Skip to main content

Posts

Showing posts with the label Nandalike of Udupi district born place of kavi Muddanna Manorama sallapa poet NadalikeLaxminarayanappa

Blog number 2113. ಉಡುಪಿ ಜಿಲ್ಲೆಯ ನಂದಳಿಕೆ ಕವಿ ಮುದ್ದಣ್ಣರ ಜನ್ಮಸ್ಥಳ

#ಕವಿ_ಮುದ್ದಣ್ಣನ_ಊರು_ನಂದಳಿಕೆಗೆ_ಹೋಗಿದ್ದೆ #ಮುದ್ದಣ್ಣನ_ವಂಶಸ್ಥರಾದ_ರಘುರಾಮರ_ಬೇಟಿ_ಆಗಿದ್ದೆ #ಟಿ_ಎ_ಪೈ_ಶಂಕುಸ್ಥಾಪನೆ_ಮಾಡಿದ್ದ_ವೀರೇಂದ್ರಹೆಗ್ಗಡೆ #ಶಿವರಾಮ_ಕಾರಂತರ_ಉಪಸ್ಥಿತಿಯಲ್ಲಿ_ಉದ್ಘಾಟನೆಗೊಂಡಿರುವ_ಮುದ್ಧಣ್ಣ_ಸ್ಮಾರಕ_ಭವನ_ಇಲ್ಲಿದೆ #ಮುದ್ದಣ್ಣ_ಮನೋರಮೆ_ಸಲ್ಲಾಪ_ಮರೆಯಲು #ಮನೋರಮೆ_ಆಗಿದ್ದ_ಕಮಲಾ_ಬಾಯಿ_ಶಿವಮೊಗ್ಗ_ಜಿಲ್ಲೆಯ_ಕಾಗೆಕೊಡಮಗ್ಗಿ_ಊರಿನವರು.  "ಈ ತೆಱದೆ ಕಾಡುಂ ನಾಡುಂ ಮನೋಜ್ಞಮಾಗೆ ಸಂಪ್ರಾಪ್ತಮಾದ ವರ್ಷಾಕಾಲದೊಳೊಂದು ದೆವಸಂ ಬೈಗುಂಬೊೞನೊಳೆಂದಿನಂತಿರೋಲಗಂ ಪರಿಯೆ, ಕಬ್ಬಿಗರ ಬಲ್ಲಹಂ ಮುದ್ದಣನರಮನೆಯಿಂ ಪೊಱಮಟ್ಟು ನೆರೆವೀದಿವಿಡಿದು ಪೊರೆವೀಡಿಂಗೆಯ್ತರ್ಪುದುಮಾತನ ಮಡದಿ ಮನೋರಮೆ ದೂರದೆ ಕಂಡೆೞ್ದು ಇದಿರ್ವಂದು ಕಾಲ್ಗೆ ನೀರಂ ನೀಡಿ ಮತ್ತಂ ಕಯ್ವಿಡಿದೊಳಚೌಕಿಗೆಗುಯ್ದು ಮಣೆಯಿತ್ತು ಕುಳ್ಳಿರಿಸಿ ಒಡನೆಯೆ ತನಿವಣ್ಣಂ ತಿನಲಿತ್ತು ಕೆನೆವಾಲಂ ಕುಡಿವೊಡಿತ್ತು ಉಪಚರಿಸುತಿರ್ದಳ್. ಈವುಪಚಾರದಿನಾತನ ಪಸಿವುಂ ಬೞಲ್ಕೆಯುಂ ಮುಗಿಯೆ, ಕೆಳದಿ ನಱುದಂಬುಲಮಂ ಸವಿಯಲ್ಕೆಂದು ಮಡಿದೀಯುತುಮಿರೆ, ಇಂತು ಸುಖಸಲ್ಲಾಪಂಗೊಳುತಿರ್ದರ್, ಅದೆಂತೆನೆ" ....   ಈ ಪ್ರೇಮ ಸಲ್ಲಾಪ ಒಮ್ಮೆ ಓದಿದವರು ಕೇಳಿದವರು ತಮ್ಮ ಜೀವನ ಪರ್ಯಂತ ಮುದ್ದಣ್ಣ ಮನೋರಮೆಯರನ್ನ ಮರೆಯುವುದಿಲ್ಲ.    ನನ್ನ ಅಕ್ಕ ಮತ್ತು ಅಣ್ಣನಿಗೆ ಇದು ಪಠ್ಯವಾಗಿತ್ತು ಅವರು ಓದುವುದು ಕೇಳಿಯೇ ಅದು ನನ್ನ ಮೆದುಳಿನಲ್ಲಿ ಅಚ್ಚಳಿಯದೆ ಉ...