Skip to main content

Posts

Showing posts from May, 2024

Blog number 2129. ಕುಣುಬಿ ಜನಾಂಗದವರ ಸ್ವಾಮಿನಿಷ್ಟೆಗೆ ಸಾಕ್ಷಿ ಆಗಿರುವ ಈ ಇತಿಹಾಸದ ಘಟನೆ ರಾಣಿ ಚೆನ್ನಬೈರಾದೇವಿ ಬಂದನ ವಿರೋದಿಸಿ ವಿಪಲ ಹೋರಾಟ ಮಾಡಿ ಕೆಳದಿ ಅರಸರಿಗೆ ಶಾಪ ನೀಡಿದ ಕುಣುಬಿ ಕೆಂಪಿಯ ಸಾಹಸ.

https://www.facebook.com/share/v/FLMRyznZVUCVrmfy/?mibextid=O563ZM #ನೀವು_ನಿರಂತರವಾಗಿ_ಈ_49_ಭಾಗಗಳಲ್ಲಿ_ಬಂದಿರುವ #ಕಾಳುಮೆಣಸಿನ_ರಾಣಿ_ಗೇರುಸೊಪ್ಪೆಯ_ಸಾಮ್ರಾಜ್ಞಿ #ಶರಾವತಿ_ನದಿದಂಡೆಯ_ಜೈನರಾಣಿ_ಚೆನ್ನಬೈರಾದೇವಿ_ಇತಿಹಾಸದ #ಕಥೆ_ಇತಿಹಾಸ_ಸಂಶೋದಕ_ಲೋಕರಾಜ_ಜೈನರು_ಹೇಳುತ್ತಿರುವುದನ್ನ #ನಾಡಿನ_ಪ್ರಖ್ಯಾತ_ಡಿಜಿಟಲ್_ಮಾಧ್ಯಮದಲ್ಲಿ_ನೋಡುತ್ತಿದ್ದರೆ #ನೀವೂ_ಕಣ್ಣೀರಾಗದೇ_ಇರಲು_ಸಾಧ್ಯವೇ_ಇಲ್ಲ #ಕುಣುಬಿ_ಜನಾಂಗದ_ಕೆಂಪಿ_ಕೆಳದಿ_ಅರಸರಿಗೆ_ಹಾಕಿದ_ಶಾಪ #ಅಂತಿಮ_ಕ್ಷಣದವರೆಗೆ_ಕವಣೆ_ಕಲ್ಲಿಂದ_ದಾಳಿ_ಮಾಡಿದ_ಕುಣುಬಿ_ಜನಾಂಗದ_ಸೈನಿಕರು #ಕುಣುಬಿ_ಜನಾಂಗದ_ಸ್ವಾಮಿ_ನಿಷ್ಟೆಗೆ_ಪ್ರತೀಕವಾದ_ಇತಿಹಾಸದ_ದಾಖಲೆ #ಯಮ_ಸಲ್ಲೇಖನ_ವೃತ_ಪಾಲಿಸಿ_ಇಕ್ಕೇರಿ_ಕೋಟೆಯಲ್ಲಿ_ಜಿನೈಕ್ಯಳಾಗುವ_ರಾಣಿಚೆನ್ನಬೈರಾದೇವಿ.    ನಾನಂತೂ ಲೋಕರಾಜ ಜೈನರೇ ಕಣ್ಣು ಒರೆಸಿಕೊಂಡಾಗಲೇ ಕಣ್ಣೀರಾದೆ.. ನನಗೆ ಸಿನಿಮಾ ನಾಟಕಗಳಲ್ಲಿ ದುಃಖದ ಸನ್ನಿವೇಶಗಳು ನನ್ನ ಕರ್ಚೀಪು ಒದ್ದೆ ಆಗದೇ ಉಳಿಯುವುದಿಲ್ಲ.   ಶರಾವತಿ ನದಿ ದಂಡೆಯ ಏಕೈಕ ಸಾಮ್ರಾಜ್ಯವಾದ ಗೇರುಸೊಪ್ಪೆ ಸಾಮ್ರಾಜ್ಯ 54 ವರ್ಷವಾಳಿದ ರಾಣಿ ಚೆನ್ನಬೈರಾದೇವಿಯನ್ನು ವರದಾನದಿ ದಂಡೆಯ ಕೆಳದಿ ರಾಜವಂಶದ 43 ವರ್ಷ ಆಳ್ವಿಕೆ ಮಾಡುವ ಸಾಗರ ಪಟ್ಟಣ (ಸದಾಶಿವ ಸಾಗರ) ನಿರ್ಮಿಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ಗೇರುಸೊಪ್ಪೆಯಲ್ಲಿ ಬಂದಿಸಿ ಇಕ್ಕೇರಿ ಕೋಟೆಯ ಜೈಲಿಗೆ ಕರೆತರುವಾಗ ಕುಣುಬಿ ಜನಾಂಗದ ಕೆಂಪಿಯ ವಿಪಲ ಹೋರಾಟ

Blog number 2128. ಭಾಗ -6.ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋದಕ ಸರಣಿ ಲೇಖನಗಳು. ಕದಂಬರ ಇತಿಹಾಸ ಸಂಶೋಧನೆ ಮತ್ತು ಸಂರಕ್ಷಣೆಗೆ ಪಣ ತೊಟ್ಟಿರುವ ಶಿರಾಳಕೊಪ್ಪದ ಕನ್ನಡ ಸಂಶೋದನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನ (ರಿ) ಅಧ್ಯಕ್ಷ ಎಂ.ನವೀನ್ ಕುಮಾರ್ ಸಾಧನೆಗಳು

