#ಸರ್ಕಾರಿ_ಮಾಧ್ಯಮಿಕ_ಶಾಲೆ_ಆನಂದಪುರಂ_ಶಾಲಾ_ಸಹಪಾಟಿಗಳು
#ಕಣ್ಣೂರು_ಮಂಜಪ್ಪ_ಹೊಸಕೊಪ್ಪದ_ನಾಗಪ್ಪ_ಕೋಟೆಕೊಪ್ಪದ_ಖಂಡೋಜಿ_ಶಿವಪ್ಪ
#ಗೆಳೆತನಗಳಲ್ಲಿ_ಕ್ಲಾಸ್_ಮೇಟ್_ಸಂಬಂದ_ವಿಶಿಷ್ಟವಾದದ್ದು
#ಜೀವಮಾನ_ಪೂರ್ತಿ_ನೆನಪಿಸಿಕೊಳ್ಳುವ_ಆದಿನಗಳ_ನೆನಪು
#ಹೀಗೆ_50_ವರ್ಷದ_ಹಿಂದೆ_ನಾವೆಲ್ಲ_ಒಂದೇ_ಶಾಲಾ_ಕೊಠಡಿಯಲ್ಲಿ_ವಿದ್ಯಾರ್ಥಿಗಳಾಗಿದ್ದೆವು.
ನಾವೆಲ್ಲ 5 ನೇ ತರಗತಿಗೆ ಆನಂದಪುರಂನ ದಾಸಕೊಪ್ಪದಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮಿಕ ಶಾಲೆಗೆ ಸೇರಿದಾಗ ಸುತ್ತ ಮುತ್ತಲಿನ ಹಳ್ಳಿಗಳಿಂದ ಪ್ರಾಥಮಿಕ ಶಿಕ್ಷಣ ಮುಗಿಸಿದ ಅನೇಕರು ಅವರ ಊರಲ್ಲಿ 1ನೇ ತರಗತಿಯಿಂದ 4ನೇ ತರಗತಿವರೆಗೆ ಮಾತ್ರ ಶಿಕ್ಷಣ ಇದ್ದಿದ್ದರಿಂದ ನಮ್ಮ ಜೊತೆ ಆದರು ಆಗೆಲ್ಲ 8 ರಿಂದ 10 ಕಿ.ಮಿ. ನಡೆದು ಬರುವುದು ದೊಡ್ಡ ವಿಷಯವಾಗಿರಲಿಲ್ಲ.
ಬೆಳಿಗ್ಗೆ ಊಟ ಮಾಡಿ ಬರುತ್ತಿದ್ದ ಹಳ್ಳಿಯ ಮಕ್ಕಳು ಮತ್ತೆ ಆಹಾರ ಸೇವಿಸುವುದು ಸಂಜೆ ಶಾಲೆ ಬೆಲ್ ಹೊಡೆದಾಗ ನಡೆದು ಊರು ಸೇರಿ ಮನೆ ತಲುಪಿದಾಗಲೇ...
ಆದರೆ ಬಾಲ್ಯದ ಆ ದಿನಗಳಲ್ಲಿ ಅದು ಕೊರತೆ ಅನ್ನಿಸುತ್ತಲೇ ಇರಲಿಲ್ಲ ಕಾಲಿಗೆ ಚಪ್ಪಲಿ ಯಾರೊಬ್ಬರೂ ದರಿಸುತ್ತಿರಲಿಲ್ಲ, ಆಗ ಬಳಸುತ್ತಿದ್ದ ಪೆನ್ನು ನಿಬ್ ನಿಂದ ಹರಿಯುವ ಇಂಕಿನಿಂದ ಬರೆಯುವ ಪೆನ್ನುಗಳು.
ಆಗಿನ ಶಿಕ್ಷಕರೂ ಅತಿ ಕಡಿಮೆ ಸಂಬಳ ಪಡೆಯುವ ಬಡ ಶಿಕ್ಷಕರೇ ಆದರೆ ಅವತ್ತಿನ ಅವರ ಶ್ರಮ ಶಿಸ್ತು ಮಾತ್ರ ಈಗಿನ ಶಿಕ್ಷಣ ವ್ಯವಸ್ತೆಯಲ್ಲಿ ನಿರೀಕ್ಷಿಸಲು ಸಾಧ್ಯವೆ ಇಲ್ಲ.
