#ತಮಿಳುನಾಡಿನ_ಮುರುಘನ್_ಪೋಡಿ_ಇಡ್ಲಿ_ರೆಸ್ಟೋರಾಂಟ್_ಸರಪಳಿ
ಮುಂದಿನ ದಿನದಲ್ಲಿ ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಗ್ರಾಹಕರಿಗೆ ಪರಿಶುದ್ಧ ತುಪ್ಪದಲ್ಲಿ ತಯಾರಿಸಿದ ಪೋಡಿ ಇಡ್ಲಿ ಸಿಗಲಿದೆ, ಇದಕ್ಕಾಗಿ ಪೋಡಿ ಇಡ್ಲಿ ತಯಾರಿಸುವ, ರುಚಿ ನೋಡುವ ಮತ್ತು ಕೆಲ ಬದಲಾವಣೆ ಅಳವಡಿಸುವ ಟ್ರಯಲ್ ಮನೇನಲ್ಲಿ ನಡೆದಿದೆ.
ಇವತ್ತು ಮನೇನಲ್ಲಿ ತಮಿಳುನಾಡಿನ ಪ್ರಖ್ಯಾತ ಪೋಡಿ ಇಡ್ಲಿ ತಯಾರಿಸಿ ಉಪಹಾರ ಆಯಿತು, ಮುಂದಿನ ದಿನದಲ್ಲಿ ನಮ್ಮ ನೌಕರರು ರುಚಿ ನೋಡಲಿದ್ದಾರೆ ನಂತರ ಆಯ್ದ ಕೆಲ ಗೆಳೆಯರು ನಂತರ ನಿತ್ಯ ಗ್ರಾಹಕರಿಗೆ ಲಭ್ಯ.
1991ರಲ್ಲಿ ತಮಿಳುನಾಡಿನ ಮದುರೈನಲ್ಲಿ ಮುರುಘಾ ಕಾಫಿ ನಿಲಯಮ್ ಎಂಬ ರೆಸ್ಟೋರೆಂಟ್ ಅನೇಕ ಬದಲಾವಣೆ ಆಗಿ ಈಗ ತಮಿಳುನಾಡಿನಾದ್ಯಂತ #ಮುರುಘನ್_ಪೋಡಿ_ಇಡ್ಲಿ ರೆಸ್ಟೋರಾಂಟ್ ಗಳ ಸರಪಳಿ ಮಾಡಿದ್ದಾರೆ ವಿದೇಶದ ಸಿಂಗಾಪುರದಲ್ಲೂ ಪೋಡಿ ಇಡ್ಲಿ ಸಿಗುತ್ತದೆ.
ಬೆಂಗಳೂರು ಸಮೀಪದ ಕೃಷ್ಣಗಿರಿಯಲ್ಲಿ ಇರುವ ಮುರುಘನ್ ಪೋಡಿ ಇಡ್ಲಿ ರೆಸ್ಟೋರಾಂಟ್ ಗೆ ಬೆಂಗಳೂರಿಗರು ಮುಗಿ ಬೀಳುತ್ತಾರೆ.
ಇವರ ರೆಸ್ಟೊರಾ೦ಟ್ ನಲ್ಲಿ ಪೋಡಿ ಇಡ್ಲಿ ತಯಾರಿಸಲು ಬಳಸುವ ಉದ್ದಿನ ಬೇಳೆ, ಮೆಣಸು, ಉಪ್ಪು ಮತ್ತು ಇಂಗು ಪುಡಿಯನ್ನು 200 ಗ್ರಾಂಗಳ ಸುಂದರ ಪ್ಯಾಕಿನಲ್ಲಿ ರೂ 120 ಕ್ಕೆ ಮಾರುತ್ತಾರೆ, ಇದನ್ನು ಮನೆಯಲ್ಲಿ ಶುದ್ಧ ತುಪ್ಪ ಕಾಯಿಸಿ ಅದರಲ್ಲಿ ಇಡ್ಲಿ ಅಥವ ದೋಸೆ ಹುರಿಯುತ್ತಾ ಈ ಪುಡಿ ಉದುರಿಸಬೇಕು, ಆಗ ಅದರ ಆರೋಮವೇ ವಿಶಿಷ್ಟ ಎಂತವರಿಗೂ ಬಾಯಿಯಲ್ಲಿ ನೀರು ತರಿಸುತ್ತದೆ, ಒಂದು ರೀತಿ ಉದ್ದಿನ ವಡೆಯಂತೆ ಗಮಗಮಿಸುವ ಇಡ್ಲಿ ಚಟ್ನಿ ಸಾಂಬಾರ್ ಜೊತೆ ಸವಿಯಬಹುದು.
ನಾನು ಮಲೆನಾಡು ಗಿಡ್ಡ ದನದ ಮನೆಯಲ್ಲೇ ತಯಾರಿಸಿದ ತುಪ್ಪದಲ್ಲಿ ಪೋಡಿ ಇಡ್ಲಿ ಮಾಡಿದ್ದರಿಂದ ಇದು ಮುರುಘನ್ ಬ್ರಾಂಡ್ ಗೆ ಹೆಚ್ಚಿನ ಹೊಳಪು ನೀಡಿತ್ತು.
Comments
Post a Comment