#ಎಂದಿನಂತೆ_ಇವತ್ತಿನ_ಬೆಳಗು_ಆದರೆ
#ರಾಟವೀಲರ್_ರೋಟಿನ್
#ನನಗೆ_ಮತ್ತು_ನನ್ನ_ಪ್ರೀತಿಯ_ಶಂಭೂರಾಮನಿಗೆ_ಮಾತ್ರ_ನಿತ್ಯ_ನೂತನ
#ಅವನ_ದೃಡವಾದ_ಸಂಯಮ_ನಮಗೆ_ಅನುಕೂಲವಾಗಿದೆ
#ಮತ್ತು_ಅವನ_ಮೇಲೆ_ಹೆಚ್ಚು_ಪ್ರೀತಿಗೆ_ಕಾರಣವಾಗಿದೆ.
https://youtu.be/KqLC-NL32pI?feature=shared
ನಿತ್ಯ ನೂತನದ ಇವತ್ತಿನ ಬೆಳಗು ನನ್ನ ಮತ್ತು ಶಂಭೂರಾಮನ ಬೆಳಗಿನ ಒಂದು ಗಂಟೆಯ ವಾಕಿಂಗ್ ಪ್ರಾರಂಭಕ್ಕೆ ಮೊದಲಿನ ಕೆಲ ತಯಾರಿಗಳು ಇದೆ.
ಮೊದಲಿಗೆ ಅವನಿಗೆ ಕುಡಿಯುವ ನೀರು ಬಾಟಲ್ ನಲ್ಲಿ ತುಂಬಿಸಿ ಕೊಳ್ಳುವುದು, ಅವನ ಪೀಡಿಂಗ್ ಪ್ಲೇಟಿಗೆ ತೊಳೆದು ಸ್ಲೈಸ್ ಮಾಡಿದ ಸಲಾಡ್ ಸೌತೆ, ಬಾಳೆಹಣ್ಣು, ಅವನ ಸ್ಟ್ರಾಪ್, ಬಿಸ್ಕಿಟ್, ಗೇಟಿಗೆ ಹಾಕುವ ಬೇಗಗಳು, ನನ್ನ ಆಫೀಸ್ ಹಿಂಭಾಗದ ಬಾಗಿಲ ಬೀಗದ ಕೀ, ಬ್ಲೀಚಿಂಗ್ ಪುಡಿ ಡಬ್ಬಿ, ನನ್ನ ಶೂ, ನನ್ನ ವಾಕಿಂಗ್ ಪಾತ್ ಗಾರ್ಡನ್ ಹೂವಿನ ಗಿಡಕ್ಕೆ ಹಾಕುವ ನೀರು ತುಂಬಿದ ಬಕೇಟ್ ಜಗ್, ಪಿಟ್ನೆಸ್ ಟ್ರಾಕರ್ ಸಮೇತ ತಯಾರಾಗಬೇಕು.
ನಂತರ ಎಲ್ಲಾ ಗೇಟುಗಳ ಲಾಕ್ ಮಾಡಿದ ನಂತರ ಶಂಭೂರಾಮನಿಗೆ ತರಕಾರಿ ನೀಡುವ ಕೆಲಸ ಅವನು ಅದಕ್ಕಾಗಿ ಅವನು ನಿರ್ದಿಷ್ಟ ಜಾಗದಲ್ಲಿ ಕುಳಿತುಕೊಳ್ಳುತ್ತಾನೆ ನನಗೆ ಪ್ರತಿ ತುತ್ತಿಗೆ ಎರೆಡು ಥ್ಯಾಂಕ್ಸ್ ಕೊಡುತ್ತಾನೆ.
ನನ್ನ ಒಪ್ಪಿಗೆ ಇಲ್ಲದಿದ್ದರೆ ತಿನ್ನುವುದಿಲ್ಲ, ಒತ್ತಾಯದಿಂದ ಬಾಯಿಗೆ ತುರುಕಿದರೂ ಊಹೂಂ....ತಿನ್ನುವುದಿಲ್ಲ ನನ್ನ ಒಪ್ಪಿಗೆಯ ಮಾತು ತಿನ್ನು ಅನ್ನುವ ಶಬ್ದ ಮತ್ತು ನನ್ನ ಮುಖದ ಚಹರೆ ನೋಡಿ ತಿನ್ನುತ್ತಾನೆ.
ಮನೆ ಒಳಗೆ ನಮ್ಮ ಜೊತೆ ವಾಸ ಇರುವ ಶಂಭೂ ರಾಮನ ಸುತ್ತ ಅವನಿಷ್ಟದ ಹಣ್ಣು ತರಕಾರಿ ಇರುತ್ತದೆ ಆದರೆ ಕಳೆದ ಮೂರು ವರ್ಷಗಳಿಂದ ಅವನು ಅದಕ್ಕೆ ಬಾಯಿ ಹಾಕಿದ ಉದಾಹರಣೆ ಒಂದು ಇಲ್ಲ.
ಅವನ ದೃಡವಾದ ಸಂಯಮ ನಮಗೆ ಅನುಕೂಲವಾಗಿದೆ ಮತ್ತು ಅವನ ಮೇಲೆ ಹೆಚ್ಚು ಪ್ರೀತಿಗೆ ಕಾರಣವಾಗಿದೆ.
Comments
Post a Comment