#ಸ್ವಂತ_ಹಣ_ಖರ್ಚು_ಮಾಡಿ_ಕದಂಬ_ಇತಿಹಾಸ_ಪ್ರಚಾರ_ಮಾಡುವ #ಈ_ಅಪ್ರತಿಮ_ಯುವಕನ_ಸಾಧನೆ_ನೋಡಿ #ತಾಳಗುಂದ_ಉತ್ಸವದ_ನಂತರ_ಇವರು_ದೂರದರ್ಶನದಲ್ಲಿ #ಕದಂಬ_ಅಕ್ಷರ_ವೀರ_ಕಾರ್ಯಕ್ರಮ_ನಡೆಸಿದರು #ಈ_ಕಾಯ೯ಕ್ರಮದಲ್ಲಿ_20_ಜಿಲ್ಲೆಗಳ_ಎರೆಡು_ಸಾವಿರಕ್ಕೂ_ಹೆಚ್ಚು_ವಿದ್ಯಾರ್ಥಿಗಳು_ಭಾಗಿ_ಆಗಿದ್ದರು #ಲಕ್ಷಾಂತರ_ನಗದು_ಬಹುಮಾನದ_ಸ್ಪರ್ದೆ_ಶಿಕಾರಿಪುರದಲ್ಲೇ_ದೂರದರ್ಶನ_ಚಿತ್ರಿಕರಣ #ಹೀಗೆ_ಸಾಗಿದೆ_ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರಾದ #ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಕುಮಾರರ_ಕದಂಬ_ಸಾಮ್ರಾಜ್ಯದ #ಅಭಿಮಾನ.   ಕನ್ನಡದ ಮೊದಲ ರಾಜರಾದ ಕದಂಬ ಸಾಮ್ರಾಜ್ಯದ ಮಯೂರ ಶರ್ಮ ಹವ್ಯಕ ಬ್ರಾಹ್ಮಣ ಇದೆಲ್ಲವೂ ಶಾಸನಗಳಲ್ಲಿ ದಾಖಲಾಗಿದೆ ಇವರು ಸ್ಥಾಪಿಸಿದ ತಾಳಗುಂದದ ವಿಶ್ವವಿದ್ಯಾಲಯ ನಳಂದ ವಿಶ್ವವಿದ್ಯಾಲಯದಂತೆ ಪ್ರಸಿದ್ದಿ ಪಡೆದಿತ್ತು ಮತ್ತು ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ ಅಲ್ಲ ತಾಳಗುಂದದ ಕದಂಬರ ಶಾಸನವೇ ಕನ್ನಡದ ಮೊದಲ ಶಾಸನ ಎಂಬುದು ಪುರಾತತ್ವ ಇಲಾಖೆಯ ಉತ್ಕನದಲ್ಲಿ ಸಾಬೀತಾಗಿದೆ.   ಈ ತಾಳಗುಂದದ ಕದಂಬ ಶಾಸನಗಳ ಸಂರಕ್ಷಣೆಗಾಗಿ ಸಂಶೋದನೆಗಾಗಿ ಅತಿ ಹೆಚ್ಚು ಶ್ರಮಿಸುತ್ತಿರುವ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್ ಮತ್ತು ಅವರ ಗೆಳೆಯರ ಬಳಗವನ್ನು ಅಭಿನಂದಿಸುತ್ತೇನೆ.   ಇತ್ತೀಚಿನ ದಿನಗಳಲ್ಲಿ ಇತಿಹಾಸ ಸಂಶೋಧನೆಗಾಗಿ ಸರ್ಕಾರದ ಅನುದಾನ ಪಡೆದು ನಿಷ್ಪ್ರಯೋಜಕರಾಗಿರುವ ಅನೇಕ ಇತಿಹಾಸಕಾರರ

Blog number 2127. ಅಕ್ಕಿ ಹಪ್ಪಳ ಪಶ್ಚಿಮ ಘಟ್ಟದ ಮಲೆನಾಡಿನ ಸಿಗ್ನೇಚರ್ ರೆಸಿಪಿ ಆದರೆ ಇದನ್ನು ಜನಪ್ರಿಯಗೊಳಿಸುವ ಕೆಲಸ ಆಗೇ ಇಲ್ಲ.

#ಊಟಕ್ಕೆರೆಡು_ಹಪ್ಪಳ_ಆದರೆ_ಊಟವೇ_ಹಪ್ಪಳ_ಆಗುವುದು #ಮಲೆನಾಡಿನ_ಅಕ್ಕಿ_ಹಪ್ಪಳ_ಮಾತ್ರ #ಒಂದು_ಕಿಲೋ_ಅಕ್ಕಿಯಲ್ಲಿ_ಸಣ್ಣ_ಗಾತ್ರದ_ನೂರು_ಹಪ್ಪಳ #ಅಕ್ಕಿ_ಅದಕ್ಕೆ_ರುಚಿಗೆ_ತಕ್ಕ_ಉಪ್ಪು_ಮಸಾಲೆ_ಸೇರಿಸಿ_ರುಬ್ಬಿ_ಹುದುಗು_ಬರೆಸಿ #ಹಬೆಯಲ್ಲಿ_ಇಡ್ಲಿಯಂತೆ_ತಟ್ಟೆಯಲ್ಲಿ_ಬೇಯಿಸಿ #ಬಿಸಿಲಲ್ಲಿ_ಒಣಗಿಸಿ_ಗಾಳಿಯಾಡದ_ಡಬ್ಬದಲ್ಲಿ_ತುಂಬಿಟ್ಟರೆ #ಮುಂಗಾರಿನ_ಮಳೆ_ಗಾಳಿ_ತರುವ_ಮುಸಂಜೆಯ_ಚಳಿ_ಜೊತೆಗೆ #ಬಿಸಿ_ಬಿಸಿ_ಚಹಾ_ಕಾಫಿಯ_ಜೊತೆ_ಕುರಂ_ಕರಂ_ಎಂದು #ಬಾಯಲ್ಲಿ_ಕರಗುವ_ಅಕ್ಕಿ_ಹಪ್ಪಳದ_ಜೋಡಿ. https://youtube.com/shorts/FW0tuWawgL4?feature=shared   ನನ್ನ ಹಿಂದಿನ ಲೇಖನದಲ್ಲಿ ಅಕ್ಕಿ ಹಪ್ಪಳದ ತಯಾರಿಯ ವಿಡಿಯೋ ಸಹಿತ ಲೇಖನ ಬರೆದಿದ್ದೆ ಇವತ್ತಿನದ್ದು ಕೊಬ್ಬರಿ ಎಣ್ಣೆಯಲ್ಲಿ ಕರಿದ ಅಕ್ಕಿ ಹಪ್ಪಳ ನಾನು ಮತ್ತು ನನ್ನ ಪ್ರೀತಿಯ ಶಂಭೂರಾಮ ಪಾಲುದಾರಿಕೆಯಲ್ಲಿ ಗುಳುಂ ಮಾಡಿದ್ದು.   ಊಟಕ್ಕೆ ಉಪ್ಪಿನ ಕಾಯಿಯಂತೆ ಹಪ್ಪಳ ಕೂಡ ಒಂದೋ ಎರೆಡೋ ತಿಂದರೆ ಹೆಚ್ಚು ಆದರೆ ಈ ಅಕ್ಕಿ ಹಪ್ಪಳದ ವಿಶೇಷ ತಟ್ಟೆ ತುಂಬಾ ಅಕ್ಕಿ ಹಪ್ಪಳ ಕರಿದದ್ದು ತಿಂದರೂ ಹೊಟ್ಟೆ ತುಂಬುವುದಿಲ್ಲ.   ಎಷ್ಟು ತಿಂದರೂ ಹೊಟ್ಟೆಗೆ ತಟ್ಟೆಗೆ ಬಾದಕವಿಲ್ಲ ಈ ಹಪ್ಪಳ ಮಲೆನಾಡಿನ ಪೂರ್ವಿಕರ ಮನೆಯಲ್ಲಿ ಮುಂಗಾರಿಗೆ ಮುನ್ನ ಉಪ್ಪಿನಕಾಯಿ ಜೊತೆ ಜೊತೆಗೆ ತಯಾರಿಸುವ ಪರಂಪರೆಯ ಕಾಯಕವಾಗಿತ್ತು.    ಬಿಸಿಲಲ್ಲಿ ಒಣಗಿಸಿದ ಗರಿ-ಗರಿ ಹಪ್ಪಳ ಗಾಳಿ ಆಡದ ಡಬ್ಬಿಯಲ್ಲಿ ತುಂಬಿ ಇ

