Skip to main content

1980 ರಲ್ಲಿ ಭಾರತದಲ್ಲಿ ಗೋಚರವಾದ ಪೂರ್ಣ ಸೂರ್ಯ ಗ್ರಹಣ ಮರೆಯಲಾರದ ನೆನಪು

#1980ರ_ಪೆಬ್ರವರಿ_16ರಲ್ಲಿ_ನಡೆದ_ಪೂಣ೯_ಸೂಯ೯_ಗ್ರಹಣ 
#ನಾನು_ಜೀವಮಾನ_ಮರೆಯುವುದಿಲ್ಲ
#ಕಾರಣ_ಬರಿಗಣ್ಣಲ್ಲಿ_ಸೂಯ೯_ಗ್ರಹಣ_ನೋಡಿ_ನನ್ನ_ಬಲಗಣ್ಣ_ಅಕ್ಷಿಪಟಲ_ಹರಿದು_ಹೋಗಿತ್ತು.

#ಎರೆಡು_ವರ್ಷದ_ಹಿಂದೆ_26_ಡಿಸೆಂಬರ್_2019ರ_ಸೂರ್ಯ_ಗ್ರಹಣದಲ್ಲಿ_ನೆನಪಾಯಿತು.

  ಮೊದಲ ಚಿತ್ರ ಪತ್ರಕತ೯ ತಲವಾಟದ ರಾಘವೇ೦ದ್ರ ಶಮ೯ರು(26- ಡಿಸೆಂಬರ್‌-2019)ತೆಗೆದ ಆತ್ಯುತ್ತಮ ಚಿತ್ರ, ಇನ್ನೊಂದು ಗ್ರಹಣ ಕಾಲದಲ್ಲಿ ಆನಂದಪುರದ ಬಸ್ ನಿಲ್ದಾಣದ ಎಲ್ಲಾ ಅಂಗಡಿ ಮಳಿಗೆ ಬಂದ್ ಆಗಿರುವುದು 
  ಸೂಯ೯ ಗ್ರಹಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಯ ಹೆಚ್ಚಾಗುತ್ತಿದೆ, ಟಿವಿ, ಮೊಬೈಲ್ಗಳ ಈ ಮುಂದುವರಿದ ಆದುನಿಕ ಭಾರತದಲ್ಲಿ ವಿಜ್ಞಾನದ ಹೆಚ್ಚಿನ ತಿಳುವಳಿಕೆ ಉ೦ಟಾಗುತ್ತದೆ ಮತ್ತು ಮೂಡನಂಬಿಕೆಗಳು ನಶಿಸುತ್ತದೆ ಎಂಬ ಭರವಸೆ ಸುಳ್ಳಾಗಿದೆ.
   ಟಿವಿಗಳ ಚಾನಲ್ ಗಳ ಜೋತಿಷಿಗಳು ಹುಟ್ಟು ಹಾಕುವ ವಿವಿದ ಆಚರಣೆಯ ಹೆಸರಲ್ಲಿ ಬೀತಿ ಜನ ಸಾಮಾನ್ಯರ ಜೀವನ ಕ್ರಮದಲ್ಲಿ ಅನೇಕ ಮೌಡ್ಯಕ್ಕೆ ಕಾರಣವಾಗಿದೆ.
   1980ರ ಪೆಬ್ರುವರಿ 16ರOದು ನಡೆದ ಖಗ್ರಾಸ ಸೂಯ೯ಗ್ರಹಣದ ದಿನ ನೆನಪಿಗೆ ಬಂತು ಅವತ್ತು ಶನಿವಾರ ಆದರೂ ಶಾಲಾ ಕಾಲೇಜುಗಳಿಗೆ ರಜಾ ನೀಡಿದ್ದರು, ದಕ್ಷಿಣ ಭಾರತದಲ್ಲಿ ಸಂಪೂಣ೯ ಗ್ರಹಣ ಗೋಚರ ಆಗುವುದರಿಂದ ದೇಶ ವಿದೇಶದ ಖಗೋಳ ವಿಜ್ಞಾನಿಗಳು ಬಂದಿದ್ದರು ಅವತ್ತಿನ ನಿತ್ಯ ಪತ್ರಿಕೆ ಮತ್ತು ರೇಡಿಯೋಗಳಲ್ಲಿ ಸೂಯ೯ ಗ್ರಹಣದ ಬಗ್ಗೆ ವೈಜ್ಞಾನಿಕ ಸಲಹೆ ಸಂವಾದಗಳು ಸುದ್ದಿ ಆಗುತ್ತಿತ್ತು.
