ಆನಂದಪುರಂ ಇತಿಹಾಸ 66, ಆನಂದಪುರಂ ಕೋಟೆ ಒಳಗೆ ಸುಂದರವಾದ ತಾಂಡವೇಶ್ವರ ದೇವಸ್ಥಾನ ಇರುವ ಇತಿಹಾಸ ಇತಿಹಾಸ ಇದೆ ಆದರೆ ಕೋಟೆ ಆಂಜನೇಯ ದೇವಸ್ಥಾನ ಹೊರತು ಪಡಿಸಿ ಬೇರೆ ದೇವಾಲಯದ ಕುರುಹು ಇಲ್ಲ.
#ಆನಂದಪುರಂ_ಕೋಟೆಯೊಳಗೆ_ಸುಂದರವಾದ_ತಾಂಡವೇಶ್ವರ_ದೇವಸ್ಥಾನ_ಇದ್ದ_ಉಲ್ಲೇಖವಿದೆ
#ಪುರಾತನ_ತಾಂಡವೇಶ್ವರ_ದೇವಸ್ಧಾನ_ಏನಾಯಿತು?
#ಈಗಿನ_ಕಾಂತಿಸಿದ್ದೇಶ್ವರ_ದೇವಸ್ಥಾನವೇ_ಆಗಿನ_ತಾಂಡವೇಶ್ವರ_ದೇವಾಲಯ_ಆಗಿತ್ತಾ?
ಕೆಳದಿ ಅರಸರಿಂದ ಅಭಿವೃದ್ದಿ ಹೊಂದಿದ್ದ ಯಡೇಹಳ್ಳಿ ಕೋಟೆ ಕೆಳದಿ ಅರಸರ ಆಳ್ವಿಕೆ ಪೂರ್ವದಲ್ಲಿ ಕಿರಾತಕರ ವಶದಲ್ಲಿತ್ತೆಂಬ ಇತಿಹಾಸ ಉಲ್ಲೇಖಗಳಿದೆ.
ಕೆಳದಿ ಅರಸರ ವಶ ಆದ ನಂತರ ಈ ಕೋಟೆ ಆಧುನಿಕರಣದ ಅಭಿವೃದ್ಧಿ ಆಯಿತು, ಕೆಳದಿ ಅರಸ ವೆಂಕಟಪ್ಪ ನಾಯಕರು ತನ್ನ ಮೂರನೆ ರಾಣಿ ಚಂಪಕಳನ್ನ ಈ ಕೋಟೆಯ ಅರಮನೆಯಲ್ಲಿ ಇರಿಸಿದ್ದರು ನಂತರ ಜಾತಿ ಮತ್ತು ಆಹಾರ ಪದ್ದತಿಯ ಕಾರಣದಿಂದ ಎರಡನೆ ರಾಣಿ ಭದ್ರಮ್ಮಾಜಿಯವರು ಅನ್ನ ಆಹಾರ ತ್ಯಜಿಸಿ ದೇಹ ತ್ಯಾಗ ಮಾಡಿದ ನಂತರ ಪ್ರಜೆಗಳು ರಾಜ ವೆಂಕಟಪ್ಪ ನಾಯಕರ ವಿರುದ್ಧವಾಗಿದ್ದರಿಂದ ನೊಂದ ಚಂಪಕಳ ಆತ್ಮಹತ್ಯೆ ಇವರ ದುರಂತ ಪ್ರೇಮ ಕಥೆಯ ಸ್ಮಾರಕವಾಗಿ ಚಂಪಕ ಸರಸ್ಸು ನಿರ್ಮಿಸಿ ಈ ಪ್ರದೇಶಕ್ಕೆ ಚಂಪಕಳ ಸ್ಮರಣೆಗಾಗಿ ಆನಂದಪುರಂ ಎಂದು ನಾಮಕರಣ ಆಯಿತು.
ಸದರಿ ಕೋಟೆ ಇಬ್ಬಾಗಿಸಿ 1938 ರಲ್ಲಿ ಶಿವಮೊಗ್ಗ ತಾಳಗುಪ್ಪ ರೈಲ್ವೆ ಮೀಟರ್ ಗೇಜ್ ನಿರ್ಮಿಸಲಾಯಿತು ಈಗ ಬ್ರಾಡ್ ಗೇಜ್ ಆಗಿ ಪರಿಪರ್ತಿಸಲಾಗಿದೆ.
ಕೋಟೆ ಒಳಗಿನ ಆಂಜನೇಯ ದೇವಾಲಯ ಇತ್ತೀಚೆಗೆ ಸ್ಥಳಿಯ ಭಕ್ತರಿಂದ ಪುನರ್ ನಿರ್ಮಿಸಿ ಪುನರ್ ಪ್ರತಿಷ್ಟಾಪನೆ ಕೂಡ ಆಗಿದೆ.
ಇತಿಹಾಸದಲ್ಲಿ ಆನಂದಪುರಂ ಕೋಟೆ ಒಳಗೆ ಸುಂದರವಾದ ತಾಂಡವೇಶ್ವರ ದೇವಾಲಯ ಇರುವುದಾಗಿ ಉಲ್ಲೇಖವಿದೆ ಆದರೆ ಅಂತಹ ಯಾವುದೇ ದೇವಾಲಯ ಈಗ ಇರುವುದಿಲ್ಲ, ಪಾಳು ಬಿದ್ದ ಕೋಟೆ ಒಳಗೆ ದೇವಾಲಯದ ಅವಶೇಷ ಇರುವುದಾಗಿ ಕೆಲವರು ಹೇಳುತ್ತಾರಾದರು ಸರಿಯಾದ ರೀತಿಯಲ್ಲಿ ಪ್ರಾಚ್ಯ ಇಲಾಖೆಯ ಉತ್ಕನ್ನಗಳು ನಡೆದರೆ ಮಾತ್ರ ಗೊತ್ತಾದೀತು.
ಹಾಲಿ ಆನಂದಪುರಂನ ಕೋಟೆಯ ಪಳಿಯುಳಿಕೆ ಪ್ರದೇಶದಿಂದ ಸುಮಾರು ಒಂದು ಕಿ.ಮಿ.ದೂರದಲ್ಲಿ ಕಾಂತಿ ಸಿದ್ಧೇಶ್ವರ ಎಂಬ ಪುರಾತನ ದೇವರ ಗುಡಿ ಇತ್ತು ಅದನ್ನು ಸ್ಥಳಿಯರು ಈಗ ಅಭಿವೃದ್ಧಿ ಮಾಡಿ ಹೊಸ ದೇವಾಲಯ ಕಟ್ಟಿದ್ದಾರೆ ಈ ಪ್ರದೇಶದಲ್ಲಿ ಹೊಸದಾಗಿ ಜನವಸತಿ ಪ್ರದೇಶ ನಿರ್ಮಾಣವಾಗಿ ಸಿದ್ದೇಶ್ವರ ಕಾಲೋನಿ ಎಂದು ನಾಮಕರಣ ಆಗಿ ಆನಂದಪುರಂನ ಭಾಗವಾಗಿ ಬೆಳೆದಿದೆ.
Comments
Post a Comment