Blog number 2129. ಕುಣುಬಿ ಜನಾಂಗದವರ ಸ್ವಾಮಿನಿಷ್ಟೆಗೆ ಸಾಕ್ಷಿ ಆಗಿರುವ ಈ ಇತಿಹಾಸದ ಘಟನೆ ರಾಣಿ ಚೆನ್ನಬೈರಾದೇವಿ ಬಂದನ ವಿರೋದಿಸಿ ವಿಪಲ ಹೋರಾಟ ಮಾಡಿ ಕೆಳದಿ ಅರಸರಿಗೆ ಶಾಪ ನೀಡಿದ ಕುಣುಬಿ ಕೆಂಪಿಯ ಸಾಹಸ.
https://www.facebook.com/share/v/FLMRyznZVUCVrmfy/?mibextid=O563ZM
#ನೀವು_ನಿರಂತರವಾಗಿ_ಈ_49_ಭಾಗಗಳಲ್ಲಿ_ಬಂದಿರುವ
#ಕಾಳುಮೆಣಸಿನ_ರಾಣಿ_ಗೇರುಸೊಪ್ಪೆಯ_ಸಾಮ್ರಾಜ್ಞಿ
#ಶರಾವತಿ_ನದಿದಂಡೆಯ_ಜೈನರಾಣಿ_ಚೆನ್ನಬೈರಾದೇವಿ_ಇತಿಹಾಸದ
#ಕಥೆ_ಇತಿಹಾಸ_ಸಂಶೋದಕ_ಲೋಕರಾಜ_ಜೈನರು_ಹೇಳುತ್ತಿರುವುದನ್ನ
#ನಾಡಿನ_ಪ್ರಖ್ಯಾತ_ಡಿಜಿಟಲ್_ಮಾಧ್ಯಮದಲ್ಲಿ_ನೋಡುತ್ತಿದ್ದರೆ
#ನೀವೂ_ಕಣ್ಣೀರಾಗದೇ_ಇರಲು_ಸಾಧ್ಯವೇ_ಇಲ್ಲ
#ಕುಣುಬಿ_ಜನಾಂಗದ_ಕೆಂಪಿ_ಕೆಳದಿ_ಅರಸರಿಗೆ_ಹಾಕಿದ_ಶಾಪ
#ಅಂತಿಮ_ಕ್ಷಣದವರೆಗೆ_ಕವಣೆ_ಕಲ್ಲಿಂದ_ದಾಳಿ_ಮಾಡಿದ_ಕುಣುಬಿ_ಜನಾಂಗದ_ಸೈನಿಕರು
#ಕುಣುಬಿ_ಜನಾಂಗದ_ಸ್ವಾಮಿ_ನಿಷ್ಟೆಗೆ_ಪ್ರತೀಕವಾದ_ಇತಿಹಾಸದ_ದಾಖಲೆ
#ಯಮ_ಸಲ್ಲೇಖನ_ವೃತ_ಪಾಲಿಸಿ_ಇಕ್ಕೇರಿ_ಕೋಟೆಯಲ್ಲಿ_ಜಿನೈಕ್ಯಳಾಗುವ_ರಾಣಿಚೆನ್ನಬೈರಾದೇವಿ.
ನಾನಂತೂ ಲೋಕರಾಜ ಜೈನರೇ ಕಣ್ಣು ಒರೆಸಿಕೊಂಡಾಗಲೇ ಕಣ್ಣೀರಾದೆ.. ನನಗೆ ಸಿನಿಮಾ ನಾಟಕಗಳಲ್ಲಿ ದುಃಖದ ಸನ್ನಿವೇಶಗಳು ನನ್ನ ಕರ್ಚೀಪು ಒದ್ದೆ ಆಗದೇ ಉಳಿಯುವುದಿಲ್ಲ.
