Blog number 2136. ದೇಸಿ ತಳಿ ಕಬ್ಬಿನಿಂದ ತಯಾರಾಗುವ ಮಲೆನಾಡಿನ ನೀರು ಬೆಲ್ಲ / ಜೋನಿ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿದೆ ಆದರೆ ಉತ್ಪಾದನೆ ಕಡಿಮೆ, ಒಂದು ಕಿಲೋ ಈ ಬೆಲ್ಲಕ್ಕೆ ಸಕ್ಕರೆಯ ಮೂರು ಪಟ್ಟು ಬೆಲೆ ಗೊತ್ತಾ!....
#ಪಶ್ಚಿಮಘಟ್ಟದ_ಮಲೆನಾಡಿಗೆ_ಅದರಲ್ಲೂ_ಶಿವಮೊಗ_ಜಿಲ್ಲೆಗೆ_ಮತ್ತು
#ಪಕ್ಕದ_ಉತ್ತರಕನ್ನಡ_ಚಿಕ್ಕಮಗಳೂರು_ಉಡುಪಿ_ಜಿಲ್ಲೆಯ_ಕೆಲ_ಪ್ರದೇಶಕ್ಕೆ_ಮಾತ್ರ
#ಸೀಮಿತವಾದ_ಆಲೇಮನೆ_ನೀರು_ಬೆಲ್ಲ,
#ಈ_ಬೆಲ್ಲಕ್ಕೆ_ಬೇಡಿಕೆ_ಜಾಸ್ತಿ_ಉತ್ಪಾದನೆ_ಕಡಿಮೆ_ಆದ್ದರಿಂದ_ಇದರ_ಬೆಲೆ_ಕಿಲೋಗೆ_100
#ಅಚ್ಚುಬೆಲ್ಲಕ್ಕೆ_ಕಿಲೋಗೆ_35_ಸಕ್ಕರೆ_ಕಿಲೋಗೆ_40_ರೂಪಾಯಿ.
#ಸಕ್ಕರೆ_ಕಾರ್ಖಾನೆಯ_ಗೋದಾಮಿನಿಂದ_ಹಾಳಾದ_ಕಡಿಮೆ_ಬೆಲೆಯ_ಸಕ್ಕರೆ_ತಂದು_ಬೆಲ್ಲ_ಮಾಡುವ
#ಪಾರ0ಪಾರಿಕ_ದೇಸಿ_ತಳಿಯ_ಕಬ್ಬು_ಬಿಟ್ಟು_ಸಕ್ಕರೆ_ಕಬ್ಬಿನಿಂದ_ಬೆಲ್ಲ
#ತಯಾರಿಸುವ_ಅಡ್ಡ_ಕಸಬು_ಪ್ರಾರಂಭವಾಗಿದೆ.
https://youtube.com/shorts/i8wdM0pa5yM?feature=shared
ನೀರು ಬೆಲ್ಲ - ಜೋನಿ ಬೆಲ್ಲ ಪಶ್ಚಿಮ ಘಟ್ಟದ ಮಲೆನಾಡಿನ ಸೀಮಿತ ಪ್ರದೇಶವಾದ ಶಿವಮೊಗ್ಗ - ಉತ್ತರ ಕನ್ನಡ - ಚಿಕ್ಕಮಗಳೂರು ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿ ಮಾತ್ರ ಪಾರಂಪರಿಕ ದೇಸಿ ತಳಿಯ ಕಬ್ಬುಗಳಿಂದ ತಯಾರಿಸುತ್ತಾರೆ ಇದರ ರುಚಿ ಬಲ್ಲವರಿಗೆ ಈ ಬೆಲ್ಲ ಬೇಕೇ ಬೇಕು.
ಅಲೇ ಮನೆ ಎಂಬ ಬೆಲ್ಲ ತಯಾರಿಯ ಕೆಲಸ ಸುಗ್ಗಿ ನಂತರದಲ್ಲಿ ಇಡೀ ಹಳ್ಳಿಗೆ ಸಂಭ್ರಮವಾಗಿರುತ್ತಿತ್ತು ಆದರೆ ಈಗಿನ ಕಾಲದ ವೇಗದಲ್ಲಿ ಯಾಂತ್ರಿಕ ಯುಗದಲ್ಲಿ ಇದು ಅನೇಕ ಮಾರ್ಪಾಡು ಆಗಿದೆ.
