Blog number 2120. ದೇಶದ ಪುಣ್ಯಕ್ಷೇತ್ರ ಕಾಶಿಯ ಕಪಿಲದಾರದಲ್ಲಿ ನಮ್ಮ ಕೆಳದಿ ಅರಸರ ಶಿಲಾಶಾಸನ ನಡೆದಾಡುವ ಕಲ್ಲಾಗಿ ಬಳಸುತ್ತಿರುವುದನ್ನ ಸಾಗರದ ಯುವ ವಕೀಲ ಪ್ರವೀಣ್ ಕೆ.ವಿ. ಬಯಲು ಮಾಡಿದ್ದಾರೆ.
#ನಮ್ಮ_ಊರಿನ_ಜನಪರ_ಹೋರಾಟಗಾರರು_ವಕೀಲರು_ಆದ_ಕೆ_ವಿ_ಪ್ರವೀಣ್
#ಕಾಶಿ_ಯಾತ್ರೆ_ಎಲ್ಲರಲ್ಲೊಬ್ಬರಂತೆ_ಮಾಡಲಿಲ್ಲ
#ಕಾಶಿ_ಕಪಿಲದಾರದ_ಕೊಳದಲ್ಲಿ_ಕೆಳದಿ_ಅರಸರ_ಶಿಲಾಶಾಸನ_ಕಾಲು_ದಾಟಿನ_ಕಲ್ಲು_ಆಗಿದ್ದನ್ನ
#ದಾಖಲಿಸಿದ್ದಾರೆ_ಅದರ_ವಿಡಿಯೋ_ಮಾಡಿ_ಸಾಮಾಜಿಕ_ಜಾಲತಾಣದಲ್ಲಿ_ಪೋಸ್ಟ್_ಮಾಡಿದ್ದು_ವೈರಲ್_ಆಗಿದೆ
#ಪುಣ್ಯಕ್ಷೇತ್ರ_ಕಾಶಿಯಲ್ಲಿ_ಕೆಳದಿ_ಅರಸರ_ಶಾಸನಕ್ಕೆ_ಈ_ಗತಿ_ಬಂದಿದ್ದಕ್ಕೆ_ಆಕ್ರೋಶ_ವೃಕ್ತವಾಗಿದೆ
#ಇದ_ಸರಿ_ಮಾಡುವ_ತನಕ_ಪ್ರವೀಣ್_ವಿರಮಿಸುವುದಿಲ್ಲ.
ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಇರುವಕ್ಕಿ ಕೃಷಿ ವಿದ್ಯಾಲಯದ ಸಮೀಪದ ಕಲ್ಲುಕೊಪ್ಪದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾಗಿ ಬಂದು ನೆಲೆಸಿದ ವೀರಭದ್ರಪ್ಪ ಗೌಡರನ್ನ ಜನ ಪ್ರೀತಿಯಿಂದ ಮರಿಗೌಡರೆಂದು ಕರೆಯುತ್ತಾರೆ ಅವರ ಎರಡನೆ ಪುತ್ರರೇ ವಕೀಲರಾದ ಕೆ.ವಿ.ಪ್ರವೀಣ್.
ಆನಂದಪುರಂ ಸರ್ಕಾರಿ ಕನ್ನಡಶಾಲೆಗೆ ನಿತ್ಯ ಸುಮಾರು ನಾಲ್ಕು ಕಿಲೋ ಮೀಟರ್ ನಡೆದು ಬರುತ್ತಿದ್ದ ಬಾಲಕ ಪ್ರವೀಣ್ ನಿತ್ಯ ನನ್ನ ಮನೆ ಎದುರು ಕೀಟಲೆ ಮಾಡುತ್ತಾ ನಗುತ್ತಾ ಹೋಗುತ್ತಿದ್ದವರು ಸಂಜೆ ವಾಪಾಸು ಹೋಗುವಾಗಲೂ ಅದೇ ಎನರ್ಜಿ ಇರುತ್ತಿತ್ತು ಇವರಲ್ಲಿ.
ಕಟ್ಟರ್ ಹಿಂದುತ್ವವಾದಿ, ಬಿಜೆಪಿ ಪಕ್ಷದ ಅಭಿಮಾನಿ ಸಂಘಟಕರಾಗಿದ್ದಾರೆ ಆದರೆ ಬಿಜೆಪಿ ಪಕ್ಷ ಇವರಿಗೆ ಸರಿಯಾದ ಸ್ಥಾನ ಮಾನ ಈವರೆಗೆ ನೀಡಿಲ್ಲ.