ಶರಾವತಿ ನದಿ ದಂಡೆಯ ಏಕೈಕ ಸಾಮ್ರಾಜ್ಯವಾದ ಗೇರುಸೊಪ್ಪೆ ಸಾಮ್ರಾಜ್ಯ 54 ವರ್ಷವಾಳಿದ ರಾಣಿ ಚೆನ್ನಬೈರಾದೇವಿಯನ್ನು ವರದಾನದಿ ದಂಡೆಯ ಕೆಳದಿ ರಾಜವಂಶದ 43 ವರ್ಷ ಆಳ್ವಿಕೆ ಮಾಡುವ ಸಾಗರ ಪಟ್ಟಣ (ಸದಾಶಿವ ಸಾಗರ) ನಿರ್ಮಿಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ಗೇರುಸೊಪ್ಪೆಯಲ್ಲಿ ಬಂದಿಸಿ ಇಕ್ಕೇರಿ ಕೋಟೆಯ ಜೈಲಿಗೆ ಕರೆತರುವಾಗ ಕುಣುಬಿ ಜನಾಂಗದ ಕೆಂಪಿಯ ವಿಪಲ ಹೋರಾಟದಲ್ಲಿ ತನ್ನೆರೆಡು ಕೈಗಳನ್ನ ಕಳೆದುಕೊಂಡಾಗ ಆಕೆ ತನ್ನ ರಾಣಿ ಚೆನ್ನಬೈರಾದೇವಿಯ ಬಂದನ ವಿರೋದಿಸಿ ಹಾಕುವ ಶಾಪ.
ಕಣಿವೆಯ ಮೇಲಿಂದ ಕವಣೆ ಕಲ್ಲಿನಿಂದ ದಾಳಿ ಮಾಡುವ ಕುಣುಬಿ ಜನಾಂಗದ ಪ್ರಜೆಗಳ ಹೋರಾಟದ ವಿವರಗಳು ಈ ಘಟನೆ ನಡೆದ ಸಾಗರ ತಾಲ್ಲೂಕಿನ ನಮಗೆ ಗೊತ್ತೇ ಇಲ್ಲದ ಚರಿತ್ರೆಗಳು.
ಬಂದನಕ್ಕೆ ಒಳಗಾದಾಗ 75 ವರ್ಷದ ರಾಣಿ ಚೆನ್ನಬೈರಾದೇವಿ ಮೌನ ವೃತ ಆಚರಣೆ ಪ್ರಾರಂಬಿಸುತ್ತಾಳೆ.. ಇಕ್ಕೇರಿ ಕೋಟೆಯಲ್ಲಿ ಬಂದನದಲ್ಲಿದ್ದಾಗ ಅವಳ ಜೈನ ಧರ್ಮದ ಸಂಪ್ರದಾಯದಂತೆ ಯಮ ಸಲ್ಲೇಖನ ವೃತ ನಿಯಮಗಳನ್ನು ಪಾಲಿಸಿ ಜನೈಕ್ಯಳಾಗುತ್ತಾಳೆ.
ಮುಂದೆ.... ಮುಂದಿನ ಎಪಿಸೋಡುಗಳಿಗೆ ಕಾದಿದ್ದೇನೆ..
ಆದ್ಬುತವಾಗಿ ಇಡೀ ಗೇರುಸೊಪ್ಪೆ ಇತಿಹಾಸ ಅಧ್ಯಯನ ಮಾಡಿ ಅವರ ಆಳ್ವಿಕೆಯ ಒಂದಿಂಚು ಜಾಗ ಬಿಡದೆ ಕಾರ್ಯಕ್ಷೇತ್ರ ಸಂಶೋದನೆ ಮಾಡಿದ ಅದಕ್ಕೆ ಸಂಬಂದಪಟ್ಟ ಜನಪದದಲ್ಲಿನ ಮಾಹಿತಿ, ಶಿಲಾಶಾಸನಗಳು, ಬಸದಿ, ದೇವಾಲಯ, ಕೋಟೆ, ಕೆರೆ, ಬಾವಿ, ರಹಸ್ಯ ಮಾರ್ಗ, ಜೈನ ಧರ್ಮದ ಎಲ್ಲಾ ಶಾಸ್ತ್ರಗಳ ಆಚರಣೆ, ಹಸ್ತಪ್ರತಿ, ರಾಣಿ ಇತಿಹಾಸದಲ್ಲಿ ಅಳಿದುಳಿದ ಮನೆತನಗಳನ್ನು ಗುರುತಿಸಿ ವಿವರಿಸುವ ಲೋಕರಾಜ ಜೈನರು ಗೇರುಸೊಪ್ಪೆ ರಾಣಿ ಚೆನ್ನ ಬೈರಾದೇವಿ ವಂಶಸ್ಥರು ಆಗಿರುವುದರಿಂದ ಅವರಿಗಾಗುವ ದುಃಖ ಮತ್ತು ಕಣ್ಣೀರ ಕಂಬನಿ ಸಹಜ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://www.facebook.com/share/p/nstZpDJcgduw38zk/?mibextid=qi2Omg
Comments
Post a Comment