#ಸಸ್ಯಹಾರ_ಮಾಂಸಹಾರಕ್ಕೂ_ಬಳಕೆ.
#ಪಶ್ಚಿಮಘಟ್ಟದ_ಶಿವಮೊಗ್ಗ_ಚಿಕ್ಕಮಗಳೂರು_ಕೊಡುಗಿನಲ್ಲಿ_ಮಾತ್ರ_ಹೆಚ್ಚು.
ಉಂಡೆ ಕಡಬು ಪಶ್ಚಿಮ ಘಟ್ಟದಲ್ಲಿನ ಮಲೆನಾಡಿನ ಕೆಲ ಪ್ರದೇಶದಲ್ಲಿ ಈ ಪರಿ ಖ್ಯಾತಿ (ಕುಖ್ಯಾತಿ) ಪಡೆಯಲು ಕಾರಣ ಏನಿರಬಹುದು?
ತಾವು ಬೆಳೆಯುವ ಅಕ್ಕಿ ಕಾರಣವಾ? ಇಡ್ಲಿ, ದೊಸೆ ಮತ್ತು ರೊಟ್ಟಿಯಷ್ಟು ಶ್ರಮ ಇಲ್ಲವ೦ತನಾ? ಚಟ್ನಿ, ಸಾರು, ಮೀನು ಮತ್ತು ಮಾಂಸದ ಅಡುಗೆಗೆ ಒಳ್ಳೆ ಕಾಂಬಿನೇಷನ್ ಅಂತಾನಾ? ಹೀಗೆ ಹಲವು ಪ್ರಶ್ನೆಗಳಿದೆ.
ಇತ್ತೀಚಿನ #ಮಲ್ನಾಡು_ಕಾರ್ಟೂನ್ ನಲ್ಲಿ "ಅಮ್ಮಾ ... ಇವತ್ತೇನೆ ?" ಅನ್ನೋ ಉಂಡೆ ಕಡಬು ಪ್ರಸಂಗ ಬಾರೀ ವೈರಲ್ಲೂ ಆಗಿತ್ತು.
ಈಶಾನ್ಯ ಭಾರತ, ಗುಜರಾತ್ ಮತ್ತು ಪಂಜಾಬ್ ಅಡುಗೆಯಲ್ಲಿ ಅಕ್ಕಿಯ ಬೇರೆ ರೀತಿ ಕಡಬು ಇದೆ ಆದರೆ ನಮ್ಮ ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಶಿವಮೊಗ್ಗ - ಚಿಕ್ಕ ಮಗಳೂರು - ಕೊಡಗು ಭಾಗದ ಈ ಉಂಡೆ ಕಡಬು ಕಾಣಬರುವುದಿಲ್ಲ ಹಾಗಾಗಿ ಇದು ಈ ಭಾಗದ exclusive ತಿಂಡಿಯೇ ಸರಿ.
ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯ ಉಪಹಾರ ಅಕ್ಕಿ ಉಂಡೆ ಕಡಬು ಇದಕ್ಕೆ ನಂಜಿಕೊಳ್ಳುವ ವ್ಯಂಜನ ಮಾತ್ರ ಬದಲಾಗುತ್ತದಾರಿಂದ ಈ ಭಾಗದ ಮಕ್ಕಳು ಉಂಡೆ ಕಡಬು ಅಂದರೆ ಉರಿದು ಬೀಳುತ್ತಾರೆ, ಅಕ್ಕಿ ತುರಿ ಉಪ್ಪಿನೊಂದಿಗೆ ಬೇಯಿಸಿ ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟರೆ ಆಯಿತು ಅದಾಗೆ ಬೆಂದು ಉಂಡೆ ಕಡಬು ಆಗುವ ಸುಲಭ ಅಡಿಗೆಗೆ ಗೃಹಿಣಿಯರು ಅವಲಂಬಿಸಿರುವುದರಿಂದ ಬೇರೆ ಉಪಹಾರ ತಯಾರಿಸುವ ಶ್ರಮ ಅವರಿಗೆ ಇಷ್ಟ ಇರುವುದಿಲ್ಲ.
ಮಡಿಕೆರೆ, ಚಿಕ್ಕಮಗಳೂರು ಭಾಗದ ಹೊಂ ಸ್ಟೇ ಗೆ ಬರುವ ಪ್ರವಾಸಿಗಳಿಂದ ಈ ಮಲೆನಾಡ ಕ್ಯೂಸಿನ್ ಉಂಡೆ ಕಡಬು ಪಂದಿ ಕರಿ, ಉಂಡೆ ಕಡಬು ಚಿಕನ್, ಉಂಡೆ ಕಡಬು ಕಳಲೆ ಪಲ್ಯಕ್ಕೆ ಹೆಚ್ಚು ಬೇಡಿಕೆ ಉಂಟಂತೆ.
ಇದೊಂದು ರೀತಿ ಬ್ರೆಡ್ ರೀತಿ ಎಲ್ಲಾ ರೀತಿ ಆಹಾರಕ್ಕೂ ಹೊಂದುತ್ತದೆ.
Comments
Post a Comment