Skip to main content

Blog number 2138. ಚಿಂತಕ ಅರವಿಂದ ಚೊಕ್ಕಾಡಿ ಜೊತೆ ಹೊಸ ಸಾಹಿತಿಗಳ ಪುಸ್ತಕ ಪ್ರಕಾಶನ ಇತ್ಯಾದಿ ಬಗ್ಗೆ ಸಣ್ಣ ಪೇಸ್ ಬುಕ್ ಸಂವಾದ

#ಸಾಹಿತ್ಯದ_ಆಸಕ್ತರಿಗೆ_ಪುಸ್ತಕ_ಪ್ರಕಾಶಕರಿಗೆ_ಲೇಖಕರಿಗೆ_ಮಾತ್ರ

#ಇಷ್ಟ_ಆಗ_ಬಹುದಾದ_ಪೇಸ್_ಬುಕ್_ಸಂಭಾಷಣೆ

#ಖ್ಯಾತ_ಲೇಖಕ_ಶಿಕ್ಷಣ_ತಜ್ಞ_ತರ್ಕಜ್ಞಾನಿ_ಅರವಿಂದಚೊಕ್ಕಾಡಿ_ಜೊತೆ

#ಹೊಸ_ಲೇಖಕರಿಗೆ_ಪ್ರೋತ್ಸಾಹದ_ಕುರಿತು_ಚರ್ಚೆ


ನಾನು ಅರವಿಂದ ಚೊಕ್ಕಾಡಿ ಅವರ ಪೇಸ್ ಬುಕ್ ಪೋಸ್ಟ್ ಒಂದಕ್ಕೆ  ಈ ಕೆಳಕಂಡಂತೆ ಪ್ರತಿಕ್ರಿಯಿಸಿದ್ದೆ. . . . .
#ಬರೆದದ್ದೆಲ್ಲ_ಅಚ್ಚಾಗಬೇಕು...
ಅಚ್ಚಾಗಿದ್ದೆಲ್ಲ ಮಾರಾಟ ಆಗಬೇಕು.....
 ಅನ್ನುವುದಕ್ಕಿಂತ .... 
ಬರೆಯುವ ಹವ್ಯಾಸ ನಿರಂತರವಾಗಿರಬೇಕು......
 ಅದು ಬೇಕಾದಾ ಆಸಕ್ತರಿಗೆ ಯಾವತ್ತಾದರೂ ತಲುಪ ಬಹುದು ಅಥವ ತಲುಪದೇ ಇರಬಹುದು.

