ಮೊದಲ ಸಿಂಥೆಟಿಕ್ ಸೋಪು ಮಾರುಕಟ್ಟೆಗೆ ಬಂದು 88 ವರ್ಷ ಆಯಿತು. ಅದಕ್ಕೂ ಮೊದಲು ಸವಳು ಗುಡ್ಡದ ಮಣ್ಣು ಸ್ನಾನಕ್ಕೆ ಬಳಸುತ್ತಿದ್ದರು.
#ಶಿವಮೊಗ್ಗ_ಸಮೀಪದ_ನ್ಯಾಮತಿ_ತೀರ್ಥರಾಮೇಶ್ವರ_ಗುಡ್ಡದ_ಸವಳು_ಶತಮಾನಗಳ_ಕಾಲ_ಈ_ಭಾಗದ_ಸೋಪು_ಆಗಿತ್ತು.
#ಸಾವಯವ_ಮಣ್ಣಿನ_ಸೋಪು
#197Oರ_ನಂತರ_ಹುಟ್ಟಿದವರಿಗೆ_ಗೊತ್ತೇ_ಇಲ್ಲದ_ಸೋಪಿನ_ಪ್ರಪಂಚ
#ಮೊದಲ_ಸಿಂಥೆಟಿಕ್_ಸೋಪು_1933ರಲ್ಲಿ_ಪ್ರಾರ೦ಭ.
#ಶಿಲಾಯುಗದಲ್ಲೂ_ಜನ_ಸ್ನಾನಕ್ಕೆ_ಬಳಸುತ್ತಿದ್ದ_ಕ್ಷಾರಯುಕ್ತ_ಮಣ್ಣು.
ಈಗೆಲ್ಲ ಅಮೆಜಾನ್ ನಿಂದ ಡೆಡ್ ಸೀ (ಮೃತ ಸಮುದ್ರದ) ಮಣ್ಣಿನ ಸೋಪು ನಮ್ಮ ಹಳ್ಳಿಗಳಲ್ಲೂ ಖರೀದಿಸುತ್ತಿದ್ದಾರೆ ಕಾರಣ ಚಮ೯ ಕಾಂತಿ ಹೆಚ್ಚಿಸುತ್ತದೆ, ಮೃದು ಮಾಡುತ್ತದೆ, ಚರ್ಮದ ಟಾಕ್ಸಿನ್ ಕೊಳೆ ತೆಗೆಯುತ್ತದೆ, ಪೇಶಿಯಲ್ ವಾಷ್ ಮಾಡುವುದರಿಂದ ಮುಖದ ಚರ್ಮ ಹೈಡ್ರೇಟ್ ಮಾಡುತ್ತದೆ ಅಂತ.
ಇದು ಸತ್ಯವೂ ಹೌದು 1933ರಲ್ಲಿ Procto and Gamble ಕಂಪನಿ ಸಿಂಥೆಟಿಕ್ ಸೋಪು ಮಾರುಕಟ್ಟೆಗೆ ತರುವ ಮುನ್ನ ಜನ ಆಯಾ ಪ್ರದೇಶದಲ್ಲಿ ಸಿಗುವ ಕ್ಷಾರದ ಮಣ್ಣು ಸೋಪಿನಂತೆ ಬಳಸುತ್ತಿದ್ದರು.
ಇದರ ಬಳಕೆ ಕ್ರಿಸ್ತ ಪೂರ್ವ 2800 ರಲ್ಲಿ ಇದ್ದಿತ್ತು ಎಂಬ ಸಂಶೋದನೆಯಲ್ಲಿ ಗೊತ್ತಾಗಿದೆ ಅಂತೆ.
ಶೀಗೆ ಪುಡಿ, ಅಂಟುವಾಳಗಳ ಬಳಕೆ ಕೂಡ ಈಗ ಕಡಿಮೆ
ಒಂದು ಕಾಲದಲ್ಲಿ ಅಂದರೆ ಸುಮಾರು 1965ರ ತನಕ ನಮ್ಮ ಭಾಗದಲ್ಲಿ ಹತ್ತಾರು ಕತ್ತೆ ಮೇಲೆ ಎತ್ತಿನ ಗಾಡಿಗಳಲ್ಲಿ ಸವಳು ಮಣ್ಣಿನ ಮೂಟೆಗಳನ್ನ ತುಂಬಿಕೊಂಡು "ಸವಳು ಬೇಕಾ ಸವಳು" ಅಂತ ಸೋಪಿನ ಮಣ್ಣು ಮಾರಾಟಕ್ಕೆ ಬರುತ್ತಿದ್ದರೆಂದರೆ 50 ವಷ೯ದಲ್ಲಿ ಎಂತಹ ಬದಲಾವಣೆ ನೋಡಿ ಈಗ ಸೋಪು ಶಾಂಪುವಿನ ಕಾಲ.