ಜನಪರವಾಗಿ ನ್ಯಾಯಾಲಯದಲ್ಲಿ ಹಣ ಪಡೆಯದೇ ಅನೇಕ ಹೋರಾಟಗಾರರ ಕೇಸು ನಡೆಸುವುದು ನೋಡಿದ್ದೇನೆ ನಮ್ಮ ಊರಿನ ಶ್ರೀವರಸಿದ್ದಿ ವಿನಾಯಕ ದೇವಸ್ಥಾನದ ಹುಂಡಿ ಕಳ್ಳತನವಾದಾಗ ಪೋಲಿಸರು ಕಳ್ಳನನ್ನ ಪತ್ತೆ ಮಾಡಿ ಹುಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಅದನ್ನು ನ್ಯಾಯಾಲಯದಲ್ಲಿ ಕೇಸು ನಡೆಸಿಕೊಟ್ಟವರು ಇವರು ಆದರೆ ದೇವಸ್ಥಾನದ ಕೇಸಿಗೆ ಒಂದೇ ಒಂದು ರೂಪಾಯಿ ಶುಲ್ಕ ಪಡೆಯಲಿಲ್ಲ.
ಈ ಸೇವೆಗಾಗಿ ಜಾತ್ರೆಯಲ್ಲಿ ದೇವಸ್ಥಾನದಿಂದ ಸನ್ಮಾನ ಸಮಾರಂಭ ಇಟ್ಟಿದ್ದರು ಆದರೆ ಸನ್ಮಾನ ಬೇಡ ಅಂತ ನಿರಾಕರಿಸಿದ್ದರು.
ಸೋನಿಯಾ ಗಾಂಧಿ ಮೇಲೆ ಕೇಸ್ ಹಾಕಿದ್ದಾರೆ ಅದು ವಜಾ ಆಗಿದ್ದರಿಂದ ಅಫೀಲು ಮಾಡಿದ್ದಾರೆ ಯಾರಾದರೂ ಕೆಣುಕಿದರೆ ಅವರನ್ನ ನ್ಯಾಯದ ತಕ್ಕಡಿಗೆ ಹಾಕದೆ ಬಿಡುವುದಿಲ್ಲ.
ರಾಷ್ಟ್ರಮಟ್ಟದ ವಕೀಲರ ಪರಿಷತ್ ಗಳಲ್ಲಿ ನಡೆಯುವ ದೊಡ್ಡ ದೊಡ್ಡ ಸಭೆಯಲ್ಲಿ ಹಿಂದಿ ಇಂಗ್ಲಿಷಿನಲ್ಲಿ ತಮ್ಮ ಸುದೀರ್ಘವಾದ ಬಾಷಣ ಪ್ರಸ್ತುತಪಡಿಸುವ ವಿಡಿಯೋ ನೋಡಿದ್ದೇನೆ.
ಇತ್ತೀಚಿಗೆ ಕಾಶಿಯಾತ್ರೆಗೆ ಇವರು ರೈಲಿನಲ್ಲಿದ್ದಾಗ ಶುಭ ಹಾರೈಸಿದ್ದೆ ನಮ್ಮ ದೇವಾಲಯದ ಸಮಿತಿಯ ಅಂಬಮ್ಮ (ಶ್ರೀಮತಿ ಅಂಬೂಜಾಕ್ಷಿ) ಮತ್ತು ಇತರರನ್ನ ತಮ್ಮ ಜೊತೆ ಕಾಶಿ ಅಯೋಧ್ಯ ಯಾತ್ರೆ ಮಾಡಿಸಿ ಕರೆತಂದಿದ್ದಾರೆ.
ಈ ಸಂದರ್ಭದಲ್ಲಿ ಕಾಶಿಯ ಕಪಿಲದಾರದಲ್ಲಿ ಕೆಳದಿ ಇತಿಹಾಸದ ಶಿಲಾಶಾಸನವನ್ನ ಜನ ಓಡಾಡುವ ಕಲ್ಲನ್ನಾಗಿ ಬಳಸುವುದನ್ನ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ವೈರಲ್ ಆಗಿದೆ.
ಅನೇಕರು ಇವರ ಪೋಸ್ಟಿಗೆ ಇದೇನು ಹೊಸ ವಿಷಯವಲ್ಲ ಎಂಬಂತೆ ಕುಹಕವಾಡುವುದು ನೋಡಿದ್ದೇನೆ ಅದಕ್ಕೆ ಈ ಕೆಳಕಂಡ ಪ್ರತಿ ಕ್ರಿಯೆ ನನ್ನದು.
https://www.facebook.com/share/p/iRCd5EV2PGk77U35/?mibextid=oFDknk.