ಈ ಪ್ರತಿಕ್ರಿಯೆಗೆ #ಅರವಿಂದಚೊಕ್ಕಾಡಿ ಅವರು ಬರೆದದ್ದು
#ಅರುಣ್_ಪ್ರಸಾದ್,
    ನೀವನ್ನುವುದು ಸರಿ. ಬರೆದದ್ದೆಲ್ಲ ಅಚ್ಚಾಗಬೇಕು, ಎಲ್ಲರೂ ಕೊಂಡುಕೊಳ್ಳಬೇಕು, ಎಲ್ಲರೂ ಹಾಡಿಹೊಗಳಬೇಕು ಎಂಬ ನಿಲುಮೆ ಸರಿಯಲ್ಲ. ಇದು ಸಾಹಿತ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ನಾನು ಹೇಳುತ್ತಿರುವುದು. 
    ತಾನು ಚುನಾವಣೆಯಲ್ಲಿ ಸ್ಪರ್ಧಿಸಿದ ಕೂಡಲೇ ಮುಖ್ಯಮಂತ್ರಿ ಆಗ್ತೇನೆ ಎಂದುಕೊಂಡು ರಾಜಕೀಯಕ್ಕೆ ಹೋಗ್ಲಿಕಾಗ್ತದಾ?ಮುಖ್ಯವಾಗಿ ಕನ್ನಡದಲ್ಲಿ ಬರೆದೇ ಬದುಕಬಲ್ಲೆ ಎನ್ನಲು ಸಾಧ್ಯ ಇಲ್ಲ ಎನ್ನುವುದು ನಿಜ.‌
   ಇದು ಹೊಸಬರಿಗೆ ಮಾತ್ರ ಇರುವ ಸಮಸ್ಯೆಯಲ್ಲ‌. ಯಾವ ಹೆಸರಾಂತ ಲೇಖಕರು ಬರೆದೇ ಬದುಕುತ್ತಿದ್ದಾರೆ? ಯಾರೂ ಇಲ್ಲ. ಅಥವಾ ಯಾವ ಹೊಸಬರಿಗೆ ಹಳಬರು,"ಬರೆದೇ ಬದುಕು ಬಾ" ಎಂದು ಕರೀತಾರೆ? ಯಾರೂ ಇಲ್ಲ.
    ಇದರರ್ಥ ಸಾಹಿತ್ಯ ಕ್ಷೇತ್ರ ಎಂದರೆ ಹೆಲ್ಪಿಂಗ್ ನೇಚರೇ ಇಲ್ಲದ ಪಾತಕಿಗಳ ಲೋಕ ಎನ್ನುವ ಹಾಗೆ ಸಮಾಜಕ್ಕೆ ಕಾಣಿಸುವುದಾಗಬಾರದು.
    ನಾನು ಕಾರ್ಯಕ್ರಮ ಮಾಡಿದಾಗ ಕೊಟ್ಟ ಪ್ರಯಾಣ ಭತ್ತೆ, ಗೌರವ ಧನವನ್ನು ವಾಪಸ್ ಕೊಟ್ಟು ಹೋದ ಸಾಹಿತಿಗಳಿದ್ದಾರೆ. ಸರ್ಕಾರಿ ಕಾರ್ಯಕ್ರಮವೊ, ಉದ್ಯಮಿಗಳ ಕಾರ್ಯಕ್ರಮವೊ ಆದರೆ ಬಿಡ್ತಿರಲಿಲ್ಲ ಅವರು. 
   ಬಿಟ್ಟದ್ದು ಒಬ್ಬ ಹೊಸಬನಿಗೆ ಪ್ರೋತ್ಸಾಹ ಕೊಡಬೇಕೆಂದಲ್ಲದೆ ಬೇರೇನು? ನನ್ನಿಂದ ಅವರಿಗೆ ಲಾಭ ಏನಾದರೂ ಇತ್ತಾ? ಹೊಸಬರಿಗೆ ಮುನ್ನುಡಿ ಬರೆಯುವುದಿಲ್ಲ ಎಂದು ಸಾಮಾನ್ಯವಾಗಿ ಯಾವ ಸಾಹಿತಿಯೂ ಹೇಳುವುದಿಲ್ಲ. ಅದು ಪ್ರೋತ್ಸಾಹ ಅಲ್ಲವಾ? ಯಾವುದೊ ಪೇಪರ್‌ನವರು ಈ ವಿಷಯದ ಬಗ್ಗೆ ಯಾರ ಬಳಿ ಬರೆಸಬಹುದು ಎಂದು ಕೇಳಿದಾಗ ಹೊಸಬರನ್ನು ರೆಫರ್ ಮಾಡುವವರಿದ್ದಾರೆ. ಪ್ರಕಾಶಕರಿಗೆ ರೆಫರ್ ಮಾಡ್ತಾರೆ. 
     ಇನ್ನು, ಯುವಕರಿಗೆ ಉದ್ಯೋಗಕ್ಕೆ ಸಹಾಯ ಮಾಡುವುದಿಲ್ಲ ಅಂತ. ಇದೂ ಕೂಡ ಸುಳ್ಳು ಆರೋಪ. ನಾವು ಬಿ.ಎಡ್. ಮುಗಿಸಿದ ಮರುದಿನ ಸ್ವಾತಂತ್ರ್ಯ ದಿನಾಚರಣೆಗೆ ಕನಿಷ್ಠ ಇಪ್ಪತ್ತು ವಿದ್ಯಾರ್ಥಿಗಳು ಧ್ವಜಾರೋಹಣಕ್ಕೆ ಶಿಕ್ಷಕರಾಗಿ ಜಾಯಿನ್ ಆಗಿದ್ದೆವು. ಜಾಯಿನ್ ಮಾಡಿಸಿದ್ದು ಯಾರು? ನಾವೇ ಹುಡುಕಿಕೊಂಡದ್ದಲ್ಲ. ನಮ್ಮ ಲೆಕ್ಚರರ್ಸ್ ಖಾಸಗಿ ಶಾಲೆಗಳಲ್ಲಿ ಮಾತಾಡಿ ಕಳಿಸಿದ್ದು.
