Blog number 2123. ನನ್ನ ಅತಿಥಿ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಆಳ್ವಿಕೆಯ ಇತಿಹಾಸ ಸಂಪೂರ್ಣವಾಗಿ ಅರಳು ಹುರಿದಂತೆ ಹೇಳುವ ಲೋಕರಾಜ ಜೈನ್ ಎಂಬ ಸಾಗರ ತಾಲೂಕಿನ ಇತಿಹಾಸ ಸಂಶೋದಕರು
#ನಮ್ಮ_ಸಾಗರ_ತಾಲ್ಲೂಕಿನ_ಇತಿಹಾಸ_ಸಂಶೋದಕರಾದ
#ಲೋಕರಾಜ್_ಜೈನ್_ಕುಟುಂಬ_ನನ್ನ_ಅತಿಥಿಗಳು
#ರಾಣಿ_ಚೆನ್ನಬೈರಾದೇವಿ_ಇತಿಹಾಸದ_ಬಗ್ಗೆ_ಇವರ_ಓದು_ಬರಹ_ಅದ್ಬುತ
#ಡಿಜಿಟಲ್_ಮಾಧ್ಯಮದಲ್ಲಿ_ಚೆನ್ನಬೈರಾದೇವಿಯ_ಇತಿಹಾಸ_ಇವರು_ಪ್ರಸ್ತುತ_ಪಡಿಸುತ್ತಿದ್ದಾರೆ.
#ವಟ್ಟಕ್ಕಿ_ಮನೆತನ_ಗೇರುಸೊಪ್ಪೆಯ_ರಾಜಮನೆತನದ_ನಿಷ್ಟಾವಂತ_ಪ್ರತಿಷ್ಟಿತ_ಮನೆತನ
ವಟ್ಟಕ್ಕಿ_ಮನೆತನ_ಗೇರುಸೊಪ್ಪೆಯ_ರಾಜಮನೆತನದ_ನಿಷ್ಟಾವಂತ_ಪ್ರತಿಷ್ಟಿತ_ಮನೆತನ
#ಲೋಕರಾಜರ_ತಾಯಿ_ವಟ್ಟಕ್ಕಿ_ಮನೆತನಕ್ಕೆ_ಸೇರಿದರೆ
#ಇವರ_ತಂದೆ_ಗೇರುಸೊಪ್ಪೆಯ_ಶ್ರೀಮಂತ_ವ್ಯಾಪಾರಿ_ಯೋಜನಾಶ್ರೇಷ್ಠಿ_ಪತ್ನಿ
#ಗುಚ್ಚಕ್ಕಿ_ರಾಮಕ್ಕನ_ಮನೆತನಕ್ಕೆ_ಸೇರಿದವರು
#ಈ_ಮನೆತನದ_ಕುಡಿ_ಲೋಕರಾಜ_ಜೈನ್
ನಾಡಿನ ಪ್ರಖ್ಯಾತ #ಡಿಜಿಟಲ್_ಮಾಧ್ಯಮ_ಯೂಟ್ಯೂಬ್ ನಲ್ಲಿ #ಗೇರುಸೊಪ್ಪೆಯ ರಾಜವಂಶಸ್ಥೆ ಕಾಳುಮೆಣಸಿನ ರಾಣಿ ಎಂಬ ಬಿರುದಾಂಕಿತ #ಚೆನ್ನಬೈರಾದೇವಿ ಇತಿಹಾಸ ನೂರಾರು ಕಂತುಗಳಲ್ಲಿ ಪ್ರಸಾರವಾಗುತ್ತಿದೆ ಇದರಲ್ಲಿ ಜೈನ ರಾಣಿಯ ಇತಿಹಾಸ ಪ್ರಸ್ತುತ ಪಡಿಸುತ್ತಿರುವುದು
ಲೋಕರಾಜ ಜೈನ್.
ಇವರ ತಾಯಿ ವಟ್ಟಕ್ಕಿ ಮನೆತನಕ್ಕೆ ಸೇರಿದರೆ
ಇವರ ತಂದೆ ಗೇರುಸೊಪ್ಪೆಯ ಶ್ರೀಮಂತ ವ್ಯಾಪಾರಿ ಯೋಜನಾಶ್ರೇಷ್ಠಿ ಪತ್ನಿ ಗುಚ್ಚಕ್ಕಿ ರಾಮಕ್ಕನ ಮನೆತನಕ್ಕೆ ಸೇರಿದವರು.
ಯೋಜನಾ ಶ್ರೇಷ್ಟಿ ಗೇರುಸೊಪ್ಪೆಯ ರಾಜವಂಶಸ್ಥರ ಸಂಬಂದ ಹೊಂದಿದವರು ಈ ಮನೆತನದ ಕುಡಿ ಲೋಕರಾಜಜೈನ್ ಅಂದರೆ ರಾಣಿ ಚೆನ್ನಬೈರಾದೇವಿ ವಂಶಸ್ಥರು.
