#ಭಾಗ_5
#ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರು
#ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಕುಮಾರ್
#ಇವರು_ಮತ್ತು_ಇವರ_ತಾಳಗುಂದದ_ಗೆಳೆಯರು_ಮಾಡಿದ_ತಾಳಗುಂದ_ಉತ್ಸವ
#ಇದರಿಂದ_ಆದ_ಪರಿಣಾಮಗಳೇನು_ನವೀನ್_ಕುಮಾರ್_ವಿವರಿಸಿದ್ದಾರೆ.
#ಕನ್ನಡ_ರಾಜ್ಯೋತ್ಸವದ_ಸುವರ್ಣ_ಮಹೋತ್ಸವದ_ವರ್ಷದಲ್ಲಿ
#ಕನ್ನಡದ_ಮೊದಲ_ಶಾಸನದ_ತಾಳಗುಂದದಲ್ಲಿ_ಇರಬೇಕಾದ
#ಸಡಗರ_ಸಂಭ್ರಮಗಳು_ಕಾಣದಿರುವುದು_ಕನ್ನಡಿಗರ_ನಿರಭಿಮಾನಕ್ಕೆ_ಉದಾಹರಣೆ_ಆಗಿದೆ.
https://youtu.be/DBHk-RLqCY0?feature=shared
ತಾಳಗುಂದದ ಕನ್ನಡದ ಮೊದಲ ಶಾಸನ ಉತ್ಕನದಲ್ಲಿ ದೊರಕಲು ಕಾರಣವಾದ ಘಟನೆ ತಾಳಗುಂದದ ಯುವಕರ ತಂಡ 2012ರಲ್ಲಿ ನಡೆಸಿದ #ತಾಳಗುಂದ_ಉತ್ಸವ ಈ ಉತ್ಸವ ನಡೆಸಲು ಈ ತಾಳಗುಂದದ ನವೀನ್ ಕುಮಾರ್ ಮತ್ತು ಗೆಳೆಯರಿಗೆ ಪ್ರೇರಣೆ ಪ್ರತಿ ವರ್ಷ ರಾಜ್ಯ ಸರ್ಕಾರ ಬನವಾಸಿಯಲ್ಲಿ ನಡೆಸುವ ಕದಂಬೋತ್ಸವ.
ಸುಮಾರು 80 ಸಾವಿರ ಹಣವನ್ನು ಈ ಇತಿಹಾಸದ ಆಸಕ್ತ ಗೆಳೆಯರ ತಂಡ ಭರಿಸಿದೆ ಇನ್ನೊಂದು ವಿಶೇಷ ಅಂದರೆ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕಿನಿಂದ ಪಡೆದ ಸಾಲ ತಾಳಗುಂದ ಉತ್ಸವಕ್ಕೆ ನವೀನ್ ಹಿಂದೆ ಮುಂದೆ ನೋಡದೆ ಖರ್ಚು ಮಾಡಿದ್ದರೆಂದರೆ ಅವರಿಗೆ ತಮ್ಮ ಊರಿನ ತಾಳಗುಂದ ಇತಿಹಾಸದ ಬಗ್ಗೆ ಇರುವ ವಿಶೇಷ ಕಾಳಜಿ ತೋರಿಸುತ್ತದೆ.
ತಾಳಗುಂದದಿಂದ ಜ್ಯೋತಿಯನ್ನು ಶಿರಾಳಕೊಪ್ಪದ ತನಕ ವಿದ್ಯಾರ್ಥಿ ವೃಂದಗಳ ಮತ್ತು ಗ್ರಾಮಸ್ಥರ ಜೊತೆ ಮೆರೆವಣಿಗೆಯಲ್ಲಿ ತಂದು, ಸಂಜೆ ತಾಳಗುಂದದಲ್ಲಿ ನಮ್ಮ ಆನಂದಪುರಂನ ಖ್ಯಾತ ಜೋಗಿ ಕಲಾವಿದ ಗುಡ್ಡಪ್ಪ ಜೋಗಿಯಿಂದ ವಿಶೇಷ ಕಾಯ೯ಕ್ರಮ, ಕನ್ನಡ ಚಿತ್ರ ಗೀತೆಗಳ ಗಾಯನ, ಇತಿಹಾಸ ಉಪನ್ಯಾಸಗಳ ಕಾರ್ಯಕ್ರಮ ರಾತ್ರಿ 12ರ ತನಕ ನಡೆದಿತ್ತು ಮತ್ತು ಈ ಕಾರ್ಯಕ್ರಮದಲ್ಲಿ ಸುಮಾರು 2000 ಕ್ಕೂ ಹೆಚ್ಚು ಜನ ಪಾಲ್ಗೊಂಡು ತಾಳಗುಂದ ಉತ್ಸವ ಯಶಸ್ವಿ ಆಯಿತು ಹಾಗೂ ಸುತ್ತಲಿನ 80 ಹಳ್ಳಿಗಳಲ್ಲಿ ಕೇಬಲ್ ಟೀವಿ ಲೈವ್ ಮೂಲಕ ಜನ ಮನೇಗಳಲ್ಲಿ ಕುಳಿತು ತಾಳಗುಂದ ಉತ್ಸವಕ್ಕೆ ಸಾಕ್ಷಿ ಆದರೆಂದು ನವೀನ್ ವಿವರಿಸಿದ್ದಾರೆ.
