Skip to main content

ನನ್ನ ಎರಡನೆ ಪುಸ್ತಕ 29 ಸಣ್ಣ ಕಥಾ ಸಂಕಲನ ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯ೦ಜನ ಇವತ್ತು ಬಿಡುಗಡೆ ಆಯಿತು

#ನನ್ನ_ಎರಡನೆ_ಪುಸ್ತಕ_ಇವತ್ತು_ಬಿಡುಗಡೆ_ಆಯಿತು

#ಭಟ್ಟರ_ಬೊಂಡಾದ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಎಂಬ_ಕಥಾ_ಸಂಕಲನ

#ನಾಡಿನ_ಪ್ರಸಿದ್ಧ_ಜಲತಜ್ಞ_ಪರಿಸರವಾದಿ_ಶಿವಾನಂದಕಳವೆಯವರಿಂದ_ಬಿಡುಗಡೆ

#ಖ್ಯಾತ_ಪತ್ರಕರ್ತ_ಶಂಗೇಶ್_ಪ್ರಜಾವಾಣಿ_ಬ್ಯೂರೋ_ಚೀಫ್_ಆಗಿದ್ದ_ಪ್ರಕಾಶ್_ಕುಗ್ವೆ_ಅತಿಥಿಗಳು

  ಇವತ್ತು ಸಂಜೆ ನಮ್ಮ ಹೊಂಬುಜ ಲಾಡ್ಜ್ ಹಿಂಬಾಗದ ವಿಕ್ಟೋರಿಯಾ ಕಾಟೇಜ್ ಆವರಣದಲ್ಲಿ ನನ್ನ 29 ಸಣ್ಣ ಕಥೆಗಳ ಕಥಾ ಸಂಕಲನ "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ" #ಬಿಲಾಲಿ_ಬಿಲ್ಲಿ_ಅಭ್ಯಂಜನ ನಾಡಿನ ಪ್ರಸಿದ್ಧ ಜಲ ತಜ್ಞರು, ಪತ್ರಕರ್ತರು, ಪರಿಸರ ವಿಜ್ಞಾನಿಗಳು, ಬರಹಗಾರರೂ ಆದ ಶಿವಾನಂದ ಕಳವೆ ಬಿಡುಗಡೆ ಮಾಡಿದರು.
   ಖ್ಯಾತ ಪತ್ರಕರ್ತರೂ ಮತ್ತು ನನ್ನ ಕಳೆದ ವರ್ಷ ಬಿಡುಗಡೆ ಆಗಿ ಅನೇಕ ದಾಖಲೆ ಮಾಡಿರುವ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರರಾಣಿ_ಚಂಪಕ ಮತ್ತು ಈ ಕಥಾ ಸಂಕಲನದ ಮುದ್ರಕರೂ ಆಗಿರುವ ಒಂದು ಕಾಲದ ಹಾಯ್ ಬೆಂಗಳೂರು ವಾರಪತ್ರಿಕೆಯ ರೋವಿಂಗ್ ರಿಪೋರ್ಟರ್ ಎಂದು ರವಿ ಬೆಳೆಗೆರೆಯಿಂದ ಬಿರುದು ಪಡೆದಿದ್ದ ಹಾಲಿ ಶಿವಮೊಗ್ಗ ಜಿಲ್ಲಾ ಪತ್ರಿಕೆ ಜನ ಹೋರಾಟದ ಸಂಪಾದಕರಾದ ಶೃಂಗೇಶ್ ಮತ್ತು ಪ್ರಜಾವಾಣಿ ದಿನಪತ್ರಿಕೆಯ ಬ್ಯೂರೋ ಚೀಪ್ ಆಗಿದ್ದ ಖ್ಯಾತ ಪತ್ರಕರ್ತರು ಈಗ ಸಾಗರದಲ್ಲಿ ಸ್ಯಾನಿಟರಿ ವೇರ್ ಉದ್ಯಮದಲ್ಲಿ ತೊಡಗಿರುವ ಸಾಗರದವರೇ ಆದ ಪ್ರಕಾಶ್ ಕುಗ್ವೆ ನನ್ನ ಅತಿಥಿಗಳಾಗಿದ್ದರು.
