Blog number 2153. ಕೊಡಚಾದ್ರಿ ಪ್ರವಾಸಿ ಮಂದಿರ ಉದ್ಘಾಟಿಸಿದ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರಿಗೆ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಬಿ.ಸ್ವಾಮಿ ರಾವ್ ಆಯೋಜಿಸಿದ್ದ ವಿಶೇಷ ಮಲೆನಾಡಿನ ಖಾದ್ಯಗಳ ಬೋಜನ
#ಸ್ವಾಮಿರಾವ್_ಮಾತುಕಥೆ_4.
#ರಾಜ್ಯದಲ್ಲೇ_ಅತ್ಯಂತ_ವಿಸ್ತಾರದ_ವಿಧಾನಸಭಾ_ಕ್ಷೇತ್ರವಾಗಿತ್ತು
#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ವಿಧಾನಸಭಾ_ಕ್ಷೇತ್ರ
#ಈಗ_ಹೊಸನಗರ_ವಿಧಾನಸಭಾ_ಕ್ಷೇತ್ರ_ಅಸ್ತಿತ್ವದಲ್ಲಿ_ಇಲ್ಲ
#ಸಾಗರ_ತೀರ್ಥಹಳ್ಳಿ_ಶಿವಮೊಗ್ಗ_ಗ್ರಾಮಾಂತರ_ವಿಧಾನಸಭಾ_ಕ್ಷೇತ್ರದಲ್ಲಿ_ಹರಿದು_ಹಂಚಿದೆ
#ಕೊಡಚಾದ್ರಿ_ಅಮ್ಮನಘಟ್ಟಗಳು_ಈ_ಕ್ಷೇತ್ರಕ್ಕೆ_ಸೇರಿದೆ
#ಕೊಡಚಾದ್ರಿ_ಬೆಟ್ಟದ_ಪ್ರವಾಸಿ_ಮಂದಿರದ_ಉದ್ಘಾಟನೆಗೆ_ಮುಖ್ಯಮಂತ್ರಿ_ಬಂಗಾರಪ್ಪರಿಂದ
#ಅವತ್ತಿನ_ರಾತ್ರಿ_ಸ್ವಾಮಿರಾಯರು_ವ್ಯವಸ್ಥೆ_ಮಾಡಿದ_ವಿಶೇಷ_ಬೋಜನ
#ಕೊಡಚಾದ್ರಿಗೆ_ಬಂದ_ಮೊದಲ_ಹೆಲಿಕಾಪ್ಟರ್
#ಸಾಗರದಿಂದ_ಪುತ್ತೂರಾಯರ_ಹೊಸ_ಹಸಿರು_ಪಿಯೆಟ್_ಕಾರ್_ಸ್ವತಃ
#ಮುಖ್ಯಮಂತ್ರಿ_ಬಂಗಾರಪ್ಪ_ಚಾಲನೆ_ಮಾಡಿ_ಕೊಡಚಾದ್ರಿ_ತಲುಪಿದ್ದರು.
ಒಂದು ತುದಿಯಿಂದ ಇನ್ನೊಂದು ತುದಿಗೆ 175 ಕಿ.ಮಿ. ಉದ್ದ ಇದ್ದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿದಿಸಿದ್ದ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ತಮ್ಮ 94 ಹುಟ್ಟು ಹಬ್ಬದ ಸಂದರ್ಭದಲ್ಲಿ ಅವತ್ತಿನ ದಿನಗಳ ನೆನಪಿಸಿ ಕೊಂಡಿದ್ದಾರೆ.
ಕೊಡಚಾದ್ರಿ ಬೆಟ್ಟದಲ್ಲಿ ಹೊಸ ಅತಿಥಿ ಗೃಹ ನಿರ್ಮಿಸಿ ಅದರ ಉದ್ಘಾಟನೆಗೆ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರನ್ನ ಕರೆತಂದಿದ್ದರು.
ಕೊಡಚ್ಚಾದ್ರಿ ಬೆಟ್ಟಕ್ಕೆ ಬಂದ ಮೊದಲ ಹೆಲಿಕಾಪ್ಟರ್ ಅದು ಅವತ್ತು ಬಂಗಾರಪ್ಪರ ಹೆಲಿಕಾಪ್ಟರ್ ಸಾಗರದಲ್ಲಿ ಲ್ಯಾಂಡ್ ಆಗಿತ್ತು ಸಾಗರದಲ್ಲಿ ಅವರ ಸಂಬಂದಿ ಕೆ.ಜಿ.ಶಿವಪ್ಪರ ಮನಯಲ್ಲಿ ಸ್ವಲ್ಪ ಕಾಲ ವಿಶ್ರಾಂತಿಗೆ ವಿರಮಿಸಿ ನಂತರ ಪುತ್ತೂರಾಯರ ಹೊಸದಾದ ಹಸಿರು ಬಣ್ಣದ ಪಿಯೆಟ್ ಕಾರ್ ಸ್ವತಃ ಮುಖ್ಯಮಂತ್ರಿ ಬಂಗಾರಪ್ಪನವರೇ ಚಾಲನೆ ಮಾಡಿಕೊಂಡು ಕೊಡಚಾದ್ರಿ ಬೆಟ್ಟದ ತುದಿ ತಡ ರಾತ್ರಿ ತಲುಪಿದ್ದರು ಅವರ ಜೊತೆ ಅವರ ಅತ್ಯಾಪ್ತ ಗೆಳೆಯ ಮೈಸೂರಿನ ಫೋತರಾಜ್ ಇದ್ದರು.
ಕೊಡಚಾದ್ರಿ ಬೆಟ್ಟದಲ್ಲಿ ನಾಡಿನ ಮುಖ್ಯಮಂತ್ರಿಗೆ ಅವತ್ತಿನ ರಾತ್ರಿಯ ವಿಶೇಷ ಬೋಜನ ಆ ಕ್ಷೇತ್ರದ ಶಾಸಕರಾಗಿದ್ದ ಸ್ವಾಮಿ ರಾವ್ ವ್ಯವಸ್ಥೆ ಮಾಡಿದ್ದರು ಏನೇನು ವಿಶೇಷ ಅಪರೂಪದ ಊಟ ಎಂಬುದು ಅವರ ಬಾಯಿಯಲ್ಲೇ ಕೇಳಿ.
ಮರು ಬೆಳಿಗ್ಗೆ ಸಾಗರದಿಂದ ಬಂದು ಕೊಡಚಾದ್ರಿಯಲ್ಲಿ ಇಳಿದ ಹೆಲಿಕಾಪ್ಟರ್ ನಲ್ಲಿ ಪ್ರವಾಸಿ ಮುಂದಿರ ಉದ್ಘಾಟಿಸಿ ಬಂಗಾರಪ್ಪನವರು ಬೆಂಗಳೂರು ತಲುಪಿದರು.
Comments
Post a Comment