Skip to main content

Blog number 2152.ಶಿವಮೊಗ್ಗ ಜಿಲ್ಲೆಯ ಎಲೆಮರೆ ಕಾಯಿಯಂತ ಉದಯೋನ್ಮುಖ ಇತಿಹಾಸ ಸಂಶೋದಕ ಇಕ್ಕೇರಿ ಸಮೀಪದ ಹುಲಿಮನೆಯ ಕಾಳೆ ಮನೆತನದ ಗಣಪತಿ H. K. ಇಕ್ಕೇರಿ ಇತಿಹಾಸ ನಾಡಿನ ಖ್ಯಾತ ಡಿಜಿಟಲ್ ಮಾಧ್ಯಮದಲ್ಲಿ ವಿವರಿಸಿದ್ದಾರೆ ಹತ್ತಿರ ಹತ್ತಿರ 10 ಲಕ್ಷ ಜನ ಇದನ್ನು ವೀಕ್ಷಿಸುತ್ತಿರುವುದು ವಿಶೇಷ.

#ನಮ್ಮ_ಸಾಗರ_ತಾಲ್ಲೂಕು_ಎರೆಡು_ರಾಜ_ವಂಶಸ್ತರು_ಆಳಿದ_ಊರು

#ಗೇರುಸೊಪ್ಪೆ_ಮತ್ತು_ಕೆಳದಿ_ರಾಜರು

#ಈ_ಇತಿಹಾಸ_ನಮಗೆ_ದೃಶ್ಯ_ಮಾಧ್ಯಮದ_ಮೂಲಕ_ಪರಿಣಾಮಕಾರಿ_ಆಗಿ_ತಲುಪಿಸುತ್ತಿರುವ

#ನಾಡಿನ_ಪ್ರಖ್ಯಾತ_ಡಿಜಿಟಲ್_ಮಾಧ್ಯಮ

#ಅದರಲ್ಲಿ_ಇತಿಹಾಸದ_ಕಥೆ_ಹೇಳುವವರು_ಶಿವಮೊಗ್ಗ_ಜಿಲ್ಲೆಯ_ಎಲೆಮರೆಯ_ಕಾಯಿಯಂತ

#ಉದಯೋನ್ಮುಖ_ಇತಿಹಾಸ_ಸಂಶೋದಕರು

#ಕೆಳದಿ_ರಾಜರ_ಎರಡನೆ_ರಾಜಧಾನಿ_ಇಕ್ಕೇರಿ_ಬಗ್ಗೆ_ವಿವರಿಸುತ್ತಿರುವ

#ಇಕ್ಕೇರಿ_ಸಮೀಪದ_ಹುಲಿಮನೆಯ_ಕಾಳೆ_ಮನೆತನದ_ಗಣಪತಿ_H_K

#ಇವರ_ವಿವರಣೆ_ಎಷ್ಟು_ಪರಿಣಾಮಕಾರಿ_ಅಂದರೆ_ಹತ್ತಿರ_ಹತ್ತಿರ_ಹತ್ತು_ಲಕ್ಷ_ಜನ_ವೀಕ್ಷಿಸುತ್ತಿದ್ದಾರೆ.

#ಇಕ್ಕೇರಿಯ_ದೇವಾಲಯದ_ಹೊರ_ಆವರಣದಲ್ಲಿ_ಅಘೋರೇಶ್ವರನ_ಪಾದಗಳಿದೆ

#ಅಘೋರೇಶ್ವರನ_ವಿಗ್ರಹದ_ಮೇಲು_ಭಾಗ_ಎಲ್ಲಿದೆ?

#ಇಲ್ಲೊಂದು_ವದಂತಿ_ಇದೆ_ತಾಳಗುಪ್ಪ_ಸಮೀಪದ_ಆಲಳ್ಳಿಯ_ಗೌಡರ_ತೋಟದಲ್ಲಿ 

#ಇಕ್ಕೇರಿ_ಅಘೋರೇಶ್ವರ_ಮೂರ್ತಿಯ_ಪಾದದ_ಮೇಲ್ಬಾಗ_ಹೋಲುವ_ಶಿಲಾವಿಗ್ರಹ_ಒಂದು_ಬಿದ್ದಿದೆ 

#ಅನ್ನುತ್ತಾರೆ_ಅದನ್ನು_ಆಸಕ್ತ_ಸಂಶೋದಕರು_ಮಾಡಬೇಕು.