Blog number 2126. ಕೆರೆಗೆ ಹಾರವಾದ ಕಲ್ಲನಳ್ಳಿ ಮಲ್ಲನಗೌಡನ ಕಿರಿ ಸೊಸೆ ಭಾಗಿರಥಿ

#ಕೆರೆಗೆ_ಹಾರ_ಭಾಗಿರಥಿ_ಕಲ್ಲನಹಳ್ಳಿ_ಮಲ್ಲನಗೌಡನ_ಕಿರಿ_ಸೊಸೆ #ಗಂಡ_ಮಾದೇವ_ದಂಡಿನಲ್ಲಿರುತ್ತಾನೆ #ನೀರಿಲ್ಲದ_ಕೆರೆಗೆ_ಭಾಗಿರಥಿ_ಹಾರವಾಗುತ್ತಾಳೆ #ಸತಿಭಕ್ತಿಯಿಂದ_ತನ್ನ_ಜೀವ_ತ್ಯಾಗ_ಮಾಡುವ_ಪತಿ #ಇಂತಹ_ಅನೇಕ_ಕೆರೆಗೆ_ಹಾರದ_ಜನಪದ_ಕಥೆಗಳಿದೆ #ಶಿಕಾರಿಪುರದ_ಸಮೀಪದ_ಮದಗದ_ಕೆರೆಗೂ_ಇಂತಹ_ಕಥೆ_ಇದೆ. #ಮಾಯದಂತ_ಮಳೆ_ಬಂತಮ್ಮ_ಎಂಬ_ಪ್ರಸಿದ್ಧ_ಹಾಡು_ಜನ_ಮಾನಸದಲ್ಲಿದೆ.    ಕೆರೆಗೆ ಹಾರ ಪದ್ಯ ಶಾಲಾ ದಿನದಿಂದಲೂ ಇವತ್ತಿನ ಈ ಕ್ಷಣದಲ್ಲೂ ನೆನೆಪಿಸಿಕೊಂಡರೆ ಕಣ್ಣು ನೀರಾಗದೇ ಇರುವುದಿಲ್ಲ.   ಕಲ್ಲನಹಳ್ಳಿ ಮಲ್ಲನಗೌಡ ಊರ ಜನರಿಗಾಗಿ ಕಟ್ಟಿಸಿದ ಕೆರೆ ನೀರು ತುಂಬುವುದಿಲ್ಲ ಇದಕ್ಕೆ ಪರಿಹಾರ ಮಲ್ಲನಗೌಡನ ಹಿರಿ ಸೊಸೆ ಕೆರೆಗೆ ಹಾರವಾಗಿ ನೀಡಿದರೆ (ಬಲಿ) ಕೆರೆ ತುಂಬುವುದಾಗಿ ಜ್ಯೋತಿಷಿಗಳು ತಿಳಿಸುತ್ತಾರೆ ಆದರೆ ಹಿರಿಸೊಸೆ ಹಾರವಾಗಿ ನೀಡಲು ಕುಟುಂಬದ ಹಿರಿತನ ಅಡ್ಡಿಯಾಗುತ್ತದೆ ಅದರಂತೆ ಕಲ್ಲನಹಳ್ಳಿ ಮಲ್ಲನಗೌಡನ ಕಿರಿ ಸೊಸೆ ಭಾಗೀರಥಿ ಕೆರೆಗೆ ಹಾರವಾಗುತ್ತಾಳೆ.   ಕೆರೆ ತುಂಬುತ್ತದೆ ದೂರದಲ್ಲಿ ಸೈನ್ಯದಲ್ಲಿದ್ದ ಭಾಗೀರಥಿ ಪತಿ ಮಾದೇವನಿಗೆ ದುಃಸ್ವಪ್ನಗಳು ಬೀಳುತ್ತದೆ ಇದರಿಂದ ಆತಂಕಗೊಂಡ ಮಾದೇವ ಗಡಿಬಿಡಿಯಲ್ಲಿ ಜೀನು ಹಾಕದ ಬತ್ತಲೆ ಕುದುರೆ ಏರಿ ಬರುತ್ತಾನೆ ಅಲ್ಲಿ ಮಾದೇವನ ತಾಯಿ ನಿನ್ನ ಪತ್ನಿ ಭಾಗಿರಥಿ ತವರಿಗೆ ಹೋಗಿದಾಳೆಂದು ತಿಳಿಸಿದಾಗ, ಭಾಗಿರಥಿಯ ತವರಿಗೆ ಹೋಗುತ್ತಾನೆ ಅಲ್ಲಿ ಮಾದೇವನ ಅತ್ತೆ ಅವಳು ಗೆಳತಿ ಮನೆಗೆ ಹೋಗಿದ್ದಾಳೆನ್ನು

