ನನ್ನ ಸಣ್ಣ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯಂಜನ ಬಿಡುಗಡೆಗೆ, ಇದರಲ್ಲಿನ ಹಾವುಗೊಲ್ಲರ ಕತ್ತೆ ಪುರಾಣದ ಕಥಾನಾಯಕನ ಬಾವ ಕೃಷ್ಣಪ್ಪ ಮತ್ತು ನನ್ನ ಪುನರ್ ಮಿಲನ ವೃತ್ತಾಂತ ಇಲ್ಲದೆ
#ಇದರಲ್ಲಿ_ಮೊದಲ_ಕಥೆ_ಹಾವುಗೊಲ್ಲರ_ಕತ್ತೆ_ಪುರಾಣ
#ಈ_ಕಥೆಯ_ಕಥಾನಾಯಕ_ವೆಂಕಟೇಶಿಯ_ಬಾವ_ಕೃಷ್ಣಪ್ಪ.
#ಹಾವುಗೊಲ್ಲ_ಕೃಷ್ಣಪ್ಪ_ಮತ್ತು_ನನ್ನ_ಪುನರ್_ಮಿಲನದ_ವೃತ್ತಾಂತ_ಕಳೆದವರ್ಷದ್ದು
ಸುಮಾರು ವರ್ಷದ ನಂತರ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಹಾವುಗೊಲ್ಲರ ಕ್ಯಾಂಪಿನ ಕೃಷ್ಣಪ್ಪ ಇವತ್ತು ಸಿಕ್ಕಿದ್ದು ಇಬ್ಬರಿಗೂ ಸಂತೋಷ ಆಯಿತು.
1990 ರಲ್ಲಿ ಇವರೆಲ್ಲರದ್ದು ಅಲೆಮಾರಿ ಜೀವನ, ಹೊಟ್ಟೆಪಾಡಿಗೆ ಹಾವು ಹಿಡಿಯುವುದು, ಹಾವು ಆಡಿಸಿ ಬಿಕ್ಷೆ ಬೇಡುವುದು ಇವರ ನಿತ್ಯ ಕಾಯಕ ಆಗಿತ್ತು.
ಒಂದೂರಿಂದ ಇನ್ನೊಂದು ಊರಿಗೆ ಇವರ ಕ್ಯಾಂಪ್ ಹೋಗಲು ಕತ್ತೆಗಳೇ ಇವರಿಗೆ ವಾಹನ (ಹೆಚ್ಚು ಕತ್ತೆ ಹೊಂದಿದವ ಶ್ರೀಮಂತ ಅಂತ ಇತ್ತು) ಇವರನ್ನೆಲ್ಲ ಕಾಗೋಡು ತಿಮ್ಮಪ್ಪ ಹೊಸನಗರ ತಾಲ್ಲೂಕಿನ ಹಾಲುಗುಡ್ಡೆ ಮತ್ತು ಸಾಗರ ತಾಲ್ಲೂಕಿನ ಶಿರವಂತೆಯಲ್ಲಿ ಜಾಗ ಮನೆ ನೀಡಿದ್ದರಿಂದ ಈಗ ಇವರ ಜೀವನ ಶೈಲಿ ಬದಲಾಗುತ್ತಿದೆ.
ಹಾವು ಹಿಡಿಯುವುದು ಇವರೆಲ್ಲ ಬಿಟ್ಟಿದ್ದಾರೆ (ಕೆಲವೇ ಕೆಲವರು ಮಾತ್ರ ಮುಂದುವರಿಸಿದ್ದಾರೆ) ಹಾವು ನೋಡಿದರೆ ಇವರ ಈಗಿನ ಕಾಲದ ಮಕ್ಕಳು ಹೆದರಿ ಓಡುತ್ತಾರೆ ಅಂತ ಕೃಷ್ಣಪ್ಪ ಹೇಳುತ್ತಿದ್ದ ಮತ್ತೆ ಈಗ ಇವರ ಕ್ಯಾಂಪಿನಲ್ಲಿ ನಾಗ ದೇವರ ಪ್ರತಿಷ್ಠಾಪನೆ ಮಾಡಿಸಿದ್ದಾರಂತೆ ತಲೆತಲಾಂತರದಿಂದ ನಾಗ ಶಾಪ ಕಳೆದು ಕೊಳ್ಳಲಿಕ್ಕಾಗಿ!?.
