Skip to main content

Posts

Showing posts with the label Double standard advices for desperating Exploring team of Kunchikal falls

Blog number 2205. ದೇಶದ ಅತ್ಯಂತ ಎತ್ತರದ ನಮ್ಮ ಜಿಲ್ಲೆಯ ಕುಂಚಿಕಲ್ ಪಾಲ್ಸ್ ಗೆ ಹೋಗಲಿರುವ ಅನ್ವೇಷಣಾ ತಂಡಕ್ಕೆ ಪರಿಸರ ಸಂರಕ್ಷಣೆ ಹೆಸರಲ್ಲಿ ಅಡೆತಡೆ ಮಾಡುವವರಿಗೆ

#ಇದು_ಪರೋಪಕಾರ #ಇದರಲ್ಲಿ_ಅಡಗಿದೆ_ಸ್ವಾರ್ಥ #ಮುಗ್ದರನ್ನ_ಮುರ್ಖನಾಗಿಸುವ #ಯುಕ್ತಿ. #ಇಂತಹದ್ದೇ_ಪರಿಸರ_ಕಾಳಜಿಯ_ಹೆಸರಲ್ಲಿ #ಕುಂಚಿಕಲ್_ಪಾಲ್ಸ್_ಅನ್ವೇಷಣಾ_ತಂಡಕ್ಕೆ_ತಡೆಯುವವರು.   ನಮ್ಮ ಹಳ್ಳಿಗಳಲ್ಲಿ ಅಡಿಕೆ ತೋಟದ ಸಾಹುಕಾರರು ಅಡಿಕೆ ತೋಟ ಮಾಡಲು ಪ್ರಯತ್ನ ಮಾಡುವವನ ಎದರು ರೋದಿಸುತ್ತಾರೆ... ಈ ಅಡಿಕೆ ತೋಟ ಬೇಡಣ್ಣಾ ಬೇಡ, ಅದರ ರೋಗ ಏನು ಹೇಳಲಿ, ಕೃಷಿ ಮಾಡೊಕೆ -ಕೊಯ್ಲು ಮಾಡೋಕೆ ಜನ ಸಿಗಲ್ಲ.... ಅಡಿಕೆ ರೇಟು ಹೀಗೆ ಇರ್ತದೆ ಅಂತ ಮಾಡಿದಿಯಾ?.. ನೋಡು ಈ ಗೌವನ೯ಮೆಂಟ್ ಗುಟ್ಕಾ ತಿಂದರೆ ಕ್ಯಾನ್ಸರ್ ಬರುತ್ತೆ ಅಂತ ಸುಪ್ರಿಂ ಕೋರ್ಟ್ ಲ್ಲಿ ಅರ್ಜಿ ಹೆಟ್ಟಿಟ್ಟಿದೆ ಇವತ್ತೋ ನಾಳೆ ಗುಟ್ಕಾ ರದ್ದಾದರೆ ನೋಡ್ತಾ ಇರು ಅಡಿಕೆ ಕಾಸಿಗೂ ಕಿಮ್ಮತ್ತಿರಲ್ಲ ಅಂತ.    ಇದರ ಹಿಂದಿನ ಉದ್ದೇಶ ಬೇರೆೇನು ಅಲ್ಲ, ಬೇರೆಯವರು ಅಡಿಕೆ ತೋಟ ಮಾಡಿದರೆ ಎಂಬ ಆತಂಕ ಇದರಲ್ಲಿ ಮುಂದೆ ಆ ಕುಟುಂಬ ಅಡಿಕೆ ಬೆಳೆದು ಆರ್ಥಿಕ ಸಭಲತೆ ಪಡೆದರೆ ತನ್ನ ಕೃಷಿ ಕೆಲಸಕ್ಕೆ ಜನ ಸಿಗುವುದಿಲ್ಲ / ತನ್ನ ಅಂತಸ್ತಿಗೆ ಸವಾಲು / ಸಣ್ಣ ಜಾತಿ ಸಣ್ಣ ಜನ ಹಳ್ಳಿಯಲ್ಲಿ ಸಮಾನತೆ ಪಡೆಯುತ್ತಾನೆ/ ಎಲ್ಲರೂ ಅಡಿಕೆ ಬೆಳೆದರೆ ಅಡಿಕೆ ಬೆಲೆ ಕಡಿಮೆ ಆದೀತು / ಹಳ್ಳಿಯ ಎಲಿಜಂಟ್ ಕ್ಲಾಸ್ ಪಟ್ಟಿ ಪರಿಷ್ಕರಣೆ ಆದೀತು... ಇಂತಹ ಹಿಡನ್ ಅಜೆಂಡಾ ಬಿಟ್ಟರೆ ಬೇರೇನಲ್ಲ.    ಹಾಗಂತ ಹಳ್ಳಿಯ ಅಡಿಕೆ ತೋಟದ ಸಾಹುಕಾರ ಮಾತ್ರ ತನ್ನ ಬ್ಯಾಣ ಗಿಣ ಎಲ್ಲಾ ಹೊಸದಾಗಿ ಅಡ...