    ಸಾಹಿತಿಗಳು ಹೆಲ್ಪ್ ಮಾಡುವುದಿಲ್ಲಾಂತಲೂ ಅಲ್ಲ. ಯು. ಆರ್. ಅನಂತಮೂರ್ತಿಯವರು ನನ್ನ ಬಳಿ,"ನೀನು ಬೆಂಗಳೂರಿಗೆ ಬಂದ್ಬಿಡು. ಇಲ್ಲಿ ಯಾವುದಾದರೂ ಕಾಲೇಜಲ್ಲಿ ಹೇಳಿರ್ತೀನಿ. ಸೇರ್ಕೊಂಡ್ಬಿಡು" ಎಂದಿದ್ದರು. ಆಮೇಲೆ ಸುಬ್ರಾಯ ಚೊಕ್ಕಾಡಿಯವರು," ಇಲ್ಲ ಅವನು ಬಡವರ ಶಾಲೆಯಲ್ಲೆ ಇರಬೇಕು ಎಂದು ನಿರ್ಧರಿಸಿದ್ದಾನೆ" ಎಂದು ಅವರಿಗೆ ತಿಳಿಸಿದ ಮೇಲೆ ಅನಂತಮೂರ್ತಿಯವರು ಸುಮ್ಮನಾದರು. 
   ಎಮ್. ಎ ಮಾಡಿದವನಿಗೆ ಕಾಲೇಜಲ್ಲಿ ಕೆಲಸ ಕೊಡಿಸಬಹುದು. ಅದು ಬಿಟ್ಟು ಡಿ. ಸಿ. ಆಗಿ ಅಪಾಯಿಂಟ್ ಮಾಡಿಸ್ಲಿಕಾಗ್ತದಾ? ನಾನೀಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಲ್ಲ ತರಬೇತಿ ಕೊಡುತ್ತೇನೆ, ಬೇಡಿಕೆಯೂ ಉಂಟು. ಇದು ನಾನೇ ಮಾಡಿಕೊಂಡದ್ದಲ್ಲ. ಬಿಜಾಪುರದ ಎನ್.ಎಮ್. ಬಿರಾದಾರ ಅವರು ಪಾರ್ವತೀಶ ಅವರಿಗೆ ಕೇಳಿದಾಗ ಅವರು ನನ್ನ ಹೆಸರು ಹೇಳಿದ್ದು. ಆಮೇಲೆ ಬಿರಾದಾರರಿಗೂ ನಾನು ಹಿಡಿಸಿದೆ. ಮುಂದುವರಿಯುತ್ತಾ ಆ ಕ್ಷೇತ್ರದಲ್ಲೂ ಎಸ್ಟಾಬ್ಲಿಷ್ ಆಗಲು ಸಾಧ್ಯವಾಯಿತು. 
    ಯಾವುದೊ ನ್ಯಾಷನಲ್ ಪ್ರಾಜೆಕ್ಟ್ ಮಾಡಿಕೊಡುವವರು ಬೇಕು ಎಂದಾಗ ಪುರುಷೋತ್ತಮ ಬಿಳಿಮಲೆಯವರು ನನ್ನ ಹೆಸರು ಹೇಳಿದರು. ಮಾಡಿದೆ. 
   ನಾನು ಯಾವ ಸಿದ್ಧಾಂತದೊಂದಿಗೂ ಟೈ ಅಪ್ ಆಗದವನು. ನನಗೇ ಸಪೋರ್ಟ್ ಮಾಡಿರುವಾಗ ಅವರವರ ಸಿದ್ಧಾಂತದ್ದೇ ಹುಡುಗರಿಗೆ ಸಪೋರ್ಟ್ ಮಾಡದೆ ಇರ್ತಾರಾ? ಮಾಡಿರ್ತಾರೆ. ಅನೇಕರಿಗೆ ಅನೇಕರು ಹೇಗೆಲ್ಲ ಸಪೋರ್ಟ್ ಮಾಡಿದ್ದಾರೆಂದು ನನಗೆ ಗೊತ್ತಿದೆ. ಅದನ್ನು ಅವರವರೇ ಹೇಳಬೇಕಷ್ಟೆ. ನಾನು ಹೇಳುವುದು ಸರಿಯಾಗುವುದಿಲ್ಲ.
    ಹೊಸ ಲೇಖಕರಿಗೆ ರಿಯಾಲಿಟಿಯನ್ನು ಅರ್ಥ ಮಾಡಿಸುವುದು ಎಂದರೆ ಸಾಹಿತ್ಯ ಎನ್ನುವುದು ಭಯೋತ್ಪಾದಕರೇ ತುಂಬಿರುವ ಕ್ಷೇತ್ರ ಎಂಬರ್ಥದಲ್ಲಿ ಕಾಣಿಸುವುದಲ್ಲ. ಭ್ರಮೆಯಿಂದ ಬಿಡಿಸಿ. ಆದರೆ ನಿರಾಶಾವಾದಿಗಳನ್ನಾಗಿಸಬೇಡಿ.