ಈ ಕೃಷ್ಣಪ್ಪ ಮತ್ತು ಇವನ ಬಾವನೆಂಟ ವೆಂಕಟೇಶ ನನಗೆ ಒತ್ತಾಯ ಮಾಡಿ ಒಂದು ಕತ್ತೆ ಮಾರಿದ್ದರು ಅದನ್ನ ನಮ್ಮ ಜಮೀನಿನಲ್ಲಿ ಸಾಕಲು ಕಳಿಸಿದ ದಿನವೆ ಅಲ್ಲಿನ ಉಸ್ತುವಾರ ತಂಗಚ್ಚನ್ ಕುಟುಂಬ ಕುಂಟು ನೆಪ ಹೇಳಿ ಕೆಲಸ ಬಿಟ್ಟು ಹೋಗಿದ್ದ, ಅವನಿಗೆ ಏಸು ಕ್ರಿಸ್ತ ಮತ್ತು ಕತ್ತೆ ಕಥೆ ಹೇಳಿದರೂ ಕೇಳಲಿಲ್ಲ ಕತ್ತೆ ಇರುವ ಜಾಗದಲ್ಲಿ ತಾನು ಇರಲು ಸಾಧ್ಯವೇ ಇಲ್ಲ ಅಂತ ನಾಪತ್ತೆ ಆದ (ಅಡ್ವಾನ್ಸ್ ಜಾಸ್ತಿ ತಗೊಂಡಿದ್ದೂ ಒಂದು ಕಾರಣ) ನಂತರ ಆ ಕತ್ತೆಗೆ ಕಷ್ಟ ಪಟ್ಟು ಗೆಳೆಯ ಹೆಬ್ಬೋಡಿ ರಾಮಸ್ವಾಮಿ ಮನೇಲಿ ಆಶ್ರಯ ನೀಡಿಸಿದ್ದೆ.
ಅಲ್ಲಿ೦ದಲೂ ನನ್ನ ಕತ್ತೆ ನಾಪತ್ತೆ ಆಗಿತ್ತು, ಒ0ದು ದಿನ ನಮ್ಮ ಊರಲ್ಲಿ ಪ್ರತಿಭಟನಾ ಮೆರವಣಿಗೆ ಇಟ್ಟುಕೊಂಡಾಗ ನನ್ನ ಕಳೆದು ಹೋಗಿದ್ದ ಕತ್ತೆ ಎಲ್ಲಿಗೋ ಹೋಗಿದ್ದು ಬಂತು ಅಂತ ಶಿಷ್ಯರು ಮತ್ತು ಅದನ್ನು ತಾತ್ಕಾಲಿಕವಾಗಿ ಸಾಕಿದ್ದ ಗೆಳೆಯ ರಾಮಸ್ವಾಮಿ ನನ್ನ ಮನೆ ಎದರು ತಂದು ಕಟ್ಟಿದ್ದರು.
ನನ್ನ ಮಗ ಚಿಕ್ಕವನಿದ್ದ ಅವನು ಇದು ನಮ್ಮ ಕತ್ತೆ ಅಲ್ಲ ಅಂತ ಅನುಮಾನ ಪಟ್ಟಿದ್ದಕ್ಕೆ ಸ್ವಲ್ಪ ಚಾಜ್೯ ಆಗಿದ್ದ ರಾಮಸ್ವಾಮಿ ಹಸುವಿನ ಕೆಚ್ಚಲು ಸವರುವಂತೆ ಕತ್ತೆ ಹೊಟ್ಟೆ ಅಡಿ ಸವರಿದಾಗ ನೆರೆದವರೆಲ್ಲ ಇದು ಅಣ್ಣನವರದ್ದೇ ಕತ್ತೆ ಬೇರೆ ಆಗಿದ್ದರೆ ರಾಮಸ್ವಾಮಿಗೆ ಲಾತಾ ಕೊಟ್ಟು ಹಲ್ಲು ಉದುರಿಸುತ್ತಿತ್ತು ಅಂದರು, ಅವತ್ತಿನ ಮೆರವಣಿಗೆ ಸಭೆ ನಂತರ ಕತ್ತೆ ರಾಮಸ್ವಾಮಿ ಮನೆಗೆ ಹೋಗಿತ್ತು.
