿರಪರಿಚಿತರು
#ಎಂಬತ್ತೆರೆಡರ_ವೃದ್ದಾಪ್ಯದಲ್ಲಿ_ಪುರಪ್ಪೆಮನೆ_ಎಂಬ_ಹಳ್ಳಿಯಲ್ಲೇ_ನೆಲೆಸಿದ್ದಾರೆ.
#ಮಗ_ಏಸುಪ್ರಕಾಶ್_ನೀನಾಸಂ_ನಾಟಕ_ಚಲನಚಿತ್ರ_ಸಾರಾ_ಸಂಸ್ಥೆ_ಮೂಲಕ_ಸಮಾಜ_ಸೇವೆಯಲ್ಲಿದ್ದಾರೆ
1960 ರ ದಶಕದಲ್ಲಿ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆಗೆ ಉತ್ತುಂಗದ ಕಾಲ ಆಗ ದೂರದ ಶಿಕಾರಿಪುರ, ಕುಂಸಿ, ರಿಪ್ಪನ್ ಪೇಟೆ, ಕೋಣಂದೂರು, ಹೊಸನಗರ ಭಾಗದಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದ ಕಾಲ.
ಜಮೀನ್ದಾರರು, ಕೊಡುಗೈ ದಾನಿಗಳು ಆಗಿದ್ದ ರಾಮಕೃಷ್ಣ ಅಯ್ಯಂಗಾರರು ತಮ್ಮ ದಮ೯ ಪತ್ನಿ ಕನಕಮ್ಮಾಳ್ ಸ್ಮಾರಕವಾಗಿ ನಿರ್ಮಿಸಿ ಸಾರ್ವಜನಿಕರಿಗೆ ಬಿಟ್ಟು ಕೊಟ್ಟ ಈ ಆಸ್ಪತ್ರೆಯಲ್ಲಿ ಆ ಕಾಲದಲ್ಲಿ ಸೇವೆ ಸಲ್ಲಿಸಿದವರೂ ಸೇವಾ ಮನೋಭಾವನೆಯ ವೈದ್ಯಕೀಯ ಸಿಬ್ಬಂದಿಗಳೆ.
ಅವರಲ್ಲಿ ಒಬ್ಬರಾಗಿ ಆನಂದಪುರಂ ಭಾಗದ ಜನರಿಗೆ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದ ಲೀಲಾವತಿ ಸಿಸ್ಟರ್ ಜನರ ಬಾಯಲ್ಲಿ ಪ್ರೀತಿಯಿಂದ ಸ೦ಕ್ಷಿಪ್ತವಾಗಿ ಕರೆಯುವ ಹೆಸರು ಲೀಲಾ ಸಿಸ್ಟರ್.
ನಂತರ ಪುರಪ್ಪೆ ಮನೆ ಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಈಗ ತಮ್ಮ 82ನೇ ವಯಸ್ಸಲ್ಲಿ ಪುರಪ್ಪೆ ಮನೆಯಲ್ಲೇ ಸ್ವಂತ ಮನೆ ನಿರ್ಮಿಸಿಕೊಂಡು ಮಗನೊಂದಿಗೆ ಆರೋಗ್ಯವಾಗಿ ಜೀವನ ಕಳೆಯುತ್ತಿದ್ದಾರೆ.
ಮಗ ಏಸು ಪ್ರಕಾಶ್ ಕಲಾವಿದ ಪರಿಸರ ಪ್ರೇಮಿ ಆಗಿ ಹೆಸರು ಗಳಿಸಿದ್ದಾರೆ, ನೀನಾಸಂ ನಿಂದ ಟೀವಿ ದಾರಾವಾಹಿ ಮತ್ತು ಸಿನಿಮ ಕ್ಷೇತ್ರದಲ್ಲೂ ಸೈ ಅನ್ನಿಸಿಕೊಂಡಿದ್ದಾರೆ, ಗ್ರಾಮ ಅಭಿವೃದ್ದಿಗಾಗಿ ಗ್ರಾಮ ಪಂಚಾಯತ್ ಸದಸ್ಯರೂ ಆಗಿದ್ದರು ಈಗ ಎಲೆ ಮರೆಯ ಕಾಯಿಯಂತೆ ಬಟ್ಟೆ ಮಲ್ಲಪ್ಪದ ರೈತ ಮುಖಂಡ ಗುರುಪಾದಪ್ಪ ಗೌಡರ ಪುತ್ರ ದೆಹಲಿಯಲ್ಲಿ ನೆಲೆಸಿರುವ ಕಲಾವಿದ ಅರುಣ್ ನಿರ್ಮಿಸಿರುವ #ಸಾರಾ ಸ೦ಸ್ಥೆ ಜೊತೆಗೂಡಿ ಅನೇಕ ಕೆರೆ ಸಂರಕ್ಷಣೆ ಕೆಲಸದಲ್ಲಿ ತೊಡಗಿದ್ದಾರೆ.