Blog number 2125. ಹುಲಿಕಲ್ ನಟರಾಜರ ಜೀವನದ ದಾರಿ ಸಂದರ್ಶನ ಭಾಗ -5 ರಲ್ಲಿ,

#ಭಾಗ_5. #ಹುಲಿಕಲ್_ನಟರಾಜ್_ನಡೆದು_ಬಂದ_ಜೀವನದ_ದಾರಿ #ಹೂವಿನ_ಹಾಸಿಗೆ_ಆಗಿರಲಿಲ್ಲ #ತಪ್ಪು_ಗ್ರಹಿಕೆಯಿಂದ_ಅವರನ್ನು_ಟೀಕ್ಷಿಸುವವರು #ಈ_ಸಂದರ್ಶನ_ನೋಡಲೇ_ಬೇಕು #ಕಾವಿ_ಬಟ್ಟೆ_ದರಿಸಿದ_ಮಾತ್ರಕ್ಕೆ_ಸ್ವಾಮಿ_ಆಗುತ್ತಾರಾ? https://youtu.be/jeO56ZXkNYg?feature=shared (ಮುಂದುವರೆದ ಸಂದರ್ಶನದ ಭಾಗ - 6 ನಾಳೆ ಬರಲಿದೆ)

Blog number 2024.ಸಹ್ಯಾದ್ರಿ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾಗಿರುವ ಸಿರಾಜ್ ಅಹಮದ್ ಅವರ ನನ್ನ ಮೊದಲ ಮುಖತಃ ಭೇಟಿಗೆ ಕಾರಣವಾದ ಸಾಮಾಜಿಕ ಜಾಲತಾಣ

#ಸಾಮಾಜಿಕ_ಜಾಲತಾಣದ_ಶಕ್ತಿ_ಮಹಿಮೆ #ಎಲ್ಲಿಂದೆಲ್ಲಿಗೂ_ಸಮಾನ_ಮನಸ್ಕರನ್ನ_ಬೆಸೆಯುತ್ತದೆ #ಎನ್ನುವುದಕ್ಕೆ_ಉದಾಹರಣೆ_ಈ_ಗೌರವಾನ್ವಿತರ_ಬೇಟಿ   ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿರುವ ಸಹ್ಯಾದ್ರಿ ಕಾಲೇಜು ರಾಜ್ಯದಲ್ಲಿನ ಅನೇಕ ಪ್ರಸಿದ್ದ ಸಾಹಿತಿಗಳ-ಪತ್ರಕರ್ತರ_ರಾಜಕಾರಣಿಗಳ_ಹೋರಾಟಗಾರರನ್ನ ಸೃಷ್ಟಿಸಿದ ನಮ್ಮ ರಾಜ್ಯದ JNU (ದೆಹಲಿ JNU ಪ್ರಸಿದ್ದಿ ಪಡೆದಂತೆ) ಇದ್ದಂತೆ.   ಲಂಕೇಶರು ಇಲ್ಲಿ ಉಪನ್ಯಾಸಕರಾಗಿದ್ದರು, ನಿಸಾರ್ ಅಹಮದ್ ಅವರ ಪ್ರಖ್ಯಾತ ನಿತ್ಯೋತ್ಸವ ಅವರ ಮನದಲ್ಲಿ ಅರಳಿದ್ದು ಅವರು ಇಲ್ಲಿ ಉಪನ್ಯಾಸಕರಾಗಿದ್ದಾಗಲೇ...ಹೀಗೇ ಸಾವಿರಾರು ಸಾದಕರು ಇಲ್ಲಿ ರೂಪುಗೊಂಡಿದ್ದಾರೆ. ಇಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿರುವ ಸಿರಾಜ್ ಅಹಮದ್ ಮತ್ತು ನನ್ನ ಗೆಳೆತನ ಸಾಮಾಜಿಕ ಜಾಲತಾಣದಿಂದಲೇ, ನನ್ನ ಎಲ್ಲಾ ಲೇಖನ ಓದುವ ಪ್ರತಿಕ್ರಿಯಿಸಿ ಬೆನ್ನುತಟ್ಟುವ ದೊಡ್ಡ ತನ ಹೊಂದಿದವರು ಅವರನ್ನ ಮುಖತಃ ಭೇಟಿ ಆಗಿರಲಿಲ್ಲ.    ಮೊನ್ನೆ ಬುಧವಾರ ನನ್ನ ಕಛೇರಿಯಿಂದ ರಾತ್ರಿ 9ಕ್ಕೆ ಮನೆಗೆ ಹೋಗಲು ತಯಾರಾಗುತ್ತಿರುವಾಗ ಸಿರಾಜ್ ಆಹಮದರ ಪೋನ್ ಬಂತು ನೋಡಿದರೆ ಆಫೀಸಿನ ಬಾಗಿಲಿನಲ್ಲಿ ಹಸನ್ಮುಖರಾಗಿ ನಿಂತಿದ್ದಾರೆ ಅವರ ಜೊತೆ ಶ್ರೀಮತಿ ಲತಾ, ನಿವೃತ್ತ ಹೆಲ್ತ್ ಎಜುಕೇಷನ್ ಆಫೀಸರ್ ನಿಸಾರ್ ಆಹಮದ್ ಮತ್ತು ಅವರ ಪುತ್ರಿ ನಮ್ಮ ಊರಿನ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾಕ್ಟರ್ ಪ್ರಿಯಾಂಕ ಬಂದಿದ್ದರು.    ಇವರ