ಈ ಬೆಲ್ಲವನ್ನ ಮಣ್ಣಿನ ಕೊಡದಲ್ಲಿ ತುಂಬಿ ಅದಕ್ಕೆ ತೆಂಗಿನ ಗರಟೆ ಮುಚ್ಚಿ ಬಟ್ಟೆ ಸುತ್ತಿ ಅದನ್ನ ಹುತ್ತದ ಮಣ್ಣಿನಿಂದ ಸೀಲು ಮಾಡುವ ಪದ್ಧತಿ ಕಾಲ ಕ್ರಮೇಣ ಖಾಲಿ ಬಿಸ್ಕಿಟ್ ಟನ್, ಎಣ್ಣೆ ಟಿನ್ಗಳಲ್ಲಿ ತುಂಬುವ ಅಭ್ಯಾಸ ಈಗ ಇದಕಾಗಿಯೇ ತಯಾರಾಗಿ ಬರುವ ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ತುಂಬಿ ಮಾರಾಟ ಮಾಡುವಲ್ಲಿಗೆ ತಲುಪಿದೆ.
ಈ ಸಂಪ್ರದಾಯಿಕ ಕಬ್ಬಿನ ತಳಿಯಿಂದ ತಯಾರಾಗುವ ಬೆಲ್ಲಕ್ಕೆ ವಿಶೇಷ ಸ್ವಾದ ಇರುತ್ತದೆ, ಈ ಕಬ್ಬು ಕೂಡ ಮೆದುವಾಗಿ ರಸಭರಿತ ಕಬ್ಬಿನ ಹಾಲು ತುಂಬಿರುತ್ತದೆ ಆದ್ದರಿಂದ ಈ ಕಬ್ಬು ಬೆಳೆಯುವಾಗ ಕಳ್ಳತನ ಜಾಸ್ತಿ, ವನ್ಯಜೀವಿ ಅದರಲ್ಲೂ ವಿಶೇಷವಾಗಿ ನರಿಗಳು ಈ ಕಬ್ಬಿನ ಗದ್ದೆಗೆ ಲೂಟಿಗೆ ಇಳಿಯುತ್ತದೆ ಆದ್ದರಿಂದ ಈ ತಳಿಯ ಕಬ್ಬು ಬೆಳೆಗಾರರು ಕಡಿಮೆ ಆಗುತ್ತಿದ್ದಾರೆ ಮತ್ತು ಉತ್ಪಾದನಾ ವೆಚ್ಚ ಕೂಡ ಜಾಸ್ತಿ ಆದ್ದರಿಂದ ಇತ್ತೀಚಿಗೆ ಈ ಶ್ರೇಷ್ಟ ರುಚಿಯ ಬೆಲ್ಲ ಉತ್ಪಾದನೆ ಕಡಿಮೆ ಆಗಿದೆ ಆದರೆ ಇದಕ್ಕೆ ಬೇಡಿಕೆ ಹೆಚ್ಚಾದ್ದರಿಂದ ಇದರ ಬೆಲೆ ಕಿಲೋಗೆ ನೂರು ದಾಟಿದೆ.
ಸಕ್ಕರೆ ಬೆಲೆ 40 ಮತ್ತು ಮಂಡ್ಯದ ಅಚ್ಚು ಬೆಲ್ಲಕ್ಕೆ ಕಿಲೋಗೆ 30 ಇದೆ ಆದ್ದರಿಂದ ಕೆಲ ವ್ಯಾಪಾರಿಗಳು ಸಕ್ಕರೆ ಕಾರ್ಖಾನೆ ಗೋದಾಮಿನಲ್ಲಿ ಹಳೇ ಸ್ಟಾಕ್ ಹಾಳಾದ ಸಕ್ಕರೆ ಕಿಲೋಗೆ 10 ರಿಂದ 20 ರೂಪಾಯಿಗೆ ಖರೀದಿಸಿ ಬೆಲ್ಲ ಮಾಡಿ ನೂರು ರೂಪಾಯಿಗೆ ಮಾರಾಟ ಮಾಡುವ ಒಳದಾರಿ ಕಂಡುಕೊಂಡಿದ್ದಾರೆ.
ಈ ರೀತಿ ಸಕ್ಕರೆಯಿಂದ ಮಾಡುವ ಬೆಲ್ಲಕ್ಕೆ ವಿದೇಶಗಳಲ್ಲಿ kakvi ಎಂಬ ಹೆಸರಿದೆ ಅಲ್ಲಿ ಉತ್ಕೃಷ್ಟ ದರ್ಜೆ ಸಕ್ಕರೆಯಿಂದ ಬೆಲ್ಲ ಮಾಡುತ್ತಾರೆ ನಮ್ಮಲ್ಲಿ ಕಸದಿಂದ ರಸ ಮಾಡುವ ರಸತಾಳಿಗಳು ಹುಟ್ಟಿಕೊಂಡಿದ್ದಾರೆ ಇದು ಆಹಾರ ಯೋಗ್ಯವಲ್ಲದ (Non edible) ಬೆಲ್ಲ ಅದ್ದರಿಂದ ಸರ್ಕಾರ ಈ ಕಳಪೆ ಬೆಲ್ಲ ನಿಶೇದ ಮಾಡಿದೆ ಮತ್ತು ಕಲಬೆರಕೆ ಕಾಯ್ದೆಯಲ್ಲಿ ಈ ಬೆಲ್ಲ ಉತ್ಪಾದಕರ ಮತ್ತು ಮಾರಾಟಗಾರರ ಮೇಲೆ ಕೇಸು ದಾಖಲಿಸುತ್ತದೆ ಆದರೆ ಬಹುತೇಕ ಅಂಗಡಿಗಳು ಲಾಭದ ದುರಾಸೆಯಿಂದ ಈ ಬೆಲ್ಲ ಮಾರಾಟ ಮಾಡುತ್ತಿದೆ.