ಒಂದೆರೆಡು ದಿನದಲ್ಲಿ ಈ ಕತ್ತೆಯ ಅಸಲಿ ಮಾಲಿಕ ಬಂದು "ಸ್ವಾಮಿ ನನ್ನ ಕತ್ತೆ ರಾಮಸ್ವಾಮಿ ಕಟ್ಟಿಹಾಕಿದ್ದಾನೆ " ಅಂತ ದೂರಿದಾಗಲೇ ನಾನು ಸಾಧ್ಯನೇ ಇಲ್ಲ ಅದು ನನ್ನ ಕತ್ತೆ ಅಂದೆ.." ಸ್ವಾಮಿ ನಿನ್ನ ಕತ್ತೇ ತಿರುಗಲು ಹೋಗಿದ್ದು ರಾಮ ಸ್ವಾಮಿ ಮನೇಗೆ ನಿನ್ನೆ ಬಂದಿದೆ" ಅಂದಾಗ ನಿಜಕ್ಕೂ ನನಗೆ ಗಾಭರಿ ಆಗಿದ್ದು ಅವತ್ತು ರಾಮಸ್ವಾಮಿ ಬೇರೆ ಕತ್ತೆ ಹೊಟ್ಟೆ ಸವರಿನೂ ಹಲ್ಲು ಮುರಿಸಿಕೊಂಡಿಲ್ಲ ಅಂತ ! ನಂತರ ಈ ಕತ್ತೆ ಕೃಷ್ಣಪ್ಪ ಮತ್ತು ಅವನ ಬಾವನೆಂಟನಿಗೆ ಸಾಕಲು ವಾಪಾಸ್ ಕೊಟ್ಟೆ, ನಂತರ ವರದಕ್ಷಿಣೆ ಆಗಿ ನನ್ನ ಕತ್ತೆ ವೆಂಕಟೇಶಿ ತನ್ನ ಹೊಸ ಅಳಿಯನಿಗೆ ಕೊಟ್ಟು ನನಗೆ ನಿಮ್ಮ ಕತ್ತೆ ಸತ್ತು ಹೋಯಿತು ಅಂತ ಕತೆ ಕಟ್ಟಿ ಹೇಳಿದ್ದರು.
ಏನಾದರೂ ಹಾವುಗೊಲ್ಲರದ್ದು ನನ್ನದು ಅವಿನಾಭಾವ ಸಂಬಂದ ಅವರ ಹತ್ತಾರು ಕುಟುಂಬದ ಗ್ರೂಪ್ ಪೋಟೋ ನನ್ನ ರೈಸ್ ಮಿಲ್ ನಲ್ಲಿ ತೆಗೆದದ್ದು, ಅವರ ಒಂದೇ ಕೂಲಿಂಗ್ ಗ್ಲಾಸ್ ಮತ್ತು ಅನ್ ಸ್ಯೆಜ್ ಕೋಟು ಪ್ರತಿ ಕುಟುಂಬದ ಪೋಟೋದಲ್ಲಿ ಯಜಮಾನ ಧರಿಸುವುದು ನಿಜಕ್ಕೂ ಕೌತುಕವೇ ಆಗಿತ್ತು.
ಈಗ ಪ್ರತಿ ವಷ೯ ಕಾಡು ಗೆಣುಸು ತಂದು ಕೊಡುತ್ತಾರೆ, ಎಲ್ಲಾ ಸೇರಿ ನಾನು ಬರೆದ ಹಾವುಗೊಲ್ಲರ ಕತ್ತೆ ಪುರಾಣ ಕಥೆಯ ಕಥಾನಾಯಕ ವೆಂಕಟೇಶಿ ಬಾವ ಕೃಷ್ಣಪ್ಪನ ಇವತ್ತಿನ ದಶ೯ನಕ್ಕೆ ನೂರು ರೂಪಾಯಿ ಭಕ್ಷೀಸು ಕೊಡುವಂತಾಯಿತು.
ಕೃಷ್ಣಪ್ಪನಿಗೆ ವಯಸ್ಸಾಗಿದೆ, ಅಪಘಾತದಲ್ಲಿ ಕಾಲು ಊನ ಆಗಿದೆ, ಹೆಂಡತಿ ಈತನ ಮಾತು ಕೇಳುತ್ತಿಲ್ಲ ದೂರದ ಕುಂದಾಪುರದಲ್ಲಿ ಬಿಕ್ಷೆ ಬೇಡಿ ಜೀವನ ಮಾಡುತ್ತಿರುವುದಾಗಿ ನೋವಿನಿಂದ ಹೇಳಿದ, ಮುಂದಿನ ವಾರದಲ್ಲಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೆ ಬರಬಹುದೆಂಬ ನಿರೀಕ್ಷೆ ಇದೆ.