Blog number 2123. ನನ್ನ ಅತಿಥಿ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಆಳ್ವಿಕೆಯ ಇತಿಹಾಸ ಸಂಪೂರ್ಣವಾಗಿ ಅರಳು ಹುರಿದಂತೆ ಹೇಳುವ ಲೋಕರಾಜ ಜೈನ್ ಎಂಬ ಸಾಗರ ತಾಲೂಕಿನ ಇತಿಹಾಸ ಸಂಶೋದಕರು

#ನಮ್ಮ_ಸಾಗರ_ತಾಲ್ಲೂಕಿನ_ಇತಿಹಾಸ_ಸಂಶೋದಕರಾದ #ಲೋಕರಾಜ್_ಜೈನ್_ಕುಟುಂಬ_ನನ್ನ_ಅತಿಥಿಗಳು #ರಾಣಿ_ಚೆನ್ನಬೈರಾದೇವಿ_ಇತಿಹಾಸದ_ಬಗ್ಗೆ_ಇವರ_ಓದು_ಬರಹ_ಅದ್ಬುತ #ಡಿಜಿಟಲ್_ಮಾಧ್ಯಮದಲ್ಲಿ_ಚೆನ್ನಬೈರಾದೇವಿಯ_ಇತಿಹಾಸ_ಇವರು_ಪ್ರಸ್ತುತ_ಪಡಿಸುತ್ತಿದ್ದಾರೆ. #ವಟ್ಟಕ್ಕಿ_ಮನೆತನ_ಗೇರುಸೊಪ್ಪೆಯ_ರಾಜಮನೆತನದ_ನಿಷ್ಟಾವಂತ_ಪ್ರತಿಷ್ಟಿತ_ಮನೆತನ ವಟ್ಟಕ್ಕಿ_ಮನೆತನ_ಗೇರುಸೊಪ್ಪೆಯ_ರಾಜಮನೆತನದ_ನಿಷ್ಟಾವಂತ_ಪ್ರತಿಷ್ಟಿತ_ಮನೆತನ #ಲೋಕರಾಜರ_ತಾಯಿ_ವಟ್ಟಕ್ಕಿ_ಮನೆತನಕ್ಕೆ_ಸೇರಿದರೆ #ಇವರ_ತಂದೆ_ಗೇರುಸೊಪ್ಪೆಯ_ಶ್ರೀಮಂತ_ವ್ಯಾಪಾರಿ_ಯೋಜನಾಶ್ರೇಷ್ಠಿ_ಪತ್ನಿ #ಗುಚ್ಚಕ್ಕಿ_ರಾಮಕ್ಕನ_ಮನೆತನಕ್ಕೆ_ಸೇರಿದವರು #ಈ_ಮನೆತನದ_ಕುಡಿ_ಲೋಕರಾಜ_ಜೈನ್    ನಾಡಿನ ಪ್ರಖ್ಯಾತ #ಡಿಜಿಟಲ್_ಮಾಧ್ಯಮ_ಯೂಟ್ಯೂಬ್ ನಲ್ಲಿ #ಗೇರುಸೊಪ್ಪೆಯ ರಾಜವಂಶಸ್ಥೆ ಕಾಳುಮೆಣಸಿನ ರಾಣಿ ಎಂಬ ಬಿರುದಾಂಕಿತ #ಚೆನ್ನಬೈರಾದೇವಿ ಇತಿಹಾಸ ನೂರಾರು ಕಂತುಗಳಲ್ಲಿ ಪ್ರಸಾರವಾಗುತ್ತಿದೆ ಇದರಲ್ಲಿ ಜೈನ ರಾಣಿಯ ಇತಿಹಾಸ ಪ್ರಸ್ತುತ ಪಡಿಸುತ್ತಿರುವುದು  ಲೋಕರಾಜ ಜೈನ್.   ಇವರ ತಾಯಿ ವಟ್ಟಕ್ಕಿ ಮನೆತನಕ್ಕೆ ಸೇರಿದರೆ ಇವರ ತಂದೆ ಗೇರುಸೊಪ್ಪೆಯ ಶ್ರೀಮಂತ ವ್ಯಾಪಾರಿ ಯೋಜನಾಶ್ರೇಷ್ಠಿ ಪತ್ನಿ ಗುಚ್ಚಕ್ಕಿ ರಾಮಕ್ಕನ ಮನೆತನಕ್ಕೆ ಸೇರಿದವರು.    ಯೋಜನಾ ಶ್ರೇಷ್ಟಿ ಗೇರುಸೊಪ್ಪೆಯ ರಾಜವಂಶಸ್ಥರ ಸಂಬಂದ ಹೊಂದಿದವರು ಈ ಮನೆತನದ ಕುಡಿ ಲೋಕರಾಜಜೈನ್ ಅಂದರೆ ರಾಣಿ ಚೆನ್ನಬೈರಾದೇವಿ ವಂಶಸ್ಥರು.    ಇವರ

Blog number 2122. ಹೊಸನಗರ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ಜೊತೆ ಮಾತುಕಥೆ ಭಾಗ-3. ಪೋಲಿಸ್ ಠಾಣೆ ಎದರು ನಡೆಸಿದ ಕೋಳಿ ಪಡೆಯ ಮುಂದುವರಿದ ಭಾಗ

#ಭಾಗ_2. #ಹೊಸನಗರ_ಮಾಜಿ_ಶಾಸಕರ_ಜೊತೆ_ಮಾತುಕಥೆ #ಮುಂದುವರಿದ_ಭಾಗ_ಹೊಸನಗರ_ಪೋಲಿಸ್_ಠಾಣೆ #ಎದರು_ಕೋಳಿ_ಅಂಕ_ನಡೆಸಿದ_ಶಾಸಕರ_ಪ್ರತಿಭಟನೆ #ಜಲ್ಲಿಕಟ್ಟು_ಟಗರುಕಾಳುಗ_ಹೋರಿಬೆದರಿಸುವುದು_ಕಂಬಳ_ಮುಂತಾದ #ಜನಪದ_ಕ್ರೀಡೆಗೆ_ಅವಕಾಶ_ಇದೆ_ಕೋಳಿಕಾಳಗಕ್ಕೆ_ಯಾಕಿಲ್ಲ. #ಬ್ರಿಟಿಷರ_ಆಡಳಿತ_ಮಾಡಿದ್ದ_ನಿಷೇದ_ಸ್ವಾತಂತ್ರ್ಯ_ನಂತರವೂ_ಮುಂದುವರೆದಿದೆ. https://youtu.be/xRq9MvHPQ9o?feature=shared (ನಾಳೆ ಮುಂದುವರಿದ ಮಾತುಕತೆ ಭಾಗ-3 ಸಾಕ್ಷರತಾ ಅಂದೋಲನದ ಯಶಸ್ವಿನಲ್ಲಿ ಸ್ವಾಮಿ ರಾವ್)