ಈ ಮೇಲಿನ ಪೋಸ್ಟ್ ಗೆ ನನ್ನ ಅಭಿಪ್ರಾಯ ಬಯಸಿದ್ದರು ಆದ್ದರಿಂದ ಬರೆದೆ ನಾನು ಅವರಂತ ಜ್ಞಾನಿಗಳ ಜೊತೆ ಸಂವಾದ ಮಾಡುವುದು ಅಸಾಧ್ಯ ಆದರೂ ನನ್ನ ಇತಿ ಮಿತಿಯಲ್ಲಿ ಮುಂದಿನ ಸಾಹಿತ್ಯ ಪ್ರಕಾಶನದ ಸಾಧ್ಯ ಸಾಧ್ಯತೆ ಹೊಸ ಬರಹಗಾರರಿಗೆ ಅವರ ಪುಸ್ತಕ ಪ್ರಕಟನೆಗೆ ಇರುವ ಅವಕಾಶದ ಬಗ್ಗೆ ಈ ಕೆಳಕಂಡಂತೆ ದಾಖಲಿಸಿದ್ದೇನೆ.

#ಅರವಿಂದಚೊಕ್ಕಾಡಿ ಅವರೆ.....
    ಇಲ್ಲಿ ನಮ್ಮ ಅನುಭವ ನಮ್ಮ ಕನಸಿನ ಬರವಣಿಗೆ ಒಂದು ವಿಷಯ ಎನ್ನುವುದಾದರೆ, ಕಥೆ ಕವನಗಳು ಇವುಗಳ ಪ್ರಕಟನೆ -ಮಾರಾಟ- ವಿಮರ್ಷೆ ಇದ್ದಿದ್ದೆ.
 ಪ್ರಕಾಶನದವರಿಗೆ ಇದು ಎಲ್ಲರೂ ಓದಲೇ ಬೇಕಂತ ಉದ್ದೇಶಕ್ಕಿಂತ ಮಾರಾಟ ಅವರ ಉದ್ದೇಶ ಯಾಕೆಂದರೆ ಆವರ ಬಂಡವಾಳ ವಾಪಾಸು ಬರಬೇಕು, ಆದ್ದರಿಂದ ಅವರು ಸರ್ಕಾರದ ಗ್ರಂಥಾಲಯಗಳಿಗೆ ವಾಮ ಮಾರ್ಗದಲ್ಲಿ ಮಾರಾಟ ಮಾಡಬೇಕು ಲೇಖಕಕನಿಗೆ 100 ಪ್ರತಿ ಗೌರವ ಸಂಭಾವನೆ ರೂಪದಲ್ಲಿ ನೀಡುತ್ತಾರೆ.
  ಜನಜಾಗೃತಿಗಾಗಿ ಬರೆಯುವ, ಶೈಕ್ಷಣಿಕವಾಗಿ ಬರೆಯುವುದು, ಪ್ರಕಟನೆ ಮಾಡುವುದು ಇನ್ನೊಂದು ರೀತಿಯದ್ದು ಆಯಾ ಕಾಲಕ್ಕೆ ತಕ್ಕಂತೆ ಬೇಡಿಕೆ ಆದರಿಸಿ ಬಿಸಿ ಕಜ್ಜಾಯದಂತೆ ಮಾರಾಟ ಆಗಲೂ ಬಹುದು.
  ರೋಚಕತೆ - ಸೆಕ್ಸ್ ಮಿಕ್ಸ್ ಮಾಡಿ ಇವತ್ತಿನ ಕಾಲಕ್ಕೆ ತಕ್ಕಂತ ಪುಸ್ತಕ ಬರೆದು ಪ್ರಕಟಿಸಿದವರ ಪುಸ್ತಕ ಪ್ರಾರಂಭದಲ್ಲಿ ಒಂದೆರೆಡು ಮುದ್ರಣ ಆಗಿ ಯಶಸ್ವಿ ಸ್ಟಾರ್ ಲೇಖಕರೂ ಆಗಬಹುದು ಅಂತಹ ಪುಸ್ತಕಕಕ್ಕೆ ಅನೇಕ ಪ್ರಕಾಶನಗಳು ಆದ್ಯತೆ ನೀಡುತ್ತದೆ ಕಾರಣ ಅವರ ಬಂಡವಾಳ ತಿರುಗಿ ಬರುವ ಲಾಭ ದೃಷ್ಟಿಯಿಂದ.
     ಈಗೆಲ್ಲ ಕಿಂಡಲ್ ಮುಖಾಂತರ ಓದುವ ವರ್ಗ ಹೆಚ್ಚಾಗುತ್ತಿದೆ ಈ ಮಾಧ್ಯಮದ ಮೂಲಕ ವಿಶ್ವದಾದ್ಯಂತ ಇರುವ ಕನ್ನಡಿಗರ ಬೆರಳ ತುದಿಗೆ ಕನ್ನಡ ಸಾಹಿತ್ಯ ಸುಲಭವಾಗಿ ತಲುಪುತ್ತದೆ ಮತ್ತು ಇದರಿಂದ ಲೇಖಕರಿಗೆ ಆದಾಯವೂ ಇದೆ.
