#ಕುಂಚಿಕಲ್_ಪಾಲ್ಟ್_ಮೊದಲ_ವಿಡಿಯೋ_ಮಾಡಿದ್ದ
#ಸಮಾಜಸೇವಕರಾದ_ನಗರ_ನಾರಾಯಣ_ಕಾಮತರ_ಸಂದೇಶ_ಬಂದಿದೆ
#ಅವರ_ಮಿತ್ರ_ಅನಂತಮೂರ್ತಿ_ಶೆಣೈೆ_ಇತ್ತೀಚಿನ_ಕೆಲವು_ವಿಡಿಯೋ_ಕಳಿಸಿದ್ದಾರೆ
#ಯಾರು_ಯಾವಾಗ_ತೆಗೆದದ್ದು_ಎಂಬ_ಮಾಹಿತಿ_ಸಿಕ್ಕಿಲ್ಲ
#ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://youtu.be/xHxHlUyB6cM?feature=shared.
ಅರುಣ್ ಪ್ರಸಾದ್ ಸರ್..
ಕುಂಚಕಲ್ ಜಲಪಾತದ ಕುರಿತ ನೈಜ ಚಿತ್ರಣ ಹಾಗೂ ಅದರ ಕರಾರುವಾಕ್ ಎತ್ತರದ ಕುರಿತ ಮಾಹಿತಿಗೆ ತಾವು ಪ್ರಯತ್ನಿಸುತ್ತಾ ಸತತ ವಾಗಿ ಮಾಹಿತಿ ಸಂಗ್ರಹಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ. ನಿಮ್ಮ ಜೊತೆ ನಮ್ಮ ಚಾರಣದ ಮಾಹಿತಿ ಹಂಚಿಕೊಂಡ ನಂತರ ನಮಗೆಲ್ಲರಿಗೂ ಹೌದಲ್ಲವೇ ...
ನಮ್ಮಲ್ಲೇ ಇಂತಹದೊಂದು ಅಧ್ಬುತ ನಿಸರ್ಗ ನಿರ್ಮಿತ ಜಲಪಾತ ವಿದ್ದಾಗ ಯಾಕೆ ಇದು ಗುರುತು ಮಾಡಲಾಗಿಲ್ಲ ಎಂಬ ಯೋಚನೆಯೂ ಬೆನ್ನುಹತ್ತಿದೆ ಹಾಗಾಗಿ ಮೊನ್ನೆಯಿಂದ ಮಾಹಿತಿ ಸಂಗ್ರಹಕ್ಕೆ ಪ್ರಯತ್ನ ಪಡುತ್ತಿದ್ದೇವೆ. ಬಲ್ಲ ಮಾಹಿತಿಯ ಪ್ರಕಾರ 2008 ರಲ್ಲಿ ಕರ್ನಾಟಕ ಪವರ್ ಕಾರ್ಪೋರೇಶನ್ ವತಿಯಿಂದ ವರಾಹಿಯ ನದಿಯ ಬಗ್ಗೆ ಯಡೂರು ನಿಂದ ಆರಂಭ ವಾಗಿ ಸಮುದ್ರ ಸೇರುವ ಗಂಗೊಳ್ಳಿಯ ವರೆಗೂ ಸರ್ವೇ ಮಾಡಲಾಗಿದ್ದು ಆದ್ರೆ ಜಲಪಾತದ ಎತ್ತರದ ಕುರಿತ ಮಾಹಿತಿ ತಿಳಿಯುತ್ತಿಲ್ಲ. ಆದರೆ ಈ ಜಲಪಾತದ ಕುರಿತು ಸಿಕ್ಕ ಇನ್ನೊಂದು ಮಾಹಿತಿಯೂ ಅತ್ಯಂತ ಕುತೂಹಲ ಹಾಗೂ ಭಯಾಶ್ಚರ್ಯವೂ ಆಯಿತು.
ಈ ಸರ್ವೇ ನೆಡೆಯುವ ವೇಳೆ ಸರ್ವೆಗೆ ಬಂದಂತಹ ವ್ಯಕ್ತಿಗಳು ಜಲಪಾತದ ಬೃಹತ್ ಬಂಡೆಗಳ ಮೇಲಿಂದ ಕೆಳಕ್ಕೆ ಇಳಿಯಲಾಗದೆ ಬಂಡೆಗಳಿಗೆ ಗುಳಿ ಗಳನ್ನು ಹೊಡೆದು ಅದಕ್ಕೆ ರೋಪ್ ಗಳನ್ನು ಹಾಕಿಕೊಂಡು ಕೆಳಕ್ಕೆ ಹಂತ ಹಂತ ವಾಗಿ ಇಳಿಯುತ್ತಾ ತೆರಳಿದ್ದರಂತೆ ಹಾಗೆಯೇ ಘಟ್ಟದ ಮೇಲಿನ ತಂಡವೇ ಬೇರೆ ಹಾಗೂ ಜಲಪಾತ ಆಳಕ್ಕೆ ಕಡಿದಾಗಿರುವುದರಿಂದ ಘಟ್ಟದ ಕೆಳಗಿನಿಂದ ರಸ್ತೆಯ ಮಾರ್ಗವಾಗಿ ಸುತ್ತಾಗಿ ವಾಹನದ ಮೂಲಕ ಇನ್ನೊಂದು ತಂಡ ಜಲಪಾತದ ಬುಡದಲ್ಲಿ ಬಂದು ಸೇರಬೇಕಾಯ್ತು ಹಾಗೆ ಕೆಳಗಿನ ಕಡೆಯಿಂದ ಮೇಲೆ ಬರುವಲ್ಲಿ ಅತಿ ದೊಡ್ಡ ಬಂಡೆಗಳ ಸೀಳು ಗಳ ಮದ್ಯೆ ಹಾಗೆ ಕೊರಕಲು ಗುಂಡಿಗಳನ್ನು ನೋಡಿಯೇ ಜೀವಭಯ ಆದ ಬಗ್ಗೆಯು ಮಾಹಿತಿ ಕೊಟ್ಟಿದ್ದಾರೆ ಸರ್. ಇಂತಹ ನಿಸರ್ಗ ನಿರ್ಮಿತ ಪುರಾತನ ವಾರಾಹಿ ನದಿಯ ಈ ಜಲಪಾತ ನೈಜ ಎತ್ತರ ಹಾಗೂ ಅದರ ನೈಸರ್ಗಿಕ ಸೌಂದರ್ಯವು ದಾಖಲೆ ಗೊಂಡು ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಸಮೀಪದ ಕುಂಚಕಲ್ ಜಲಪಾತವು ಮುಂದಿನ ದಿನಗಳಲ್ಲಿ ಅತ್ಯಂತ ಸುಂದರ ಜಲಪಾತದ ಪಟ್ಟಿಯಲ್ಲಿ ಸೇರಲಿ ಎಂಬ ಮಹದಾಸೆಯೂ ನಮ್ಮಲಿದೆ.
ನಿಮ್ಮ ಪ್ರಯತ್ನಕ್ಕೆ ಮತ್ತೊಮ್ಮೆ ಧನ್ಯವಾದಗಳು ಸರ್
ನಿಮ್ಮವ ನಗರ ಸಿ.ನಾರಾಯಣ ಕಾಮತ್.
Comments
Post a Comment