ಇವರ ಮಾವ ಜೋಗ್ ಪಾಲ್ಸ್ ಸಮೀಪದ ಹೆನ್ನೆ ರಾಜಣ್ಣ ರೈತ ಸಂಘದ ಮುಖಂಡರು 1994ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದಿಂದ ಸ್ವರ್ಧಿಸಿದ್ದರು.
ಇನ್ನೊಬ್ಬ ಮಾವ ಕಾರ್ಗಲ್ ಸಮೀಪದ ಬಿದರೂರಿನ ಶಶಿಕಾಂತ್ ಜೈನ್ ಇವರ ಮನೆತನದವರಿಗೆ ಮಾತ್ರ ಸಿರ್ಸಿ ಸಮೀಪದ ಸೋಂದಾದ ಜೈನ ಮಠದ #ಅಕಲಂಕ_ಪೀಠದ
ನೂತನ ಗುರುಗಳಾಗಿ ಪಟ್ಟಾಬಿಶೇಕ ಮಾಡಿಸುವ ಸಂದರ್ಭದಲ್ಲಿ ನೂತನ ಗುರುಗಳಿಗೆ ಬಂಗಾರದ ಉಂಗುರ ತೊಡಿಸುವ ಅಧಿಕಾರ ಈಗಲೂ ನಡೆದುಕೊಂಡು ಬಂದಿದೆ, ಇತ್ತೀಚಿಗೆ ಸೋಂದ ಜೈನ ಅಕಲಂಕ ಪೀಠದ ನೂತನ ಸ್ವಾಮಿಗಳ ಪಟ್ಟಾಬಿಶೇಕ ನಡೆದಾಗ ಆಲ್ಲಿ ರಾಜ ದರ್ಭಾರಿನ ಪೋಷಾಕು ಮತ್ತು ಪೇಟದಲ್ಲಿ ಬಿದರೂರು ಶಶಿಕಾಂತ್ ಜೈನ್ ನೂತನ ಸ್ವಾಮಿಗಳಿಗೆ ಬಂಗಾರದ ಉಂಗುರ ತೊಡಿಸಿದ ಪೋಟೋಗಳು ಪತ್ರಿಕೆಗಳಲ್ಲಿ ನೋಡಿದ್ದೆ.
ಈ ಮನೆತನದಲ್ಲಿ ಬಾಲ್ಯದಲ್ಲೇ ತಮ್ಮ ವಂಶದ ಚರಿತ್ರೆ ಕೇಳಿ ತಿಳಿದಿದ್ದ ಲೋಕರಾಜ ಜೈನರು ಗೇರುಸೊಪ್ಪೆ ಸಂಸ್ಥಾನಕ್ಕೆ ಸೇರಿದ ಎಲ್ಲಾ ಸ್ಥಳ- ಕೋಟೆ - ಬಸದಿ-ಸ್ಮಾರಕಗಳನ್ನ ನೂರಾರು ಬಾರಿ ಸಂದರ್ಶಿಸಿದ್ದಾರೆ, ಅಲ್ಲಿನ ಇತಿಹಾಸ ದಾಖಲೆ, ಶಿಲಾಶಾಸನ ಮತ್ತು ಜನಪದದಲ್ಲಿ ಉಳಿದಿರುವ ಕಥೆಗಳನ್ನ ದಾಖಲಿಸಿದ್ದಾರೆ ಆದ್ದರಿಂದಲೇ ಲೋಕರಾಜ ಜೈನರು ಯಾವುದೇ ಸಣ್ಣ ಟಿಪ್ಪಣಿ ಕೂಡ ನೆನಪಿಗೆ ಇರಿಸಿಕೊಳ್ಳದೆ ನಿರಂತರವಾಗಿ ದಿನಗಟ್ಟಲೆ ಕಾಳುಮೆಣಸಿನ ರಾಣಿಯ 54 ವರ್ಷದ ಆಡಳಿತ,ಅವಳ ಪೂರ್ವಿಕರ ಚರಿತ್ರೆ ನಿರರ್ಗಳವಾಗಿ ಹೇಳುತ್ತಾರೆ.
ಗೇರುಸೊಪ್ಪೆಯ ಕಾಳುಮೆಣಸಿನ ರಾಣಿಯ ಆಡಳಿತಕ್ಕೆ ಒಳಪಟ್ಟ ಇಂಚಿಂಚು ಜಾಗ ಕಣ್ಣುಮುಚ್ಚಿ ಕೂಡ ತಲುಪುವ ಸಾಮರ್ಥ್ಯ ಹೊಂದಿದಾರೆ ಇದನ್ನು ಮೊದಲಿಗೆ ಗುರುತಿಸಿದವರು ಖ್ಯಾತ #ಚಲನ_ಚಿತ್ರನಟ_ದೊಡ್ಡಣ್ಣ ಅವರು ಲೋಕರಾಜ ಜೈನರ ಪೋನ್ ನಂಬರ್ ಪಡೆದು ಮಾತಾಡಿದ್ದಾರೆ.