  ಇದು ಹೊಸ ತಲೆಮಾರಿನ ಪುಸ್ತಕ ಪ್ರಕಟನೆ ಆದ್ದರಿಂದ ಮುಂದಿನ ದಿನಗಳಲ್ಲಿ ಪುಸ್ತಕರೂಪದಲ್ಲಿ ಪ್ರಕಟನೆ ಕಡಿಮೆ ಆಗಬಹುದು. ಇದು ಹೊಸ ಬರಹಗಾರರು ಪ್ರಕಾಶನದವರ ಹಾದಿ ಕಾಯದೆ ಸಾಹಿತ್ಯ ಪ್ರಕಟನೆ ಸಾಧ್ಯವಿರುವ ಹೊಸ ಮಾರ್ಗ.
  ಕೆ.ವಿ.ಸುಬ್ಬಣ್ಣ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಾರಂಬಿಸಿದ ಅಕ್ಷರ ಪ್ರಕಾಶನ ನಡೆಸಲು ಪಟ್ಟ ಕಷ್ಟಗಳು ದಾಖಲಾಗಿದೆ.
  ನಮ್ಮ ನಮ್ಮ ಪರಿಸರದ ಇತಿಹಾಸ, ಸತ್ಯ ಕತೆ, ಜನಪದ ಕಥೆ ಬರೆದು ಪ್ರಕಟಿಸಿದರೆ ಸ್ಥಳೀಯ ಓದುಗರು ಆಸಕ್ತಿಯಿಂದ ಪುಸ್ತಕ ಖರೀದಿಸುತ್ತಾರೆ ಇದಕ್ಕೆ ಉದಾಹರಣೆ ನಮ್ಮ ಊರಿನ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಾಳ ದುರಂತ ಕಥೆ ನಾನು ಬರೆದು ಎರಡು ಸಾವಿರ ಪುಸ್ತಕ ಸ್ಥಳಿಯ ಓದುಗರಿಗೆ ತಲುಪಿತು.
  ನನ್ನ ಮುಂದಿನ ಆನಂದಪುರಂ ಇತಿಹಾಸ ಪುಸ್ತಕ ಕೂಡ ನಮ್ಮ ಆನಂದಪುರಂನವರಿಗೆ ತಲುಪ ಬೇಕು, ಬೇರೆ ಊರವರಿಗೆ ಅವರ ಊರಿನ ಇತಿಹಾಸ ಇರುತ್ತದೆ.
  ಬರಹಗಾರ ಹವ್ಯಾಸಿ ಆಗಿ ಬರವಣಿಗೆ ಮಾಡಬೇಕು ಅದು ನಿತ್ಯ ಆದಾಯ ತರುವ ಉದ್ಯೋಗ ಆಗುವುದು ಬೆರಳೆಣಿಕೆ ಸಾಹಿತಿಗಳಿಗೆ ಮಾತ್ರ, ರಾಜರ ಕಾಲದಲ್ಲಿ ಕವಿಗಳು ರಾಜಾಶ್ರಯದಿಂದಲೇ ಬದುಕಿದ್ದರು.
  ಹಣದ ಹಿಂದೆ ಪ್ರಶಸ್ತಿ ಹಿಂದೆ ಓಡಿದರೆ ಅದು ನಮ್ಮ ಮುಂದಕ್ಕೆ ಓಡುತ್ತಿರುತ್ತದೆ.
  ಹೆಸರು ಖ್ಯಾತಿ ಯಾವುದನ್ನೂ ನಿರೀಕ್ಷೆ ಮಾಡದ ಮುದ್ದಣ್ಣ ಕವಿ ಮಹಾನ್ ಕವಿ ಆಗಿ ಸ್ಮಾರಕದಲ್ಲಿ ನಿಮ್ಮ ಊರ ಸಮೀಪದಲ್ಲಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...