ನಿನ್ನೆ ಏಸು ಪ್ರಕಾಶ್ ಜೊತೆ ಲೀಲಾ ಸಿಸ್ಟರ್ ಬಂದಿದ್ದಾರೆ ಅಂದಾಗ ನಿಜಕ್ಕೂ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಒಂದೆರೆಡು ದಿನದ ಹಿಂದೆ ಅಷ್ಟೆ ಅವರ ನೆನಪು ಮಾಡಿ ಕೊಂಡಿದ್ದೆ.
1982 - 83ರಲ್ಲಿ ಸಾಗರದಲ್ಲಿ ಡಿಪ್ಲೋಮ ಓದುವಾಗ ಒಂದು ವರ್ಷ ಸಾಗರದ ಇವರ ಮನೆಯಲ್ಲಿ ನನಗೆ ಮದ್ಯಾಹ್ನದ ಉಚಿತ ಊಟ ಮಾಡಿದ ಅನ್ನದ ಋಣ ನನ್ನ ಮೇಲಿದೆ, ಇವರ ಮಗ ಏಸು ಪ್ರಕಾಶ್ ಪ್ರೌಡ ಶಾಲೆ ಸಹಪಾಟಿ, ನಮ್ಮ ತಂದೆ ಮತ್ತು ಲೀಲಾ ಸಿಸ್ಟರ್ ಆನಂದಪುರ೦ ಆಸ್ಪತ್ರೆಯಲ್ಲಿ ಒಟ್ಟಿಗೆ ಕೆಲಸ ಮಾಡಿದವರು, ಲೀಲಾ ಸಿಸ್ಟರ್ ನಮ್ಮ ತಂದೆಯನ್ನು "ಏನೋ ಕೃಷ್ಣ" ಅಂತ ಏಕವಚನದಲ್ಲಿ ಮಾತಾಡಿಸುವಂತ ಸಲಿಗೆ ಹೊಂದಿದ್ದರು.
ಸುಮಾರು 25 ವರ್ಷದ ನಂತರ ನನಗೆ ಅವರ ದರ್ಶನ ಆಯಿತು, ಆತ್ಮ ಪೂರ್ವಕವಾಗಿ ಸಣ್ಣ ಸನ್ಮಾನದೊಂದಿಗೆ ಸಣ್ಣ ಕಿರು ಕಾಣಿಕೆ ಅರ್ಪಿಸಿ ನಾನು ಮತ್ತು ನನ್ನ ಸಹೋದರ ಅವರ ಕಾಲಿಗೆರಗಿ ಆಶ್ರೀವಾದ ಪಡೆದೆವು.
ಹಳ್ಳಿಯಲ್ಲೇ ಆರೋಗ್ಯ ಸೇವೆ ಮಾಡಿ ಹಳ್ಳಿಯಲ್ಲೇ ನೆಲೆಸಲು ಕಾರಣ ಏನು? ಅಂದದ್ದಕ್ಕೆ ಅವರು ಹೇಳಿದ್ದು ಹಳ್ಳಿಯ ಜನ ಹೆಚ್ಚು ಪ್ರೀತಿಯಿಂದ ನೋಡುತ್ತಿದ್ದರಿಂದ ಪರಿಚಿತರ ಮಧ್ಯ ಮನೆ ಮಾಡಿ ಬದುಕ ಮಾಡುವ ಮನಸ್ಸಾಯಿತು ಅಂದರು ಅವರಿಗೆ ಉರುಗೋಲಾಗಿ ಕಲಾವಿದ ಪುತ್ರ ಏಸು ಪ್ರಕಾಶ್ ಅವರನ್ನು ಜತನದಿಂದ ಕಾಪಾಡುವುದು ನೋಡಿ ಸಂತೋಷ ಆಯಿತು.
Comments
Post a Comment