Skip to main content

Posts

Showing posts with the label Loka raj jain film story writer

4048.ಲೋಕರಾಜ_ಜೈನ್_ಸಾಳ್ವಕುಲ_ನಗಿರೆಸುತ.#ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ_ಸಿನಿಮಾ_ಚಿತ್ರಕಥಾ_ಲೇಖಕರು.

ಲೋಕರಾಜ_ಜೈನ್_ಸಾಳ್ವಕುಲ_ನಗಿರೆಸುತ. #ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ_ಸಿನಿಮಾ_ಚಿತ್ರಕಥಾ_ಲೇಖಕರು.   ನಾಡಿನ ಪ್ರಖ್ಯಾತ ಶ್ರೀಮತಿ #ನಂದಿನಿ ಮತ್ತು #ಆಕರ್ಷ ಅವರ #ಡಿಜಿಟಲ್_ಮಾಧ್ಯಮದಲ್ಲಿ  ಪ್ರಸಾರವಾದ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಎಪಿಸೋಡುಗಳನ್ನ ಯಶಸ್ವಿಯಾಗಿ ನಡೆಸಿಕೊಟ್ಟವರು ಲೋಕರಾಜ್ ಜೈನ್.    #ರಾಜೇಂದ್ರ_ಸಿಂಗ್_ಬಾಬು ಅವರ ನಿರ್ದೇಶನದಲ್ಲಿ ಗೇರುಸೊಪ್ಪೆಯ ಜೈನ ರಾಣಿ ಚೆನ್ನ ಬೈರಾದೇವಿಯ ಸಿನಿಮಾ ನಿರ್ಮಾಣದ ಚಿತ್ರಿಕರಣ ಪೂರ್ವದ ಕೆಲಸಗಳು ನಡೆಯುತ್ತಿದೆ.    ದರ್ಮಸ್ಥಳದ ಧರ್ಮಾಧಿಕಾರಿಗಳಾದ #ಡಾ_ವಿರೇಂದ್ರಹೆಗ್ಗಡೆ ಅರ್ಪಿಸುವ #ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ ಸಿನಿಮಾದ ಚಿತ್ರಕಥೆ ದಿವಂಗತ ನಾಡೋಜ ಕಮಲ ಹಂಪನಾ, ನಾಡೋಜ ನಾಗರಾಜ ಹಂಪನಾ ಮತ್ತು ಸಾಗರದ ಲೋಕರಾಜ್ ಜೈನ್ ಜಂಟಿಯಾಗಿ ಬರೆದಿದ್ದಾರೆ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಜಲಪಾತದ #ಹೆನ್ನೆ ಊರಿನ ಲೋಕರಾಜ್ ಜೈನ್  ವೃತ್ತಿಯಲ್ಲಿ ಉಪನ್ಯಾಸಕರು ಪ್ರವೃತ್ತಿಯಲ್ಲಿ ಇತಿಹಾಸ ಸಂಶೋದಕರು.   ಇವರು ರಾಣಿ ಚೆನ್ನ ಬೈರಾದೇವಿ ವಂಶಸ್ಥರೂ ಹೌದು, ಗೇರುಸೊಪ್ಪೆಯ ಸಾಳ್ವ ವಂಶದ ಇತಿಹಾಸದ ಸಂಶೋಧನೆ ಕೆಲಸದಲ್ಲಿ ಅನೇಕ ದಶಕದಿಂದ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ತೊಡಗಿಕೊಂಡವರು.   ನನ್ನ ಇವರ ಪರಿಚಯ ಆಗಿದ್ದು ತುಮರಿ ಸಮೀಪದ #ಹಾಳಸಸಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ #ಚಂದ್ರಕುಮಾರರಿಂದ. ...