ಎಲ್ಲಾ ಚರಿತ್ರೆ ನಡೆದದ್ದೇ.. ದಾಖಲಾದದ್ದೇ... ನೋಡಿದ್ದೇ ಇರಬಹುದು ಆದರೆ ಕೆಳದಿ ಇತಿಹಾಸದ ಶಾಸನ ಕಾಶಿಯಲ್ಲಿ ಜನ ದಾಟುವ ಕಲ್ಲಾಗಿದ್ದು ನೋವಿನ ಸಂಗತಿ.
ಇದನ್ನು ತಾವು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿರುವುದರಿಂದ ನಮಗೆ ಗೊತ್ತಾಗಲು ಕಾರಣವಾಯಿತು.
ಲಕ್ಷಾಂತರ - ಕೋಟ್ಯಾಂತರ ಜನ ಕಾಶಿಯಾತ್ರೆ ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ ಆದರೆ ನಿಮ್ಮದು ಅನ್ವೇಷಣಾ ಯಾತ್ರೆಯೂ ಹೌದು ಮತ್ತು ಕನ್ನಡ ನಾಡು-ನುಡಿ-ಜಲದ ಬಗ್ಗೆ ನಿಮಗಿರುವ ಕಾಳಜಿ ಕೂಡ.
ಶಿವಮೊಗ್ಗ ಜಿಲ್ಲೆಯ ಒಂದಿಷ್ಟು ಜನರಿದ್ದಾರೆ ಅವರ ಕೆಲಸ ಜಿಲ್ಲೆಯ ಇತಿಹಾಸ ಪರಿಚಯಿಸುವ ಲೇಖನ ವಿಡಿಯೋ ಮಾಡಿ ಯಾರಾದರು ಪೋಸ್ಟ್ ಮಾಡಿದರೆ ತಗಾದೆ ತೆಗೆಯತ್ತಾರೆ.
ಬೇರೆ ಜಿಲ್ಲೆಯ ಯೂಟ್ಯೂಬರುಗಳು ನಮ್ಮ ಜಿಲ್ಲೆಯ ಇತಿಹಾಸ ಪರಿಚಯಿಸುವ ಕೆಲಸ ಮಾಡಿದರೆ ಪುರಾತತ್ವ ಇಲಾಖೆ (ASI) ಮತ್ತು ಅರಣ್ಯ ಇಲಾಖೆಗೆ ದೂರು ದಾಖಲಿಸುತ್ತಾ ಅಡೆ ತಡೆ ಮಾಡುತ್ತಾರೆ.
ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಪುರಾತತ್ವ ಇಲಾಖೆಗೆ ಸೇರದೆ ಅರಣ್ಯ ಇಲಾಖೆಯಲ್ಲೇ ಇರುವ ಕೆಳದಿ ಮತ್ತು ಗೇರುಸೊಪ್ಪೆ ಅರಸರ ಕೋಟೆ-ಸ್ಮಾರಕಗಳ ಬಗ್ಗೆ ಯಾವ ಸಂಶೋಧನಾ ಸಂಸ್ಥೆಯೂ ಈವರೆಗೆ ಕೆಲಸ ಮಾಡಿಲ್ಲ, ಮಾಡಿದ್ದರೆ ಈ ರೀತಿ ಶಿಲಾಶಾಸನಗಳು ಯಾರದೋ ಮನೆ ಹಿತ್ತಿಲ ಬಟ್ಟೆ ಒಗೆಯುವ ಕಲ್ಲಾಗುತ್ತಿರಲಿಲ್ಲ ಅಥವ ಚರಂಡಿ ಕಲ್ಲುಗಳಾಗುತ್ತಿರಲಿಲ್ಲ.
ಅದಕ್ಕಾಗಿ ನನ್ನ ಅಭಿಯಾನ #ನಿಮ್ಮ_ಊರಿನ_ಇತಿಹಾಸ_ನೀವೇ_ಸಂರಕ್ಷಿಸಿ_ಮತ್ತು_ಅದನ್ನು_ದಾಖಲಿಸಿ ಇದಕ್ಕಾಗಿ ಸ್ಥಳೀಯ ಶಾಲಾ ವಿದ್ಯಾರ್ಥಿ ಶಿಕ್ಷಕರ ಜೊತೆ ಜನಜಾಗೃತಿ ಮಾಡಿ ಎನ್ನುವುದು.
ಇತಿಹಾಸ ಉಳಿಸುವ ನಿಮ್ಮ ಕಾಳಜಿಗೆ ಅಭಿನಂದನೆಗಳು.
Comments
Post a Comment