Blog number 2121. ಮಲೆನಾಡಿನ ಅಕ್ಕಿ ಹಪ್ಪಳ ತಯಾರಿಸುವ ವಿಧಾನ ಬೇರಾವ ಹಪ್ಪಳ ತಯಾರಿಗಿಂತ ಬಿನ್ನವಾದದ್ದು ಮತ್ತು ರುಚಿ - ಘಮ- ಕರಂ ಕುರುಂ ಕೂಡ.

#ಅಕ್ಕಿಯಿಂದ_ತಯಾರಿಸುವ_ಹಪ್ಪಳ #ಈ_ರೀತಿ_ಬೇರಾವ_ದಾನ್ಯದಿಂದಲೂ_ಹಪ್ಪಳ_ತಯಾರಿಸುವುದಿಲ್ಲ #ಅಕ್ಕಿ_ಹಪ್ಪಳದ_ರುಚಿ_ಘಮ_ವಿಶಿಷ್ಟ #ಅಕ್ಕಿ_ಹಪ್ಪಳ_ಎಣ್ಣೆಯಲ್ಲಿ_ಹುರಿದು_ಅಥವ_ರೋಸ್ಟ್_ಆಗಿ_ಸುಟ್ಟು_ತಿನ್ನಬಹುದು #ಬಾಯಲ್ಲಿಟ್ಟರೆ_ಕರ0_ಕುರುಂ_ಅಂತ_ನಾಲಿಗೆ_ಮೇಲೆ_ಕರಗಿ_ಹೋಗುವ_ಅಕ್ಕಿ_ಹಪ್ಪಳ. https://youtu.be/E8VfANXgLE8?feature=shared  ಪಶ್ಚಿಮ ಘಟ್ಟಗಳ ಪ್ರದೇಶವಾದ ಮಲೆನಾಡು ಬತ್ತ ಬೆಳೆಯುವ ಮತ್ತು ಅಕ್ಕಿ ಹೆಚ್ಚು ಬಳಸುವ ಪ್ರದೇಶ.   ಇಲ್ಲಿ ಅಕ್ಕಿ ರೊಟ್ಟಿ- ಉಂಡೆ ಕಡಬು -ವಿವಿದ ಬಾಳೆ ಎಲೆ, ಅರಿಶಿಣದ ಎಲೆ, ಹಲಸಿನ ಎಲೆ ಕೊಟ್ಟೆ ಕಡಬು, ವಿವಿಧ  ಹಣ್ಣು- ಸೌತೆ ತರಕಾರಿ- ಸಬ್ಬಸಗೆ ಸೊಪ್ಪು ಬಳಸಿ ತಯಾರಿಸುವ ದೋಸೆ, ಸೌತೆಕಾಯಿ ರೊಟ್ಟಿ, ಅಕ್ಕಿ ರವೆ ಉಪ್ಪಿಟ್ಟು.   ಅಕ್ಕಿಯಿಂದ ಮಾಡುವ ಸಿಹಿ ತಿಂಡಿಗಳಾದ ಕಬ್ಬಿನ ಹಾಲು ಅಥವ ಬೆಲ್ಲದಿಂದ ಮಾಡುವ ಮಣ್ಣಿ, ತೊಡೆದೇವು.  ಮೊಗೆ ಕಾಯಿ ಅಕ್ಕಿ ಬೆರೆಸಿದ ತೆಳ್ಳಾವ್, ಪೊಂಗಲ್, ಚಿತ್ರನ್ನ, ಪಲಾವ್, ಬಿಸಿಬೇಳೆಬಾತ್ ಇತ್ಯಾದಿಗಳ ಜೊತೆಗೆ ಅಕ್ಕಿ ಹಪ್ಪಳ ಕೂಡ ಪೇಮಸ್.   ಪ್ರತಿ ವರ್ಷ ಮುಂಗಾರಿಗೆ ಮುನ್ನ ನಮ್ಮ ಕಲ್ಯಾಣ ಮಂಟಪದಲ್ಲಿ ಅಕ್ಕಿ ಹಪ್ಪಳ ತಯಾರಿಸಿ ನಮ್ಮ ಸಿಬ್ಬಂದಿಗಳಿಗೆ ಮತ್ತು ನಮ್ಮ ಸಂಸ್ಥೆಯ ಆಪ್ತರಿಗೆ ನೀಡಿ ಉಳಿದದ್ದು ನಮ್ಮ ಮನೆಗಳಿಗೆ.

Blog number 2120. ದೇಶದ ಪುಣ್ಯಕ್ಷೇತ್ರ ಕಾಶಿಯ ಕಪಿಲದಾರದಲ್ಲಿ ನಮ್ಮ ಕೆಳದಿ ಅರಸರ ಶಿಲಾಶಾಸನ ನಡೆದಾಡುವ ಕಲ್ಲಾಗಿ ಬಳಸುತ್ತಿರುವುದನ್ನ ಸಾಗರದ ಯುವ ವಕೀಲ ಪ್ರವೀಣ್ ಕೆ.ವಿ. ಬಯಲು ಮಾಡಿದ್ದಾರೆ.