ತಾಳಗುಂದ ಉತ್ಸವದಿಂದ ಸ್ಥಳಿಯರಿಗೆ ತಮ್ಮ ಊರಿನ ಇತಿಹಾಸದ ಅರಿವು ಉಂಟಾಯಿತು, ಇತಿಹಾಸದ ಸ್ಮಾರಕಗಳ ಸಂರಕ್ಷಣೆಗೆ ಜನ ಜಾಗೃತಿಯು ಮೂಡಿತೆಂದು ಇದರ ಜೊತೆ ಪ್ರಜಾವಾಣಿ ದಿನ ಪತ್ರಿಕೆ ನವೀನ್ ಕುಮಾರ್ ಬರೆದ ತಾಳಗುಂದ ಶಾಸನದ ಬಗೆಗಿನ ಹತ್ತು ಸರಣಿ ಲೇಖನಗಳು ನಾಡಿನ ಇತಿಹಾಸಕ್ತರಿಗೆ ತಾಳಗುಂದದ ಬಗ್ಗೆ ವಿಶೇಷ ಆಸಕ್ತಿಗೆ ಕಾರಣವಾಯಿತು ಎಂದು ನವೀನ್ ಕುಮಾರ್ ನೆನಪಿಸುತ್ತಾರೆ.
ಪ್ರಜಾವಾಣಿ ದಿನಪತ್ರಿಕೆ ಮುಖ್ಯ ಸಂಪಾದಕರಾದ್ದ ರವೀಂದ್ರ ಭಟ್ಟರು, ಬ್ಯೂರೋ ಚೀಪ್ ಸಿದ್ದಯ್ಯ ಮತ್ತು ಶಿವಮೊಗ್ಗ ಜಿಲ್ಲಾ ವರದಿಗಾರರ ಬೆಂಬಲದಿಂದ ತಾಳಗುಂದ ಲೇಖನಗಳ ಸುಮಾರು 10 ಸರಣಿ ಲೇಖನ ಪ್ರಕಟವಾಯಿತು.
ಇದೆಲ್ಲದರಿಂದ ಪುರಾತತ್ವ ಇಲಾಖೆ ತಾಳಗುಂದದಲ್ಲಿ ಪ್ರಯೋಗಾರ್ತ ಉತ್ಕನನ ಪ್ರಾರಂಬಕ್ಕೆ ಮತ್ತು ಕನ್ನಡದ ಮೊದಲ ಶಾಸನ ಜಗತ್ತಿಗೆ ತಿಳಿಯಲು ಕಾರಣವಾಯಿತು ವಿಷಾದನೀಯ ವಿಚಾರ ಎಂದರೆ ಇವರು ನಡೆಸಿದ ತಾಳಗುಂದ ಉತ್ಸವ ಅದೇ ಮೊದಲು ಮತ್ತು ಅದೇ ಕೊನೆಯದ್ದು ಅಂದರೆ ತಾಳಗುಂದದ ಉತ್ಸಾಹಿ ಯುವಕರ ತಂಡ ಸ್ವಯಂ ಅವರೇ ಅವರ ಹಣದಲ್ಲಿ ನಡೆಸಿದ ತಾಳಗುಂದ ಉತ್ಸವ ಪ್ರತಿ ವರ್ಷ ಅವರಿಗೆ ನಡೆಸಲು ಮುಂದುವರಿಸಲು ಬೇಕಾದ ಆರ್ಥಿಕ ಸಾಮರ್ಥ್ಯ ಇಲ್ಲದಿರುವುದು ಒಂದು ಕಾರಣವಾದರೆ ಸ್ಥಳೀಯ ಸಂಸ್ಥೆಗಳಾಗಲಿ ಜನ ಪ್ರತಿನಿಧಿಗಳಾಗಲಿ ತಾಳಗುಂದದ ಇತಿಹಾಸದ ಬಗ್ಗೆ ಇರುವ ನಿರಾಸಕ್ತಿ ಇನ್ನೊಂದು ಕಾರಣವಾಗಿದೆ.
ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವದ ವರ್ಷದಲ್ಲಿ ಕನ್ನಡದ ಮೊದಲ ಶಾಸನದ ತಾಳಗುಂದದಲ್ಲಿ ಇರಬೇಕಾದ ಸಡಗರ ಸಂಭ್ರಮಗಳು ಕಾಣದಿರುವುದು ಕನ್ನಡಿಗರ ನಿರಭಿಮಾನಕ್ಕೆ ಉದಾಹರಣೆ ಆಗಿದೆ.
Comments
Post a Comment