ಇದರ ಮಧ್ಯ ದುರಾಸೆಯ ಕೆಲ ರೈತರು ಸಕ್ಕರೆ ಕಬ್ಬು ಬೆಳೆದು ಬೆಲ್ಲ ತಯಾರಿಸಿ ಮಾರಾಟ ಶುರು ಮಾಡಿದ್ದಾರೆ ಸಕ್ಕರೆ ಕಬ್ಬು ಮೆದು ಇರುವುದಿಲ್ಲ ಆದ್ದರಿಂದ ಮನುಷ್ಯರು ಬಿಡಿ ಕಾಡಿನ ನರಿಗಳೂ ಇದರ ಸುದ್ದಿಗೆ ಬರುವುದಿಲ್ಲ ಇದರ ಕೃಷಿ ಕೂಡ ಸುಲಭ ಮತ್ತು ಕಡಿಮೆ ವೆಚ್ಚ ಇದರಿಂದ ತಯಾರಾಗುವ ಬೆಲ್ಲಕ್ಕೆ ಗರಿಷ್ಟ ಕಿಲೋಗೆ ನೂರು ರೂಪಾಯಿ ಆದರೆ ಈ ಬೆಲ್ಲದ ರುಚಿ ಸವಳು ಅದರ ಬಣ್ಣ ಬಂಗಾರದ ಬಣ್ಣವಲ್ಲ ಬಿಳಚು ಬಣ್ಣ.
ಆದರೆ ಸಾಂಪ್ರದಾಯಿಕ ಮಲೆನಾಡ ಬೆಲ್ಲ ಬಳಸುವ ಗ್ರಾಹಕರು ಎಚ್ಚೆತ್ತಿದಾರೆ, ಸಂಪ್ರದಾಯಿಕ ದೇಸಿ ತಳಿಯ ಕಬ್ಬುಗಳಾದ ರಸ ತಾಳೆ - ಕೆಂಪು ಕಬ್ಬು ಬೆಳೆದ ಖಾತ್ರಿಯಾದ ರೈತರ ಹತ್ತಿರ ಮಾತ್ರ ಬೆಲ್ಲ ಖರೀದಿಸುತ್ತಾರೆ.
ಇದರಿಂದ ಕಳಪೆ ಸಕ್ಕರೆಯಿಂದ ಬೆಲ್ಲ ಮಾಡಿ ಡಬ್ಬಿಗೆ ತುಂಬಿಟ್ಟು ಕೊಂಡವರು ಮತ್ತು ಸಕ್ಕರೆ ಕಬ್ಬಿನ ತಳಿಯಿಂದ ಬೆಲ್ಲ ತಯಾರಿಸಿಕೊಂಡವರಿಗೆ ಈ ವರ್ಷ ಬೆಲ್ಲ ಮಾರಾಟ ಆಗುತ್ತಿಲ್ಲ ಮುಂದಿನ ವರ್ಷಗಳಲ್ಲಿ ಇಂತಹ ಅಡ್ಡ ದಾರಿಯ ಬೆಲ್ಲ ಉತ್ಪಾದನೆ ಕಡಿಮೆ ಆಗಬಹುದು.
ನನ್ನ ಸ್ವಂತ ಬಳಕೆಗಾಗಿ ಗೆಳೆಯರಾದ ನಾಗೇಂದ್ರ ಸಾಗರ್ ಅವರನ್ನ ಅವಲಂಬಿಸಿದ್ದೇನೆ ಅವರು ದೇಸಿ ತಳಿಯ ಕಬ್ಬಿನಿಂದ ತಯಾರಾದ ಎರೆಡು ಕ್ಯಾನ್ ಬೆಲ್ಲ (50kg) ಇವತ್ತು ತಲುಪಿಸಿದ್ದಾರೆ ಇದರ ಬೆಲೆ 5000 ಸಾವಿರ ರೂಪಾಯಿ ಅವರ ಹತ್ತಿರ ಉತ್ಕೃಷ್ಟ ದರ್ಜೆ ಬೆಲ್ಲ ಬೇಕಾದವರು ಸಂಪರ್ಕಿಸ ಬಹುದು 81472 99353.
ಈ ಬೆಲ್ಲದ ವಿಡಿಯೋ ಪೋಟೋ ಇಲ್ಲಿದೆ.
Comments
Post a Comment