ನಿಂತ ಇಬ್ಬರೂ ಅಭ್ಯಥಿ೯ಯಿಂದ ಹಣ, ಕೋಳಿ ಮಾಂಸ ಬ್ರಾಂಡಿ ಪಡೆದು ಇಬ್ಬರಿಗೂ ಇವರ ಕ್ಯಾಂಪಿನ ಓಟು ಹೇಗೆ ಪಾಲು ಮಾಡಿ ನೀಡಬೇಕೆಂಬ ಕ್ಯಾಂಪಿನ ನಿದಾ೯ರದ ಹಂಸ ಕ್ಷೀರ ನ್ಯಾಯ, ಅದರ ಹಿಂದೆ ಪಡೆದ ಹಣಕ್ಕೆ ಮೋಸ ಮಾಡಬಾರದೆಂಬ ಕಾಳಜಿಯನ್ನ ವಿವರಿಸಿದ ವಿಡಿಯೋ ಇಲ್ಲಿದೆ ನೋಡಿ.
ಸುಮಾರು 25 ವರ್ಷದ ಹಿಂದೆ ಇವರೆಲ್ಲ ಸದೃಡರಾಗಿದ್ದಾಗ ನಡೆದ ಘಟನೆಗಳನ್ನೆ ಕಥೆಯಾಗಿ ಬರೆದಿದ್ದೇನೆ, "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ " #ಬಿಲಾಲಿ_ಬಿಲ್ಲಿ_ಅಭ್ಯಂಜನ ಕಥಾ ಸಂಕಲದ ಹೆಸರು.
ಕಥಾ ಸಂಕಲನ ಖ್ಯಾತ ಜಲ ತಜ್ಞ, ಪರಿಸರ ಪತ್ರಕರ್ತರಾದ ಶ್ರೀ ಕಳವೆ ಶಿವಾನಂದ ಬಿಡುಗಡೆ ಮಾಡಲಿದ್ದಾರೆ, ಪತ್ರಕರ್ತ ಮಿತ್ರರು ಈ ಕಥಾ ಸಂಕಲನದ ವಿನ್ಯಾಸ ಮತ್ತು ಮುದ್ರಣ ಮಾಡಿದ ಶ್ರೀ ಶೃಂಗೇಶ್, ಪ್ರಜಾವಾಣಿಯ ಹಿರಿಯ ವರದಿಗಾರರಾಗಿ ಈಗ ಉದ್ದಿಮೆಯ ಮಾಲಿಕರಾದ ಕಿರಿಯ ಗೆಳೆಯ ಶ್ರೀ ಪ್ರಕಾಶ್ ಕುಗ್ವೆ ಸಾಕ್ಷಿಯಾಗಲಿದ್ದಾರೆ.
ಅತ್ಯಂತ ಸಂತೋಷದ ವಿಚಾರ ಈ ಕಥಾ ಸಂಕಲನಕ್ಕಿಂತ ಮೊದಲು ಓದಿ ಮನ್ನುಡಿ ಬರೆದವರು ಖ್ಯಾತ ವಿಮರ್ಷಕ ಅಂಕಣಕಾರ ಶ್ರೀ ಅರವಿಂದ ಚೊಕ್ಕಾಡಿ, ರಾಜ್ಯದ ಹಿರಿಯ ಪತ್ರಕರ್ತ ಶ್ರೀ ಆರ್.ಟಿ. ವಿಠಲಮೂರ್ತಿ ಮತ್ತು ಶ್ರೀ ಶೃಂಗೇಶ್.
ಈ ಕಥಾ ಸಂಕಲನ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ ಹಾಗಾದಲ್ಲಿ ಮುಂದಿನ ವರ್ಷ ಇನ್ನೊಂದು ಪುಸ್ತಕ ಓದುಗರಿಗೆ ನೀಡಲು ಹುರುಪು ಆಗದೇ ಇರುವುದಿಲ್ಲ.
Comments
Post a Comment