ಒಂದು ಸೇರು ಭತ್ತ ಅಥವ ರಾಗಿಗೆ 3 ಸೇರು ಸವಳು ನೀಡುತ್ತಿದ್ದರಂತೆ ಅದನ್ನ ಸೋರುವ ಮಣ್ಣಿನ ಮಡಕೆಗಳಲ್ಲಿ (ಉಪಯೋಗಕ್ಕೆ ಬರದ ಮಡಕೆ) ಶೇಖರಿಸಿ ಇಡುತ್ತಿದ್ದರು, ಇದನ್ನ ಸ್ನಾನಕ್ಕೆ ಬಟ್ಟೆ ತೊಳೆಯಲು ಉಪಯೋಗಿಸುತ್ತಿದ್ದರು ಇದರಲ್ಲಿ ನೊರೆ ಬರುತ್ತಿತ್ತು ಮತ್ತು ಮಣ್ಣಿನಲ್ಲಿನ ಸೂಕ್ಷ್ಮ ಮರಳು ಮನುಷ್ಯನ ಚಮ೯ದ ಮೇಲ್ಪದರದ ಕೊಳೆ ಬ್ರಷ್ನಂತೆ ತೆಗೆಯುತ್ತಿತ್ತು.
ಮಂಡ್ಯದಲ್ಲೂ, ಚಿಕ್ಕಮಗಳೂರಿನಲ್ಲೂ ಈ ರೀತಿಯ ಮಣ್ಣಿನ ಗುಡ್ಡದಿಂದ ಸವಳು ಮಣ್ಣು ಮಾರಾಟ ಬಳಕೆ ಇತ್ತಂತೆ.
ನಂತರ ಕಸ್ತೂರಿ, 50I ಬಾರ್ ಸೋಪು, ನಂದಿ, ವಿನಾಯಕ ಹೀಗೆ ಮುಂದುವರಿದು ವಾಷಿOಗ್ ಮೆಷಿನ್ ಜಗತ್ತು ಸೇರಿ ಸಪ್೯ ಅಕ್ಸೆಲ್ ವಾಷಿ೦ಗ್ ಪೌಡರ್ ವರೆಗೆ ಬಂದಿದ್ದೇವೆ, ವಾಷಿಂಗ್ ಪೌಡರ್ ನಿಮಾ೯ ಸೇರಿ.
ಅದೇ ರೀತಿ ಸ್ನಾನದ ಸೋಪುಗಳು ಲೈಪ್ ಬಾಯ್ ನಿಂದ ಮೈಸೂರು ಸ್ಯಾ೦ಡೆಲ್ ವರೆಗೆ ಬದಲಾಗಿದ್ದೇವೆ, ಹಮಾಮ್, ಲಕ್ಸ್ ಇವೆಲ್ಲವೂ ಇದೆ.
ಈಗ 100% ಸಾವಯವ ಸೋಪು ಅಂತ ಜ್ವಾಲಮುಖಿ ಮಣ್ಣಿನ ಸೋಪು, ಡೆಡ್ ಸೀ ಮಡ್ ಸೋಪು ಅ೦ತೆಲ್ಲ ಶ್ರೀಮಂತ ವಗ೯ದಲ್ಲಿ ಪ್ರಚಲಿತವಾಗಿದೆ.
ಕೇವಲ 50 ವಷ೯ದ ಹಿಂದೆ ಬಳಕೆಯಲ್ಲಿದ್ದ ನಮ್ಮ ಜಿಲ್ಲೆಯ ಸವಳು ಸೋಪಿನ ಮಣ್ಣು ಆದುನೀಕರಣದಲ್ಲಿ ಕಳೆದು ಹೋದರು ಈಗ ಅದು ದೂರದ ಜ್ವಾಲಾಮುಖಿ ಮಣ್ಣಿನ ಅಥವ ಡೆಡ್ ಸೀ ಮಣ್ಣಿನ ಸೋಪಿನ ರೂಪದಲ್ಲಿ ದುಬಾರಿ ಬೆಲೆಯಲ್ಲಿ ಪ್ರತ್ಯಕ್ಷ ಆಗಿದೆ.
ಕಾಲ ಚಕ್ರ ಸದಾ ತಿರುಗುತ್ತಿದೆ ನೋಡಿ.
Comments
Post a Comment