#ನಮ್ಮ_ಊರಿನ_ಜನಪರ_ಹೋರಾಟಗಾರರು_ವಕೀಲರು_ಆದ_ಕೆ_ವಿ_ಪ್ರವೀಣ್ #ಕಾಶಿ_ಯಾತ್ರೆ_ಎಲ್ಲರಲ್ಲೊಬ್ಬರಂತೆ_ಮಾಡಲಿಲ್ಲ #ಕಾಶಿ_ಕಪಿಲದಾರದ_ಕೊಳದಲ್ಲಿ_ಕೆಳದಿ_ಅರಸರ_ಶಿಲಾಶಾಸನ_ಕಾಲು_ದಾಟಿನ_ಕಲ್ಲು_ಆಗಿದ್ದನ್ನ #ದಾಖಲಿಸಿದ್ದಾರೆ_ಅದರ_ವಿಡಿಯೋ_ಮಾಡಿ_ಸಾಮಾಜಿಕ_ಜಾಲತಾಣದಲ್ಲಿ_ಪೋಸ್ಟ್_ಮಾಡಿದ್ದು_ವೈರಲ್_ಆಗಿದೆ #ಪುಣ್ಯಕ್ಷೇತ್ರ_ಕಾಶಿಯಲ್ಲಿ_ಕೆಳದಿ_ಅರಸರ_ಶಾಸನಕ್ಕೆ_ಈ_ಗತಿ_ಬಂದಿದ್ದಕ್ಕೆ_ಆಕ್ರೋಶ_ವೃಕ್ತವಾಗಿದೆ #ಇದ_ಸರಿ_ಮಾಡುವ_ತನಕ_ಪ್ರವೀಣ್_ವಿರಮಿಸುವುದಿಲ್ಲ.   ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಇರುವಕ್ಕಿ ಕೃಷಿ ವಿದ್ಯಾಲಯದ ಸಮೀಪದ ಕಲ್ಲುಕೊಪ್ಪದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾಗಿ ಬಂದು ನೆಲೆಸಿದ ವೀರಭದ್ರಪ್ಪ ಗೌಡರನ್ನ ಜನ ಪ್ರೀತಿಯಿಂದ ಮರಿಗೌಡರೆಂದು ಕರೆಯುತ್ತಾರೆ ಅವರ ಎರಡನೆ ಪುತ್ರರೇ ವಕೀಲರಾದ ಕೆ.ವಿ.ಪ್ರವೀಣ್.   ಆನಂದಪುರಂ ಸರ್ಕಾರಿ ಕನ್ನಡಶಾಲೆಗೆ ನಿತ್ಯ ಸುಮಾರು ನಾಲ್ಕು ಕಿಲೋ ಮೀಟರ್ ನಡೆದು ಬರುತ್ತಿದ್ದ ಬಾಲಕ ಪ್ರವೀಣ್ ನಿತ್ಯ ನನ್ನ ಮನೆ ಎದುರು ಕೀಟಲೆ ಮಾಡುತ್ತಾ ನಗುತ್ತಾ ಹೋಗುತ್ತಿದ್ದವರು ಸಂಜೆ ವಾಪಾಸು ಹೋಗುವಾಗಲೂ ಅದೇ ಎನರ್ಜಿ ಇರುತ್ತಿತ್ತು ಇವರಲ್ಲಿ.   ಕಟ್ಟರ್ ಹಿಂದುತ್ವವಾದಿ, ಬಿಜೆಪಿ ಪಕ್ಷದ ಅಭಿಮಾನಿ ಸಂಘಟಕರಾಗಿದ್ದಾರೆ ಆದರೆ ಬಿಜೆಪಿ ಪಕ್ಷ ಇವರಿಗೆ ಸರಿಯಾದ ಸ್ಥಾನ ಮಾನ ಈವರೆಗೆ ನೀಡಿಲ್ಲ.   ಜನಪರವಾಗಿ ನ್ಯಾಯಾಲಯದಲ್ಲಿ ಹಣ ಪಡೆಯದೇ ಅನೇಕ ಹೋರಾಟಗಾರರ ಕೇಸು ನಡೆಸುವುದು ನೋಡಿದ್ದೇನ

Blog number 2119. ಶಾಲಾ ಪಠ್ಯ ಪುಸ್ತಕದಲ್ಲಿ ಮುಪ್ಪಿನ ಷಡಕ್ಷರಿ ಬರೆದ ತಿರುಕನ ಕನಸು ಪದ್ಯ.

#ಐವತ್ತು_ವರ್ಷಗಳ_ಹಿಂದಿನ_ಪಠ್ಯ_ಪುಸ್ತಕಗಳು #ಅದರಲ್ಲಿನ_ಪಾಠ_ಪದ್ಯಗಳ_ಮೌಲ್ಯ_ಈಗಿನ_ಶಿಕ್ಷಣ_ನೀತಿಯಲ್ಲಿ_ಕಳೆದು_ಹೋಗಿದೆ #ತಿರುಕನ_ಕನಸು_ಪದ್ಯ_ಇವತ್ತಿಗೂ_ಅಚ್ಚಳಿಯದೆ_ನೆನಪಿಲ್ಲಿದೆ #ಇದನ್ನು_ಬರೆದವರು_ತಪಸ್ವಿ_ಮುಪ್ಪಿನ_ಷಡಕ್ಷರಿ #ಅವರ_ಕಾಲ_500_ವರ್ಷದ_ಹಿಂದೆ #ಅವರ_ದೇವಾಲಯ_ಚಾಮರಾಜನಗರ_ಜಿಲ್ಲೆಯ_ಯಳಂದೂರು_ತಾಲ್ಲೂಕಿನ #ಯರಗಂಬಳಿ_ಗ್ರಾಮದಲ್ಲಿದೆ.   ಸರ್ಕಾರಿ ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ತಿರುಕನ ಕನಸು ಪದ್ಯ ನಾಲಿಗೆ ತುದಿ ಮೇಲೆಯೇ ಇರುತ್ತಿತ್ತು ಕಾರಣ ತುಂಬಾ ಸರಳವಾಗಿ ಅರ್ಥಗರ್ಬಿತವಾಗಿ ರಾಗವಾಗಿ ಹಾಡುವಂತ ಪದ್ಯವಾಗಿತ್ತು.    #ಮುಪ್ಪಿನ_ಷಡಕ್ಷರಿ  : ಮುಪ್ಪಿನ ಷಡಕ್ಷರಿ: ಇವರು ಕ್ರಿಶ ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ. ಇವರು ಕೊಳ್ಳೆಗಾಲದವರು, ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ,ಅವರ ದೇವಾಲಯ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳಿ ಗ್ರಾಮದಲ್ಲಿದೆ ನಾಡಿನ ಪ್ರಖ್ಯಾತ ಡಿಜಿಟಲ್ ಮಾಧ್ಯಮ ಸಂಸ್ಥೆ ಈ ಊರಿನ ಬಗ್ಗೆ ಸವಿಸ್ತಾರ ಮಾಹಿತಿ ನೀಡಿರುವುದು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ https://youtu.be/90WiQjsszZg?feature=shared  ಆಗ ಅದನ್ನು ಬರೆದ ಕವಿ ಬಗ್ಗೆ ತಿಳಿದುಕೊಳ್ಳುವ ಬುದ್ಧಿ ನಮಗೆಲ್

