Skip to main content

Posts

Showing posts from April, 2017

ಕಾಡಿನ ಮೂಲೆಯಲ್ಲಿರುವ ಮೂಲೆಗದ್ದೆ ಸ್ವಾಮಿಗಳು .

#ಜನ ಇವರನ್ನ ಮೂಲೆ ಗದ್ದೆ ಸ್ವಾಮಿಗಳು ಅಂತ ಕರೀತಾರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಎಣ್ಣಿ ಹೊಳೆ ಮತ್ತು ಶರಾವತಿ ನದಿ ಸಂಗಮದಲ್ಲಿ ಇವರ ಆಶ್ರಮವಿದೆ.#     ವಿಶೇಷ ಎಂದರೆ ಇವರು ಪ್ರಚಾರದಿಂದ ದೂರ, ಆಧ್ಯಾತ್ಮದ ಜೊತೆ ಕೃಷಿಗೆ ಪ್ರದಾನ್ಯ ನೀಡಿದ ಸ್ವಾಮಿಗಳು . ಇವರಲ್ಲಿ ಒಂದು ತಪಶಕ್ತಿ ಇದೆ ಅಂತ ಅನೇಕರು ನಂಬುತ್ತಾರೆ, ತಮ್ಮ ಕಷ್ಟಕ್ಕೆ ಇವರಲ್ಲಿ ಹೋದರೆ ಪರಿಹಾರ ದೊರಕುತ್ತೆ ಅನ್ನುತ್ತಾರೆ.      ಈ ಭಾಗದಲ್ಲಿ ಅನೇಕ ವಷ೯ದಿಂದ ಸ್ವತಃ ಜೀಪು ಚಾಲನೆ ಮಾಡಿಕೊಂಡು ಭಕ್ತರ ಮನೆಗೆ ಪೂಜೆಗೆ ಹೋಗುತ್ತಿದ್ದರು, ಇತ್ತೀಚಿಗೆ ಭಕ್ತರು ಸದರಿ ಜೀಪ್ ಚಾಲನಯೋಗ್ಯವಲ್ಲವೆಂದು ಕಾರು ಕೊಡಿಸಿದ್ದಾರೆ.     ಇವರ ಮಠಕ್ಕೆ ಈಗ ಉತ್ತರಾಧಿಕಾರಿ ನೇಮಕ, ಲಿಂಗೈಕ್ಯ ಹಿಂದಿನ ಸ್ವಾಮಿಗಳ ಶಿಲಾ ಮಂಟಪ ಲೋಕಾಪ೯ಣೆಯನ್ನ ಹೊಸನಗರ ತಾಲ್ಲೂಕಿನ ಭಕ್ತರು ಅಧ್ದೂರಿಯಾಗಿ ಇದೇ ತಿಂಗಳು 28ರಂದು ಹಮ್ಮಿಕೊಂಡಿದ್ದಾರೆ.

ಸ್ವಾಮಿರಾವ್ ಮಲೆನಾಡ ಮಣ್ಣಿನ ಮಗ.SWAMI RAO MALENADA MANNINA MAGA.

#_ ಪೋಲಿಸ್ ಠಾಣೆ ಎದುರು ಕೋಳಿ ಪಡೆ ಆಡಿಸಿ ತಮ್ಮ ಪ್ರತಿಭಟನೆಯನ್ನ ವ್ಯಕ್ತಪಡಿಸಿದ್ದ ಶಾಸಕ ಸ್ವಾಮಿ ರಾವ್ ವಿಭಿನ್ನ ಮಲೆನಾಡ ಮಣ್ಣಿನ ನಿಜ ರಾಜಕಾರಣಿ.# ಹುಟ್ಟಿದ ಊರು ಬಿಡದ, ಕೃಷಿಯಿ೦ದಲೇ ಜೀವನ ಮಾಡುವ, ಇಳಿ ವಯಸ್ಸಲ್ಲಿಯೂ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯಕರವಾಗಿರುವ ಇಬ್ಬರು ಮಾಜಿ ಶಾಸಕರು ಜಿಲ್ಲೆಯಲ್ಲಿ ಇದ್ದಾರೆ.    ಒಬ್ಬರು ಹೊಸ ನಗರದ ಮಾಜಿ ಶಾಸಕರಾದ ಸೋನಲೆ ಎಂಬ ಗ್ರಾಮದ ವಾಸಿ ಸ್ವಾಮಿ ರಾವ್ರು ಇನ್ನೊಬ್ಬರು ಸಾಗರದ ಮಾಜಿ ಶಾಸಕರಾದ ಲಿಂಗದಳ್ಳಿ ವಾಸಿ ಎಲ್.ಟಿ. ತಿಮ್ಮಪ್ಪ ಹೆಗ್ಗಡೆಯವರು, ಬಾಕಿ ಎಲ್ಲರೂ ಬೆಂಗಳೂರೆಂಬ ಮಾಯಾ ನಗರಿಯ ಖಾಯಂ ವಾಸಿಗಳು, ಚುನಾವಣೆ ಬಂದಾಗ ಕ್ಷೇತ್ರಕ್ಕೆ ಬರುತ್ತಾರೆ, ಗೆದ್ದ ಮೇಲು ಮತದಾರನಿಗೆ ಮುಖ ತೋರಿಸಿ ಚಲಾವಣೆಯಲ್ಲಿರಲು ತಿಂಗಳಿಗೂಮ್ಮೆ ಕ್ಷೇತ್ರಕ್ಕೆ ಅತಿಥಿ ಆಗಿ ಬರುತ್ತಾರೆ.          ಸ್ವಾಮಿ ರಾವ್ ನಿಜವಾದ ಮಣ್ಣಿನ ಮಗ, ಅವರೊಮ್ಮೆ ಹೊಸನಗರ ಸಬ್ ಇನ್ಸ್ಪೆಕ್ಟರ್ ಒಬ್ಬರು ಕರಾವಳಿಯಿ೦ದ ವಲಸೆ ಬಂದವರ ಕೋಳಿ ಪಡೆ ಆಡುವವರನ್ನ ವಿಪರೀತ ಹಿಂಸೆ ಮಾಡಲು ಪ್ರಾರಂಬಿಸಿದಾಗ, ಅವರಿಗೆ ಬುದ್ಧಿ ಹೇಳಿ ಇದು ಹುಣ್ಣಿಮೆ ದಿನ ಅವರು ಬಿಡುವು ನಲ್ಲಿ ನಡೆಸೋ ಮನರಂಜನೆ ತೊಂದರೆ ಕೊಡಬೇಡಿ ಅಂದರೂ ಆ ಅಧಿಕಾರಿ ಓಸಿ, ಇಸ್ಪೀಟು, ಜುಗಾರಿಯರನ್ನ ಹಿಡಿಯದೆ ಕೋಳಿ ಪಡೆಯ ದ.ಕ.ಜಿಲ್ಲೆಯ ವಲಸಿಗ ಕೂಲಿ ಕಾಮಿ೯ಕರನ್ನ ಹಿಂಸಿಸುವುದು ನಿಲ್ಲಸಲಿಲ್ಲ ಆಗ ಶಾಸಕರಾದ ಸ್ವಾಮಿ ರಾವ್ ಹೊಸನಗರ ಠಾಣೆ ಎದುರು ಕೋಳಿ ಪಡೆ ನಡೆಸುತ್ತ