  ಸುಂದರ ಸಂಜೆಯ ಈ ಚಿಕ್ಕ ಚೊಕ್ಕ ಕಾರ್ಯಕ್ರಮದಲ್ಲಿ ಕಲಾವಿದ ನಾಗರಾಜ್ ತೊಂಬ್ರಿಯವರು ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕರ ದುರಂತ ಪ್ರೇಮ ಕಥೆಯ ಸುಶ್ರಾವ್ಯ ಲಾವಣಿ ಸಭೆಗೆ ವಿಶೇಷ ಕಳೆ ತಂದಿತ್ತು.
  ರಾಜ್ಯ ಪ್ರಶಸ್ತಿ ವಿಜೇತ ಜನಪದ ಕಲಾವಿದ ಶಿಕ್ಷಕ ರೇವಣಪ್ಪ ಮತ್ತು ಅಂತರಾಷ್ಟ್ರೀಯ ಡೊಳ್ಳು ಕಲಾವಿದರಾದ ಮಾದಾಪುರ ತಂಡದವರು ಉಪಸ್ಥಿತರಿದ್ದರು.
  ಸ್ಥಳಿಯ ಪತ್ರಕರ್ತರಾದ ಜಗನ್ನಾಥ, ಬಿ.ಡಿ. ರವಿ, ಮಲ್ಲಿಕಾರ್ಜುನ್, ಎನ್.ಡಿ.ಹೆಗ್ಗಡೆ, ಚಂದ್ರಶೇಖರ್ ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ನನ್ನ ಸಹೋದರ ಕೆ.ನಾಗರಾಜ್ ನಿರೂಪಣೆ ಮಾಡಿದರು.
  ಪ್ರಖ್ಯಾತ ಅಂಕಣಗಾರರು, ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ, ರಾಜ್ಯದ ಹಿರಿಯ ಪತ್ರಕರ್ತರು, ರಾಜಕಾರಣದ ವಿಶ್ಲೇಷಕರೂ ಆಗಿರುವ ಆರ್.ಟಿ. ವಿಠಲಮೂರ್ತೀ ಮತ್ತು ಶೃಂಗೇಶರ ಮುನ್ನಡಿಯೂ ಈ ಪುಸ್ತಕ
   ಶಿವಮೊಗ್ಗದಲ್ಲಿ #ಡಯಾನ_ಬುಕ್_ಹೌಸ್ ನಲ್ಲಿ ಲಭ್ಯವಿದೆ.
 ಸಾಗರದಲ್ಲಿ ನಗರಸಭೆ ಎದುರಿನ #ರವೀ೦ದ್ರ_ಪುಸ್ತಕಾಲಯದಲ್ಲಿ ಮತ್ತು ಮಾರಿಕಾಂಬಾ ದೇವಾಲಯ ರಸ್ತೆಯ #ಶ್ರೀ_ಟ್ರೇಡರ್ಸ್ ನಲ್ಲಿ ಈ ಪುಸ್ತಕ ಲಭ್ಯವಿದೆ.
   ಆನಂದಪುರಂ ನಲ್ಲಿ ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಪುಸ್ತಕ ಲಭ್ಯವಿದೆ.
  ನನ್ನ ಸೆಲ್ ಫೋನ್ ನಂಬರ್ 9449253788 ಗೆ ವಿಳಾಸ, ಪಿನ್ ಕೋಡ್ ಮತ್ತು ಫೋನ್ ನಂಬರ್ ವಾಟ್ಸಪ್‌ ಮಾಡಿದವರಿಗೆ ಅಂಚೆ ಮೂಲಕ ಪುಸ್ತಕ ತಲುಪಿಸಲಾಗುವುದು.
  ಕಾರ್ಯಕ್ರಮ ಚೆಂದಗೊಳಿಸಿ ಕೊಟ್ಟ ಎಲ್ಲ ಗೆಳೆಯರಿಗೂ ವಿಶೇಷ ಕೃತಜ್ಞತೆ ಅರ್ಪಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...