Blog number 2118. ಹುಲಿಕಲ್ ನಟರಾಜ್ ಸಂದರ್ಶನ,

#ಪವಾಡ_ಬಯಲು_ಅಭಿಯಾನದ #ಹುಲಿಕಲ್_ನಟರಾಜ್ #ಸಂದರ್ಶನ #ಭಾಗ_3. https://youtu.be/c7OB9CGHi5E?feature=shared ಪವಾಡ ಬಯಲು ಅಭಿಯಾನದ ಮೂಲಕ ಮೌಡ್ಯ ಆಚರಣೆ ವಿರುದ್ದ ಜನಾಂದೋಲನ ನಡೆಸುತ್ತಿರುವ ಹುಲಿಕಲ್ ನಟರಾಜರು ತಮ್ಮ ಬಾಲ್ಯ-ವೃತ್ತಿ - ಜೀವನದ ಬಗ್ಗೆ ವಿವರಿಸಿದ್ದಾರೆ ಜೊತೆಗೆ ಅವರ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳ ಬಗ್ಗೆ ವಿವರಣೆ ನೀಡಿದ್ದಾರೆ.

Blog number 2117. ಅನೇಕ ವದಂತಿಗಳ ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ವರಾಹಿ ನದಿಯ ನಿಗೂಡ ಎನ್ನಿಸಿದ್ದ ಕುಂಚಿಕಲ್ ಪಾಲ್ಸ್ ಮೊದಲ ವಿಡಿಯೋ ಚಿತ್ರೀಕರಿಸಿದವರು ಸಮಾಜ ಸೇವಕ ನಗರದ ನಾರಾಯಣ ಕಾಮತ್

#ನಿಗೂಡ_ಎನ್ನಿಸಿದ್ದ_ಕುಂಚಿಕಲ್_ಪಾಲ್ಸ್_ಮೊದಲ_ವಿಡಿಯೊ_ಮಾಡಿದ_ದಾಖಲೆ #ಬಿದನೂರು_ನಗರದ_ಸಮಾಜ_ಸೇವಕ_ನಾರಾಯಣ_ಕಾಮತರದ್ದು #2018ರ_ಆಗಸ್ಟ್_1ರಂದು_ಸುಬ್ರಮಣ್ಯಭಾಗವತರು_ಅನಂತಮೂರ್ತಿಶೆಣೈ_ಕಿರಣದಾಸ್  #ಮತ್ತು_ಮಾಸ್ತಿಕಟ್ಟೆಯ_ಆಟೋ_ರಿಕ್ಷಾ_ಡ್ರೈವರ್_ಜೊತೆ #ಕುಂಚಿಕಲ್_ಪಾಲ್ಸ್_ತಲುಪಿದ್ದರು. https://youtube.com/shorts/XQfS8Ep-Fdo?feature=shared.  ದೇಶದಲ್ಲೇ ಅತಿ ಎತ್ತರದ ಜಲಪಾತ ಎಂಬ ವದಂತಿಗಳಿರುವ ಕುಂಚಿಕಲ್ ಪಾಲ್ಸ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ದಟ್ಟ ಅರಣ್ಯದ ಮಧ್ಯ ವರಾಹಿ ನದಿಯ ನೀರು ಬೀಳುವ ಜಲಪಾತ ಆಗಿದೆ.    ಇದು ಸ್ಥಳೀಯರಿಗೆ ಮಾತ್ರ ಗೊತ್ತಿದ್ದ ಪಾಲ್ಸ್ ಆಗಿದ್ದರೂ ಇಲ್ಲಿಗೆ ತಲುಪಲು ರಸ್ತೆ ಇಲ್ಲ, ಕಡಿದಾದ ದುರ್ಗಮವಾದ ದಟ್ಟ ಅರಣ್ಯದಲ್ಲಿ ಈ ಸ್ಥಳ ತಲುಪ ಬಹುದಾದರೂ ವನ್ಯಪ್ರಾಣಿಗಳು, ಜಿಗಣೆಗಳಿಂದ ತಪ್ಪಿಸಿಕೊಂಡು ಹೋಗಬೇಕು, ಹೋದರೂ ಅಲ್ಲಿ ಸುರಕ್ಷಿತವಾಗಿ ನಿಂತು ವೀಕ್ಷಣೆಗೆ ಸರಿಯಾದ ಜಾಗವೂ ಇಲ್ಲ.   ಒಮ್ಮೆ ಕಷ್ಟಪಟ್ಟು ಹೋದವರು ಇನ್ನೊಮ್ಮೆ ಇಲ್ಲಿಗೆ ಹೋಗಲು ಮನಸ್ಸು ಮಾಡುವುದಿಲ್ಲ ಈಗ ಕರ್ನಾಟಕ ಪವರ್ ಕಾರ್ಪೊರೇಷನ್ ಮತ್ತು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಅಲ್ಲಿಗೆ ಹೋಗಲು ಸಾಧ್ಯವೇ ಇಲ್ಲ.   ಇದು ನಕ್ಸಲ್ ಪೀಡಿತ ಪ್ರದೇಶವೂ ಆಗಿರುವುದರಿಂದ ಇದು ಪ್ರವಾಸ ಯೋಗ್ಯ ಸ್ಥಳವಲ್ಲ.