Skip to main content

Posts

Showing posts with the label My Ratwailer Shambhurama likes Tapioca

Blog number 1997. ಕಪ್ಪ- ಮರಗೆಣಸು - ಟ್ಯಾಪಿಯೋಕ ಎನ್ನುವ ಬ್ರಿಜಿಲ್ ಗೆಣಸು 1880 ರ ಬೀಕರ ಬರಗಾಲದಲ್ಲಿ ಕೇರಳಕ್ಕೆ ಪರಿಚಯಿಸಿದ ತ್ರಿವೆಂಕೂರ್ ರಾಜನ ಸಹೋದರ...ಈ ಮರ ಗೆಣಸು ನಮ್ಮ ಪ್ರೀತಿಯ ಶಂಭೂರಾಮನಿಗೂ ಇಷ್ಟವಾಯಿತು

#ನನ್ನ_ಪ್ರೀತಿಯ_ಶಂಭೂರಾಮ_ಮರಗೆಣಸು_ಸೇವಿಸುತ್ತಾನೆ #ಕೇರಳಿಗರು_ಕಪ್ಪ_ಎನ್ನುವ_ಟ್ಯಾಪಿಯೋಕ #ಕೇರಳದಲ್ಲಿ_ಬೀಕರ_ಬರಗಾಲ_ಬಂದಾಗ_1880ರಲ್ಲಿ_ತಿರುವಾಂಕೂರ್_ರಾಜರ #ಕಿರಿಯ_ಸಹೋದರ_ವಿಶಾರಾಮ_ತಿರುಮಲ_ರಾಮವರ್ಮ_ರಾಜ್ಯಕ್ಕೆ_ಪರಿಚಯಿಸುತ್ತಾರೆ #ಅನ್ನಕ್ಕೆ_ಪರ್ಯಾಯ_ಉಪ್ಪಿಟ್ಟು_ಚಿಪ್ಸ್ #ಸಾಮೆ_ಅಕ್ಕಿ_ಸ್ಟಾರ್ಚ್_ವೋಡ್ಕಾ_ತಯಾರಿಸುತ್ತಾರೆ #ಬ್ರಿಜಿಲ್_ಮೂಲ #ಎರಡನೆ_ಮಹಾಯುದ್ಧದಲ್ಲಿ_ಸೌತ್_ಈಸ್ಟ್_ಏಷಿಯಾದ_ಬಹಳಷ್ಟು_ನಿರಾಶ್ರಿತರು_ಇದರಿಂದ_ಬದುಕಿದರು. https://youtu.be/cVQrIuQYc-s?feature=shared      ಮರಗೆಣಸು ಬೆಳೆದವರು ತಂದು ಕೊಟ್ಟಿದ್ದನ್ನು ಅದರ ಸಿಪ್ಪೆ ನಿವಾರಿಸಲು ಕುಳಿತಾಗ ತಟ್ಟೆ ಚಾಕು ಶಬ್ದ ಮತ್ತು ಅದರ ವಾಸನೆ ಗ್ರಹಿಸಿ ನನ್ನ ಪ್ರೀತಿಯ ಶಂಭೂರಾಮ ನನ್ನ ಬದಿಗೆ ಬಂದು ಕುಳಿತ.    ನಾವು ತಿನ್ನುವ ಎಲ್ಲಾ ತರಕಾರಿ ತಿನ್ನುವ ಈ ರಾಟ್ ವೀಲರ್ ಶಂಭೂರಾಮನಿಗೆ ಈವರೆಗೆ ಇದನ್ನು ಕೊಟ್ಟಿರಲಿಲ್ಲ, ನಾನು ಮಲೆಯಾಳಿ ಗೆಳೆಯ ಕುಟ್ಟೀಚನ್ ಹೇಳಿಕೊಟ್ಟ ಸುಲಭ ವಿಧದಲ್ಲಿ ಮರಗೆಣಸಿನ ದಪ್ಪ ಸಿಪ್ಪೆ ನಿವಾರಿಸಿ ತೆಗೆದ ನಂತರ ಶಂಭೂರಾಮನಿಗೆ ನೀಡಿದೆ.   ಕಟುಂ - ಕುಟುಂ ಅಂತ ಮರಗೆಣಸು ತನ್ನ ಬಲಿಷ್ಟ ದವಡೆಯಲ್ಲಿ ತುಂಡರಿಸಿ ಕರ0-ಕುರಂ ಅಂತ ಚಪ್ಪರಿಸಿ ನುಂಗಿ ರಿಪೀಟ್ ದಿ ಕೋರ್ಸ್ ಅಂದ!...   ಮರಗೆಣಿಸಿನ ಸುಲಭ ರುಚಿಕರ ಅಡುಗೆ ರೆಸಿಪಿಗಾಗಿ ಈ ಕೆಳಗಿನ ನನ್ನ ಬ್ಲಾಗ್ ಕ್ಲಿಕ್ ಮಾ...