ಕಣ್ಣೂರಿನ ಮಂಜಪ್ಪ ನನ್ನ ಮಾದ್ಯಮಿಕ ಶಾಲೆಯ ಆಪ್ತ ಮಿತ್ರ ಪ್ರತಿ ದಿನ ನನಗೆ ಗರಡಿ ಮನೆ ಕುಸ್ತಿ ಪಟ್ಟು ಹೇಳಿಕೊಡುತ್ತಿದ್ದ, ಮಂಜಪ್ಪ ಗಾಜಿನ ಕಣ್ಣಿನ ಸುಂದರಾಂಗ ಆದ್ದರಿಂದ ಬೆಕ್ಕಿನ ಕಣ್ಣಿನ ಮಂಜಪ್ಪ ಅಂತನೂ ಕರೆಯುತ್ತಿದ್ದರು ಈಗ ಮಾದರಿ ಕೃಷಿಕನಾಗಿ, ಗ್ರಾಮ ಪಂಚಾಯಿತಿಯಲ್ಲಿ ಕೆಲ ಅವಧಿ ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹೊಸಕೊಪ್ಪದ ನಾಗಪ್ಪ ಚುರುಕಾಗಿ ಆಟ ಓಟಗಳ ಹಸನ್ಮುಖಿ ಗೆಳೆಯ ಶಿಕ್ಷಕರಾಗಿ ಮುಖ್ಯೋಪಾದ್ಯಾಯರಾಗಿ ಸದ್ಯದಲ್ಲೇ ನಿವೃತ್ತಿ ಆಗಲಿದ್ದಾರೆ.
ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಕೊಪ್ಪದ ಖಂಡೋಜಿ ಸೋಮಪ್ಪನವರು ಶಾಂತವೇರಿ ಗೋಪಾಲಗೌಡರ ಅನುಯಾಯಿಗಳು ಅವರ ಪುತ್ರ ಖಂಡೋಜಿ ಶಿವಪ್ಪನನ್ನ ಅವರ ಪತ್ನಿ ಸಹೋದರ ದಾಸಕೊಪ್ಪದ ಬೀರಪ್ಪರ ಮನೆಯಲ್ಲಿ ಓದಲು ಬಿಟ್ಟಿದ್ದರು ಈಗ ಶಿವಪ್ಪ ಹೊಸಂತೆಯಲ್ಲಿ ವಾಸ ಆಗಿದ್ದಾರೆ ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ಕಬ್ಬು ಬೆಳೆದು ಬೆಲ್ಲ ಮಾರಾಟ ಮಾಡುತ್ತಾರೆ.
ಮೊನ್ನೆ ನಮ್ಮ #ಶ್ರೀ_ಕೃಷ್ಣಸರಸ_ಕನ್ವೆನ್ಷನ್_ಹಾಲ್ ನಲ್ಲಿ ಮದುವೆಯಲ್ಲಿ ಭಾಗವಹಿಸಿದವರು ನನ್ನ ಬೇಟಿ ಮಾಡಲು ನನ್ನ ಆಫೀಸಿಗೆ ಬಂದಿದ್ದರು.
ಮಾಧ್ಯಮಿಕ ಶಾಲೆ ದಿನಗಳಲ್ಲಿ ರೆಕ್ಕೆ ಬಂದ ಹಕ್ಕಿಯಂತೆ ನಮ್ಮ ನಮ್ಮ ಹೊಟ್ಟೆಪಾಡಿಗಾಗಿ ಹಾರಾಟ ಪ್ರಾರಂಬಿಸಿ 50 ವರ್ಷಗಳ ನಂತರ ಕಾಲು ಸೋತು ವಾಪಾಸು ಬಂದು ರೆಂಬೆ ಮೇಲೆ ಕೂತಂತೆ ಕಳೆದ ಜೀವನದ ಬಗ್ಗೆ ಮೆಲಕು ಹಾಕಿದೆವು ಪರಸ್ಪರ ಇನ್ನೊಮ್ಮೆ ಸಿಗೋಣ ಎಂದು ಹೋಗಿದ್ದಾರೆ.
ಕ್ಲಾಸ್ ಮೇಟ್ ಸಂಬಂದ ಎಲ್ಲಾ ಸಂಬಂದಗಳಿಗಿಂತ ಹೆಚ್ಚು ಖುಷಿ ಕೊಡುವ ಸಂಬಂದವಾಗಿದೆ.
Comments
Post a Comment