Blog number 2151.ಹಾರನಹಳ್ಳಿ ಮುಕ್ತಿಯಾರ್ ಸಾಹೇಬರ ತರಕಾರಿ - ನೀರುಳ್ಳಿ - ಕಾಯಿ ವ್ಯಾಪಾರ ನಮ್ಮ ಜೊತೆ 15 ವರ್ಷದಿಂದ ನಿರಂತರವಾಗಿ ನಡೆದು ಬಂದಿದೆ.
#ನಮ್ಮ_ಊರಿನ_ಶ್ರಮಜೀವಿ_ಮುಕ್ತಿಯಾರ್_ಸಾಹೇಬರು
#ಕಾಯಿ_ತರಕಾರಿ_ನೀರುಳ್ಳಿ_ಸರಬರಾಜುದಾರರು
#ಅವರ_ವ್ಯಾನಿಗೆ_ಅವರೇ_ಡ್ರೈವರ್_ಲೋಡು_ಆನ್_ಲೋಡು_ಅವರೇ
#ವ್ಯಾಪಾರವೂ_ಅವರದ್ದೆ
#ವಿದ್ಯಾಬ್ಯಾಸ_ಇಲ್ಲದಿದ್ದರೂ_ಲೆಖ್ಖ_ಪಕ್ಕಾ.
https://youtube.com/shorts/moUcY9osAGw?feature=shared
ಅಯನೂರು ಸಮೀಪದ ಹಾರನಳ್ಳಿಯ ಮುಕ್ತಿಯಾರ್ ನಮ್ಮ ಊರವರೇ ಆಗಿದ್ದಾರೆ ಅವರು ಆನಂದಪುರಂ -ರಿಪ್ಪನ್ ಪೇಟೆ - ಬಟ್ಟೆಮಲ್ಲಪ್ಪ - ಮಾರುತಿಪುರ ವ್ಯಾಪ್ತಿಯ ಸಂತೆ ವ್ಯಾಪಾರ ಮತ್ತು ಈ ಭಾಗದ ಹೋಟೆಲ್ ಅಂಗಡಿಗಳಿಗೆ ಕಳೆದ 25 ವರ್ಷದಿಂದ ತೆಂಗಿನಕಾಯಿ - ನೀರುಳ್ಳಿ - ತರಕಾರಿ ಸರಬರಾಜದಾರರು.
ಕೊರಾನಾ ಲಾಕ್ ಡೌನ್ ಆದಾಗ ನಮ್ಮ ಮಲ್ಲಿಕಾ ವೆಜ್ ಇವರಿಗೆ ಪಾವತಿ ಮಾಡಬೇಕಾದ ಬಾಕಿ 80 ಸಾವಿರಕ್ಕೂ ಜಾಸ್ತಿ ಈ ಸಂದರ್ಭ ಇವರು ಹೇಗೆ ವರ್ತಿಸುತ್ತಾರೆ ಎಂದು ನಾನು ಇವರನ್ನ ಗಮನಿಸಿದೆ...
" ಇಡೀ ಪ್ರಪಂಚವೇ ಲಾಕ್ ಡೌನ್ ಆಗಿದೆ ನಾವು ನೀವು ಯಾವ ಲೆಕ್ಕ ಬಿಡ್ರಣ್ಣ... ಬದುಕಿ ಬಂದರೆ ಎಲ್ಲಾ ಸರಿ ಆದರೆ ಮತ್ತೆ ನೋಡೋಣ" ಅಂದಾಗ ನನಗೇ ಆಶ್ಚರ್ಯ ಈ ಪ್ರಪಂಚದಲ್ಲಿ ಇಂತವರೂ ಇದ್ದಾರ ಅನ್ನಿಸಿತು.
ಅವರ ಹಾರೈಕೆಯಂತೆ ಬಂದ ಆಪತ್ತು ಕಾಲ ಮುಗಿಯಿತು ಈಗ ವಾರಕ್ಕೆ ಎರಡು ಬಾರಿ ನಮ್ಮ ಮಲ್ಲಿಕಾ ವೆಜ್ ಗೆ ತರಕಾರಿ, ಕಾಯಿ, ನೀರುಳ್ಳಿ ಎಲ್ಲಾ ತರುತ್ತಾರೆ.
ಒಂದು ವಿಶೇಷ ಅಂದರೆ ಇವರ ಪಿಕ್ ಅಪ್ ವ್ಯಾನ್ ಡ್ರೈವರ್ ಇವರೇ, ಹಮಾಲಿ ಇವರೇ, ಮಾರಾಟಗಾರರೂ ಇವರೇ. ಬಾಲ್ಯದಲ್ಲಿ ಶಿಕ್ಷಣ ವಂಚಿತರಾದರೂ ಇವರು ಲೆಖ್ಖದಲ್ಲಿ ಪಕ್ಕಾ ಪ್ರತಿ ತಿಂಗಳು ಹೆಚ್ಚು ಕಡಿಮೆ ಒಂದು ಲಕ್ಷದ ವಹಿವಾಟು ನಮ್ಮ ಜೊತೆ ಇದೆ.
Comments
Post a Comment