   ಇಕ್ಕೇರಿ ಕೆಳದಿ ರಾಜರ ಎರಡನೆ ರಾಜಧಾನಿ, ವಿಜಯನಗರ ಸಾಮ್ರಾಜ್ಯದ ಟಂಕಸಾಲೆ, ಇಲ್ಲಿನ ಕೋಟೆ ಮತ್ತು ಅಘೋರೇಶ್ವರ ದೇವಾಲಯದ ಅಡಿಪಾಯ ಸ್ವತಃ ವಿಜಯನಗರದ ಅರಸ ಕೃಷ್ಣ ದೇವರಾಯರ ಅಮೃತ ಹಸ್ತದಿಂದ ನೆರವೇರಿದೆ.
  ಕೆಳದಿ ಅರಸ ಸದಾಶಿವ ನಾಯಕರಿಗೆ ಇಬ್ಬರು ಪುತ್ರರು ದೊಡ್ಡ ಸಂಕಣ್ಣನಾಯಕ ಮತ್ತು ಸಣ್ಣ ಸಂಕಣ್ಣ ನಾಯಕ ಇವರಲ್ಲಿ ದೊಡ್ಡ ಸಂಕಣ್ಣ ನಾಯಕ ಜೀವನದಲ್ಲಿ ವಿರಕ್ತನಾಗಿ ತಮ್ಮನಿಗೆ ಅಧಿಕಾರವಹಿಸಿ ನೇಪಾಳ-ಕಾಶಿ ಯಾತ್ರೆ ಮಾಡುತ್ತಾನೆ ಅಕ್ಬರ್ ಆಸ್ಥಾನಕ್ಕೂ ಬೇಟಿ ನೀಡುತ್ತಾನೆ ಇವೆಲ್ಲವೂ ಲಿಂಗಣ್ಣ ಕವಿ ಬರೆದ ಕೆಳದಿ ನೃಪವಿಜಯ ಮತ್ತು ರಾಣಿ ಚಿನ್ನಮ್ಮಳ ದತ್ತು ಪುತ್ರ ಬಸಪ್ಪ ನಾಯಕರು ಬರೆದ ಶಿವ ತತ್ವ ರತ್ನಾಕರದಲ್ಲಿ ದಾಖಲಾಗಿದೆ.
  ಮಹಾರಾಷ್ಟ್ರದ ಪೈಟಾನ/ ಪ್ರತಿಷ್ಟಾನಪುರದಲ್ಲಿನ 32 ಕೈಗಳ ಅಘೋರೇಶ್ವರ ದೇವರ ಕೈ ಬರಹದ ಚಿತ್ರ ತಂದು ಇಕ್ಕೇರಿಯಲ್ಲಿ ಅದೇ ರೀತಿಯ ವಿಗ್ರಹ ನಿರ್ಮಿಸಿ ಪ್ರತಿಷ್ಟಾಪಿಸುತ್ತಾರೆ ಆದರೆ ಬಿಜಾಪುರದ ಸುಲ್ತಾನರಾದ ರಣದುಲ್ಲಾ ಖಾನ್ ಅಕ್ರಮಣದಲ್ಲಿ ಈ ವಿಗ್ರಹ ನಾಶವಾಗುತ್ತದೆ ಈಗ ಅಲ್ಲಿ ಭಗ್ನವಾದ ವಿಗ್ರಹದ ಜಾಗದಲ್ಲಿ ಶಿವ ಲಿಂಗ ಸ್ಥಾಪನೆ ಮಾಡಿ ಪೂಜೆ ನಡೆಯುತ್ತಿದೆ.
   ವಿಗ್ರಹದ ಎರೆಡು ಪಾದಗಳು ಇಕ್ಕೇರಿಯಲ್ಲಿದೆ ವಿಗ್ರಹದ ಮೇಲುಭಾಗ ಎಲ್ಲಿದೆ? ಸಂಪೂರ್ಣ ನಾಶವಾಯಿತಾ? ಕೆರೆ ಕಂದಕದಲ್ಲಿ ಎಸೆದಿದ್ದಾರಾ ಎಂಬ ಪ್ರಶ್ನೆಗಳಿದೆ.