ಸಾಗರ ತಾಲೂಕಿನ ದಟ್ಟ ಅರಣ್ಯದಲ್ಲಿರುವ #ಕಾನೂರು_ಕೋಟೆಯ ಏಳು ಸುತ್ತಿನ ಕೋಟೆ ಅಲ್ಲಿನ ಬಸದಿಗಳು, ದೇವಾಲಯ, ದೀಪಸ್ಥಂಬ, ರಹಸ್ಯದ್ವಾರ ಮತ್ತು ಸುರಂಗ ಮಾರ್ಗಗಳನ್ನ ಡಿಜಿಟಲ್ ಮಾಧ್ಯಮದ ಮೂಲಕ ಸುಂದರವಾಗಿ ಅವರದ್ದೇ ಶೈಲಿಯಲ್ಲಿ ಸುಲಭವಾಗಿ ಸರಳವಾಗಿ ಅಥ೯ವಾಗುವಂತೆ ವಿವರಿಸುತ್ತಿದ್ದಾರೆ
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ರಾಣಿ ಚೆನ್ನಬೈರಾದೇವಿಯ ಇವತ್ತಿನ ಕಂತು ಡಿಜಿಟಲ್ ಮಾಧ್ಯಮದಲ್ಲಿ ಬಂದಿರುವುದು ನೋಡ ಬಹುದು
https://youtu.be/1K5nrRD5--w?feature=shared
ತಮ್ಮ ಪತ್ನಿಯ ಊರಾದ ಚೋರಡಿ ಸಮೀಪದ ಶೆಟ್ಟಿಹಳ್ಳಿಗೆ ಸಂಸಾರ ಸಮೇತ ಪ್ರಯಾಣಿಸುವಾಗ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಮೊದಲ ಭೇಟಿ, 1999 ರಲ್ಲಿ ಅವರ ಊರಾದ ಹೆನ್ನೆಯಲ್ಲಿ ನನ್ನ ನೋಡಿದ್ದರಂತೆ ಮತ್ತು ನನ್ನ ಭಾಷಣ ಕೇಳಿದ್ದರಂತೆ.
ಇವರ ಮಾವಂದಿರು ನನ್ನ ಗೆಳೆಯರೂ ಕೂಡ ಆದ್ದರಿಂದ ಲೋಕರಾಜ ಜೈನರು ನನಗೆ ಆಪ್ತರೆನ್ನಿಸಿದರು,ನಮ್ಮ ಸಂಸ್ಥೆವತಿಯಿಂದ ಗೌರವಿಸಿ ನನ್ನ ಪ್ರಸ್ತಕ ನೀಡಿದೆ ಜೊತೆಗೆ ತೀರ್ಥಹಳ್ಳಿ ತಾಲ್ಲೂಕಿನ #ಎಪಿಗ್ರಾಪಿಯಕರ್ನಾಟಕ ಪುಸ್ತಕ (ರೈಸ್ ಅವರು ಪ್ರಕಟಿಸಿದ್ದು) ಅವರಿಗೆ ನೀಡಿದೆ ಅದರಲ್ಲಿ ಹೊಂಬುಜ ಜೈನ ಮಠದ ಮತ್ತು ಕವಲೆದುರ್ಗದ ವೀರಶೈವ ಮಠದ ಶಿಲಾಶಾಸನಗಳ ಮತ್ತು ತಾಮ್ರಶಾಸನಗಳ ಮಾಹಿತಿ ಇದ್ದು ಅವರು ಅದನ್ನು ಅಧ್ಯಯನ ಮಾಡಲಿದ್ದಾರೆ.
ಅಸಾದಾರಣ ನೆನಪಿನ ಶಕ್ತಿಯ ಮತ್ತು ಗೇರುಸೊಪ್ಪೆ ಜೈನ ರಾಣಿ ಚೆನ್ನಬೈರಾದೇವಿ ಇತಿಹಾಸ ಅರೆದು ಕುಡಿದು ಅದನ್ನು ದಿನಗಟ್ಟಲೆ ನಿರಂತರವಾಗಿ ಹೇಳುವ ಇವರಷ್ಟು ಸಾಮರ್ಥ್ಯವನ್ನು ಹೊಂದಿರುವ ಇನ್ನೊಂದು ವ್ಯಕ್ತಿ ನಮ್ಮ ರಾಜ್ಯದಲ್ಲೇ ಇಲ್ಲ.
Comments
Post a Comment