Blog number 1065. ಕೇರಳದ ಆಗಿನ ಮುಖ್ಯಮಂತ್ರಿ ಕೆ.ಕರುಣಾಕರನ್ ರವರು ಗುರುವಾಯನೂರು ಶ್ರೀಕೃಷ್ಣ ದೇವಾಲಯಕ್ಕೆ ಆನೆ ನೀಡುವ ಹರಕೆಯ ಶೀಘ್ರ ಈಡೇರಿಸಲು ಅವರ ವಿದಾನ ಸಭಾ ಕ್ಷೇತ್ರದ ಪ್ರಮುಖ ಪಣಿಕರ್ ಗೆ ಶಿವಮೊಗ್ಗದ ಸಕ್ರೆಬೈಲು ಆನೆ ಖರೀದಿಸಲು ನಾನು ನೆರವಾದ 1995ರ ಘಟನೆ ನೆನಪಾಯಿತು.
#ಆನೆ_ಯಾರಿಗೆ_ಇಷ್ಟ_ಇಲ್ಲ_ಹೇಳಿ #ಆನೆ_ಎಂದರೆ_ಎಲ್ಲರಿಗೂ_ಪ್ರೀತಿ_ಪಾತ್ರ_ಪ್ರಾಣಿ #ಕನಸಲ್ಲಿ_ಯಾವಾಗಲೂ_ಆನೆಗಳೇ_ಕಾಣುವ_ನನಗೆ_ಆನೆ_ಸಾಕುವ_ಆಸೆ_ಬಾಲ್ಯದಿಂದ #ಅಮರ_ಸುಳ್ಯ_ಹೋರಾಟದ_ಮನೆತನದ_ಅರೆಬಾಸೆಯ_ಲೇಖಕ_ಕೃಷಿಕ_ತೇಜ್_ಕುಮಾರರು_ಆನೆ_ಕೊಡುತ್ತಾರಂತೆ😀 #ಹೀಗಾಗಿ_ಇದು_ಅನೇ_ವೃತ್ತಾಂತದ_ಪೋಸ್ಟ್ #ಆನೆ_ಜೊತೆಗೆ_ಮಾಹುತರನ್ನು_ಸಾಕಬೇಕು. ಕೇರಳದ ಮುಖ್ಯಮಂತ್ರಿ ಕೆ.ಕರುಣಾಕರನ್ ಗುರುವಾಯೂರು ಕೃಷ್ಣ ದೇವಾಲಯಕ್ಕೆ ಆನೆ ನೀಡುವ ಹರಕೆ ತೀರಿಸಲು ರಾಜ್ಯ ಸರಕಾರಕ್ಕೆ ಆನೆಗಾಗಿ ಅರ್ಜಿ ಸಲ್ಲಿಸಿದ್ದರು, ಅಂತಿಮವಾಗಿ ನಮ್ಮ ಶಿವಮೊಗ್ಗ ಜಿಲ್ಲೆಯ ಸಕ್ಕರೆಬೈಲು ಆನೆ ಸಫಾರಿಯಿಂದ 65 ಸಾವಿರ ಡಿಡಿ ಪಾವತಿಸಿಕೊಂಡು ಆನೆ ನೀಡಲು ಆಗಿನ ಜನತಾ ದಳದ ಸರ್ಕಾರ ಆದೇಶಿಸಿತ್ತು. ಆದರೆ ಕರುಣಾಕರನ್ ಕ್ಷೇತ್ರ ಮಾಲಾದ ಚುನಾವಣಾ ಉಸ್ತುವಾರಿ ಪಣಿಕರ್ ಶಿವಮೊಗ್ಗಕ್ಕೆ DD ಜೊತೆ ಬಂದು ಎಷ್ಟೇ ಪ್ರಯತ್ನಿಸಿದರೂ ಆನೆ ವಿತರಣೆ ಕೆಲಸ ವಿಳಂಭ ಆಗುತ್ತಿತ್ತು ಕಾರಣ ಕರ್ನಾಟಕ ರಾಜ್ಯದಲ್ಲಿ ಜನತಾ ದಳ ಸರ್ಕಾರ ಕೇರಳ ಕಾಂಗ್ರೇಸ್ ಗೆ ಸಹಕರಿಸುತ್ತಿರಲಿಲ್ಲವಂತೆ. ಆಗ ಶಿವಮೊಗ್ಗದ ಜಿಲ್ಲಾ ಪಂಚಾಯತ್ ನಲ್ಲಿ ನನ್ನದೇ ಆದ ಹೋರಾಟಗಳಿಂದ ನಾನು ಪ್ರಸಿದ್ದಿ ಪಡೆದಿದ್ದರಿಂದ ಪಣಿಕರ್ ನನ್ನ ಸಹಾಯ ಕೇಳಿದರು, ಆಗಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಬಲ್ಕೀಷ್ ಬಾನು ಅವರು ಜನತಾ ದಳದವರು ಮತ್ತು ...