  ಇಲ್ಲೊಂದು ವದಂತಿ ಇದೆ ತಾಳಗುಪ್ಪ ಸಮೀಪದ ಆಲಳ್ಳಿಯ ಗೌಡರ ತೋಟದಲ್ಲಿ ಇಕ್ಕೇರಿ ಅಘೋರೇಶ್ವರ ಮೂರ್ತಿಯ ಪಾದದ ಮೇಲ್ಬಾಗ ಹೋಲುವ ಶಿಲಾವಿಗ್ರಹ ಒಂದು ಬಿದ್ದಿದೆ ಅನ್ನುತ್ತಾರೆ ಅದನ್ನು ಆಸಕ್ತ ಸಂಶೋದಕರು ಸಂಶೋದನೆ ಮಾಡಬೇಕು.
   ಕೆಳದಿ ರಾಜರು ವಿಜಯ ನಗರದ ಸಾಮಂತರು, ಕಾಶಿಯಲ್ಲಿ ಜಂಗಮವಾಡಿ ಮಠಕ್ಕೆ ದಾನ ದತ್ತಿ ನೀಡಿ ಅಭಿವೃದ್ಧಿ ಮಾಡಿದ ಶಿಲಾಶಾಸನಗಳಿದೆ, ಇತ್ತೀಚಿಗೆ ಜ್ಞಾನ ವ್ಯಾಪಿ ಮಸೀದಿಯ ಬಾವಿಯಲ್ಲಿ ಪತ್ತೆ ಅದ ಕನ್ನಡದ ಶಾಸನ ಕೆಳದಿ ಅರಸರ ಆಳ್ವಿಕೆ ಕಾಲದ್ದು.
  ಕೆಳದಿ ಕಪಿಲ ಸರೋವರದಲ್ಲಿ ಕೆಳದಿ ರಾಜರ ಶಿಲಾಶಾಸನ ನಡೆದಾಡುವ ಕಲ್ಲು ಚಪ್ಪಡಿ ಆಗಿದ್ದನ್ನು ಸಾಗರದ ವಕೀಲರಾದ ಪ್ರವೀಣ್ ಬಯಲು ಮಾಡಿದ್ದರಿಂದ ಶಾಸನ ಸಂರಕ್ಷಿಸಲಾಗಿದೆ.
  ಇಕ್ಕೇರಿಯ ದೇವಾಲಯದ ಚಿನ್ನದ ಕಲಶ ಭಟ್ಕಳದ ಮಸೀದಿ ಗೋಪುರದಲ್ಲಿ ಅಳವಡಿಸಲಾಗಿದೆ.
  ಈ ವರೆಗೆ 80ಕ್ಕೂ ಹೆಚ್ಚು PHD ಸಂಶೋದನೆಗಳು ಆಗಿದೆ ಅದರಲ್ಲಿ 1954 ರಲ್ಲಿ ಮುಂಬಾಯಿಯ ಕೆ.ಎನ್.ಚಟ್ನೇಸ್ ಸರ್ವೇಕ್ಷಣೆಯ ಸಮಗ್ರ ಕೆಳದಿ ಥೀಸಿಸ್ ಏಕ ಮಾತ್ರ ಅತ್ಯುತ್ತಮ ಸಂಶೋದನಾ ಗ್ರಂಥವಾಗಿದೆ.
  ಎನ್ನುವ ಇತಿಹಾಸ ಸಂಶೋದಕ ಸಾಗರದ  H.K. ಗಣಪತಿ ಅವರ ವಿವರಣೆ ಅಮೋಘವಾಗಿದೆ ಇತಿಹಾಸ ಆಸಕ್ತರು ತಪ್ಪದೆ ನೋಡಿ.
  ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://youtu.be/z2wGbENKS9s?feature=shared

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...