  ಬರಿಗಣ್ಣಲ್ಲಿ ನೋಡಿದರೆ ಅನಾಹುತ ಎಂಬ ಎಚ್ಚರಿಕೆ ಇತ್ತು ಅವತ್ತು ಮಧ್ಯಾಹ್ನ ಸುಮಾರು 12 ಗಂಟೆಯಿ೦ದ ಸ೦ಜೆ 5ರ ತನಕ ನಡೆದ ಗ್ರಹಣ ಮಧ್ಯಾಹ್ನ 2.23ರಿಂದ 2.30 ಸಂಪೂಣ೯ ಕತ್ತಲಾಗಿದ್ದು, ಪಕ್ಷಿಗಳು ರಾತ್ರಿ ಆಯಿತೆಂದು ಗೂಡು ಸೇರಲು ತೊಡಗಿದ್ದು, ಗೋವುಗಳು ಮಧ್ಯಾಹ್ನವೇ ಕೊಟ್ಟಿಗೆ ಸೇರಿದ್ದು ಅದೇ ಸಂದಭ೯ದಲ್ಲಿ ಅಲೆಗಳ ಉಪಾದಿಯಲ್ಲಿ ನೆರಳು ಭೂಮಿಯ ಮೇಲೆ ವೇಗವಾಗಿ ಸಾಗಿದ್ದು ಎಲ್ಲಾ 15 -16 ವಷ೯ ಪ್ರಾಯದ ನಮಗೆ ಕುತೂಹಲ ಮತ್ತು ರೋಮಾಂಚನ ಘಟನೆ ಅದಕ್ಕಾಗಿ 6 ತಿಂಗಳಿಂದ ಸುದ್ದಿ ಮಾಧ್ಯಮಗಳಿ೦ದ ಈ ಅಪೂವ೯ ಘಟನೆಗೆ ಕಾದಿದ್ದೆವು.
  ನಮ್ಮ ತಂದೆ ನಮ್ಮ ಕಣ್ಣುಗಳ ರಕ್ಷಣೆ ಬಗ್ಗೆ   ವಿಶೇಷ ಕಾಳಜಿವಹಿಸಿದ್ದರು x ರೇ ಶೀಟುಗಳ ಅನೇಕ ಹೊದಿಕೆ ಮಾಡಿದ್ದರ ಮೂಲಕ ಸೂಯ೯ ಗ್ರಹಣಕ್ಕೆ ಅನುಮತಿ ನೀಡಿದ್ದರು ಆದರೂ ನಾನು ಎಡಗಣ್ಣು ಕೈಯಲ್ಲಿ ಮುಚ್ಚಿ ಬರಿ ಬಲಗಣ್ಣಿ೦ದ ಸೂಯ೯ಗ್ರಹಣ ನೋಡಿದ್ದೆ, ನೋಡಬಾರದು ಮಾಡಬಾರದು ಎಂಬುದನ್ನ ಮಕ್ಕಳಾಟಿಕೆ ಆಗಿ ಉಲ್ಲಂಘನೆ ಮಾಡಿದ್ದೆ ಏನೂ ಆಗಿಲ್ಲವಲ್ಲ ಅಂತ ಸಂಭ್ರಮ ಪಟ್ಟಿದ್ದೆ 10 ವಷ೯ದ ನಂತರ ದೃಷ್ಟಿ ದೊಷ ಪರೀಕ್ಷೆ ಮಾಡಿಸಿಕೊಂಡಾಗ ಕಣ್ಣಿನ ವೈದ್ಯರು ಅಕ್ಷಿಪಟಲ ಹರಿದಿದೆ ಬರಿಗಣ್ಣಲ್ಲಿ ಸೂಯ೯ ಗ್ರಹಣ ನೋಡಿದೀರಾ ಅಂದಾಗ 1980ರ ಖಗ್ರಾಸ ಸೂಯ೯ ಗ್ರಹಣ, ನಮ್ಮ ತಂದೆಯ ನೆನಪು ಎಲ್ಲಾ ಆಯಿತು.
  ಅವತ್ತು ಜನರಲ್ಲಿ ಇವತ್ತಿನ ಭಯ ಇರಲಿಲ್ಲ ಅವತ್ತಿನ ಸುದ್ದಿ ಮಾಧ್ಯಮಗಳಾದ ಪತ್ರಿಕೆಗಳು ರೇಡಿಯೋಗಳು ಜನರಿಗೆ ಬೇಕಾದ ಮಾಹಿತಿ ವೈಜ್ಞಾನಿಕ ದೃಷ್ಟಿಕೊನದಲ್ಲಿ ನೀಡಿದ್ದು ಒಂದು ಕಾರಣ ಅವತ್ತು ಖಗೋಳ ವಿಜ್ಞಾನಿಗಳ ಸಂಶೋದನ ವರದಿ ಮತ್ತು ಸಂದಶ೯ನಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು ಆದರೆ ಇವತ್ತಿನ ಸುದ್ದಿ ಮಾಧ್ಯಮ ಟೀವಿ ಚಾನಲ್ ಗಳಿ೦ದ ಏನೇನು ಮಾಹಿತಿ ಪಡೆದವೆಂದು ತಮಗೆಲ್ಲ ತಿಳಿದಿದೆ ಇವರಿಗೆಲ್ಲ ಖಗೋಳ ವಿಜ್ಞಾನಿಗಳು ಸಿಗಲಿಲ್ಲ ಸಿಕ್ಕವರೆಲ್ಲ ಅರೆ ಬರೆ ಕಲಿತ ಜೊತಿಷಿಗಳು ಸುದ್ದಿ ಪ್ರಸಾರಕ್ಕೆ ಹುಲುಸಾದ ಟೀವಿ ಮಾಧ್ಯಮ!

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...